Asianet Suvarna News Asianet Suvarna News

ಮಾಡಿದ ಅಡುಗೆಯನ್ನು ಬಡಿಸದೆ ತಿಪ್ಪೆಗೆ ಎಸೆದಿದ್ರಾ? : ಸಿದ್ದರಾಮಯ್ಯಗೆ ಈಶ್ವರಪ್ಪ ಟಾಂಗ್

ಕಲಬುರ್ಗಿಯಲ್ಲಿ 52 ಸಾವಿರ ಹಕ್ಕುಪತ್ರವನ್ನು ಒಂದೇ ವೇದಿಕೆಯಲ್ಲಿ ವಿತರಣೆ ಮಾಡಿರುವುದಕ್ಕೆ ‘ನಾವು ಮಾಡಿದ ಅಡುಗೆಯನ್ನು ಬಿಜೆಪಿಯವರು ಬಡಿಸಿದ್ದಾರೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಕೆ. ಎಸ್‌. ಈಶ್ವರಪ್ಪ ಅವರು ‘ಮಾಡಿದ ಅಡುಗೆಯನ್ನು ಬಡಿಸದೆ ತಿಪ್ಪೆಗೆ ಎಸೆದಿದ್ದರಾ?’ ಎಂದು ಟಾಂಗ್‌ ನೀಡಿದ್ದಾರೆ.

assembly election BJP leaders who turned against Siddaramaiahs statement rav
Author
First Published Jan 21, 2023, 11:20 AM IST

ಶಿವಮೊಗ್ಗ (ಜ.21) : ಕಲಬುರ್ಗಿಯಲ್ಲಿ 52 ಸಾವಿರ ಹಕ್ಕುಪತ್ರವನ್ನು ಒಂದೇ ವೇದಿಕೆಯಲ್ಲಿ ವಿತರಣೆ ಮಾಡಿರುವುದಕ್ಕೆ ‘ನಾವು ಮಾಡಿದ ಅಡುಗೆಯನ್ನು ಬಿಜೆಪಿಯವರು ಬಡಿಸಿದ್ದಾರೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಕೆ. ಎಸ್‌. ಈಶ್ವರಪ್ಪ ಅವರು ‘ಮಾಡಿದ ಅಡುಗೆಯನ್ನು ಬಡಿಸದೆ ತಿಪ್ಪೆಗೆ ಎಸೆದಿದ್ದರಾ?’ ಎಂದು ಟಾಂಗ್‌ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಅಡುಗೆ ಮಾಡುವುದು ಹೋಗಲಿ, ಒಲೆಗೆ ಬೆಂಕಿಯನ್ನೇ ಹಚ್ಚಿರಲಿಲ್ಲ. ಇನ್ನು ಅಡುಗೆ ಮಾಡಿ ಬಡಿಸುವುದೆಂತು ಎಂದು ಪ್ರಶ್ನಿಸಿದರು. ಬಿಜೆಪಿ ಮಾಡಿದ ಗಿನ್ನೆಸ್‌ ದಾಖಲೆಗೆ ಸೇರುವಂತಹ ಒಳ್ಳೆಯ ಕೆಲಸದ ಬಗ್ಗೆ ಮಾತನಾಡದೆ ಅದರಲ್ಲಿಯೂ ರಾಜಕೀಯ ಬೆರೆಸುವುದು ಸರಿಯಲ್ಲ ಎಂದರು.

ನ್ಯಾಯ ಬೇಕು ಮೋದಿ, 12 ಪ್ರಶ್ನೆಗಳನ್ನು ಪ್ರಧಾನಿ ಮುಂದಿಟ್ಟ ಸಿದ್ದರಾಮಯ್ಯ

ನಾನು ಸಮಸ್ಯೆ ಸೃಷ್ಟಿಸುವುದಿಲ್ಲ:

ಸಚಿವ ಸ್ಥಾನ ನೀಡದಿರುವ ಕುರಿತು ಪ್ರತಿಕ್ರಿಯಿಸಿದ ಅವರು ಸಚಿವ ಸಂಪುಟ ವಿಸ್ತರಣೆ ಮಾಡದೆ ಇರಲು ಹೈಕಮಾಂಡ್‌ಗೆ ಅವರದೇ ಆದ ಕಾರಣಗಳಿರಬಹುದು. ಏನೇನು ಪರಿಸ್ಥಿತಿ ಇದೆಯೋ ಗೊತ್ತಿಲ್ಲ. ಎಲ್ಲವನ್ನೂ ಹೈಕಮಾಂಡ್‌ಗೆ ಬಿಟ್ಟಿದ್ದೇನೆ. ಹೀಗಾಗಿ ಈ ಹಂತದಲ್ಲಿ ನಾನು ಸಚಿವ ಸ್ಥಾನಕ್ಕೆ ಒತ್ತಾಯಿಸಿ ಪಕ್ಷಕ್ಕೆ ಸಮಸ್ಯೆ ಸೃಷ್ಟಿಸಲಾರೆ ಎಂದು ಹೇಳಿದರು.

ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದು ನಿಜ. ಇಡೀ ರಾಜ್ಯದಲ್ಲಿ ಕಾರ್ಯಕರ್ತರು ಕೂಡ ಒತ್ತಾಯಿಸಿದ್ದರು. ಆದರೆ ಬೇರೆ ಕಾರಣಕ್ಕೆ ಆಗಿಲ್ಲ. ಇನ್ನು ಆ ವಿಷಯದಲ್ಲಿ ಒತ್ತಾಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಟಿಕೆಟ್‌ ಹಂಚಿಕ ಕುರಿತು ಪಕ್ಷದ ಹೈಕಮಾಂಡ್‌ ತೀರ್ಮಾನವೇ ಅಂತಿಮ. ಪಕ್ಷದ ವರಿಷ್ಟರು ಶ್ರೀಕೃಷ್ಣನಿಗಿಂತ ಚಾಣಾಕ್ಷರಿದ್ದಾರೆ. ನ್ಯಾಯಬದ್ಧ ತಂತ್ರಗಾರಿಕೆ ಮಾಡುತ್ತಾರೆ. ಯಾವುದೇ ರೀತಿಯಲ್ಲಿ ಕೂಡ ಯೋಚಿಸಬಹುದು. ಅವರು ಏನೇ ನಿರ್ಧಾರ ಕೈಗೊಂಡರೂ ಅದು ಸರಿಯಾಗಿಯೇ ಇರುತ್ತದೆ ಎಂದು ಹೇಳಿದರು.

ಅಡುಗೆ ಮಾಡಿದ್ದವರು ಏಕೆ ಉಣ್ಣಲಿಲ್ಲ: ಸಿದ್ದುಗೆ ಶೆಟ್ಟರ್ ತಿರುಗೇಟು

ನಾವು ಮಾಡಿದ ಅಡುಗೆಯನ್ನು ಬಿಜೆಪಿಯವರು ಉಣ್ಣುತ್ತಿದ್ದಾರೆ ಎಂದಿರುವ ಕಾಂಗ್ರೆಸ್‌ನವರು ತಾವೇ ಏಕೆ ಬಡಿಸಿಕೊಂಡು ಊಟ ಮಾಡಲಿಲ್ಲ ಎಂದು ಪ್ರಶ್ನಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ 60ಕ್ಕೂ ಅಧಿಕ ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್‌ನವರು ಮಾಡಿದ ಅಡುಗೆಯನ್ನು ಏಕೆ ಆಗಲೇ ಬಡಿಸಿಕೊಂಡು ಊಟ ಮಾಡಲಿಲ್ಲ. ಸಿದ್ದರಾಮಯ್ಯ ರಾಜ್ಯದಲ್ಲಿ 5 ವರ್ಷ ಆಡಳಿತ ನಡೆಸಿದ್ದಾರೆ. ನಾವು ಹಕ್ಕುಪತ್ರ ಕೊಟ್ಟಾಗ ಅವರಿಗೆ ಜ್ಞಾನೋದಯವಾಗಿದೆ. ಬಂಜಾರ ಜನಾಂಗದವರಿಗೆ ನ್ಯಾಯ ಒದಗಿಸುವ ಬಿಜೆಪಿ ಕಾರ್ಯಕ್ರಮದ ಯಶಸ್ಸು ಕಂಡು ಅವರ ಹೊಟ್ಟೆಉರಿಯುತ್ತಿದೆ. ಹಾಗಾಗಿ ಇಂತಹ ಇಲ್ಲಸಲ್ಲದ ಟೀಕೆ ಮಾಡುತ್ತಿದ್ದಾರೆ ಎಂದರು.

ಚುನಾವಣೆ ಹಿನ್ನೆಲೆ ಬಿಜೆಪಿ ಅಲ್ಪಸಂಖ್ಯಾತರನ್ನು ಓಲೈಸುತ್ತಿದೆಯೇ ಎಂಬ ಪ್ರಶ್ನೆಗೆ, ಬಿಜೆಪಿ ಎಂದಿಗೂ ಮುಸ್ಲಿಂ ವಿರೋಧಿಯಲ್ಲ. ಅವರನ್ನು ಹೊರಗಿಡುವ ಕೆಲಸವನ್ನು ಪಕ್ಷ ಮಾಡಿಲ್ಲ. ಆರೆಸ್ಸೆಸ್‌ ಹಿಂದೂ ಸಮಾಜವನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದೆ. ಎಲ್ಲ ಜಾತಿ ಮತ್ತು ಧರ್ಮದವರನ್ನು ಒಗ್ಗೂಡಿಸಿಕೊಂಡು ಹೋಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅದರಲ್ಲಿ ಓಲೈಕೆ ಇಲ್ಲ. ಮುಸ್ಲಿಮರನ್ನು ಮತಬ್ಯಾಂಕ್‌ ಆಗಿ ಮಾಡಿಕೊಂಡು ಕಾಂಗ್ರೆಸ್‌ನವರು ರಾಜಕಾರಣ ಮಾಡಿಕೊಂಡು ಬಂದಿದ್ದಾರೆ ಎಂದು ಆರೋಪಿಸಿದರು.

ರಾಹುಲ್‌ಗಾಂಧಿಯಂತೆ ಮಾತಾಡಬೇಡಿ; ಸಿದ್ದರಾಮಯ್ಯಗೆ ಜೋಶಿ ಟಾಂಗ್‌

ಇನ್ನು ಮೋದಿ ಅವರು ಸಿದ್ದರಾಮಯ್ಯ ಅವರಿಗೆ ಭಯಪಡುತ್ತಾರೆ ಎಂಬುದು ಈ ವರ್ಷದ ಹೊಸ ಜೋಕ್‌ ಆಗಿದೆ. ಪ್ರಪಂಚದ ನಂಬರ್‌ ಒನ್‌ ನಾಯಕರಾಗಿದ್ದಾರೆ. ಮೋದಿ ಅವರು ಇವರಿಗೆ ಭಯಪಡುವುದಿಲ್ಲ. ಸಿದ್ದರಾಮಯ್ಯರನ್ನು ಕಂಡರೆ ಸಣ್ಣ ಹುಡುಗನೂ ಕೂಡ ಭಯಪಡುವುದಿಲ್ಲ ಎಂದು ವ್ಯಂಗ್ಯವಾಡಿದರು.

Follow Us:
Download App:
  • android
  • ios