Raichur: ಪ್ರತ್ಯೇಕ ಕೃಷಿ ತಾಂತ್ರಿಕ ನಿರ್ದೇಶನಾಲಯ ಸ್ಥಾಪನೆಗೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಅಹೋರಾತ್ರಿ ಧರಣಿ

ರಾಯಚೂರಿನ ಕೃಷಿ ವಿಶ್ವ ವಿದ್ಯಾಲಯದ ಬಿ.ಟೆಕ್ (ತಾಂತ್ರಿಕ) ಪದವೀಧರ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕಾರ ಮಾಡಿ, ಅಹೋರಾತ್ರಿ ಧರಣಿ ನಡೆಸಿದ್ದಾರೆ. ಕಳೆದ ಮೂರು ದಿನಗಳಿಂದ ಅಹೋರಾತ್ರಿ ಧರಣಿ ಕುಳಿತ ವಿದ್ಯಾರ್ಥಿಗಳು ಸರ್ಕಾರದ ಹೊಸ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

Protest by Raichur students demanding the establishment of a separate Directorate of Agricultural Technology gvd

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು

ರಾಯಚೂರು (ಜ.18):
ರಾಯಚೂರಿನ ಕೃಷಿ ವಿಶ್ವ ವಿದ್ಯಾಲಯದ ಬಿ.ಟೆಕ್ (ತಾಂತ್ರಿಕ) ಪದವೀಧರ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕಾರ ಮಾಡಿ, ಅಹೋರಾತ್ರಿ ಧರಣಿ ನಡೆಸಿದ್ದಾರೆ. ಕಳೆದ ಮೂರು ದಿನಗಳಿಂದ ಅಹೋರಾತ್ರಿ ಧರಣಿ ಕುಳಿತ ವಿದ್ಯಾರ್ಥಿಗಳು ಸರ್ಕಾರದ ಹೊಸ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ನಮ್ಮ ಬೇಡಿಕೆ ಈಡೇರಿಸುವರೆಗೂ ನಾವು ತರಗತಿಗೆ ಹಾಜರ್ ಆಗಲ್ಲವೆಂದು ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕಾರ ಮಾಡಿ ಕೃಷಿ ವಿವಿಯ ಆವರಣದ ತಾಂತ್ರಿಕ ‌ಮಹಾವಿದ್ಯಾಲಯದ ಎದುರು ಹೋರಾಟ ಶುರು ಮಾಡಿದ್ದಾರೆ.

ಕೃಷಿ ಬಿ.ಟೆಕ್ (ತಾಂತ್ರಿಕ) ವಿದ್ಯಾರ್ಥಿಗಳು ಅಹೋರಾತ್ರಿ ಧರಣಿ ನಡೆಸಿದ್ದು ಏಕೆ?: ಕೃಷಿ ಬಿ.ಟೆಕ್ ( ತಾಂತ್ರಿಕ) ಪದವಿ ನಾಲ್ಕು ವರ್ಷದ ಕೋರ್ಸ್ ಆಗಿದೆ. ಪದವಿ ಮುಗಿದ ವಿದ್ಯಾರ್ಥಿಗಳು ಸರ್ಕಾರದ ಕೃಷಿ ಇಲಾಖೆ ಅಡಿಯಲ್ಲಿ ಇರುವ ಎಒ ಹಾಗೂ ಎಎಒ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಅರ್ಹರು ಆಗುತ್ತಾರೆ. ಬಿ.ಟೆಕ್ (ತಾಂತ್ರಿಕ ವಿಭಾಗದ ಪದವೀಧರರಿಗೆ ಈವರೆಗೆ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಶೇ. 15ರಷ್ಟು ಮೀಸಲಾತಿ ‌ನೀಡಿದ್ರು. ಆದ್ರೆ ಈಗ ಕೇವಲ ಬಿ.ಟೆಕ್ (ತಾಂತ್ರಿಕ) ಪದವೀಧರ ವಿದ್ಯಾರ್ಥಿಗಳಿಗೆ ಇದ್ದ ಮೀಸಲಾತಿಯಲ್ಲಿ ಇತರೆ ವಿಭಾಗದ ಬಿ.ಟೆಕ್ ಪದವೀಧರಿಗೂ ಮೀಸಲಾತಿ ಹಂಚಿಕೆ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಈ ಆದೇಶವನ್ನ ವಿರೋಧಿಸಿ ಬಿ.ಟೆಕ್ ತಾಂತ್ರಿಕ ವಿಭಾಗದ ಪದವಿ ವಿದ್ಯಾರ್ಥಿಗಳು ಹೋರಾಟ ಶುರು ಮಾಡಿದ್ದಾರೆ. ಮತ್ತೊಂದು ಕಡೆ ದೇಶದ ಬೇರೆ ಬೇರೆ ರಾಜ್ಯದಲ್ಲಿ ಕೃಷಿ ತಾಂತ್ರಿಕ ನಿರ್ದೇಶನಾಲಯವಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ಸಹ ಕೃಷಿ ತಾಂತ್ರಿಕ ನಿರ್ದೇಶನಾಲಯ ಮಾಡಬೇಕು ಎಂದು ವಿದ್ಯಾರ್ಥಿಗಳು ಅಹೋರಾತ್ರಿ ಧರಣಿ ನಡೆಸಿದ್ದಾರೆ.

ಹಟ್ಟಿ, ಹಾಡಿ, ತಾಂಡಾಗಳಲ್ಲಿರುವ ಕುಟುಂಬಗಳಿಗೆ 1 ತಿಂಗಳಲ್ಲಿ ಹಕ್ಕುಪತ್ರ: ಸಚಿವ ಅಶೋಕ್‌ ಭರವಸೆ

ಬಿ.ಟೆಕ್ ತಾಂತ್ರಿಕ ವಿಭಾಗದ ಜೊತೆಗೆ ಸೇರಿಸಿದ ಕೋರ್ಸ್‌ಗಳು: ಇತ್ತೀಚೆಗೆ ಅಂದ್ರೆ ಅಕ್ಟೋಬರ್ 28ರಂದು ಸರ್ಕಾರ ಕೃಷಿ ಇಲಾಖೆಯ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು‌. ಆ ನೇಮಕಾತಿ ಪ್ರಕಾರ ಬಿ.ಟೆಕ್ ಪದವೀಧರಿಗೆ ಶೇ. 15ರಷ್ಟು ಮೀಸಲಾತಿ ‌ನೀಡಿದೆ. ಆದ್ರೆ ಇಷ್ಟು ದಿನಗಳ ಕಾಲ ಕೇವಲ ಕೃಷಿ ತಾಂತ್ರಿಕ ಪದವೀಧರಿಗೆ ಇದ್ದ ಮೀಸಲಾತಿಯಲ್ಲಿ ಈಗ ಹೊಸದಾಗಿ ಬಿ.ಟೆಕ್ ( ಆಹಾರ ತಂತ್ರಜ್ಞಾನ) (ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ), ಬಿ.ಟೆಕ್ ( ಜೈವಿಕ ತಂತ್ರಜ್ಞಾನ), ಅಲ್ಲದೇ ಬಿ.ಎಸ್ಸಿ ಕೃಷಿಯಲ್ಲಿನ ಕೋರ್ಸ್ ಗಳಾದ ಮಾರುಕಟ್ಟೆ ಮತ್ತು ಸಹಕಾರ, ನರ್ಸ್ ಹಾಗೂ ಅಗ್ರಿ ಬಿಸಿನೆಸ್ ಮ್ಯಾನೇಜ್ಮೆಂಟ್ ಕೋರ್ಸ್ ಸೇರಿಸಲಾಗಿದೆ. ಈ ಕೋರ್ಸ್ ಗಳು ಸೇರಿಸಿದಾಗ ನಮಗೆ ಅನ್ಯಾಯವಾಗುತ್ತೆ ಅಂತ ಬಿ‌‌.ಟೆಕ್ ತಾಂತ್ರಿಕ ಪದವಿ  ವಿದ್ಯಾರ್ಥಿಗಳ ಅಳಲು ಆಗಿದೆ.

ಕೃಷಿ ಕ್ಷೇತ್ರದಲ್ಲಿ ಬಿ.ಟೆಕ್ ( ತಾಂತ್ರಿಕ) ವಿದ್ಯಾರ್ಥಿಗಳ ಪಾತ್ರವೇನು?: ಕೃಷಿ ತಾಂತ್ರಿಕ ವೃತ್ತಿಪರ ಪದವಿಯು 1987ರಲ್ಲಿ ಪ್ರಾರಂಭವಾಗಿದ್ದು, ಕೃಷಿ ಇಂಜಿನೀಯರರು ತಮ್ಮ 4 ವರ್ಷದ ಅವಧಿಯಲ್ಲಿ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗೆ ವಿಷಯಗಳನ್ನು ಅಭ್ಯಸಿರುತ್ತಾರೆ. ಅದರಲ್ಲಿ ಸುಮಾರು 35-40% ಕೃಷಿ ಪದವೀಧರು ಓದುವ ವಿಷಯಗಳಾದ ಕೃಷಿ ಶಾಸ್ತ್ರ, ಭೂವಿಜ್ಞಾನ ಶಾಸ್ತ್ರ, ಮಣ್ಣಿನ ಗುಣಧರ್ಮ,ಬೆಳೆ ಉತ್ಪಾದನಾ ತಂತ್ರಜ್ಞಾನ,ತೋಟಗಾರಿಕೆ, ವಿಸ್ತರಣಾ ವಿಧಾನ ಮತ್ತು ಇತರೆ ವಿಷಯಗಳನ್ನು ಅಧ್ಯಯನ ಮಾಡಿರುತ್ತಾರೆ.

ಇನ್ನುಳಿದ 60-65% ರಷ್ಟು ವಿಷಯವನ್ನು ಗ್ರಾಮೀಣಾಭಿವೃದ್ಧಿ ಪೂರಕವಾದ ಕೃಷಿ ಇಂಜಿನಿಯರಿಂಗ್ ವಿಷಯಗಳಾದ ಕೃಷಿ ಯಾಂತ್ರಿಕರಣ, ನೀರು ತಂತ್ರಜ್ಞಾನ, ನೀರಾವರಿ ಮತ್ತು ಬಸಿಗಾಲುವೆ ಕೃಷಿ ಹೊಂಡ, ಹೈ ಟೆಕ್ ನೀರಾವರಿ ಪದ್ಧತಿಗಳು ಮತ್ತು ಆಹಾರ , ಕೃಷಿಯಲ್ಲಿ ನವೀಕರಿಸಬಹುದಾದ ಶಕ್ತಿಯ ಮೂಲಗಳ ಬಳಕೆ, ಜಲಾನಯನ ಮತ್ತು ಅಚ್ಚುಕಟ್ಟು ಪ್ರದೇಶಾಭಿವೃದ್ಧಿ,ಭೂಮಿ, ನಿಖರ ಕೃಷಿ ಪದ್ಧತಿ, ಬರ ನಿರ್ವಹಣೆ ಇತ್ಯಾದಿ ವಿಷಯಗಳ ಪರಿಣಿತಿಯನ್ನು ಪಡೆದಿರುತ್ತಾರೆ. ಆದ ಕಾರಣ, ಈ ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದ ಎಲ್ಲಾ ವಿಸ್ತರಣಾ ಮಾಹಿತಿ ಮತ್ತು ಸೇವೆಗಳನ್ನು ಕೃಷಿ ಇಂಜಿನಿಯರರು ರೈತರಿಗೆ ತಿಳಿಸುತ್ತಾರೆ.

ಇನ್ನೂ ಬಿ.ಟೆಕ್ ( ತಾಂತ್ರಿಕ) ವಿಭಾಗದ ಪದವೀಧರರು: ಆಧುನಿಕ ಇಂಜಿನಿಯರಿಂಗ್ ತಂತ್ರಜ್ಞಾನಗಳನ್ನು ಕೃಷಿಯಲ್ಲಿ ಅಳವಡಿಸಿ ಉತ್ಪಾದನೆ ಹೆಚ್ಚಿಸಲು ಬಿ.ಟೆಕ್ ಪದವೀಧರರ ಪಾತ್ರ ಮುಖ್ಯವಾಗಿದೆ. ಕೃಷಿ ಇಂಜಿನಿಯರ್ಸ್ ಯಾಂತ್ರಿಕರಣ,ಡೋನ್ ಮೂಲಕ ಔಷಧ ಸಿಂಪಡಣೆ, ಕಡಿಮೆ ಖರ್ಚಿನಲ್ಲಿ ನೀರೆತ್ತುವ ತಂತ್ರಜ್ಞಾನ, ನೈಸರ್ಗಿಕ ಸಂಪನ್ಮೂಲ ಬಳಕೆ ತಂತ್ರಜ್ಞಾನ, ವಿವಿಧ ಕೃಷಿ ಶಕ್ತಿ ಮೂಲಗಳು ಹಾಗೂ ಅವುಗಳಿದ ಕೃಷಿಯಲ್ಲಿ ಉತ್ಪಾದನೆ ಹೆಚ್ಚಿಸಲು ಕೃಷಿ ಉಪಕರಣಗಳ ಬಳಕೆ, ಆವರಣಗಳ ಆಯ್ಕೆ‌ರಿಪೇರಿ ನಿರ್ವಹಣೆ ಬಗ್ಗೆ ಕೂಲಂಕೂಷವಾಗಿ 21 ಪ್ರತಿ ಶತದಷ್ಟು ಅಭ್ಯಸಿಸಲಾಗುತ್ತದೆ.

ನಂತರ ತಂತ್ರಜ್ಞಾನ ಮೌಲ್ಯವರ್ಧನೆ,‌ಸಂಸ್ಕರಣೆ, ಉಪಕರಣಗಳ ಆಯ್ಕೆ ನಿರ್ವಹಣೆ ಬಗ್ಗೆ ಶೇ 18% ಪ್ರತಿ ಶತದಷ್ಟು ಪಠ್ಯಕ್ರಮದಲ್ಲಿ ಕಲಿಸಲಾಗುತ್ತಿದೆ. ಮುಂದುವರೆದು ಕೃಷಿ ಇಲಾಖೆಯಲ್ಲಿ ಹೊಸ ಹೊಸ ಯೋಜನೆಗಳಾದ ಕೃಷಿ ಯಂತ್ರಧಾರೆ, ಕೃಷಿ ಯಾಂತ್ರೀಕರಣ, ಜಲನಯನ ಅಭಿವೃದ್ಧಿ, ಕೃಷಿ ಭಾಗ್ಯ ಕೃಷಿ ಅಭಿಯಾನ, ಮತ್ತು ಆರೋಗ್ಯ ಅಭಿಯಾನ, ಕೃಷಿ, ಲಘು ನೀರಾವರಿ, ಬೀಜೋಪಚಾರ, ಸಸ್ಯ ಸಂರಕ್ಷಣೆ ಈ ಎಲ್ಲಾ ಯೋಜನೆಗಳ ಸಬಲೀಕರಣಕ್ಕೆ ಕೃಷಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸೂಕ್ತವಾಗಿ ಕೆಲಸ ನಿರ್ವಹಿಸಲು ಯೋಗ್ಯರಾಗಿರುತ್ತಾರೆ. ಮಣ್ಣು ತಾಂತ್ರಿಕತ, ನೀರು ತಾಂತ್ರಿಕತೆ, ಸಮಗ್ರ ಜಲಾನಯನ ಅಭಿವೃದ್ಧಿ, ಅಂತರ್‌ಜಲ ತಂತ್ರಜ್ಞಾನ.  

ಸಚಿವ ಆನಂದ ಸಿಂಗ್‌ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲಿ: ಸಿದ್ದರಾಮಯ್ಯ

ಅಚ್ಚು ಪ್ರದೇಶಾಭಿವೃದ್ಧಿ, ಬಸಿಗಾಲುವೆ ತಂತ್ರಜ್ಞಾನ, ಕಡಿಮೆ ಖರ್ಚಿನ ಸುವ್ಯಸ್ಥಿತ ನೀರಾವರಿ ಪದ್ಧತಿ. ತುಂತುರು ಹಾಗೂ ಸೂಕ್ಷ್ಮ ನೀರಾವರಿ ಪದ್ಧತಿ, ಬಂಜರು ಭೂಮಿ ಅಭಿವೃದ್ಧಿ, ಬೇಸಾಯ ಶಾಸ್ತ್ರ, ಭೂ ವಿಜ್ಞಾನ, ಬೆಳೆ ಉತ್ಪಾದನೆ ತಂತ್ರಜ್ಞಾನ, ಬೀಜೋತ್ಪಾದನಾ, ವಿಸ್ತರಣಾ ತಂತ್ರಜ್ಞಾನಗಳು, ಕೃಷಿ ಅರ್ಥಶಾಸ್ತ್ರ,ಸಮಸ್ಯಾತ್ಮಕ ಮಣ್ಣಿನ ನಿರ್ವಹಣೆ, ಮಳೆ ಕೊಯ್ದು ತಂತ್ರಜ್ಞಾನ, ಪಂಪ್‌ಸೆಟ್ ಆಯ್ಕೆ ಹಾಗೂ ನಿರ್ವಹಣೆ. ಕೊಳವೆ ಬಾವಿಗಳ ಜಲ ಮರುಪೂರ್ಣ ತಂತ್ರಜ್ಞಾನ, ಹಸಿರು ಮನೆ ತಂತ್ರಜ್ಞಾನ, ನೀರಾವರಿ ಪದ್ಧತಿ, ನೀರಾವರಿ ಕಾಲುವೆ ನಿರ್ವಹಣೆ. ಕೃಷಿ ಉತ್ಪನ್ನಗಳ ಸಾಗಾಣಿಕೆ, ಶೇಖರಣೆ ಮತ್ತು ಪ್ಯಾಕೇಜಿಂಗ ತಂತ್ರಜ್ಞಾನ. ಕೃಷಿಯಾಧಾರಿತ ಉದ್ಯಮಶಿಲತೆ, ಚಟುವಟಿಕೆಗಳ ಸಂಬಂಧಿತ ಕಟ್ಟಡಗಳ ರಚನೆ, ಮೇಲ್ವಿಚಾರಣೆ ಮತ್ತು ವಾತಾವರಣ ನಿಯಂತ್ರಣ ತಂತ್ರಜ್ಞಾನವೂ ಇಂತಹ ವಿಷಯಗಳ ಬಗ್ಗೆ ಕೃಷಿ ಬಿ.ಟೆಕ್ ಪದವೀಧರರು ಅಭ್ಯಾಸ ಮಾಡಿರುತ್ತಾರೆ. ಇಂತಹವರ ಜೊತೆಗೆ ಬೇರೆ ಬಿ‌.ಟೆಕ್ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಿದ್ರೆ ನಮಗೆ ಅನ್ಯಾಯವಾಗುತ್ತೆ ಅಂತ ವಿದ್ಯಾರ್ಥಿಗಳು ಹೋರಾಟ ಶುರು ಮಾಡಿದ್ದಾರೆ.

Latest Videos
Follow Us:
Download App:
  • android
  • ios