ಅರಬಾವಿ, ಗೋಕಾಕ ಗೆಲುವಿನ ಜವಾಬ್ದಾರಿ ನಿಮ್ಮದು: ರಮೇಶ ಜಾರಕಿಹೊಳಿ

ದೇಶದಲ್ಲಿ ಹಾಗೂ ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯಲು ಪಕ್ಷದ ಕಾರ್ಯಕರ್ತರ ನಿಷ್ಠಾವಂತ ಸೇವೆಯೇ ಕಾರಣವೆಂದು ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಹೇಳಿದರು. 

Arabavi Gokak is your Responsibility to Win Says Ramesh Jarkiholi gvd

ಗೋಕಾಕ (ಫೆ.14): ದೇಶದಲ್ಲಿ ಹಾಗೂ ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯಲು ಪಕ್ಷದ ಕಾರ್ಯಕರ್ತರ ನಿಷ್ಠಾವಂತ ಸೇವೆಯೇ ಕಾರಣವೆಂದು ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ನಗರದ ಮಯೂರ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಭಾರತೀಯ ಜನತಾ ಪಾರ್ಟಿಯ ಗೋಕಾಕ ವಿಧಾನಸಭೆ ಮತಕ್ಷೇತ್ರದ ಬೂತ್‌ ಅಧ್ಯಕ್ಷರ ಹಾಗೂ ಪೇಜ್‌ ಪ್ರಮುಖರ ಸಭೆ ಉದ್ಘಾಟಿಸಿ ಮಾತನಾಡಿದರು. ಭಾರತೀಯ ಜನತಾ ಪಕ್ಷದಲ್ಲಿ ಕಾರ್ಯಕರ್ತರೇ ಜೀವಾಳವಾಗಿದ್ದು, ಪಕ್ಷವು ಸಹ ಕಾರ್ಯಕರ್ತರಿಗೆ ಹೆಚ್ಚಿನ ಮಹತ್ವ ನೀಡುತ್ತಿದೆ. 

ಕಾರ್ಯಕರ್ತರ ಪರಿಶ್ರಮದಿಂದಲೇ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮುಂಬರುವ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗೆ ಕಾರ್ಯಕರ್ತರು ಈಗಿನಿಂದಲೇ ಕಾರ್ಯ ಪ್ರವೃತ್ತರಾಗಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಶ್ರಮಿಸಿ. ಇಂದಿನ ಕಾರ್ಯಕರ್ತರ ಉತ್ಸಾಹವನ್ನು ನೋಡಿದರೆ ನನ್ನ 1999 ದಾಖಲೆಯನ್ನು ಮುರಿದು ಹೊಸ ಇತಿಹಾಸವನ್ನು ನೀವುಗಳು ನಿರ್ಮಿಸುವದು ನಿಶ್ಚಿತ. ಗೋಕಾಕ ಹಾಗೂ ಅರಭಾಂವಿಯ ಕ್ಷೇತ್ರಗಳ ಗೆಲುವಿನ ಜವಾಬ್ದಾರಿ ನಿಮ್ಮದಾಗಿದೆ. ಜಿಲ್ಲೆಯ 16 ಕ್ಷೇತ್ರಗಳು ಹಾಗೂ ಇತರೆ ಜಿಲ್ಲೆಗಳಲ್ಲೂ ಪ್ರಚಾರ ನಡೆಸಿ, 140 ಸೀಟ್‌ಗಳೊಂದಿಗೆ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಲು ನಾವು ಕಾರ್ಯಪ್ರವೃತ್ತರಾಗಿದ್ದೆವೆ ಎಂದರು.

ಜಾತಿ ಹೆಸರಲ್ಲಿ ಪ್ರಲ್ಹಾದ್ ಜೋಶಿ ಟೀಕೆ ಸರಿಯಲ್ಲ: ಲಕ್ಷ್ಮಣ ಸವದಿ

ನಾವು ಮಾನವ ಧರ್ಮ ಒಂದೇ ಎನ್ನುವ ಬಸವಣ್ಣನವರ ತತ್ವದಲ್ಲಿ ಕಾರ್ಯಪ್ರವೃತ್ತರಾಗೋಣ. ಜಾತಿ, ಮತ, ಭೇದ ಮಾಡದೇ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡೋಣ. ಸಿಡಿಯಂತಹ ಮಹಾನ ನಾಯಕರಿಂದ ಕಾಂಗ್ರೆಸ್‌ಗೆ ಭವಿಷ್ಯವಿಲ್ಲದಂತಾಗಿದೆ. ದಿಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಪಕ್ಷದ ನಾಯಕರು ನನಗೆ ನೀಡುತ್ತಿರುವ ಸಹಕಾರದಿಂದ ನನಗೆ ಈ ಪಕ್ಷಕ್ಕೆ ಬಂದಿದ್ದು ಹೆಮ್ಮೆಯೆನಿಸುತ್ತಿದೆ. ನನಗೆ ಈಗ ಸಚಿವ ಸ್ಥಾನ ತಪ್ಪಿದರೂ ಮುಂದಿನ ದಿನಗಳಲ್ಲಿ ಹೆಚ್ಚಿನ ಸ್ಥಾನ ಮಾನ ದೊರೆಯುವುದು. ಈಗ ಜಿಲ್ಲಾದ್ಯಂತ ಯುದ್ಧೋಪಾದಿಯಲ್ಲಿ ಪಕ್ಷ ಬಲಪಡಿಸಲು ಕಾರ್ಯನಿರ್ವಹಿಸುತ್ತಿದ್ದೇನೆ. 

ಬಿಜೆಪಿ ಒಳ್ಳೆಯ ಭವಿಷ್ಯವಿದ್ದು, ದೇಶದ ಅಭಿವೃದ್ಧಿ ಈ ಪಕ್ಷದಿಂದ ಮಾತ್ರ ಸಾಧ್ಯವಿದೆ. ಕಾರ್ಯಕರ್ತರು ಮತ್ತೊಮ್ಮೆ ಅಧಿಕಾರಕ್ಕೆ ಪಕ್ಷವನ್ನು ತರುವುದರೊಂದಿಗೆ ರಾಮರಾಜ್ಯ ನಿರ್ಮಿಸಲು ಶ್ರಮಿಸುವಂತೆ ಕರೆ ನೀಡಿದರು. ಬಿಜೆಪಿ ವಿಶೇಷ ವಕ್ತಾರರಾಗಿ ಆಗಮಿಸಿದ್ದ ಆದರ್ಶ ಗೋಖಲೆ ಮಾತನಾಡಿ, ಆದರ್ಶ ಸಮಾಜ ನಿರ್ಮಾಣ ಮಾಡುತ್ತ ನಾವೆಲ್ಲ ಒಂದೇ ಭಾವನೆ ತುಂಬಿಸಿ, ಗತವೈಭವದ ಭಾರತವನ್ನು ನಿರ್ಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಕೈಬಲಪಡಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಹೇಳಿದರು.

ಅದಾನಿ ಆದಾಯ ಹೆಚ್ಚಳ ಸುಪ್ರೀಂ ಕೋರ್ಟ್‌ ಜಡ್ಜ್‌ ನೇತೃತ್ವದಲ್ಲಿ ತನಿಖೆ ಆಗಲಿ: ಬಿ.ಕೆ.ಹರಿಪ್ರಸಾದ್‌

ವೇದಿಕೆಯ ಮೇಲೆ ಬಿಜೆಪಿ ಪಕ್ಷದ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಗೋಕಾಕ ವಿಧಾನಸಭಾ ಬಿಜೆಪಿ ಪ್ರಭಾರಿ ಮಹಾಂತೇಶ ವಕ್ಕುಂದ, ಒಬಿಸಿ ಮೋರ್ಚಾ ರಾಷ್ಟ್ರೀಯ ಕಾರ‍್ಯಕಾರಿಣಿ ಸದಸ್ಯ ಲಕ್ಷ್ಮಣ ತಪಸಿ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ ಇದ್ದರು. ಗೋಕಾಕ ವಿಧಾನಸಭಾ ಕ್ಷೇತ್ರದ 288 ಬೂತ್‌ಗಳ ಅಧ್ಯಕ್ಷರುಗಳು, 8 ಸಾವಿರಕ್ಕೂ ಹೆಚ್ಚು ಪೇಜ್‌ ಪ್ರಮುಖರು, ಬಿಜೆಪಿ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Latest Videos
Follow Us:
Download App:
  • android
  • ios