Asianet Suvarna News Asianet Suvarna News

Uniform Civil Code ಗಂಡ 3 ಪತ್ನಿಯರೊಂದಿಗಿರಲು ಯಾವ ಮುಸ್ಲಿಂ ಮಹಿಳೆ ಒಪ್ಪಲ್ಲ, UCC ಕುರಿತು ಸಿಎಂ ಶರ್ಮಾ ಖಡಕ್ ಮಾತು!

  • ಏಕರೂಪ ನಾಗರೀಕ ನೀತಿ ಸಂಹಿತೆ ಜಾರಿ ಕುರಿತು ಪ್ರತಿಕ್ರಿಯೆ
  • ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿಕೆ
  • ಮನೆಗೆ 3 ಪತ್ನಿಯರನ್ನು ಕರೆಯಲು ಮಹಿಳೆ ಒಪ್ಪಲ್ಲ
Assam CM Himanta Biswa Sarma backs Uniform Civil Code says every Muslim woman wants it to be implemented ckm
Author
Bengaluru, First Published May 1, 2022, 4:00 PM IST

ನವದೆಹಲಿ(ಮೇ.01): ದೇಶದೆಲ್ಲೆಡೆ ಏಕರೂಪ ನಾಗರೀಕ ನೀತಿ ಸಂಹಿತೆ( UCC) ಕುರಿತು ತೀವ್ರ ಚರ್ಚೆಯಾಗುತ್ತಿದೆ. ಬಿಜೆಪಿ ಆಡಳಿತದ ರಾಜ್ಯಗಳು   UCC ಜಾರಿಗೆ ತರಲು ಕಸರತ್ತು ನಡೆಸುತ್ತಿದೆ. ಅಸ್ಸಾಂನಲ್ಲೂ ಪರ ವಿರೋಧಗಳು ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಮುಸ್ಲಿಮ್ ಮಹಿಳೆಯರು ಏಕರೂಪ ನಾಗರೀಕ ನೀತಿ ಸಂಹಿತ ಜಾರಿಯಾಗಲು ಬಯಸುತ್ತಿದ್ದಾರೆ. ಯಾವ ಮುಸ್ಲಿಮ್ ಮಹಿಳೆ ತನ್ನ ಗಂಡನನ್ನು ಮತ್ತೆ 3 ಮದುವೆಯಾಗಿ ಮೂರು ಪತ್ನಿಯರನ್ನು ಮನೆಗೆ ಕರೆದುಕೊಂಡು ಬರಲು ಒಪ್ಪುವುದಿಲ್ಲ ಎಂದಿದ್ದಾರೆ.

ಏಕರೂಪ ನಾಗರೀಕ ನೀತಿ ಸಂಹಿತೆಯಿಂದ ಮುಸ್ಲಿಮ್ ಮಹಿಳೆಯರಿಗೆ ಒಳಿತಾಗಲಿದೆ. ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ನಿಷೇಧಿಸಿ ಮುಸ್ಲಿಮ್ ಮಹಿಳೆಯರ ಭಯದ ವಾತಾವರಣವನ್ನು ಹೋಗಲಾಡಿಸಿದೆ. ಇದೀಗ ಏಕರೂಪ ನಾಗರೀಕ ನೀತಿ ಸಂಹಿತೆಯಿಂದ ಮುಸ್ಲಿಮ್ ಮಹಿಳೆಯರ ಅಭದ್ರತೆ ದೂರವಾಗಲಿದೆ ಎಂದು ಶರ್ಮಾಹೇಳಿದ್ದಾರೆ.

UCC : ಪ್ರಧಾನಿ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿಗೆ ಮುಸ್ಲಿಂ ಕಾನೂನು ಮಂಡಳಿ ಪತ್ರ!

ಮುಸ್ಲಿಮ್ ಮಹಿಳೆಯರಿಗೆ ನ್ಯಾಯಕೊಡಿಸಲು ಏಕರೂಪ ನಾಗರೀಕ ನೀತಿ ಸಂಹಿತೆ ಜಾರಿಯಾಗಬೇಕು. ಇದು ಮುಸ್ಲಿಮ್ ಮಹಿಳೆಯರ ಆಗ್ರಹ ಕೂಡ ಆಗಿದೆ. ಆದರೆ ಕೆಲವರು ಇದನ್ನು ವಿರೋಧಿಸುತ್ತಿದ್ದಾರೆ. ಬಿಜೆಪಿ ನೀತಿ ತರುತ್ತಿದೆ ಅನ್ನೋ ಕಾರಣಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಜನರ ಒಳಿತಿಗಾಗಿ ಈ ಸಂಹಿತೆ ಜಾರಿಗೆ ತರಲಾಗುತ್ತಿದೆ ಎಂದು ಶರ್ಮಾ ಹೇಳಿದ್ದಾರೆ.

ಏನಿದು ಏಕರೂಪ ನಾಗರಿಕ ಸಂಹಿತೆ?
ಏಕರೂಪ ನಾಗರಿಕ ನೀತಿಸಂಹಿತೆ ಎಂಬುದು ಜನರು ಒಳಪಡುವ ಧರ್ಮ, ಜಾತಿ ಮತ್ತು ಜನಾಂಗ/ಬುಡಕಟ್ಟುಗಳ ಹೊರತಾಗಿ ಎಲ್ಲಾ ಜನರಿಗೆ ಅನ್ವಯಿಸುವ ಕಾನೂನಾಗಿದೆ. ಹಾಲಿ ವಿವಾಹ, ವಿಚ್ಛೇದನ, ಆಸ್ತಿ, ಉತ್ತರದಾಯಿತ್ವಕ್ಕೆ ಸಂಬಂಧಿಸಿದಂತೆ ಹಿಂದೂಗಳಿಗೆ, ಮುಸ್ಲಿಮರಿಗೆ, ಕ್ರೈಸ್ತರಿಗೆ ಪ್ರತ್ಯೇಕ ಕಾಯ್ದೆಗಳಿವೆ. ಅದರ ಬದಲಾಗಿ ಎಲ್ಲಾ ಧರ್ಮಗಳಿಗೂ ಒಂದೇ ನಿಯಮ ರೂಪಿಸುವುದೇ ಏಕರೂಪ ನಾಗರಿಕ ಸಂಹಿತೆ.

ಹಲವು ರಾಜ್ಯಗಳಲ್ಲಿ ಏಕರೂಪ ನಾಗರೀಕ ನೀತಿ ಸಂಹಿತೆ ಜಾರಿಗೆ ತಯಾರಿಗಳು ನಡೆಯುತ್ತಿದೆ. ಉತ್ತರಖಂಡ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಏಕರೂಪ ನೀತಿ ಸಂಹಿತೆ ಜಾರಿಗೆ ತಯಾರಿ ಆರಂಭಗೊಂಡಿದೆ.

Hijab Row: ಏಕರೂಪ ಸಂಹಿತೆ ಬಗ್ಗೆ ಅಂಬೇಡ್ಕರ್‌ ಹೇಳಿದ್ದೇನು?

ಹಿಮಾಚಲದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸರ್ಕಾರ ಸಿದ್ಧ: ಸಿಎಂ
ಏಕರೂಪ ನಾಗರಿಕ ಸಂಹಿತೆ ಉತ್ತಮವಾದ ಕ್ರಮವಾಗಿದೆ. ಹಿಮಾಚಲ ಪ್ರದೇಶದಲ್ಲಿ ಇದನ್ನು ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ ಹಾಗೂ ಅದಕ್ಕೆ ಅಗತ್ಯವಾದ ಪರಿಕಲ್ಪನೆಗಳನ್ನುಅಧ್ಯಯನ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌ ಹೇಳಿದ್ದಾರೆ.

ಬಿಜೆಪಿ ಆಡಳಿತದ ಉತ್ತರಾಖಂಡದಲ್ಲೂ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಇಚ್ಛೆ ತೋರಲಾಗಿದೆ. ಏಕೆಂದರೆ ಇದು ಅತ್ಯಂತ ಉತ್ತಮ ಕ್ರಮವಾಗಿದೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಆಮ್‌ ಆದ್ಮಿ ಪಕ್ಷದ ಕುರಿತಾಗಿ ಟೀಕೆ ಮಾಡಿರುವ ಅವರು, ಆಪ್‌ ಪ್ರಸ್ತುತ ದೇಶದಲ್ಲಿ ಮೂರನೇ ರಾಜಕೀಯ ಶಕ್ತಿಯಾಗಿ ಬೆಳವಣಿಗೆ ಹೊಂದುತ್ತಿದೆ. ಆದರೆ ಹಿಮಾಚಲ ಪ್ರದೇಶ ಶಾಂತಿಯುತ ರಾಜ್ಯವಾಗಿದ್ದು, ಆಪ್‌ನ ಶೈಲಿ ಇಲ್ಲಿ ಕೆಲಸಕ್ಕೆ ಬರುವುದಿಲ್ಲ. ರಾಜ್ಯ ಮೂರನೇ ಪಕ್ಷವನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಉ.ಖಂಡಲ್ಲಿ ಏಕರೂಪ ಸಂಹಿತೆ ಜಾರಿ
ಉತ್ತರಾಖಂಡದಲ್ಲಿ 2ನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮರುದಿನವೇ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಮಹತ್ವದ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಪ್ರಮುಖ ಚುನಾವಣಾ ಭರವಸೆ ಈಡೇರಿಕೆಯತ್ತ ಮೊದಲ ಹೆಜ್ಜೆ ಇಟ್ಟಿದ್ದಾರೆ.

ಮೊದಲ ಸಂಪುಟ ಸಭೆ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ನಿರ್ಧರಿಸಿದ್ದೇವೆ. ಕಾನೂನು ಜಾರಿಗೆ ರಾಜ್ಯ ಸಂಪುಟದಲ್ಲಿ ಅವಿರೋಧ ಅನುಮತಿ ದೊರೆತಿದ್ದು, ಶೀಘ್ರವೇ ತಜ್ಞರ ಸಮಿತಿ ರಚನೆ ಮಾಡುತ್ತೇವೆ. ಎಲ್ಲ ಅಂದುಕೊಂಡಂತಾದರೆ ಈ ಕಾಯ್ದೆ ಜಾರಿ ಮಾಡುವ ಮೊದಲ ರಾಜ್ಯ ಉತ್ತರಾಖಂಡವಾಗಿರಲಿದೆ’ ಎಂದು ಹೇಳಿದರು.

Latest Videos
Follow Us:
Download App:
  • android
  • ios