Asianet Suvarna News Asianet Suvarna News

Assembly Election: ಬಾಡಿಗೆ ಹೆಲಿಕಾಪ್ಟರ್‌ಗಳಿಗೆ ಭಾರೀ ಡಿಮ್ಯಾಂಡ್: ಚುನಾವಣಾ ಕಾರ್ಯಕ್ಕೆ ತಿಂಗಳುಗಟ್ಟಲೆ ಬುಕಿಂಗ್

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ಗಳಿಗೆ ಭಾರಿ ಪ್ರಮಾಣದಲ್ಲಿ ಡಿಮ್ಯಾಂಡ್‌ ಕ್ರಿಯೇಟ್‌ ಆಗಿದೆ. ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸೇರಿದಂತೆ ಮೂರೂ ಪಕ್ಷಗಳ ನಾಯಕರು ಬುಕಿಂಗ್‌ ಮಾಡುತ್ತಿದ್ದಾರೆ.

Assembly election Demand for rental helicopter Months of booking for election work sat
Author
First Published Feb 21, 2023, 6:51 PM IST | Last Updated Feb 21, 2023, 6:51 PM IST

ಬೆಂಗಳೂರು (ಫೆ.21): ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ಗಳಿಗೆ ಭಾರಿ ಪ್ರಮಾಣದಲ್ಲಿ ಡಿಮ್ಯಾಂಡ್‌ ಕ್ರಿಯೇಟ್‌ ಆಗಿದೆ. ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸೇರಿದಂತೆ ಮೂರೂ ಪಕ್ಷಗಳ ನಾಯಕರು ರಾಜ್ಯದ ಮೂಲೆ ಮೂಲೆಗಳಿಗೆ ಹೋಗಿ ಪ್ರಚಾರ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಅನುಕೂಲ ಆಗುವಂತೆ ತಿಂಗಳುಗಟ್ಟಲೆ ಬಾಡಿಗೆಗೆ ಹೆಲಿಕಾಪ್ಟರ್ ಬುಕ್ ಮಾಡಲಾಗುತ್ತಿದೆ.

ಬೆಂಗಳೂರಿನಲ್ಲಿ 2 ಪ್ರಮುಖ ಕಂಪನಿಗಳಿಂದ ಹೆಲಿಕಾಪ್ಟರ್‌ಗಳನ್ನು ಬುಕಿಂಗ್ ಮಾಡಲಾಗುತ್ತಿದೆ. ಎಲ್ಲಾ ಪಕ್ಷಗಳ ನಾಯಕರು ಎರಡು ಕಂಪನಿಗಳ ಪ್ರತಿನಿಧಿಗಳ ಜೊತೆಗೆ ಮಾತುಕತೆಯನ್ನು ಮಾಡಿದ್ದಾರೆ. ಒಬ್ಬೊಬ್ಬ ನಾಯಕರು ಬರೋಬ್ಬರಿ ಒಂದು ತಿಂಗಳಿಗೆ ಹೆಲಿಕಾಪ್ಟರ್‌ಗಳನ್ನು ಬುಕ್ ಮಾಡುತ್ತಿದ್ದಾರೆ. ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಂದಲೂ ಡಿಮ್ಯಾಂಡ್ ಕ್ರಿಯೇಟ್‌ ಆಗಿದೆ. ನಾಯಕರ ಡಿಮ್ಯಾಂಡ್ ಗೆ ತಕ್ಕಂತೆ ಹೆಲಿಕಾಪ್ಟರ್, ಮಿನಿ ವಿಮಾನಗಳ ಪೂರೈಕೆ ಮಾಡಲಾಗುತ್ತಿದೆ.

Aero India 2023 ಬೆಂಗಳೂರಲ್ಲಿ ಸ್ವದೇಶಿ ನಿರ್ಮಿತ ಪ್ರಚಂಡ, ಸೂರ್ಯಕಿರಣ್ ಯುದ್ಧವಿಮಾನದ ಅಬ್ಬರ!

ಸಾಮಾನ್ಯ ದರಕ್ಕಿಂತ ಶೇ.10 ದರ ಹೆಚ್ಚಳ: ಚುನಾವಣೆ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್, ಮಿನಿ ವಿಮಾನಗಳ ದರಗಳಲ್ಲಿಯೂ ಭಾರಿ ಪ್ರಮಾಣದ ಏರಿಕೆ ಕಂಡುಬರುತ್ತಿದೆ. ಚುನಾವಣೆ ಸಂದರ್ಭದಲ್ಲಿ ವಿಮಾನಯಾನ ಕಂಪನಿಗಳು ಹಾಲಿ ದರಕ್ಕಿಂತ ಶೇ.10 ದರ ಏರಿಕೆ ಮಾಡಲಾಗುತ್ತಿದೆ. ಪ್ರತಿ ಗಂಟೆಗೆ ನಿಗದಿಯಾಗಿರುವ ದರದಲ್ಲಿ ಭಾರೀ ಬದಲಾವಣೆ ಮಾಡಿರುವುದು ಕಂಡುಬರುತ್ತಿದೆ. ಇನ್ನು ವಿಮಾನವನ್ನು ಬಾಡಿಗೆ ನೀಡುವ ವೇಳೆ ಪ್ರತಿ ಗಂಟೆ ಹಾರಾಟದ ಲೆಕ್ಕಾಚಾರದಲ್ಲಿ ದರ ನಿಗದಿ ಮಾಡಲಾಗುತ್ತದೆ. ಬಾಡಿಗೆದಾರರು ಹಾರಾಟ ಮತ್ತು ನಿರ್ವಹಣಾ ವೆಚ್ಚವನ್ನು ಭರಿಸಬೇಕಿದೆ. 

ಹಾರಾಟದ ಅವಧಿಗೆ ತಕ್ಕಂತೆ ಬಾಡಿಗೆ ನಿಗದಿ ಮಾಡುವ ವಿಮಾನಯಾನ ಕಂಪನಿಗಳು, ಬಾಡಿಗೆಯ ಜೊತೆಗೆ ಇತರ ನಿರ್ವಹಣಾ ವೆಚ್ಚವನ್ನು ಕೂಡ ಬಾಡಿಗೆದಾರರಿಂದ ಪಾವತಿಸಿಕೊಳ್ಳುತ್ತವೆ. ಲ್ಯಾಂಡಿಂಗ್ ಮತ್ತು ಟೆಕ್ ಅಪ್ ಗಳು ಹೆಚ್ಚಾದರೆ ದರದಲ್ಲಿ ವ್ಯತ್ಯಾಸವನ್ನು ಮಾಡಲಾಗುತ್ತದೆ. ಇನ್ನು ವೇಟಿಂಗ್‌ (ಕಾಯುವಿಕೆ) ಚಾರ್ಜಗಳಿಗೆ ವಿಮಾನ ಕಂಪನಿಗಳಿಂದ ವಿನಾಯಿತಿ ನೀಡಲಾಗುತ್ತಿದೆ. ಈ ಅವಧಿಯಲ್ಲಿ ಪೈಲಟ್ ಗಳ ಉಟೋಪಚಾರದ ವೆಚ್ಚ ಪ್ರತ್ಯೇಕವಾಗಿ ಪಾವತಿಸಿಕೊಳ್ಳಲಾಗುತ್ತದೆ. ಜೊತೆಗೆ, ಹೆಲಿಕಾಪ್ಟರ್ ಮತ್ತು ವಿಮಾನಗಳ ಪಾರ್ಕಿಂಗ್ ಶುಲ್ಕವೂ ಪ್ರತ್ಯೇಕವಾಗಿರುತ್ತದೆ.

ಬೆಂಗಳೂರು ಏರ್ ಶೋದ ಹೈಲೈಟ್ಸ್: ಪ್ರೇಮ ಸಂಕೇತ ಬಿಡಿಸಿದ ಸೂರ್ಯ ಕಿರಣ, ಬಾನಲ್ಲಿ ರಂಗೋಲಿ ಬರೆದ ವಿಮಾನ

ರಾಜ್ಯದಲ್ಲಿ ಕಡಿಮೆ ಮೊತ್ತದ ಪಾರ್ಕಿಂಗ್ ಶುಲ್ಕ : ಹುಬ್ಬಳ್ಳಿ, ಜಕ್ಕೂರು, ಹೆಚ್ ಎಎಲ್ , ಬೀದರ್, ಕಲ್ಬುರ್ಗಿ ವಿಮಾನ ನಿಲ್ದಾಣದಲ್ಲಿ ಕಡಿಮೆ ಶುಲ್ಕ ನಿಗದಿ ಮಾಡಲಾಗುತ್ತಿದೆ. 8 ಗಂಟೆಯ ಅವಧಿಗೆ ಕೇವಲ 20 ಸಾವಿರ ರೂ. ಶುಲ್ಕವನ್ನು ಸಂಬಂಧಪಟ್ಟ ವಿಮಾನ ಕಂಪನಿಗಳು ಪಾವತಿಸಬೇಕು. ಮಂಗಳೂರು ಮತ್ತು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ದುಬಾರಿ ಪ್ರಮಾಣದ ಶುಲ್ಕವನ್ನು ವಿಧಿಸಲಾಗುತ್ತದೆ. ಈ ಎರಡು ನಿಲ್ದಾಣಗಳಲ್ಲಿ 8 ಗಂಟೆಯ ಅವಧಿಗೆ 50 ಸಾವಿರ ರೂ. ಶುಲ್ಕವನ್ನು ಪಾವತಿಸಬೇಕು. ಇನ್ನು ಮುಂಬೈ ಮತ್ತು ದೆಹಲಿಯಲ್ಲಿ ಪಾರ್ಕಿಂಗ್ ಶುಲ್ಕ ದುಪ್ಪಟ್ಟು ಆಗಿರುತ್ತದೆ.

ಹೊರ ರಾಜ್ಯಗಳಿಂದಲೂ ಹೆಲಿಕಾಪ್ಟರ್‌ಗಳ ಆಗಮನ: ರಾಜ್ಯದಲ್ಲಿ ಎರಡು ಪ್ರಮುಖ ಕಂಪನಿಗಳಿಂದ ಮಾತ್ರ ರಾಜಕೀಯ ನಾಯಕರಿಗೆ ಹೆಲಿಕಾಪ್ಟರ್ ಸೇವೆ ನೀಡಲಾಗುತ್ತಿದೆ. ಮಿನಿ ವಿಮಾನಗಳ ಬದಲು ಹೆಲಿಕಾಪ್ಟರ್ ಗಳನ್ನು ಹೆಚ್ಚು ಬಳಕೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಜಿಎಂಪಿ ಮತ್ತು ಡೆಕ್ಕನ್ ವಿಮಾನಯಾನ ಕಂಪನಿಯಿಂದ ಹೆಲಿಕಾಪ್ಟರ್ ಬಾಡಿಗೆಗೆ ಕೊಡಲಾಗುತ್ತಿದೆ. ನಾಯಕರ ಬೇಡಿಕೆಗೆ ತಕ್ಕಂತೆ ವಿಮಾನವನ್ನು ಸಹ ಬಾಡಿಗೆಗೆ ಸರಬರಾಜು ಮಾಡಲಾಗುತ್ತಿದೆ. ಇನ್ನು ದೆಹಲಿ, ಕಲ್ಕತ್ತಾ ಮತ್ತು ಕೊಚ್ಚಿಯಿಂದ ಬೆಂಗಳೂರಿಗೆ ಬಂದಿರುವ ಹೆಲಿಕಾಪ್ಟರ್ ಗಳು ರಾಜ್ಯದಲ್ಲಿ ಪ್ರಮುಖ 13 ಮಾಲಿಕರಿಂದ ಬಾಡಿಗೆಗೆ ಕೊಡಲಾಗುತ್ತಿದೆ. ಬೇಡಿಕೆ ಹೆಚ್ಚಿರುವುದರಿಂದ ಇತರ ರಾಜ್ಯಗಳ ಮಾಲಿಕರಿಂದಲೂ ಹೆಲಿಕಾಪ್ಟರ್‌ಗಳನ್ನು ಕಂಪನಿಗಳು ಪಡೆದುಕೊಳ್ಳುತ್ತಿವೆ. 

ವಿವಿಐಪಿಗಳಿಗೆ ದುಬಾರಿ ಶುಲ್ಕ ನಿಗದಿ: ವಿವಿಐಪಿ ನಾಯಕರು ಪ್ರಯಾಣಿಸುವ ಹೆಲಿಕಾಪ್ಟರ್ ಗಳಿಗೆ ದುಬಾರಿ ಶುಲ್ಕ ನಿಗದಿ ಮಾಡಲಾಗುತ್ತಿದೆ. ಟ್ರಯಲ್‌ ಲ್ಯಾಂಡಿಂಗ್ ಮಾಡಬೇಕಿರುವುದರಿಂದ ದುಬಾರಿ ಶುಲ್ಕ ವಿಧಿಸಲಾಗುತ್ತದೆ. ಒಂದು ದಿನ ಮುಂಚಿತವಾಗಿ ಟೇಕ್‌ ಅಪ್ ಮತ್ತು ಲ್ಯಾಂಡಿಂಗ್ ಮಾಡಲಾಗುತ್ತದೆ. ಇನ್ನು ಹೆಲಿಕಾಪ್ಟರ್ ಸೇವೆಯ ಜೊತೆಗೆ ಕೆಲವು ಕಂಪನಿಗಳು ದುಬಾರಿ ಕಾರು ಸೇವೆ ನೀಡುತ್ತಿವೆ. ವಿವಿಐಪಿ ನಾಯಕರು ಹೆಲಿಪ್ಯಾಡ್ ನಿಂದ ನಿಗದಿತ ಸ್ಥಳಕ್ಕೆ ತೆರಳಲು ದುಬಾರಿ ಕಾರು ವ್ಯವಸ್ಥೆ ಮಾಡಲಾಗುತ್ತಿದೆ. ಹೆಲಿಕಾಪ್ಟರ್ ಮತ್ತು ಕಾರು ಸೇವೆಯನ್ನೊಳಗೊಂಡ ಪ್ಯಾಕೆಜ್ ಸೇವೆ ಸಹ ಲಭ್ಯವಿದೆ.

Hampi Utsav: ಹಂಪಿ ಆಗಸದಲ್ಲಿ ಲೋಹದ ಹಕ್ಕಿಯ ಹಾರಾಟ!

ಹೆಲಿಕಾಪ್ಟರ್ ಬಾಡಿಗೆಗೆ ನಿಗದಿಯಾಗಿರುವ ದರಗಳು:
2 ಆಸನಗಳುಳ್ಳ ಹೆಲಿಕಾಪ್ಟರ್ ಬಾಡಿಗೆ - ಪ್ರತಿ ಗಂಟೆಗೆ - 2.20 ಲಕ್ಷ ರೂ.
4 ಆಸನಗಳುಳ್ಳ ಹೆಲಿಕಾಪ್ಟರ್ ಬಾಡಿಗೆ - ಪ್ರತಿ ಗಂಟೆಗೆ - 2.40 ಲಕ್ಷ ರೂ.

ಮಿನಿ ವಿಮಾನಗಳಿಗೆ ನಿಗದಿ ಆಗಿರುವ ದರಗಳು:
6 ಆಸನಗಳುಳ್ಳ ಮಿನಿ ವಿಮಾನದ ಬಾಡಿಗೆ - ಪ್ರತಿ ಗಂಟೆಗೆ - 2.60 ಲಕ್ಷ ರೂ.
8 ಆಸನಗಳುಳ್ಳ ಮಿನಿ ವಿಮಾನದ ಬಾಡಿಗೆ - ಪ್ರತಿ ಗಂಟೆಗೆ - 3.50 ಲಕ್ಷ ರೂ.
13 ಆಸನಗಳುಳ್ಳ ಮಿನಿ ವಿಮಾನದ ಬಾಡಿಗೆ - ಪ್ರತಿ ಗಂಟೆಗೆ - 4 ಲಕ್ಷ ರೂ.
15 ಆಸನಗಳುಳ್ಳ ಮಿನಿ ವಿಮಾನದ ಬಾಡಿಗೆ - ಪ್ರತಿ ಗಂಟೆಗೆ - 5 ಲಕ್ಷ ರೂ.

Latest Videos
Follow Us:
Download App:
  • android
  • ios