ಡಿಕೆಶಿ ಪುಡಿ ರೌಡಿ, ನಲಪಾಡ್‌ ಮರಿ ರೌಡಿ: ಕಾಂಗ್ರೆಸ್‌ ವಿರುದ್ಧ ಬಿಜೆಪಿ ಕಿಡಿ

‘ರೌಡಿಗಳ ಕಿಂಗ್‌ ಕೊತ್ವಾಲನ ಚಹಾ ಲೋಟ ಎತ್ತುತ್ತಿದ್ದ ಪುಡಿ ರೌಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿರುವ ಕಾಂಗ್ರೆಸ್‌ಗೆ ಬಿಜೆಪಿಯ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿಕೊಳ್ಳಿ’ ಎಂದು ಕಾಂಗ್ರೆಸ್‌ ವಿರುದ್ಧ ಬಿಜೆಪಿ ಹರಿಹಾಯ್ದಿದೆ.

Karnataka BJP Outraged Against DK Shivakumar And Mohammed Nalapad gvd

ಬೆಂಗಳೂರು (ಡಿ.04): ‘ರೌಡಿಗಳ ಕಿಂಗ್‌ ಕೊತ್ವಾಲನ ಚಹಾ ಲೋಟ ಎತ್ತುತ್ತಿದ್ದ ಪುಡಿ ರೌಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿರುವ ಕಾಂಗ್ರೆಸ್‌ಗೆ ಬಿಜೆಪಿಯ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿಕೊಳ್ಳಿ’ ಎಂದು ಕಾಂಗ್ರೆಸ್‌ ವಿರುದ್ಧ ಬಿಜೆಪಿ ಹರಿಹಾಯ್ದಿದೆ. ಈ ಸಂಬಂಧ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ಅಧ್ಯಕ್ಷರಿಂದ ಆರಂಭವಾಗುವ ಇವರ ಕ್ರೂರ ನಾಯಕರ ಪಟ್ಟಿಮೊನ್ನೆ ಮೊನ್ನೆ ಬಾರಲ್ಲಿ ಅಮಾಯಕರಿಗೆ ಹೊಡೆದ ಮರಿರೌಡಿ ನಲಪಾಡ್‌ವರೆಗೂ ಇದೆ. ರೌಡಿಗಳ ಬಗ್ಗೆ ಮಾತಾಡುವ ಕಾಂಗ್ರೆಸ್‌, ಕುಖ್ಯಾತ ಕೊಲೆ ಆರೋಪಿ ವಿನಯ್‌ ಕುಲಕರ್ಣಿ ಬಗ್ಗೆ ಮಾತಾಡಲ್ಲವೇಕೆ? 

ಕಾಂಗ್ರೆಸ್‌ಗೆ ಜೀವ ಭಯವೇ? ನಲಪಾಡ್‌ ಹೊಡೆದುಬಿಟ್ಟಾರೆಂಬ ಭಯವೇ? ಕೆ.ಜೆ.ಜಾಜ್‌ರ್‍ ನನ್ನ ಸಾವಿಗೆ ಕಾರಣ ಎಂದು ಜೀವಬಿಟ್ಟಡಿವೈಎಸ್‌ಪಿ ಗಣಪತಿ ನೆನಪಿದೆಯೇ? ಅಷ್ಟೇ ಆಲ್ಲ, ಕಾಂಗ್ರೆಸ್‌ನಲ್ಲಿ ದರೋಡೆಕೋರರು ಇದ್ದಾರೆ ಎಂದು ಟೀಕಾಪ್ರಹಾರ ಮಾಡಿದೆ. 2011ರಲ್ಲಿ ಜಮೀರ್‌ ಅಹ್ಮದ್‌ ವಿರುದ್ಧ ದರೋಡೆ ಪ್ರಕರಣ ದಾಖಲಾಗಿ ವಾರೆಂಟ್‌ ನೀಡಲಾಗಿತ್ತು. ಎಲ್ಲಿ ತಮ್ಮ ಮನೆ ದರೋಡೆ ಮಾಡಿಬಿಟ್ಟರೆ ಎಂದು ಗ್ಯಾಂಗ್‌ ಲೀಡರ್‌ ಡಿ.ಕೆ.ಶಿವಕುಮಾರ್‌ ಸುಮ್ಮನಿದ್ದಾರೆಯೇ? ಪಿಎಸ್‌ಐ ಟಿ.ಆರ್‌.ಶ್ರೀನಿವಾಸ್‌ ಅವರನ್ನು ಸಾರ್ವಜನಿಕವಾಗಿ ಅವಮಾನಿಸುವುದರ ಜತೆಗೆ ಜೀವ ಬೆದರಿಕೆಯೂ ಹಾಕುತ್ತಾರೆ ನಿಮ್ಮ ಡಿ.ಕೆ.ಸುರೇಶ್‌. 

ಮಹಾರಾಷ್ಟ್ರದವರು ಉದ್ಧಟತನ ಬಿಡಬೇಕು: ಸಚಿವ ಸುಧಾಕರ್‌

ಎಲ್ಲ ಬಿಡ್ರಿ, ಬೆಂಗಳೂರಿನ ಸಕಲ ರೌಡಿಗಳನ್ನೂ ಪ್ರೋತ್ಸಾಹಿಸುತ್ತಿರುವ ಮಹಾನ್‌ ನಾಯಕ ರಾಮಲಿಂಗಾರೆಡ್ಡಿ. ಪ್ರತಿ ಸಲ ಚುನಾವಣೆಯಲ್ಲಿ ಗೆಲ್ಲುತ್ತಿರುವುದೇ ರೌಡಿಗಳ ಕೃಪೆಯಿಂದ ಎಂಬುದು ಇಡೀ ಲೋಕಕ್ಕೆ ಗೊತ್ತು. ಬೇಕಾದರೆ ರೌಡಿ ನಾಗನ ಜತೆ ರೆಡ್ಡಿ ಸಾಹೇಬರ ಸಂಬಂಧವೇನು ಎಂಬುದನ್ನು ಮಾಧ್ಯಮಗಳೇ ಬಿಚ್ಚಿಟ್ಟಿದ್ದಾವೆ ನೋಡಿ ಎಂದು ಕಿಡಿಕಾರಿದೆ. ಇನ್ನು, ಸೌಮ್ಯಾ ರೆಡ್ಡಿ ಅವರು ಹೇಗೆ ಗೆದ್ದರು ಎಂಬುದನ್ನು ನಾವು ಹೇಳಲು ಹೋಗುವುದಿಲ್ಲ ಬಿಡಿ. ಹೀಗೆ ಕೊತ್ವಾಲನ ರೈಟ್‌ಹ್ಯಾಂಡಾಗಿ ಡಿ.ಕೆ.ಶಿವಕುಮಾರ್‌ ಇದ್ದರೆ, ಲೈಫ್ಟ್‌ ಹ್ಯಾಂಡಲ್ಲಿ ನಿಂತವರೇ ನಮ್ಮ ನಿಮ್ಮೆಲ್ಲರ ಸೋಲಿನ ಸರದಾರ ಬಿ.ಕೆ.ಹರಿಪ್ರಸಾದ್‌. 

Ticket Fight: ದಕ್ಷಿಣ ಕನ್ನಡ ಬಿಜೆಪಿ ಕೋಟೆಯಲ್ಲಿ ಕಾಂಗ್ರೆಸ್‌ ಪೈಪೋಟಿ

ರೌಡಿಗಳಿಂದ ಇವರು ಈಗಲೂ ಸೆಲ್ಯೂಟ್‌ ಹೊಡೆಯುವಷ್ಟುಹವಾ ಇಟ್ಟಿದ್ದಾರೆ ಎಂಬುದು ಹಳೆ ವಿಷಯ. ರೌಡಿಗಳು, ಕಳ್ಳರು, ಕೊಲೆಗಾರರು, ದರೋಡೆಕೋರರು, ಭ್ರಷ್ಟಾಚಾರಿಗಳೇ ನಾಯಕರಾಗಿರುವ ರಾಜ್ಯ ಕಾಂಗ್ರೆಸ್‌ ರೌಡಿ ರಾಜ್ಯದ ಬಗ್ಗೆ ಭಾಷಣ ಬಿಗಿಯುತ್ತಿರುವುದು, ಅಲ್ಲೆಲ್ಲೋ ಇರುವ ಅಲ್‌ಖೈದಾದವನು ಶಾಂತಿಯ ಸಂದೇಶ ಸಾರಿದಷ್ಟೇ ಅದಕ್ಕೆ ಪ್ರಾಮುಖ್ಯತೆ. ಭಯದಿಂದ ಅಣ್ಣಾ ಎಂದು ಕರೆಸಿಕೊಳ್ಳುವ ಡಿ.ಕೆ.ಶಿವಕುಮಾರ್‌ ಪಟಾಲಮ್ಮಿನಿಂದ ಬಿಜೆಪಿಗೆ ಪಾಠ ಬೇಕಾಗಿಲ್ಲ. ಕಾಂಗ್ರೆಸ್‌ ಪಕ್ಷವು ರೌಡಿಗಳ ಅಡ್ಡವಾಗಿ ಪರಿವರ್ತನೆಗೊಂಡಿದ್ದು, ತುಂಬಾ ಹಳೆಯ ವಿಚಾರ. ಆದರೂ ಇವರ ವರಸೆ ಹೇಗಿದೆ ಎಂದರೆ ಕಾಲಡಿ ಹೆಗ್ಗಣವೇ ಸತ್ತು ಬಿದ್ದಿದ್ದರೂ, ಇನ್ನೊಬ್ಬರ ತಟ್ಟೆಯಲ್ಲಿನ ನೊಣ ಆಯುವ ಕೆಲಸ ಮಾತ್ರ ಬಿಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.

Latest Videos
Follow Us:
Download App:
  • android
  • ios