Asianet Suvarna News Asianet Suvarna News

ರಾಹುಲ್‌ಗಾಂಧಿಯಂತೆ ಮಾತಾಡಬೇಡಿ; ಸಿದ್ದರಾಮಯ್ಯಗೆ ಜೋಶಿ ಟಾಂಗ್‌

ರಾಹುಲ್‌ಗಾಂಧಿಯವರು ತಿಳುವಳಿಕೆ ಇಲ್ಲದವರಂತೆ ಮಾತನಾಡುತ್ತಾರೆ. ಆದರೆ, ನೀವು ಏಕೆ ಈ ತರಹ ಮಾತನಾಡುತ್ತೀರಾ ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್‌ ನೀಡಿದ್ದಾರೆ.

siddaramaiah dont talk like Rahul Gandhi says pralhad Joshi at chikkamagaluru rav
Author
First Published Jan 20, 2023, 11:57 AM IST

ಚಿಕ್ಕಮಗಳೂರು (ಜ.20) : ರಾಹುಲ್‌ಗಾಂಧಿಯವರು ತಿಳುವಳಿಕೆ ಇಲ್ಲದವರಂತೆ ಮಾತನಾಡುತ್ತಾರೆ. ಆದರೆ, ನೀವು ಏಕೆ ಈ ತರಹ ಮಾತನಾಡುತ್ತೀರಾ ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್‌ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ(PM Narendra Modi)ಯವರು ಕರ್ನಾಟಕಕ್ಕೆ ಬಂದ ಹಿನ್ನಲೆಯಲ್ಲಿ ಸಿದ್ದರಾಮಯ್ಯ(Siddaramaiah) ಅವರು ಟ್ವಿಟ್‌ ಮಾಡಿ ರಾಜ್ಯಕ್ಕೆ ಅನ್ಯಾಯವಾಗಿದೆ ಅದನ್ನು ಸರಿಪಡಿಸಲಿ ಎಂದು ಹೇಳಿದ್ದರು, ಅದಕ್ಕೆ ಸಚಿವರು ಪ್ರತಿಕ್ರಿಯೆ ನೀಡಿ, ನೀವು 10-11 ಬಾರಿ ಬಜೆಟ್‌ ಮಂಡನೆ ಮಾಡಿದ್ದೇನೆಂದು ಹೇಳಿದ್ದೀರ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಆಗಿದ್ದವರು, ನೀವು ಏಕೆ ತಿಳುವಳಿಕೆ ಇಲ್ಲದ ರಾಹುಲ್‌ಗಾಂಧಿ(Rahul gandhi) ತರಹ ಮಾತನಾಡುತ್ತೀರಾ ಎಂದು ಪ್ರಶ್ನಿಸಿದರು.

ಬಿಜೆಪಿಯಂಥ ಭ್ರಷ್ಟ ಸರ್ಕಾರವನ್ನು 4 ದಶಕದಲ್ಲೇ ನೋಡಿಲ್ಲ: ಸಿದ್ದರಾಮಯ್ಯ ಕಿಡಿ

ರಾಜ್ಯಕ್ಕೆ ಹೆಚ್ಚು ಅನ್ಯಾಯ ಆಗಿದ್ದರೆ, ಅದು ಯುಪಿಎ ಕಾಲದಲ್ಲಿ ಆಗಿದೆ. ಉತ್ತರ ಕರ್ನಾಟಕಕ್ಕೆ ರೈಲ್ವೆಯಲ್ಲಿ 700-800 ಕೋಟಿ ರುಪಾಯಿ ಕೊಡ್ತಾ ಇದ್ದರು, ಈಗ ಚಾಲ್ತಿ ಬಜೆಟ್‌ನಲ್ಲಿ ನಮ್ಮ ಸರ್ಕಾರ 6000 ಕೋಟಿ ರುಪಾಯಿ ಕೊಟ್ಟಿದೆ ಎಂದರು. ಇವರ ಕಾಲದಲ್ಲಿ 10- 12 ಸಾವಿರ ಕೋಟಿ ರು. ಸಿಗ್ತಾ ಇತ್ತು. ಈ ಬಾರಿ 1 ಲಕ್ಷ, 16 ಸಾವಿರ ಕೋಟಿ ರು.ಗಳನ್ನು ರಸ್ತೆಗೆ ಕೊಟ್ಟಿದ್ದೇವೆ. ಮೊದಲು 54 ಸಾವಿರ ಕೋಟಿ ರುಪಾಯಿ ಕೇಂದ್ರದಿಂದ ತೆರಿಗೆಯಲ್ಲಿ ಬರುತ್ತಿದ್ದರೆ, ಈಗ 1 ಲಕ್ಷ, 34 ಸಾವಿರ ಕೋಟಿ ರು.ಬರುತ್ತಿದೆ, ನೈಸರ್ಗಿಕ ವಿಕೋಪ ನಡೆದಾಗ ಹಣ ಕೇಳಿದ ಸಂದರ್ಭದಲ್ಲಿ 1000 ಕೋಟಿ ಕೇಳಿದಾಗ, ಕನಿಷ್ಟ600 ಕೋಟಿ ರು. ಮೋದಿ ಸರ್ಕಾರ ಕೊಟ್ಟಿದೆ ಎಂದರು.

ಹೀಗಾಗಿ ಅನ್ಯಾಯ ಮಾಡಿದ್ದು ಕಾಂಗ್ರೆಸ್‌ ಸರ್ಕಾರ, ಸಿದ್ದರಾಮಯ್ಯ ಅವರು ಈ ರೀತಿಯಲ್ಲಿ ಮನ ಬಂದಂತೆ ಮಾತನಾಡುವ ಮೊದಲು ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ ಪರಿಸ್ಥಿತಿ ಏನಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ದೇಶದಲ್ಲಿ ಕಾಂಗ್ರೆಸ್‌ ಸೇರಿಸಿಕೊಂಡು ಒಟ್ಟಿಗೆ ಏನೋ ಮಾಡಲು ಮಾತುಕತೆ ಯಲ್ಲಿದ್ದಾರೆ. ಆದರೆ, ಕಾಂಗ್ರೆಸ್‌ ಪರಿಸ್ಥಿತಿ ಏನಾಗಿದೆ. ಗುಜರಾತ್‌ ಉತ್ತರ ಪ್ರದೇಶ, ಉತ್ತರಾಖಂಡ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಧಿಕಾರದಲ್ಲಿ ಇಲ್ಲ ಎಂದರು.

4 ದಶಕ ರಾಜಕೀಯ ಮಾಡಿದ್ದರೂ ಸಿದ್ದುಗೆ ಸೋಲಿನ ಭೀತಿ: ಸಿ.ಟಿ.ರವಿ

ಇಡೀ ದೇಶದ ಜನ ನರೇಂದ್ರ ಮೋದಿಯನ್ನು ಸ್ವೀಕಾರ ಮಾಡಿದ್ದಾರೆ.2024ರಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗುವುದು ಸೂರ್ಯ, ಚಂದ್ರ ಇರುವಷ್ಟುಸತ್ಯ. ಅದೇ ರೀತಿ ನಮ್ಮ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮತ್ತೆ ಆಡಳಿತಕ್ಕೆ ಬರಲಿದೆ. ಇವರು ಏನೇ ಮಾಡಿದರೂ ಬಹುಮತದಿಂದ ಅಧಿಕಾರಕ್ಕೆ ಬರುತ್ತವೆ ಎಂದರು. ಈಗ ಮುಖ್ಯಮಂತ್ರಿಯಾಗಿ ಬಸವರಾಜ್‌ ಬೊಮ್ಮಾಯಿ ಅವರು ಇದ್ದಾರೆ, ಅವರ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ. ಈ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಹೇಳಿದರು.

Follow Us:
Download App:
  • android
  • ios