ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಮೊದಲು ತಮ್ಮ ಪ್ರೊಫೈಲ್‌ನಲ್ಲಿ ‘ಮುಖ್ಯಮಂತ್ರಿ, ಅಸ್ಸಾಂ, ಇಂಡಿಯಾ’ ಎಂದು ಬರೆದುಕೊಂಡಿದ್ದರು. ಈಗ ಅದನ್ನು ‘ಮುಖ್ಯಮಂತ್ರಿ, ಅಸ್ಸಾಂ, ಭಾರತ’ ಎಂದು ಬದಲಿಸಿದ್ದಾರೆ.

ಗುವಾಹಟಿ (ಜುಲೈ 19, 2023): ವಿಪಕ್ಷಗಳ ಕೂಟವು ತನ್ನ ಕೂಟಕ್ಕೆ ‘I.N.D.I.A’ ಎಂದು ನಾಮಕರಣ ಮಾಡುತ್ತಿದ್ದಂತೆಯೇ ಕೆಲವು ಬಿಜೆಪಿ ನಾಯಕರು ಟ್ವಿಟ್ಟರ್‌ ಹಾಗೂ ಇತರ ಸಾಮಾಜಿಕ ಮಾಧ್ಯಮಗಳ ತಮ್ಮ ಪ್ರೊಫೈಲ್‌ನಲ್ಲಿ ದೇಶದ ಹೆಸರನ್ನು ‘ಇಂಡಿಯಾ’ ಬದಲು ‘ಭಾರತ’ ಎಂದು ಬದಲಿಸಿಕೊಂಡಿದ್ದಾರೆ. 

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಮೊದಲು ತಮ್ಮ ಪ್ರೊಫೈಲ್‌ನಲ್ಲಿ ‘ಮುಖ್ಯಮಂತ್ರಿ, ಅಸ್ಸಾಂ, ಇಂಡಿಯಾ’ ಎಂದು ಬರೆದುಕೊಂಡಿದ್ದರು. ಈಗ ಅದನ್ನು ‘ಮುಖ್ಯಮಂತ್ರಿ, ಅಸ್ಸಾಂ, ಭಾರತ’ ಎಂದು ಬದಲಿಸಿದ್ದಾರೆ.

ಇದನ್ನು ಓದಿ: ತರಕಾರಿ ಬೆಲೆ ಏರಿಕೆಗೆ ''ಮಿಯಾ'' ಮುಸ್ಲಿಂ ವ್ಯಾಪಾರಿಗಳೇ ಕಾರಣ: ಅಸ್ಸಾಂ ಸಿಎಂ

ಇದೇ ವೇಳೆ ಹಿಮಂತ ಬಿಸ್ವ ಶರ್ಮಾ ಅವರು, ‘ಬ್ರಿಟಿಷರು ನಮ್ಮ ದೇಶಕ್ಕೆ ಇಟ್ಟ ಹೆಸರು ಇಂಡಿಯಾ. ಆದರೆ ನಮ್ಮ ಪೂರ್ವಜರು ‘ಭಾರತ’ದ ಪರಿಕಲ್ಪನೆ ಹೊಂಡಿದ್ದರು. ನಾವು ‘ಭಾರತ’ಕ್ಕಾಗಿ ಕೆಲಸ ಮಾಡೋಣ. ‘ಭಾರತಕ್ಕಾಗಿ ಬಿಜೆಪಿ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಲ್ಪಸಂಖ್ಯಾತರಿಗೆ ಕಿರುಕುಳ ವಿಚಾರ: ಭಾರತ​ದಲ್ಲಿನ ‘ಹುಸೇನ್‌ ಒಬಾಮ’ಗಳ ಮೇಲೆ ಕ್ರಮ; ಅಸ್ಸಾಂ ಸಿಎಂ ಪ್ರತಿಕ್ರಿಯೆ