ನರೇಂದ್ರನ ದಾಖಲೆ ಭೂಪೇಂದ್ರ ಮುರಿಯಲಿ ಎಂದಿದ್ದೆ, ಜನರು ಹೊಸ ರೆಕಾರ್ಡ್ ಸೃಷ್ಟಿಸಿದ್ದಾರೆ, ಮೋದಿ ಭಾಷಣ!
ಹಿಮಾಚಲ ಪ್ರದೇಶ ಹಾಗೂ ಗುಜರಾತ್ ಚುನಾವಣೆ ಬಳಿಕ ದೆಹಲಿ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ. ಗುಜರಾತ್‌ನಲ್ಲಿ ನಿರ್ಮಾಣವಾಗಿರುವ ದಾಖಲೆ ಕುರಿತು ಮೋದಿ ವಿವರಿಸಿದ್ದಾರೆ. ಇದೇ ವೇಳೆ ವಿಪಕ್ಷಗಳಿಗೆ ಎಚ್ಚರಿಕೆಯನ್ನು ನೀಡಿದ್ದರೆ.
ನವದೆಹಲಿ(ಡಿ.08): ಗುಜರಾತ್ ಚುನಾವಣಾ ಪ್ರಚಾರದ ವೇಳೆ ಮತದಾರರಿಗೆ ಒಂದು ಮಾತು ಹೇಳಿದ್ದೆ. ಈ ಬಾರಿ ನರೇಂದ್ರನ ದಾಖಲೆಯನ್ನು ಭೂಪೇಂದ್ರ ಮುರಿಯಲಿ ಎಂದು ಮತದಾರರಲ್ಲಿ ಹೇಳಿದ್ದೆ. ಮತದಾರರ ಯಾವ ಮಟ್ಟಿಗೆ ಆಶೀರ್ವಾದ ಮಾಡಿದ್ದಾರೆ ಎಂದರೆ ಈ ಹಿಂದಿನ ಎಲ್ಲಾ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶದ ಬಳಿಕ ದೆಹಲಿ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಹಿಮಾಚಲ ಹಾಗೂ ಗುಜರಾತ್ ಜನತೆಗೆ ಧನ್ಯವಾದ ತಿಳಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸೋಲು ಕಂಡಿದೆ. ಆದರೆ ಸೋಲಿನ ಅಂತರ ಶೇಕಡಾ 1ಕ್ಕಿಂತ ಕಡಿಮೆ ಎಂದು ಮೋದಿ ಹೇಳಿದ್ದಾರೆ.
ದೇಶದ ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು ಸಿಗುತ್ತಿದೆ. ಉತ್ತರ ಪ್ರದೇಶ ಉಪ ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ಭರ್ಜರಿ ಅಂತರದಿಂದ ಗೆಲುವು ದಾಖಲಿಸಲು ನೆರವಾಗಿದೆ. ಚುನಾವಣೆ ಶಾಂತಿಯುತವಾಗಿ ನಡೆದಿದೆ. ಇದಕ್ಕೆ ಚುನಾವಣಾ ಆಯೋಗ ಅಭಿನಂದನೆಗೆ ಅರ್ಹರಾಗಿದ್ದಾರೆ. ಇದೇ ವೇಳೆ ಎಲ್ಲಾ ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವ ಚಟುವಟಿಕೆಯಲ್ಲಿ ಯಶಸ್ವಿಯಾಗಿ ಪಾಲ್ಗೊಂಡಿದೆ ಎಂದು ಮೋದಿ ಹೇಳಿದ್ದಾರೆ.
Gujarat Election Result 2022: ಡಿ.12ಕ್ಕೆ ಭೂಪೇಂದ್ರ ಪಟೇಲ್ ಸಿಎಂ ಆಗಿ ಪ್ರಮಾಣವಚನ
ಹಿಮಾಚಲ ಪ್ರದೇಶದಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ಸರ್ಕಾರ ಬದಲಾಗಿದೆ. ಆದರೆ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸೋತಿದೆ. ಆದರೆ ಗೆಲುವು ಸಾಧಿಸಿದ ಪಕ್ಷ ಹಾಗೂ ಬಿಜೆಪಿ ನಡುವೆ ಕೇವಲ ಶೇಕಡಾ 1 ರಷ್ಟು ಅಂತರವಿದೆ. ಹಿಮಾಚಲ ಪ್ರದೇಶದಲ್ಲಿ ಈ ಹಿಂದೆ ಸೋಲು ಗೆಲುವಿನ ಅಂತರದಲ್ಲೂ ಭಾರಿ ವ್ಯತ್ಯಾಸವಿತ್ತು. ಆದರೆ ಈ ಬಾರಿ ಬಿಜೆಪಿ ಕೆಲವೇ ಕೆಲವು ಅಂತರದಲ್ಲಿ ಸೋತಿದೆ. ಆದರೆ ಹಿಮಾಚಲ ಪ್ರದೇಶದ ಅಭಿವೃದ್ಧಿಗೆ ಬಿಜೆಪಿ ನಿರಂತರ ಕೆಲಸ ಮಾಡಲಿದೆ ಎಂದು ಮೋದಿ ಭರವಸೆ ನಡಿದ್ದಾರೆ
ಹಿಮಾಚಲ ಪ್ರದೇಶದಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ. ಈ ಸರ್ಕಾರಕ್ಕೆ ಕೇಂದ್ರ ಸರ್ಕಾರ ಅದೇ ರೀತಿಯ ಬೆಂಬಲ ನೀಡಲಿದೆ. ಬಿಜೆಪಿ ಅಭಿವೃದ್ಧಿಯ ರಾಜಕೀಯ ನಂಬಿಕೊಂಡಿದೆ. ಬಿಜೆಪಿ ಅಭಿವೃದ್ಧಿ ಹೊಸ ಭಾರತದ ಸಂಕಲ್ಪವಾಗಿದೆ. ಬಿಜೆಪಿಗೆ ಸಿಕ್ಕಿರುವ ಅಭೂತಪೂರ್ವ ಬೆಂಬಲ ಯುವ ಸಮೂಹದ ಪ್ರತಿಬಿಂಬಿವಾಗಿದೆ. ಅಭಿವೃದ್ಧಿ ಪರವಾಗಿರುವ ಬಿಜೆಪಿ ಪಕ್ಷಕ್ಕೆ ಮತ ನೀಡಿದ್ದಾರೆ. ಬಿಜೆಪಿ ದೇಶದ ಹಿತದೃಷ್ಟಿಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಅದೆಷ್ಟೇ ಕಠಿಣ ನಿರ್ಧಾರವನ್ನು ಬಿಜೆಪಿ ಕೈಗೊಳ್ಳಲಿದೆ ಎಂದು ಮೋದಿ ಹೇಳಿದ್ದಾರೆ.
Gujarat Election Result 2022: ಮೋದಿ-ಅಮಿತ್ ಶಾ ತವರಲ್ಲಿ ಅರಳಿದ ಕಮಲ,
ಪರಿವಾರ ರಾಜಕೀಯ,ಭ್ರಷ್ಟಚಾರ ವಿರುದ್ಧ ಬಿಜೆಪಿ ಹೋರಾಟ ನಿರಂತರವಾಗಿದೆ. ಗುಜರಾತ್‌ನಲ್ಲಿ ಬಿಜೆಪಿ ದಾಖಲೆ ಬರೆದಿದೆ. ನಾನು ಗುಜರಾತ್ ಜನರಿಗೆ ಧನ್ಯವಾದ ತಿಳಿಸುತ್ತೇನೆ. ಚುನಾವಣೆ ಪ್ರಚಾರದ ವೇಳೆ ನಾನು ಜನರಲ್ಲಿ ಹೇಳಿದ್ದ. ನರೇಂದ್ರ ದಾಖಲೆಯನ್ನು ಭೂಪೇಂದ್ರ ಮುರಿಯಲಿ ಎಂದಿದ್ದೆ. ಇದು ಸಾಧ್ಯವಾಗಿದೆ. ಆದರೆ ಈ ಬಾರಿಯ ಫಲಿತಾಂಶ ಎಲ್ಲಾ ದಾಖಲೆ ಮುರಿದು ಹೊಸ ದಾಖಲೆ ನಿರ್ಮಾಣವಾಗಿದೆ ಎಂದು ಮೋದಿ ಹೇಳಿದ್ದಾರೆ.
ಬಿಜೆಪಿ ಗುಜರಾತ್ ಪ್ರತಿ ಜನರ ನಂಬಿಕೆ, ವಿಶ್ವಾಸದ ಪಕ್ಷವಾಗಿದೆ. ಗುಜರಾತ್ ಜನರು ಅಭಿವೃದ್ಧಿ ಗಮನಿಸಿ ಮತ ನೀಡಿದ್ದಾರೆ. ಯುವಕರು ಯಾವಾಗ ಮತ ನೀಡುತ್ತಾರೆ. ಯುವಕರಿಗೆ ವಿಶ್ವಾಸ ಮೂಡಬೇಕು. ಈ ಸರ್ಕಾರ ಅಭಿವೃದ್ಧಿ ಕೆಲಸ ಮಾಡಲಿದೆ. ನಮ್ಮ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಲಿದೆ ಅನ್ನೋ ವಿಶ್ವಾಸ ಮೂಡಬೇಕು. ಈ ವಿಶ್ವಾಸವನ್ನು ಗುಜರಾತ್ ಜನತೆ ಬಿಜೆಪಿ ಮೇಲಿಟ್ಟಿದ್ದಾರೆ. ಇದರ ಪರಿಣಾಮ ಎಲ್ಲಾ ದಾಖಲೆಗಳನ್ನು ಮುರಿದು ಹೊಸ ದಾಖಲೆ ನಿರ್ಮಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ ಎಂದು ಮೋದಿ ಹೇಳಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ದೂರದೃಷ್ಟಿ ಇದೆ. ಜೊತೆಗೆ ಅಭಿವೃದ್ಧಿ ಕೆಲಸ ಮಾಡುವ ಇಚ್ಚಾಶಕ್ತಿಯೂ ಇದೆ. ಕೊರೋನಾ ಬಳಿಕ ಅಸ್ಸಾಂ, ಉತ್ತರ ಪ್ರದೇಶ, ಉತ್ತರಖಂಡ, ಗೋವಾ, ಮಣಿಪುರ ಸೇರಿದಂತೆ ಒಂದರ ಹಿಂದೆ ಒಂದರಂತೆ ಜನರು ಬಿಜೆಪಿಗೆ ಮತ ನೀಡಿದ್ದಾರೆ. ನೀವು ಬಿಜೆಪಿ ಮೇಲೆಟ್ಟಿರುವ ನಂಬಿಕೆಗೆ ತಕ್ಕ ಕೆಲಸ ಮಾಡುತ್ತೇವೆ. ದೇಶಕ್ಕೆ ಸಂಕಷ್ಟ ಬಂದಾಗ ಜನರ ನಂಬಿಕೆ ಬಿಜೆಪಿ ಮೇಲಿದೆ ಎಂದಿದ್ದಾರೆ.
ಬಿಜೆಪಿಗೆ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ತಮ್ಮ ಜೀವನವನ್ನೇ ಬಿಜೆಪಿಗೆ ಮುಡಿಪಾಗಿಟ್ಟಿದ್ದಾರೆ. ತಮ್ಮ ವೈಯುಕ್ತಿಕ ಆಸೆ, ಆಕಾಂಕ್ಷೆ, ಇಚ್ಚೆ, ಉದ್ದೇಶಗಳನ್ನು ಬದಿಗಿಟ್ಟು ಸಮಾಜದ ಸೇವೆ ಮಾಡಲು ಪಣತೊಟ್ಟ ಕಾರ್ಯಕರ್ತರಿದ್ದಾರೆ. ಇವರ ಪರಿಶ್ರಮದಿಂದಲೇ ಬಿಜೆಪಿ ಇಂದು ಈ ಮಟ್ಟಕ್ಕೆ ಬೆಳೆದಿದೆ. ಬಿಜೆಪಿಗೂ ಸೋಲೂ ಗೆಲುವು ಸಿಕ್ಕಿದೆ. ಆದರೆ ಆದರ್ಶ, ಮೌಲ್ಯಗಳನ್ನು ಬದಿಗಿಟ್ಟು ರಾಜಕೀಯ ಮಾಡಿಲ್ಲ. ಬಿಜೆಪಿ ಸರ್ಕಾರ, ಬಡವರಿಗೆ ಮನೆ, ನೀರು, ಬ್ಯಾಂಕ್ ಖಾತೆ, ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳ ಕುರಿತು ನಾವು ಕೆಲಸ ಮಾಡಿದ್ದೇವೆ. ಇದನ್ನು ಯಾವ ಪಕ್ಷಗಳು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆಧರೆ ಇಂದು ಭಾರತೀಯರಿಗೆ ಇದರಿಂದ ಆದ ಬದಲಾವಣೆ, ಸೌಲಭ್ಯದ ಅನುಭವವಾಗಿದೆ. ಯಾವ ಜಾತಿಯಲ್ಲಿ ಎಷ್ಟು ಮತವಿದೆ ಅನ್ನೋದನ್ನು ಲೆಕ್ಕ ಹಾಕಿ ನಾವು ಅಧಿಕಾರ ಮಾಡಿಲ್ಲ. ಬಿಜೆಪಿ ಈ ಆಧಾರದಲ್ಲಿ ಆಡಳಿತ ನಡೆಸುವುದಿಲ್ಲ ಎಂದು ಮೋದಿ ಹೇಳಿದ್ದಾರೆ.
ದೇಶ ಕಳೆದ 8 ವರ್ಷದಲ್ಲಿ ಬಡವರಿಗೆ ಮೂಲಭೂತ ಸೌಕರ್ಯ ನೀಡುವುದು, ಅವರನ್ನು ಬಡತನದಿಂದ ಮೇಲೆತ್ತಲು ಬೇಕಾದ ಯೋಜನೆಗಳನ್ನು ರೂಪಿಸಿ ಸೌಲಭ್ಯ ತಲುಪಿಸುತ್ತಿದ್ದೇವೆ. ಬಿಜೆಪಿ ಯಾವುದೇ ಯೋಜನೆ ಘೋಷಿಸುತ್ತದೆ ಎಂದರೆ ಅದು ಅತ್ಯುತ್ತಮವಾಗಿರಬೇಕು. ನಾವು ಕೇವಲ ಘೋಷಣೆ ಮಾಡಿ ಮರೆತು ಬಿಡುವ ಜಾಯಾಮಾನ ನಮ್ಮದಲ್ಲ. ನಾವು ಘೋಷಣೆ ಮಾಡಿದರೆ ಆ ಯೋಜನೆ ಕಾರ್ಯಗತಗೊಳಿಸುತ್ತೇವೆ ಎಂದರು. ದೇಶದಲ್ಲಿ ಶಾರ್ಟ್‌ಕಟ್ ಇಲ್ಲ. ದೇಶದ ನಾಗರೀಕ ಎಲ್ಲವನ್ನೂ ಗಮನಿಸುತ್ತಿದ್ದಾನೆ. ಶಾರ್ಟ್ ಕಟ್ ಮೂಲಕ ರಾಜಕೀಯ ಮಾಡುವ ಪಕ್ಷಗಳನ್ನು ಜನರು ಗಮನಿಸುತ್ತಾರೆ ಎಂದು ಮೋದಿ ಹೇಳಿದ್ದಾರೆ.