MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • Politics
  • ನ್ಯಾಯ ಬೇಕು ಮೋದಿ, 12 ಪ್ರಶ್ನೆಗಳನ್ನು ಪ್ರಧಾನಿ ಮುಂದಿಟ್ಟ ಸಿದ್ದರಾಮಯ್ಯ

ನ್ಯಾಯ ಬೇಕು ಮೋದಿ, 12 ಪ್ರಶ್ನೆಗಳನ್ನು ಪ್ರಧಾನಿ ಮುಂದಿಟ್ಟ ಸಿದ್ದರಾಮಯ್ಯ

ಬೆಂಗಳೂರು (ಜ.19): ಕಲಬುರಗಿ ಹಾಗೂ ಯಾದಗಿರಿಗೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ 12 ಪ್ರಶ್ನೆಗಳನ್ನು ಕೇಳಿದ್ದಾರೆ. ಪಿಎಸ್ ಐ ಹಗರಣ ಸೇರಿದಂತೆ ರಾಜ್ಯ ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಮುಂದಿಟ್ಟುಕೊಂಡು ಪ್ರಧಾನಿ ಮೋದಿಗೆ ನ್ಯಾಯ ಬೇಕು ಮೋದಿ ಎಂದು ಪೋಸ್ಟರ್  ಮೂಲಕ 12 ಪ್ರಶ್ನೆಗಳನ್ನು ಮುಂದಿಟ್ಟು ಟ್ವೀಟ್ ಮಾಡಿದ್ದಾರೆ. ಸಿದ್ದರಾಮಯ್ಯ ಮುಂದಿಟ್ಟ 12 ಪ್ರಶ್ನೆಗಳು ಈ ಕೆಳಗಿನಂತಿದೆ.

2 Min read
Gowthami K
Published : Jan 19 2023, 03:56 PM IST| Updated : Jan 19 2023, 03:57 PM IST
Share this Photo Gallery
  • FB
  • TW
  • Linkdin
  • Whatsapp
112

40% ಕಮಿಷನ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಕಾಮಗಾರಿಯ ಹಣ ನೀಡದೆ ಸತಾಯಿಸಿದ ನಿಮ್ಮ ಬಿಜೆಪಿ ಸರ್ಕಾರದ ಹಣದಾಸೆಗೆ ಗುತ್ತಿಗೆದಾರ ಪ್ರಸಾದ್‌ ಬಲಿಯಾದ. ಈ ಸಾವಿನ ಸರಣಿಯನ್ನು ಕೊನೆಗಾಣಿಸುವವರು
ಯಾರು ಮೋದಿ ಅವರೇ? 

212

ಮೆಟ್ರೋ ಪಿಲ್ಲರ್ ಕುಸಿತದಿಂದ ಮೃತಪಟ್ಟ ಸಾಫ್ಟ್ ವೇರ್ ಎಂಜಿನಿಯರ್ ತೇಜಸ್ವಿನಿ ಹಾಗೂ ಇವರ ಎರಡು ವರ್ಷದ ಕಂದಮ್ಮ ವಿಹಾನ್ ಸಾವಿಗೆ ಹೊಣೆ ಯಾರು? ಮುಖ್ಯ ಎಂಜಿನಿಯರ್ ವಿರುದ್ಧ ಕ್ರಮ ಯಾವಾಗ ಪ್ರಧಾನಿಗಳೇ?

312

ಸಚಿವರಾಗಿದ್ದ ಈಶ್ವರಪ್ಪ ಅವರಿಗೆ 40% ಕಮಿಷನ್ ನೀಡಲಾಗದೆ ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆಗೆ ಶರಣಾದರು. ಬದುಕಿದ್ದಾಗಲಂತೂ ನೀವು ಆತನಿಗೆ ನ್ಯಾಯ ಕೊಡಿಸಿಲ್ಲ, ಸತ್ತ ಮೇಲಾದರೂ ನ್ಯಾಯ ಸಿಗುವುದು ಬೇಡವೇ ಮೋದಿ ಅವರೇ?

412

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಹೊಣೆಗೇಡಿತನದಿಂದ ನಾಡಿಗೆ ಬೆಳಕು ಕೊಟ್ಟ ಲಕ್ಷಾಂತರ ಮಂದಿಯ ಬಾಳು ಕತ್ತಲಾಗಿದೆ. ಶರಾವತಿ ಸಂತ್ರಸ್ಥ ಕುಟುಂಬಗಳ ಸಮಸ್ಯೆಗೆ ಸಂದಿಸಿ ಪ್ರಧಾನಿಗಳೇ? 

512

ರಸ್ತೆ ಗುಂಡಿಗಳಿಂದ ಸಂಭವಿಸಿದ ಅಪಘಾತದಲ್ಲಿ ಪೋಷಕರನ್ನು ಕಳೆದುಕೊಂಡ ಹತ್ತಾರು ಕುಟುಂಬಗಳ ಮಕ್ಕಳಿಗೆ ಹಾಗೂ ಮಕ್ಕಳನ್ನು ಕಳೆದುಕೊಂಡ ಪೋಷಕರಿಗೆ ನ್ಯಾಯ ಒದಗಿಸಿ.
ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿ ಪ್ರಧಾನಿಗಳೇ.

612

ಕಾಲುಬಾಯಿರೋಗ ಮತ್ತು ಚರ್ಮಗಂಟು ರೋಗದಿಂದ ಒಂದೂವರೆ ಲಕ್ಷದಷ್ಟು ಜಾನವಾರುಗಳು ಮರಣಹೊಂದಿವೆ. ರೋಗಕ್ಕೆ ಲಸಿಕೆ ಮತ್ತು ಜೀವನಾಧಾರದ ರಾಸುಗಳನ್ನು ಕಳೆದುಕೊಂಡ ರೈತ ಕುಟುಂಬಗಳಿಗೆ ಪರಿಹಾರ ಕೊಡಿಸಿ ಪ್ರಧಾನ ಮಂತ್ರಿಗಳೇ.

712

ಕನ್ನಡ ನಾಡಿನ ಹೆಮ್ಮೆಯ ನಂದಿನಿ ಸಂಸ್ಥೆ ಮೇಲೆ ಗುಜರಾತಿನ ಅಮುಲ್ ಕಣ್ಣು ಬಿದ್ದಿದೆ. ನಮ್ಮ ರೈತರ ಅನ್ನದ ತಟ್ಟೆಗೆ ಮಣ್ಣು ಹಾಕುವ ವ್ಯಾಪಾರಿ ಬುದ್ದಿ ಸಾಕು ಮಾಡಿ ಪ್ರಧಾನಿಗಳೇ.
ಕನ್ನಡ ನಾಡಿನ ಹೆಮ್ಮೆಯ ನಂದಿನಿ ಸಂಸ್ಥೆ ಮೇಲೆ ಗುಜರಾತಿನ ಅಮುಲ್ ಕಣ್ಣು ಬಿದ್ದಿದೆ. ನಮ್ಮ ರೈತರ ಅನ್ನದ ತಟ್ಟೆಗೆ ಮಣ್ಣು ಹಾಕುವ ವ್ಯಾಪಾರಿ ಬುದ್ದಿ ಸಾಕು ಮಾಡಿ ಪ್ರಧಾನಿಗಳೇ. 

812

ಕೊರೊನಾ ಕಾಲದಲ್ಲಿ ಸ್ಯಾನಿಟೈಜರ್, ಮಾಸ್ಕ್ ನಿಂದ ಹಿಡಿದು ವೆಂಟಿಲೇಟರ್ ವರೆಗೆ ಎಲ್ಲದರಲ್ಲೂ ರಾಜ್ಯ ಸರ್ಕಾರ ಲೂಟಿ ಮಾಡಿದ್ದರಿಂದ ಕನಿಷ್ಠ 3,000 ಕೋಟಿ ಅವ್ಯವಹಾರ ನಡೆದಿದೆ. ಕೊರೊನಾದಿಂದ ಹಾದಿಯಲ್ಲಿ ಬೀದಿಯಲ್ಲಿ ಸತ್ತವರ ಆತ್ಮಗಳು ನ್ಯಾಯಕ್ಕಾಗಿ ನಿಮ್ಮ ಹಾದಿಯನ್ನೇ ಕಾಯುತ್ತಿವೆ ಮೋದಿ ಅವರೇ.

912

ಪರೇಶ್ ಮೇಸ್ತಾನ ಸಾವನ್ನೂ ತನ್ನ ಭರ್ಜರಿ ರಾಜಕೀಯ ಲಾಭಕ್ಕೆ ಬಳಸಿಕೊಂಡಿದ್ದು ಬಿಜೆಪಿ. ಈಗ ಆತನ ವಯೋವೃದ್ಧ ತಂದೆ-ತಾಯಿ ಕುಟುಂಬಕ್ಕೆ ನ್ಯಾಯ ಬೇಕು.

1012

ಕೋವಿಡ್ ಸಂದರ್ಭದಲ್ಲಿ ಅಗತ್ಯ ಸಲಕರಣೆ ಪೂರೈಕೆ ಮಾಡಿದ್ದ ಗುತ್ತಿಗೆದಾರ ಬಸವರಾಜ ಅಮರಗೋಳ ಅವರಿಗೆ ರಾಜ್ಯ ಸರ್ಕಾರ ಬಿಲ್‌ ಹಣ ನೀಡದೆ ಇರುವುದರಿಂದ ಬೇಸತ್ತು ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ಈತನಿಗೆ ನ್ಯಾಯ ಕೊಡಿಸಿ, ಪ್ರಾಣ ಉಳಿಸಬೇಕಾದವರು ನೀವಲ್ಲವೇ ಮೋದಿ ಅವರೇ?

1112

ಕೆ.ಆರ್ ಪುರಂನ ಇನ್ಸ್ಪೆಕ್ಟರ್ ನಂದೀಶ್ 80 ಲಕ್ಷ ಲಂಚ ಕೊಟ್ಟು ವರ್ಗಾವಣೆ ಪಡೆದು ಬಂದ ಕಾರಣಕ್ಕೆ ಒತ್ತಡದಿಂದ ಸತ್ತಿದ್ದಾರೆ ಎಂದು ಸ್ವತಃ ಬಿಜೆಪಿ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ. ಇತರರಿಗೆ ರಕ್ಷಣೆ ನೀಡುವ ಪೊಲೀಸರಿಗೇ ಹೀಗಾದರೆ
ಸಾಮಾನ್ಯರ ಗತಿ ಏನು ಮೋದಿ ಅವರೇ?

1212

PSI ನೇಮಕಾತಿ ಹಗರಣದಿಂದ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹಗರಣವೂ ಸೇರಿ ಮೊನ್ನೆ ನಡೆದ PWD ಸಹಾಯಕ ಎಂಜಿನಿಯರ್  ನೇಮಕಾತಿ ಹಗರಣದಲ್ಲಿ ಕೆಲಸದಿಂದ ವಂಚಿತರಾದ ಎಲ್ಲಾ ಅರ್ಹರಿಗೆ ನ್ಯಾಯ ಕೊಡಿಸಿ ಮೋದಿಯವರೇ? 

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಸಿದ್ದರಾಮಯ್ಯ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved