Asianet Suvarna News Asianet Suvarna News

Election Result ಯುಪಿಯಲ್ಲಿ ಬಿಜೆಪಿಗೆ ಬಹುಮತ, ಜ್ಯೋತಿಷಿಗಳ ಭವಿಷ್ಯ!

- ಮಂಗಳ ಕ್ಷತ್ರಿಯ ಸಮುದಾಯದ ಅಧಿಪತಿ

- ಹೀಗಾಗಿ ಯೋಗಿ ಗೆಲ್ಲುವ ಸಾಧ್ಯತೆ ಹೆಚ್ಚು: ಜ್ಯೋತಿಷಿ

- ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ

astrology predictions chief minister yogi adityanath to be cm again in uttar pradesh san
Author
Bengaluru, First Published Mar 10, 2022, 4:45 AM IST | Last Updated Mar 10, 2022, 4:45 AM IST

ಲಖನೌ (ಮಾ.10): ಉತ್ತರ ಪ್ರದೇಶ ಚುನಾವಣೆಯ (Uttar Pradesh Election) ಫಲಿತಾಂಶ ಗುರುವಾರ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಸಮೀಕ್ಷೆಗಳಷ್ಟೇ (Exit Poll) ಅಲ್ಲ, ‘ಉತ್ತರ ಪ್ರದೇಶದಲ್ಲಿ ಬಿಜೆಪಿ ಸ್ಪಷ್ಟಬಹುಮತ ಪಡೆದುಕೊಳ್ಳಲಿದೆ ಮತ್ತು ಯೋಗಿ ಆದಿತ್ಯನಾಥ ಮತ್ತೊಮ್ಮೆ ಸರ್ಕಾರ ರಚನೆ ಮಾಡಲಿದ್ದಾರೆ’ ಎಂದು ಹಲವು ಜ್ಯೋತಿಷ್ಯಶಾಸ್ತ್ರಜ್ಞರು (astrologers ) ಕೂಡ ಭವಿಷ್ಯ ನುಡಿದಿದ್ದಾರೆ.

ಹಲವು ಚುನಾವಣೋತ್ತರ ಸಮೀಕ್ಷೆಗಳೂ ಸಹ ಬಿಜೆಪಿಗೆ ಬಹುಮತ ದೊರೆಯುತ್ತದೆ ಎಂದು ಹೇಳಿದ್ದವು. ‘ಈ ವರ್ಷದ ಅಧಿಪತಿ ಮಂಗಳ ಆಗಿರುವುದರಿಂದ ಮತ್ತು ಮಂಗಳ ಕ್ಷತ್ರಿಯ ಸಮುದಾಯದ ಅಧಿಪತಿಯೂ ಆಗಿರುವುದರಿಂದ ಯೋಗಿ ಅವರು ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಬಿಜೆಪಿ 240 ಸ್ಥಾನಗಳನ್ನು ಗೆದ್ದರೆ, ಸಮಾಜವಾದಿ ಪಕ್ಷ 138-157 ಸ್ಥಾನಗಳನ್ನು ಗೆಲ್ಲಲಿದೆ’ ಎಂದು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯದ ಜ್ಯೋತಿಷಿ ಅಶ್ವಿನಿ ಪಾಂಡೆ ( Kendriya Sanskrit Vishwavidyalaya astrologer Ashwini Pandey ) ಹೇಳಿದ್ದಾರೆ. ಇವರೊಂದಿಗೆ ಮೇರಟ್‌ನ ಖ್ಯಾತ ಜ್ಯೋತಿಷಿ ವಿನೋದ್‌ ತ್ಯಾಗಿ ( Meerut’s famous astrologer Vinod Tyagi ) ಮತ್ತು ಮಥುರಾದ ಅಲೋಕ್‌ ಗುಪ್ತಾ ( Mathura’s Alok Gupta ) ಸಹ ಬಿಜೆಪಿ ಗೆಲ್ಲುತ್ತದೆ ಎಂದು ಹೇಳಿದ್ದಾರೆ.

ಅಸ್ಸಾಂ ಪೌರಾಡಳಿತ ಚುನಾವಣೆ: 80ರ ಪೈಕಿ 73ರಲ್ಲಿ ಬಿಜೆಪಿ ಜಯಭೇರಿ
ಗುವಾಹಟಿ:
ಅಸ್ಸಾಂನ ( Assam ) 80 ಪೌರಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ( BJP ) 73ರಲ್ಲಿ ಜಯಗಳಿಸಿದೆ. ರಾಜ್ಯದಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ ( Congress ) ಒಂದೇ ಒಂದೂ ಸಂಸ್ಥೆಯನ್ನು ಗೆಲ್ಲುವಲ್ಲಿ ವಿಫಲವಾಗಿದೆ. ಚುನಾವಣೆಯಲ್ಲಿ( Election ) ಒಟ್ಟು 672 ವಾರ್ಡ್‌ಗಳಲ್ಲಿ ಬಿಜೆಪಿ ಜಯಗಳಿಸಿದೆ. ಕಾಂಗ್ರೆಸ್‌ 71ರಲ್ಲಿ ಹಾಗೂ ಉಳಿದ ಪಕ್ಷಗಳು 149 ವಾರ್ಡ್‌ಗಳಲ್ಲಿ (ward)  ಜಯಗಳಿಸಿದೆ.

UP Exit Poll 2022: ಯುಪಿಯಲ್ಲಿ ಮತ್ತೆ ಯೋಗಿ ದರ್ಬಾರ್, ಹೀಗಿದೆ ಚುನಾವಣೋತ್ತರ ಸಮೀಕ್ಷೆ ರಿಸಲ್ಟ್
ಫಲಿತಾಂಶದ ನಂತರ ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ( Himanta Biswa Sharma ) , ‘ಈ ಗೆಲುವಿಗಾಗಿ ನಾನು ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನರೇಂದ್ರ ಮೋದಿ ಅವರ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ಅರ್ಥ ಮಾಡಿಸುವಲ್ಲಿ ಬಿಜೆಪಿಯ ನಾಯಕರು, ಕಾರ್ಯಕರ್ತರು ಯಶಸ್ವಿಯಾಗಿದ್ದಾರೆ. ಬಿಜೆಪಿಯನ್ನು ಗೆಲ್ಲಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ’ ಎಂದು ಹೇಳಿದ್ದಾರೆ.

UP Elections: 7ನೇ ಹಂತದ ಮತದಾನ, ಯೋಗಿ ಸಂಪುಟದ ಐವರು ಸಚಿವರಿಗೆ ಅಗ್ನಿಪರೀಕ್ಷೆ!
ಗೋವಾದಲ್ಲಿ ಮುಂದುವರೆದ ರೆಸಾರ್ಟ್‌ ರಾಜಕಾರಣ!
ಪಣಜಿ:
ಗೋವಾದಲ್ಲಿ ಅಂತತ್ರ ವಿಧಾನಸಭೆ ಏರ್ಪಡಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿರುವುದರಿಂದ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳನ್ನು ಐಷಾರಾಮಿ ರೆಸಾರ್ಟ್‌ಗೆ ಕಾಂಗ್ರೆಸ್‌ ಸ್ಥಳಾಂತರ ಮಾಡಿದ್ದು, 2ನೇ ದಿನವೂ ಇವರು ರೆಸಾರ್ಟಲ್ಲೇ ಕಾಲ ಕಳೆದರು.

ಈ ನಡುವೆ, ಕುದುರೆ ವ್ಯಾಪಾರದ ಭೀತಿ ಕಾರಣ ಗುರುವಾರ ಈ ಅಭ್ಯರ್ಥಿಗಳು ಮತಎಣಿಕೆ ಕೇಂದ್ರಕ್ಕೂ ಭೇಟಿ ನೀಡುವುದು ಅನುಮಾನ ಎಂದು ಹೇಳಲಾಗಿದೆ. 2017ರಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದರೂ ಸರ್ಕಾರ ರಚನೆ ಮಾಡುವಲ್ಲಿ ವಿಫಲವಾಗಿತ್ತು. ಹಾಗಾಗಿ ಮಾ.10ರಂದು ಫಲಿತಾಂಶ ಘೋಷಣೆಯಾಗುವ ಮೊದಲೇ ತನ್ನ ಅಭ್ಯರ್ಥಿಗಳನ್ನು ಸುರಕ್ಷಿತವಾಗಿರಿಸಿಕೊಳ್ಳಲು ಕಾಂಗ್ರೆಸ್‌ ಈ ನಿರ್ಧಾರ ಕೈಗೊಂಡಿದೆ. ಪಣಜಿಯ ಸಮೀಪದ ಬ್ಯಾಂಬೋಲಿನ್‌ ಗ್ರಾಮದ ಸಮೀಪವಿರುವ ಐಷಾರಾಮಿ ರೆಸಾರ್ಟ್‌ಗೆ ಎಲ್ಲಾ ಅಭ್ಯರ್ಥಿಗಳನ್ನು ಸ್ಥಳಾಂತರ ಮಾಡಿದೆ. ಗೋವಾ ವಿಧಾನ ಸಭೆ ಗೆಲ್ಲಲು ಅಗತ್ಯವಾಗಿರುವ ನಂಬರ್‌ ಗೇಮ್‌ ಗಳಿಸಿಕೊಳ್ಳಲು ನಡೆಯುವ ಲಾಬಿಗಳಿಗೆ ಕಾಂಗ್ರಸ್‌ ಅಭ್ಯರ್ಥಿಗಳು ಬಲಿಯಾಗಲು ಬಿಡುವುದಿಲ್ಲ ಎಂದು ಕಾಂಗ್ರೆಸ್‌ ನಾಯಕರು ಹೇಳಿದ್ದಾರೆ.

Latest Videos
Follow Us:
Download App:
  • android
  • ios