ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಎಷ್ಟು ಹೊಲಸು, ದುರ್ನಾತ ನಡೆದಿತ್ತು ಎಂಬುದನ್ನು ದಾಖಲೆ ಸಮೇತ ಹೇಳಬಲ್ಲೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸವಾಲು ಹಾಕಿದ್ದಾರೆ.
ಬೆಂಗಳೂರು (ಜು.17): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಎಷ್ಟು ಹೊಲಸು, ದುರ್ನಾತ ನಡೆದಿತ್ತು ಎಂಬುದನ್ನು ದಾಖಲೆ ಸಮೇತ ಹೇಳಬಲ್ಲೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸವಾಲು ಹಾಕಿದ್ದಾರೆ. ಶನಿವಾರ ವಿಕಾಸಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಆಡಳಿತ ಅವಧಿಯಲ್ಲಿ ಎಷ್ಟು ಹೊಲಸು ಮತ್ತು ದುರ್ನಾತ ಇತ್ತು ಎಂಬ ಬಗ್ಗೆ ದಾಖಲೆ ನೀಡಬಲ್ಲೆ. ಈಗ ಚಾರಿತ್ರ್ಯಹರಣ ಮಾಡಿ ರಾಜಕೀಯ ಲಾಭ ಪಡೆಯುವ ಪ್ರಯತ್ನ ನಡೆಸುತ್ತಿದ್ದಾರೆ ಎಂದರು.
‘ನನ್ನ ಅವಧಿಯಲ್ಲಿ ಹಗರಣಗಳು ನಡೆದಿದ್ದರೆ ತನಿಖೆ ಮಾಡಿ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಸಮಯ ಬಂದಾಗ ಇತರೆ ಪ್ರಕರಣದ ತನಿಖೆ ನಡೆಸುವುದು ತಪ್ಪಲ್ಲ. ಆದರೆ, ಸದ್ಯ ನಮ್ಮ ಮುಂದೆ ಇರುವುದು ಪಿಎಸ್‌ಐ ಹಗರಣದ ತನಿಖೆ ಅದನ್ನು ಸಮರ್ಪಕವಾಗಿ ಮಾಡುತ್ತಿದ್ದೇವೆ’ ಎಂದು ಹೇಳಿದರು. ‘ಪಿಎಸ್‌ಐ ಅಕ್ರಮದ ಕುರಿತು ಪ್ರಾಮಾಣಿಕ ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಯಾವುದೇ ಒತ್ತಡ ಹಾಕಿಲ್ಲ ಮತ್ತು ಗಂಭೀರವಾಗಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಸಿಐಡಿಗೆ ತನಿಖೆ ನಡೆಸಲು ಮುಕ್ತ ಅವಕಾಶ ನೀಡಲಾಗಿದೆ. ಮಧ್ಯವರ್ತಿ, ಹಣ ನೀಡಿದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ. ಮತ್ತೊಮ್ಮೆ ಪರೀಕ್ಷೆಯಲ್ಲಿ ಇಂತಹ ಘಟನೆ ಆಗಬಾರದು ಎಂದು ನಿಷ್ಪಪಕ್ಷಪಾತವಾಗಿ ತನಿಖೆ ನಡೆಯುತ್ತಿದೆ’ ಎಂದು ಹೇಳಿದರು.
ಸೆಂಟ್ರಲ್ ಜೈಲುಗಳಲ್ಲಿನ್ನು 5ಜಿ ಜಾಮರ್: ಗೃಹ ಸಚಿವ ಆರಗ ಜ್ಞಾನೇಂದ್ರ
ಆಯ್ಕೆಯಾದ ಫೈರ್‌ಮನ್‌ಗಳಿಗೆ ಶೀಘ್ರ ನೇಮಕಾತಿ ಪತ್ರ: ರಾಜ್ಯ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯಲ್ಲಿ ಫೈರ್‌ಮನ್ ಹುದ್ದೆಗಳಿಗೆ ಆಯ್ಕೆಯಾಗಿರುವ ಎಲ್ಲ ಅಭ್ಯರ್ಥಿಗಳಿಗೆ ಶೀಘ್ರ ನೇಮಕಾತಿ ಪತ್ರ ವಿತರಿಸುವಂತೆ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಗ್ನಿಶಾಮ ದಳ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಒಟ್ಟು 7057 ವಿವಿಧ ಶ್ರೇಣಿಯ ಹುದ್ದೆಗಳಿದ್ದು, 2021 ನೇ ವರ್ಷದ ಅಂತ್ಯಕ್ಕೆ ಸುಮಾರು 2627 ಹುದ್ದೆಗಳು ಖಾಲಿ ಇವೆ. ಪ್ರಸಕ್ತ 1567 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದರಲ್ಲಿ ಮೊದಲ ಹಂತವಾಗಿ ಫೈರ್‌ಮನ್ ಹುದ್ದೆಗಳಿಗೆ ನೇಮಕಾತಿ ನಡೆದಿದ್ದು, ಇದುವರೆಗೆ ಒಟ್ಟು 607 ಅಭ್ಯರ್ಥಿಗಳು ನೇಮಕಾತಿ ಆದೇಶ ಪಡೆದಿದ್ದಾರೆ. ಇನ್ನುಳಿದ ಅಭ್ಯರ್ಥಿಗಳ ಆಯ್ಕೆ ಸಿಂಧುತ್ವವನ್ನೂ ಪಡೆದು ನೇಮಕಾತಿ ಆದೇಶ ಶೀಘ್ರ ವಿತರಿಸುವಂತೆ ಅಧಿಕಾರಿಗೆ ಸೂಚಿಸಿದ್ದೇನೆ ಎಂದು ಸಚಿವರು ಪ್ರಕಟಣೆಯಲ್ಲಿ ಹೇಳಿದ್ದಾರೆ. ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಅಗ್ನಿಶಾಮಕ ಠಾಣೆಗಳನ್ನು ಆದ್ಯತೆ ಮೇರೆಗೆ ಸ್ಥಾಪಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಹುದ್ದೆಗಳ ಭರ್ತಿಗೆ ಸಹ ಕ್ರಮ ಕೈಗೊಂಡಿದೆ ಎಂದಿದ್ದಾರೆ.
PSI Scam: ಬಂಧಿತ ಗಣಪತಿಗೂ ಆರಗಗೂ ಏನು ಸಂಬಂಧ?: ಹರಿಪ್ರಸಾದ್
ಕಸ್ತೂರಿರಂಗನ್ ವರದಿಗೆ ಎಲ್ಲರ ವಿರೋಧ ಅಗತ್ಯ: ಸ್ಯಾಟಲೈಟ್‌ನಿಂದ ಚಿತ್ರೀಕರಿಸುವ ಮೂಲಕ ಅವೈಜ್ಞಾನಿಕವಾಗಿ ನೀಡಿರುವ ಏಕ ವ್ಯಕ್ತಿಯ ಕಸ್ತೂರಿರಂಗನ್ ವರದಿ ಜನವಿರೋಧಿಯಾಗಿದೆ. ಪಶ್ಚಿಮ ಘಟ್ಟದ ರಕ್ಷಣೆಗೆ ಈ ವರದಿಯ ಅಗತ್ಯವಿಲ್ಲ. ಇದನ್ನು ಒಕ್ಕೊರಲಿನಿಂದ ವಿರೊಧಿಸುವ ಅಗತ್ಯವಿದೆ. ಅರಣ್ಯ ರಕ್ಷಣೆಗೆ ಈಗಿರುವ ಕಾಯ್ದೆಗಳೇ ಸಾಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಈ ಭಾಗದ ಜನರಿಗೆ ಮಾರಕವಾಗಿ ಪರಿಣಮಿಸಿರುವ ಈ ಕಾಯ್ದೆಯ ಬಗ್ಗೆ ಗ್ರೀನ್‌ಬೆಂಚ್ ಆದೇಶದ ಪ್ರಕಾರ ಹೊರಡಿಸಿರುವ ನೋಟಿಫಿಕೇಶನ್ ಬಗ್ಗೆ ತಕರಾರು ಸಲ್ಲಿಸಲು ಎರಡು ತಿಂಗಳ ಕಾಲಾವಕಾಶವಿದೆ ಎಂದು ತಿಳಿಸಿದರು.
