ಭಾರತ್ ಜೋಡೋ ಯಾತ್ರೆ, ಹೊಸ ಅಧ್ಯಕ್ಷ ಸೇರಿದಂತೆ ಹಲವು ಕಾರಣಗಳಿಂದ ಕಾಂಗ್ರೆಸ್ ಹೊಸ ಹುರುಪಿನಿಂದ ವಿಧಾನಸಭಾ ಚುನಾವಣೆಯಲ್ಲಿ ಪಾಲ್ಗೊಳ್ಳುತ್ತಿದೆ. ಇದರ ನಡುವೆ ಕಾಂಗ್ರೆಸ್ ಬುಡ ಅಲುಗಾಡಿಸುವ ಹೇಳಿಕೆಯನ್ನು ಅಸ್ಸಾಂ ಸಿಎಂ ನೀಡಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್‌ಗೆ ಹೊಸ ಆತಂಕ ಎದುರಾಗಿದೆ.
ಗುವ್ಹಾಟಿ(ನ.12): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರ ಹಿಡಿಯಲು ಕಾಂಗ್ರೆಸ್ ಈಗಿನಿಂದಲೇ ಭರ್ಜರಿ ತಯಾರಿ ನಡೆಸುತ್ತಿದೆ. ಇದರ ಜೊತೆಗೆ ಎಲ್ಲಾ ವಿಧಾನಸಭೆ ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಹರಸಾಹಸ ಪಡುತ್ತಿದೆ. ಕಾಂಗ್ರೆಸ್ ಅಧ್ಯಕ್ಷ ಚುನಾವಣೆ, ಭಾರತ್ ಜೋಡೋ ಯಾತ್ರೆ ಸೇರಿದಂತೆ ಹಲವು ಐತಿಹಾಸಿಕ ನಿರ್ಣಯಗಳ ಮೂಲಕ ಕಾಂಗ್ರೆಸ್ ಹೊಸ ಹುರುಪಿನಿಂದ ಮುನ್ನುಗ್ಗುತ್ತಿದೆ. ಇದರ ನಡುವೆ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ನೀಡಿದ ಹೇಳಿಕೆ ಇದೀಗ ಕಾಂಗ್ರೆಸ್ ಹೈಕಮಾಂಡ್ ನಿದ್ದೆಗೆಡಿಸಿದೆ. ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಶಶಿ ತರೂರ್ ಬೆಂಬಲಿಸಿದ 1,000 ಕಾಂಗ್ರಸ್ ನಾಯಕರು ಶೀಘ್ರದಲ್ಲೇ ಬಿಜೆಪಿ ಸೇರಿಕೊಳ್ಳುವ ನಿರೀಕ್ಷೆ ಇದೆ ಎಂದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಶಶಿ ತರೂರ್ ಬೆಂಬಲಿಸಿದ ನಾಯಕರು ಮಾತ್ರ ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿರಿಸಿದ ನಾಯಕರಾಗಿದ್ದಾರೆ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿ ಪಕ್ಷದ ನಾಯಕರ ಕಣ್ಣೊರೆಸುವ ತಂತ್ರ ಮಾಡಿದ್ದಾರೆ. ಈ ಚನಾವಣೆ ಫಿಕ್ಸ್ ಆಗಿತ್ತು. ಫಲಿತಾಂಶ ಪ್ರಕಟಗೊಳ್ಳುವುದಕ್ಕಿಂತಲೂ ಮೊದಲು ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಂದಿದ್ದರು. ಕಾಂಗ್ರೆಸ್ ಚುನಾವಣೆ ನಡೆದಾಗಲೇ ಫಲಿತಾಂಶವನ್ನು ಎಲ್ಲರೂ ಊಹಿಸಿದ್ದರು. ಮಲ್ಲಿಕಾರ್ಜುನ ಖರ್ಗೆ ಚುನಾವಣೆಯಲ್ಲಿ 7,897 ಮತಗಳನ್ನು ಪಡೆದು ಕಾಂಗ್ರೆಸ್ ಅಧ್ಯಕ್ಷರಾದರು.
ಮನೀಶ್ ಸಿಸೋಡಿಯಾಗೆ ಮತ್ತೊಂದು ಶಾಕ್, ಸಿಬಿಐ, ಇಡಿ ಬಳಿಕ ಅಸ್ಸಾಂನಿಂದ ಬಂತು ಬಾಣ!
ಇತ್ತ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಶಿ ತರೂರ್ 1,072 ಮತಗಳನ್ನು ಪಡೆದಿದ್ದರು. ಗಾಂಧಿ ಕುಟುಂಬದ ಸೂಚನೆಯಂತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ್ ಖರ್ಗೆ ಬದಲು ಶಶಿ ತರೂರ್‌ಗೆ ಮತ ಹಾಕಿದ ಪ್ರಜಾಪ್ರಭುತ್ವದಲ್ಲಿ ವಿಶ್ವಾವರಿಸಿದ್ದ ನಾಯಕರು ಶೀಘ್ರದಲ್ಲೇ ಬಿಜೆಪಿ ಸೇರಿಕೊಳ್ಳುವ ನಿರೀಕ್ಷೆ ಇದೆ ಎಂದು ಶರ್ಮಾ ಹೇಳಿದ್ದಾರೆ.
ಬಿಜೆಪಿ ಹಿರಿಯ ಕಾರ‍್ಯಕರ್ತರ ಪಾದ ತೊಳೆದ ಸಿಎಂ ಶರ್ಮಾ
ಭಾರತ ಸಂಸ್ಕೃತಿಯ ನೈತಿಕತೆ’ ಎಂಬ ಕಾರ‍್ಯಕ್ರಮವನ್ನು ಆಯೋಜಿಸಿದ್ದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಈ ಕಾರ‍್ಯಕ್ರಮದಲ್ಲಿ ಬಿಜೆಪಿಯ ಹಿರಿಯ ಕಾರ‍್ಯಕರ್ತರ ಪಾದವನ್ನು ತೊಳೆದಿದ್ದಾರೆ. ಈ ರೀತಿ ಹಿರಿಯರಿಗೆ ಗೌರವ ತೋರುವುದು ಬಿಜೆಪಿಯ ಸಂಸ್ಕೃತಿ ಎಂದು ಅವರು ಹೇಳಿದ್ದಾರೆ. ಈ ವಿಡಿಯೋವನ್ನು ಅವರು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದು, ‘ಹಿರಿಯರಿಗೆ ಗೌರವವನ್ನು ತೋರುವುದು ಭಾರತೀಯ ಸಂಸ್ಕೃತಿಯಾಗಿದೆ. ಅಲ್ಲದೇ ಇದು ಬಿಜೆಪಿಯ ಸಂಸ್ಕೃತಿಯೂ ಸಹ ಆಗಿದೆ. ಅಸ್ಸಾಂ ಬಿಜೆಪಿ ನೆಲೆಯೂರಿದ ಸಮಯದದಿಂದಲೂ ಪಕ್ಷದ ಹಿತಕ್ಕಾಗಿ ಕೆಲಸ ಮಾಡಿದ ಹಿರಿಯರ ಪಾದಗಳನ್ನು ತೊಳೆಯಲು ಆನಂದವಾಗುತ್ತಿದೆ’ ಎಂದು ಬರೆದಿದ್ದಾರೆ.
ಅಸ್ಸಾಂ: ಉಗ್ರರ ಜತೆ ಸಂಪರ್ಕ ಹೊಂದಿದ್ದ ಮುಫ್ತಿಯ ಮದರಸಾ ಧ್ವಂಸ
ಬಾಂಗ್ಲಾದೇಶಿ ಉಗ್ರ ಸಂಘಟನೆ ಅನ್ಸರುಲ್ ಇಸ್ಲಾಂನೊಂದಿಗೆ ಸಂಪರ್ಕ ಹೊಂದಿದೆ ಎಂಬ ಕಾರಣಕ್ಕೆ ಅಸ್ಸಾಂನ ಮೋರಿಗಾಂವ್ ಜಿಲ್ಲೆಯಲ್ಲಿರುವ ಮಫ್ತಿ ಮುಸ್ತಫಾನಿಗೆ ಸೇರಿದ ಮದರಸಾವನ್ನು ಧ್ವಂಸ ಮಾಡಲಾಗಿದೆ. ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಮುಫ್ತಿ ನಡೆಸುತ್ತಿದ್ದ ಮದರಸಾವನ್ನು ಧ್ವಂಸ ಮಾಡಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಅಸ್ಸಾಂ ಜಿಹಾದಿಗಳು ತಾಣವಾಗಿಬಿಟ್ಟಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
