Asianet Suvarna News Asianet Suvarna News

UP Exit Poll 2022: ಯುಪಿಯಲ್ಲಿ ಮತ್ತೆ ಯೋಗಿ ದರ್ಬಾರ್, ಹೀಗಿದೆ ಚುನಾವಣೋತ್ತರ ಸಮೀಕ್ಷೆ ರಿಸಲ್ಟ್

* ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ಆಡಳಿತ

* ಯೋಗಿ ಮತ್ತೆ ಸಿಎಂ ಆಗೋದು ಪಕ್ಕಾ ಎಂದ ಮತಗಟ್ಟೆ ಸಮೀಕ್ಷೆ

* ಎಲ್ಲಾ ಸಮೀಕ್ಷೆಗಳಲ್ಲೂ ಬಿಜೆಪಿಗೇ ಜಯ ಎಂದು ಭವಿಷ್ಯ

Exit Polls 2022 Updates BJP to Return for Historic Straight Terms in UP pod
Author
Bangalore, First Published Mar 7, 2022, 6:54 PM IST | Last Updated Mar 7, 2022, 7:32 PM IST

ಲಕ್ನೋ(ಮಾ.07): ಪಂಚರಾಜ್ಯ ಚುನಾವಣೆಗೆ ತೆರೆ ಬಿದ್ದಿದೆ. ಇನ್ನೇಮನಿದ್ದರೂ ಮಾರ್ಚ್ 10 ರಂದು ನಡೆಯಲಿರುವ ಮತದಾನ ಎಣಿಕೆಯಲ್ಲೇ ಗೆಲುವು ಯಾರಿಗೆ ಎಂಬ ವಿಚಾರ ಸ್ಪಷ್ಟವಾಗಲಿದೆ. ಹೀಗಿದ್ದರೂ ಇಡೀ ದೇಶದ ಚಿತ್ತ ಇಂದಿನ ಚುನಾವಣೆ ಬಳಿಕ ಹೊರ ಬೀಳಲಿರುವ Exit Poll ಮೇಲಿದೆ. ಸದ್ಯ ಉತ್ತರ ಪ್ರದೇಶದ ಚುನಾವಣೋತ್ತರ ಸಮೀಕ್ಷೆ ಹೊರ ಬಿದ್ದಿದ್ದು, ನಿರೀಕ್ಷೆಯಂತೆ ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಏರಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿದೆ.

ಬಹುತೇಕ ಎಲ್ಲಾ ಮತಗಟ್ಟೆ ಸಮೀಕ್ಷೆಗಳು ಯುಪಿಯಲ್ಲಿ ಮತ್ತೆ ಯೋಗಿ ಸಿಎಂ ಆಗೋದು ಪಕ್ಕಾ ಎನ್ನುತ್ತವೆ. ಆದರೆ ಕಳೆದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಬಿಜೆಪಿ ಗೆಲುವಿನ ಅಂತರ ಬಹಳ ಕಡಿಮೆ ಇರಲಿದೆ. ಅಲ್ಲದೇ ಸಮಾಜವಾದಿಇ ಪಕ್ಷ ಎರಡನೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂಬ ಭವಿಷ್ಯ ನುಡಿದಿದೆ. ಆದರೆ ಸಮಾಜವಾದಿ ಪಕ್ಷದ ಸ್ಥಾನಗಳು ಗಣನೀಯವಾಗಿ ಏರಿಕೆಯಾಗಲಿದೆ ಎಂದೂ ಹೇಳಿದೆ. 

ಉತ್ತರ ಪ್ರದೇಶದಲ್ಲಿ ಒಟ್ಟು 403 ವಿಧಾನಸಭಾ ಕ್ಷೇತ್ರಗಳಿದ್ದು, ಗೆಲುವಿಗಾಗಿ 202 ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಮುಖ್ಯವಾಗಿದೆ. ಬಿಜೆಪಿ ಹಾಗೂ ಸಮಾಜವಾದಿ ಪಕ್ಷಗಳು ಇಲ್ಲಿನ ಪ್ರಮುಖ ರಾಜಕೀಯ ಪಕ್ಷಗಳಾಗಿವೆ.

ರಿಪಬ್ಲಿಕ್: ಚುನಾವಣೋತ್ತರ ಸಮೀಕ್ಷೆ

ಬಿಜೆಪಿ: 262-277
ಎಸ್‌ಪಿ: 119-134
ಬಿಎಸ್‌ಪಿ: 07-09

ಕಾಂಗ್ರೆಸ್: 03-08
ಇತರರು: 02-06

ಸಿ-ವೋಟರ್: ಚುನಾವಣೋತ್ತರ ಸಮೀಕ್ಷೆ

ಬಿಜೆಪಿ: 161
ಎಸ್‌ಪಿ: 141
ಬಿಎಸ್‌ಪಿ: 87

ಇತರರು: 14

ಟುಡೇಸ್‌ ಚಾಣಕ್ಯ: ಚುನಾವಣೋತ್ತರ ಸಮೀಕ್ಷೆ

ಬಿಜೆಪಿ: 285
ಎಸ್‌ಪಿ: 88
ಬಿಎಸ್‌ಪಿ: 27

ಇತರರು: 03

ಇಂಡಿಯಾ ಟುಡೇ: ಚುನಾವಣೋತ್ತರ ಸಮೀಕ್ಷೆ

ಬಿಜೆಪಿ: 251-279
ಎಸ್‌ಪಿ: 88-112
ಬಿಎಸ್‌ಪಿ: 28-42

ಇತರರು: 6-16

2017ರಲ್ಲಿ ಹೀಗಿತ್ತು ಚುನಾವಣಾ ಫಲಿತಾಂಶ

2017- ಉತ್ತರ ಪ್ರದೇಶ: 403

ಬಿಜೆಪಿ: 312
ಕಾಂಗ್ರೆಸ್‌: 07
ಎಸ್‌ಪಿ: 47
ಬಿಎಸ್‌ಪಿ: 19
ಇತರರು: 28

ಎಕ್ಸಿಟ್ ಪೋಲ್‌ಗಳಿಗೆ ಅಧಿಕೃತತೆ ಇದೆಯೇ?

ಎಲ್ಲ ಸುದ್ದಿ ವಾಹಿನಿಗಳು ಎಕ್ಸಿಟ್ ಪೋಲ್‌ಗಳ ಮೂಲಕ ಯಾರು ಸರ್ಕಾರ ರಚಿಸಬಹುದು ಎಂದು ಹೇಳಲು ಪ್ರಯತ್ನಿಸುತ್ತವೆ. ಆದರೆ, ಇದು ಕೇವಲ ಸುದ್ದಿ ವಾಹಿನಿಗಳ ಸಮೀಕ್ಷೆಯನ್ನು ಆಧರಿಸಿದೆ ಮತ್ತು ಯಾವುದೇ ಸತ್ಯಾಸತ್ಯತೆಯನ್ನು ಹೊಂದಿಲ್ಲ. ಹೀಗಿದ್ದರೂ ಎಕ್ಸಿಟ್ ಪೋಲ್‌ಗಳ ಬಗ್ಗೆ ಜನ ಕುತೂಹಲ ಹೊಂದಿದ್ದಾರೆ.

ನಿರ್ಗಮನ ಸಮೀಕ್ಷೆಗಳನ್ನು ಹೇಗೆ ಸಿದ್ಧಪಡಿಸುವುದು?

ಮತಗಟ್ಟೆಯಿಂದ ಹೊರಬರುವ ಮತದಾರರನ್ನು ತಾವು ಯಾರಿಗೆ ಮತ ಹಾಕಿದ್ದೀರಿ ಎಂದು ಕೇಳುವ ಮೂಲಕ ಎಕ್ಸಿಟ್ ಪೋಲ್‌ಗಳನ್ನು ಸಿದ್ಧಪಡಿಸಲಾಗುತ್ತದೆ. ಮತದಾನ ಕೇಂದ್ರದಿಂದ ನಿರ್ಗಮಿಸುವ ಸಮಯದಲ್ಲಿ ಮತದಾರರಿಂದ ಪ್ರಶ್ನೆಗಳನ್ನು ಕೇಳಲಾಗುತ್ತದೆ, ಆದ್ದರಿಂದ ಅಂತಹ ಸಮೀಕ್ಷೆಗಳನ್ನು ಎಕ್ಸಿಟ್ ಪೋಲ್ ಎಂದು ಕರೆಯಲಾಗುತ್ತದೆ.

ಯುಪಿಯಲ್ಲಿ 403 ಸ್ಥಾನಗಳಿಗೆ ಒಟ್ಟು 4442 ಅಭ್ಯರ್ಥಿಗಳು:

ಉತ್ತರ ಪ್ರದೇಶದ ಎಲ್ಲಾ 403 ಸ್ಥಾನಗಳಿಗೆ ಒಟ್ಟು 4442 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ ಶೇ.26ರಷ್ಟು ಅಂದರೆ 1142 ಅಭ್ಯರ್ಥಿಗಳು ಕಳಂಕಿತರಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಒಟ್ಟು 7 ಹಂತಗಳಲ್ಲಿ ಮತದಾನ ನಡೆದಿದೆ. ಫೆಬ್ರುವರಿ 10 ರಂದು ಹಂತ I, ಫೆಬ್ರವರಿ 14 ರಂದು ಹಂತ II, ಫೆಬ್ರವರಿ 20 ರಂದು ಹಂತ III, ಫೆಬ್ರವರಿ 24 ರಂದು ಹಂತ 4, ಫೆಬ್ರವರಿ 27 ರಂದು ಹಂತ 5, ಮಾರ್ಚ್ 3 ಹಂತ 6, ಮಾರ್ಚ್ 7 ರಂದು ಹಂತ 7 ಕ್ಕೆ ಮತಗಳನ್ನು ಸೇರಿಸಲಾಯಿತು. ಮಾರ್ಚ್ 10 ರಂದು ಚುನಾವಣಾ ಫಲಿತಾಂಶ ಬರಲಿದೆ.

Latest Videos
Follow Us:
Download App:
  • android
  • ios