ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡುವುದರ ಜೊತೆಗೆ ಬಿಜೆಪಿಯನ್ನು ಪ್ರಶ್ನಿಸುವಂತೆ ಮಾಡಿರುವ ಬಿಜೆಪಿ ಬಂಡಾಯ ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ಅಭಿಮಾನಿಗಳು ಇದೀಗ ಮುಂಬರುವ ಲೋಕಸಭಾ ಚುನಾವಣೆಯತ್ತ ಗಮನ ಹರಿಸಿದ್ದಾರೆ. 

ವಿಶೇಷ ವರದಿ

ಪುತ್ತೂರು (ಮೇ.18): ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡುವುದರ ಜೊತೆಗೆ ಬಿಜೆಪಿಯನ್ನು ಪ್ರಶ್ನಿಸುವಂತೆ ಮಾಡಿರುವ ಬಿಜೆಪಿ ಬಂಡಾಯ ಪಕ್ಷೇತರ ಅಭ್ಯರ್ಥಿ ಅರುಣ್‌ ಕುಮಾರ್‌ ಪುತ್ತಿಲ ಅಭಿಮಾನಿಗಳು ಇದೀಗ ಮುಂಬರುವ ಲೋಕಸಭಾ ಚುನಾವಣೆಯತ್ತ ಗಮನ ಹರಿಸಿದ್ದಾರೆ.

ವಿಧಾನಸಭಾ ಚುನಾವಣೆ ವೇಳೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ‘ಪುತ್ತೂರಿಗೆ ಪುತ್ತಿಲ’ ಎಂಬ ಸಂದೇಶಗಳು ಇದೀಗ ‘ತುಳುನಾಡಿಗೆ ಪುತ್ತಿಲ’ ಎಂದು ಬದಲಾಗಿದೆ. ವಾಟ್ಸಪ್‌ ಗ್ರೂಪ್‌, ಆ್ಯಪ್‌, ಇನ್‌ಸ್ಟಾಗ್ರಾಂಗಳಲ್ಲಿ ಈ ಮಾಹಿತಿ ವಿಸ್ತಾರಗೊಳ್ಳುತ್ತಿದ್ದು, ‘ಇದು ಅಂತ್ಯವಲ್ಲ ಆರಂಭ. ಇನ್ನು ಹಿಂದುತ್ವದ ದಿಗ್ವಿಜಯಕ್ಕೆ’ ಎಂಬ ಸಂದೇಶಗಳು ಜಿಲ್ಲಾದ್ಯಂತ ಹರಿದಾಡುತ್ತಿದೆ.

ಅರುಣ್‌ ಕುಮಾರ್‌ ಪುತ್ತಿಲ ಎಫೆಕ್ಟ್: ಬಿಜೆಪಿ ವೋಟು ಶೇ.4.90 ಕುಸಿತ!

ಮುಂದುವರಿದ ಉತ್ಸಾಹ: ಪುತ್ತಿಲ ಮತ್ತು ಅವರ ಅಭಿಮಾನಿ ಬೆಂಬಲಿಗರ ಬಳಗವು 2024ರ ಲೋಕಸಭಾ ಚುನಾವಣೆಯತ್ತ ದೃಷ್ಟಿಹಾಯಿಸುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ‘ಪುತ್ತೂರಿಗೆ ಪುತ್ತಿಲ’ ವಾಟ್ಸಪ್‌ ಗ್ರೂಪುಗಳ ಲಾಂಛನ ಬದಲಾಗಿದೆ. ತುಳುನಾಡಿಗೆ ಪುತ್ತಿಲ ಎಂಬ ಆ್ಯಪ್‌ ಬಂದಿದೆ. ಅಲ್ಲದೆ ಆ್ಯಟ್‌ ಪುತ್ತಿಲ ಫಾರ್‌ ಎಂಪಿ 2024 ಇನ್‌ಸ್ಟಾಗ್ರಾಂ ಖಾತೆ ಆರಂಭಗೊಂಡಿದೆ. 

ಪುತ್ತಿಲ ಅವರನ್ನು ಸಂಸದ ಅಭ್ಯರ್ಥಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಮುಂದಿನ ಹೆಜ್ಜೆಯಾಗಿ ಅವರ ಅಭಿಮಾನಿ ಬಳಗವು ಇದೀಗ ಪುತ್ತಿಲಗೆ ಎಂಪಿ ಟಿಕೆಟ್‌ ಎಂಬ ಪೋಸ್ಟ್‌ ಕಾರ್ಡ್‌ ಅಭಿಯಾನ ಆರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪೋಸ್ಟ್‌ ಕಾರ್ಡ್‌ ಹಾಕುವ ಅಭಿಯಾನ ಆರಂಭಗೊಂಡಿದೆ. ಅಭಿಮಾನಿಗಳು ಮಂಗಳೂರಿನ ಮುಂದಿನ ಸಂಸದರು ಯಾರಾಗುತ್ತಾರೆ ಎಂಬ ಆನ್‌ಲೈನ್‌ ಓಟಿಂಗ್‌ ಈಗಾಗಲೇ ಆರಂಭಿಸಿದ್ದಾರೆ.

ಎಂಟಿಬಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವೆ: ಶಾಸಕ ಶರತ್‌ ಬಚ್ಚೇಗೌಡ

5 ವರ್ಷಗಳಿಂದ ಕಾರ್ಯಕರ್ತರು ನೊಂದಿದ್ದಾರೆ, ಅವರ ಅಭಿಲಾಷೆಯಿಂದ ಈ ಅಭಿಯಾನ ನಡೆಯುತ್ತಿದೆ. ಆದರೆ ನಾನು ಮುಂಬರುವ ಚುನಾವಣೆಯ ಸ್ಪರ್ಧೆ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ನಮ್ಮ ಜೊತೆ ಸಂಘದ ಹಿರಿಯರಿದ್ದಾರೆ, ಬಿಜೆಪಿ ಹಿರಿಯರಿದ್ದಾರೆ. ಅವರೆಲ್ಲರೂ ಹೇಳಿದರೆ ಮುಂದೆ ನಿರ್ಧರಿಸಲಾಗುವುದು.
-ಅರುಣ್‌ಕುಮಾರ್‌ ಪುತ್ತಿಲ, ಪರಾಜಿತ ಪಕ್ಷೇತರ ಅಭ್ಯರ್ಥಿ