ಮನೀಶ್ ಸಿಸೋಡಿಯಾಗೆ ಮತ್ತೊಂದು ಶಾಕ್, ಸಿಬಿಐ, ಇಡಿ ಬಳಿಕ ಅಸ್ಸಾಂನಿಂದ ಬಂತು ಬಾಣ!

ಅಬಕಾರಿ ಹಗರಣದಲ್ಲಿ ಸಿಲುಕಿ ಇಡಿ, ಸಿಬಿಐನಿಂದ ವಿಚಾರಣೆ ಒಳಗಾಗಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ಒಂದರ ಮೇಲೊಂದರಂತೆ ಸಂಕಷ್ಟ ಎದುರಾಗಿದೆ. ಇದೀಗ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಆಕ್ರೋಶಕ್ಕೆ ಸಿಸೋಡಿಯಾ ಬುಡು ಅಲುಗಾಡುತ್ತಿದೆ
 

PPE kits allegations against the Assam cm Case Delhi DCM Manish Sisodia summoned in Assam over a defamation ckm

ನವದೆಹಲಿ(ನ.07): ಆಮ್ ಆದ್ಮಿ ಪಾರ್ಟಿಗೆ ಇದೀಗ ಸಂಕಷ್ಟಗಳ ಸರಮಾಲೆ ಎದುರಾಗಿದೆ. ಹಳೆ ಪ್ರಕರಣಗಳು ಇದೀಗ ಮುಳ್ಳಾಗಿ ಚುಚ್ಚುತ್ತಿದೆ. ದೆಹಲಿ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮೇಲಿನ ಅಬಕಾರಿ ಹಗರಣದ ತನಿಖೆ, ಮನೆ ಮೇಲೆ, ಆಪ್ತರ ಮೇಲೆ ದಾಳಿ ಒಂದಡೆಯಾದರೆ, ಮತ್ತೊಂದೆದೆ ಆಪ್ತನೆ ತಿರುಗುಬಾಣವಾಗಿದ್ದಾನೆ. ಇದರ ನಡುವೆ ಅಸ್ಸಾಂ ಮುಖ್ಯಮಂತ್ರಿ ಹಾಗೂ ಪತ್ನಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ಮನೀಶ್ ಸಿಸೋಡಿಯಾಗೆ ಇದೀಗ ಸಮನ್ಸ್ ನೀಡಲಾಗಿದೆ.  ಕೋವಿಡ್ ವೇಳೆ ಹಿಮಂತ್ ಬಿಸ್ವಾ ಶರ್ಮಾ ಹಾಗೂ ಶರ್ಮಾ ಪತ್ನಿ ಪಿಪಿಇ ಕಿಟ್ ಖರೀದಿಯಲ್ಲಿ ಬ್ರಷ್ಟಾಚಾರ ಮಾಡಿದ್ದಾರೆ. ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ಕಿಟ್ ಖರೀದಿ ಮಾಡಿದ್ದಾರೆ ಎಂದು ಸಿಸೋಡಿಯಾ ಮಾಧ್ಯಮಗಳ ಮುಂದೆ ಗಂಭೀರ ಆರೋಪ ಮಾಡಿದ್ದರು. ಸತತ ಆರೋಪ ಮಾಡಿದ ಸಿಸೋಡಿಯಾ ವಿರುದ್ಧ ಹಿಮಂತ್ ಬಿಸ್ವಾ ಶರ್ಮಾ ಮಾನನಷ್ಟ ಮೊಕದ್ದಮೆ ದಾವೆ ಹೂಡಿದ್ದರು. ಈ ಪ್ರಕರಣದಲ್ಲಿ ಇದೀಗ ಕೋರ್ಟ್ ಸಿಸೋಡಿಯಾಗೆ ಸಮನ್ಸ್ ನೀಡಿದೆ. 

ಸಿಸೋಡಿಯಾ ಇದೀಗ ತಾವು ಮಾಡಿದ ಆರೋಪಕ್ಕೆ ಸಾಕ್ಷ್ಯಗಳನ್ನು ನೀಡಬೇಕಿದೆ. ಯಾವ ಆಧಾರದಲ್ಲಿ ಈ ಆರೋಪಗಳನ್ನು ಮಾಡಲಾಗಿದೆ ಅನ್ನೋದನ್ನು ಸಾಬೀತುಪಡಿಸಬೇಕಿದೆ. ಇದೀಗ ಈ ಪ್ರಕರಣವೂ ಆಮ್ ಆದ್ಮಿ ಪಾರ್ಟಿಗೆ ತೀವ್ರ ಹಿನ್ನಡೆ ತರುವ ಸಾಧ್ಯತೆ ಇದೆ.  2020ರಲ್ಲಿ ಕೋವಿಡ್‌ ತಾರಕಕ್ಕೇರಿದಾಗ ಅಸ್ಸಾಂ ಸರ್ಕಾರ 600 ರು.ಗೆ 1 ಪಿಪಿಇ ಕಿಟ್‌ ಅನ್ನು ಇತರ ಕಂಪನಿಗಳಿಂದ ಖರೀದಿಸಿತ್ತು. ಆದರೆ ಶರ್ಮಾ ಅವರ ಪತ್ನಿಯ ಕಂಪನಿ ಹಾಗೂ ಪುತ್ರನ ವ್ಯಾಪಾರ ಪಾಲುದಾರರಿಂದ 990ರ ರು.ಗೆ 1 ಪಿಪಿಇ ಕಿಟ್‌ ಅನ್ನು ಖರೀದಿಸಿತ್ತು. ಒಮ್ಮೆ ಪತ್ನಿಯ ಕಂಪನಿಗೆ ಟೆಂಡರ್‌ ಸಿಗದೇ ಹೋದಾಗ ಪುತ್ರನ ಪಾಲುದಾರರ ಕಂಪನಿಗೆ ಗುತ್ತಿಗೆ ನೀಡಿ 1 ಕಿಟ್‌ಗೆ 1680 ರು.ನಂತೆ ಖರೀದಿಸಲಾಗಿತ್ತು. ‘ಶರ್ಮಾ ಅವರ ಪತ್ನಿ ವೈದ್ಯಕೀಯ ಸಾಧನ ತಯಾರಿಸುವುದಿಲ್ಲ. ಆದರೂ ಖರೀದಿ ನಡೆದಿದ್ದು ಹೇಗೆ? ಈ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಏಕೆ ಸುಮ್ಮನಿದೆ?’ ಎಂದು ಸಿಸೋಡಿಯಾ ಪ್ರಶ್ನಿಸಿದ್ದರು.

ಅಬಕಾರಿ ಹಗರಣ, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪಿಎ ಅರೆಸ್ಟ್!

100 ಕೋಟಿ ಮಾನನಷ್ಟದಾವೆ
ಪಿಪಿಇ ಕಿಟ್‌ ಖರೀದಿಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹಾಗೂ ಅವರ ಪತ್ನಿ ಅವ್ಯವಹಾರ ಎಸಗಿದ್ದಾರೆ ಎಂದು ಆರೋಪಿಸಿದ್ದ ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ವಿರುದ್ಧ ಹಿಮಂತ ಅವರ ಪತ್ನಿ ರಿನಿಕಿ ಭುಯಾನ್‌ ಶರ್ಮಾ 100 ಕೋಟಿ ರು. ಮಾನನಷ್ಟಮೊಕದ್ದಮೆ ದಾಖಲಿಸಿದ್ದರು.  ಕಾಮರೂಪ ಮೆಟ್ರೋಪಾಲಿಟಿನ್‌ ಜಿಲ್ಲಾ ನ್ಯಾಯಾಲಯದಲ್ಲಿ ಮಾನನಷ್ಟಮೊಕದ್ದಮೆ ದಾಖಲಿಸಿದ್ದರು. ಸಿಸೋಡಿಯಾ ಅವರ ಆರೋಪದಿಂದಾಗಿ ರಿನಿಕಿ ಅವರ ಗೌರವ ಹಾಗೂ ಸ್ಥಾನಮಾನಕ್ಕೆ ಹಾನಿಯಾಗಿದೆ. ಅಲ್ಲದೇ ಸಿಸೋಡಿಯಾ ಅವರು ಅನಗತ್ಯವಾಗಿ ಈ ವಿವಾದಕ್ಕೆ ರಿನಿಕಿ ಅವರ ಹೆಸರನ್ನು ಎಳೆದು ತಂದಿದ್ದಾರೆ ಎಂದು ರಿನಿಕಿ ಅವರ ವಕೀಲರು ಹೇಳಿದ್ದಾರೆ.

Telangana ಶಾಸಕರ ಖರೀದಿ ಯತ್ನ ಆರೋಪ: ಅಮಿತ್ ಶಾ ಬಂಧಿಸಿ ಎಂದ Manish Sisodia

ಸಿಸೋಡಿಯಾ ಆಪ್ತ ಅರೋರಾ ಇದೀಗ ಮಾಫಿಸಾಕ್ಷಿ
ಅಬಕಾರಿ ಹಗಣರದಲ್ಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರ ಆಪ್ತ ದಿನೇಶ್‌ ಅರೋರಾ ಮಾಫಿ ಸಾಕ್ಷಿಯಾಗಲಿದ್ದಾರೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ದೆಹಲಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಹೀಗಾಗಿ ಅಬಕಾರಿ ಸಚಿವರೂ ಆಗಿರುವ ಸಿಸೋಡಿಯಾಗೆ ಮತ್ತಷ್ಟುಸಂಕಷ್ಟಎದುರಾಗಿದೆ. ಸೋಮವಾರ ನ್ಯಾಯಾಲಯದ ಮುಂದೆ ಹಾಜರಾಗಿದ್ದ ದಿನೇಶ್‌ ಆರೋರಾ, ‘ದೆಹಲಿ ಮದ್ಯ ಲೈಸೆನ್ಸ್‌ ಹಗರಣದಲ್ಲಿ ನನ್ನ ಪಾತ್ರದ ಬಗ್ಗೆ ನಾನು ಸ್ವಯಂ ಎಲ್ಲಾ ಮಾಹಿತಿ ಬಹಿರಂಗಪಡಿಸಲು ಸಿದ್ದನಿದ್ದೇನೆ. ಈ ಮೊದಲು ಕೂಡಾ ನಾನು ಸಿಬಿಐ ತನಿಖೆಗೆ ಸೂಕ್ತವಾಗಿ ಸ್ಪಂದಿಸಿದ್ದೆ. ಹೀಗಾಗಿ ನನಗೆ ಪ್ರಕರಣದಲ್ಲಿ ಕ್ಷಮಾದಾನ ನೀಡಬೇಕು’ ಎಂದು ಕೋರಿಕೆ ಸಲ್ಲಿಸಿದ್ದಾನೆ. ಈ ಮನವಿಯ ಕುರಿತು ನ್ಯಾಯಾಲಯ ನ.14ಕ್ಕೆ ವಿಚಾರಣೆ ನಡೆಸಲಿದೆ.

Latest Videos
Follow Us:
Download App:
  • android
  • ios