Asianet Suvarna News Asianet Suvarna News

ಜಾತಿ ಹೆಸರಲ್ಲಿ ಪ್ರಲ್ಹಾದ್ ಜೋಶಿ ಟೀಕೆ ಸರಿಯಲ್ಲ: ಲಕ್ಷ್ಮಣ ಸವದಿ

ಇತ್ತೀಚಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜಕೀಯ ಪ್ರೇರಿತವಾಗಿ ಪ್ರಹ್ಲಾದ ಜೋಶಿ ಅವರನ್ನು ಜಾತಿಯ ಹೆಸರಿನಲ್ಲಿ ಟೀಕೆ ಮಾಡಿರುವುದು ಸರಿಯಲ್ಲ ಎಂದು ಮಾಜಿ ಡಿಸಿಎಂ ಹಾಗೂ ವಿಧಾನಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.

BJP MLC Laxman Savadi Talks Over Pralhad Joshi gvd
Author
First Published Feb 13, 2023, 11:58 PM IST | Last Updated Feb 13, 2023, 11:58 PM IST

ಅಥಣಿ (ಫೆ.13): ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಪ್ರತಿನಿಧಿ ಯಾರೇ ಆದರೂ ಪ್ರಧಾನಿ, ಸಿಎಂ ಆಗಬಹುದು. ಆದರೆ, ಇತ್ತೀಚಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜಕೀಯ ಪ್ರೇರಿತವಾಗಿ ಪ್ರಹ್ಲಾದ ಜೋಶಿ ಅವರನ್ನು ಜಾತಿಯ ಹೆಸರಿನಲ್ಲಿ ಟೀಕೆ ಮಾಡಿರುವುದು ಸರಿಯಲ್ಲ ಎಂದು ಮಾಜಿ ಡಿಸಿಎಂ ಹಾಗೂ ವಿಧಾನಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಹೇಳಿದರು. ಅವರು ಅಥಣಿ ಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಮಾಜಿ ಸಿಎಂ ಕುಮಾರ ಸ್ವಾಮಿಯವರು ಎರಡ್ಮೂರು ದಿನಗಳ ಹಿಂದೆ ಒಂದು ವಿಷಯವನ್ನು ಪ್ರಸ್ತಾಪ ಮಾಡಿ, ಅದು ಪಂಚರತ್ನ ಅಭಿಯಾನದ ವೇಳೆ ರಾಜಕೀಯ ಪ್ರೇರಿತವಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಜಾತಿ ಹೆಸರಲ್ಲಿ ಟೀಕೆ ಮಾಡಿದ್ದು ಸರಿಯಲ್ಲ. 

ರಾಜಕಾರಣದಲ್ಲಿ ಟೀಕೆ ಟಿಪ್ಪಣಿ ಇರುವುದು ಸಹಜ. ಇದರಲ್ಲಿ ಕುಮಾರಸ್ವಾಮಿ ಅವರ ಉದ್ದೇಶ ಏನೆಂದರೆ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಅವರು ಸೇರಿದಂತೆ ಅನೇಕ ಸಂದರ್ಭದಲ್ಲಿ ಉತ್ತರ ಕರ್ನಾಟಕದ ವೀರಶೈವ ಲಿಂಗಾಯತ ಸಮುದಾಯದ ನಾಯಕರು ಭಾರತೀಯ ಜನತಾ ಪಕ್ಷದ ಬೆನ್ನೆಲುಬಾಗಿ ನಿಂತಿದ್ದು, ಪಕ್ಷಕ್ಕೆ ಇದು ದೊಡ್ಡ ಶಕ್ತಿಯಾಗಿದೆ. ಆ ಸಮುದಾಯದಲ್ಲಿ ಒಂದು ಹುಳಿ ಹಿಂಡಿ ಉತ್ತರ ಕರ್ನಾಟಕ ಮತ್ತು ರಾಜ್ಯದಲ್ಲಿನ ವೀರಶೈವ ಲಿಂಗಾಯತ ಮುಖಂಡರಲ್ಲಿ ಭಿನ್ನಾಭಿಪ್ರಾಯ ಮೂಡಿಸುವ ಪ್ರಯತ್ನ ಮಾಡಲು ಹೊರಟಿದ್ದಾರೆ ಎಂದರು.

ಅದಾನಿ ಆದಾಯ ಹೆಚ್ಚಳ ಸುಪ್ರೀಂ ಕೋರ್ಟ್‌ ಜಡ್ಜ್‌ ನೇತೃತ್ವದಲ್ಲಿ ತನಿಖೆ ಆಗಲಿ: ಬಿ.ಕೆ.ಹರಿಪ್ರಸಾದ್‌

ಎಚ್‌ಡಿಕೆ ಪ್ರಬುದ್ಧ ರಾಜಕಾರಣ ಮಾಡಲಿ: ಜಾತಿ ರಾಜಕಾರಣದ ಅಸ್ತ್ರವನ್ನು ಬಳಸಲು ಹೊರಟಿರುವ ಕುಮಾರಸ್ವಾಮಿ ಅವರಿಗೆ ಇದರಿಂದ ಯಾವುದೇ ತರಹ ಪ್ರಯೋಜನವಾಗುವುದಿಲ್ಲ. ಹಿಂದೆ ಜನತಾ ಪಕ್ಷ ಮತ್ತು ಜನತಾ ಪರಿವಾರ ಅಂತ ಇದ್ದ ಸಂದರ್ಭದಲ್ಲಿ ದೇವೇಗೌಡರು, ಬೊಮ್ಮಾಯಿಯವರು, ಜೆ.ಹೆಚ್‌. ಪಟೇಲರು, ಎಂ.ಪಿ. ಪ್ರಕಾಶರು, ಪಿ.ಜಿ.ಆರ್‌. ಸಿಂಧ್ಯಾ ಅವರು ಅನೇಕ ಮುಖಂಡರು ಇದ್ದಂತಹ ಸಮಯದಲ್ಲಿ ರಾಮಕೃಷ್ಣ ಹೆಗಡೆಯವರನ್ನ ಸರ್ವಾನುಮತದಿಂದ ಮುಂಖ್ಯಮಂತ್ರಿಗಳನ್ನಾಗಿ ಮಾಡಿದ್ದರು. 

ರಾಮಕೃಷ್ಣ ಹೆಗಡೆ ಸಮಾಜದವರು ಯಾವ ಸಮಾಜದಿಂದ ಬಂದವರು ಅವತ್ತು ಇಡಿ ಕರ್ನಾಟಕದಲ್ಲಿರತಕ್ಕಂತ ಎಲ್ಲ ಜನಾಂಗ ಕೇವಲ ಲಿಂಗಾಯತ ಅಲ್ಲ ಅವತ್ತಿನ ದಿನಮಾನದಲ್ಲಿ ಅವರಿಗೆ ಆಗ ದೊಡ್ಡ ಶಕ್ತಿಯನ್ನು ತುಂಬಿದ ಉತ್ತರ ಕರ್ನಾಟಕದ ಜನ, ಅದರಲ್ಲಿ ಹೆಚ್ಚಾಗಿ ವೀರಶೈವ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ರಾಮಕೃಷ್ಣ ಹೆಗಡಯವರ ಬೆಂಬಲಕ್ಕೆ ನಿಂತಿದ್ದರು. ಆಗ ಉತ್ತರ ಕರ್ನಾಟಕದ ನಾಯಕರು ಇದ್ದರೆ ಅದು ರಾಮಕೃಷ್ಣ ಹೆಗಡೆವರಾಗಿದ್ದರು. ಉತ್ತರ ಕರ್ನಾಟಕದ ಅನೇಕ ಸಮುದಾಯದ ಮುಖಂಡರನ್ನು ಬೆಳೆಸಿರತಕ್ಕಂತವರು ಹೆಗಡೆಯವರು. 

ನವ ಕರ್ನಾಟಕ ನಿರ್ಮಾಣಕ್ಕೆ ಬಿಜೆಪಿ ಪ್ರಣಾಳಿಕೆ: ಸಚಿವ ಸುಧಾಕರ್‌

ಅವತ್ತು ರಾಮಕೃಷ್ಣ ಹೆಗಡೆಯವರನ್ನು ಒಪ್ಪಲಿಕೆ ಎಲ್ಲರೂ ಸಿದ್ದರಿದ್ದಾಗ ಇವತ್ತು ಪ್ರಲ್ಹಾದ ಜೋಶಿ ಅವರನ್ನು ಒಪ್ಪಲಿಕೆ ಏಕೆ? ಸಿದ್ಧರಿಲ್ಲ. ಪ್ರಲ್ಹಾದ ಜೋಷಿ ಅವರು ಎಲ್ಲಿ ಕೂಡಾ ತಾನು ಕರ್ನಾಟಕದ ಮುಖ್ಯಮಂತ್ರಿ ಆಗುವುದಾಗಿ ಹೇಳಿಲ್ಲ. ಆದರೂ ರಾಜಕೀಯ ಪ್ರೇರಿತವಾದ ಹೇಳಿಕೆಯನ್ನು ಕುಮಾರಸ್ವಾಮಿ ಅವರು ನೀಡಿರುವುದು ತಪ್ಪು. ಕರ್ನಾಟಕದಲ್ಲಿ ಜಾತಿ ಆಧಾರಿತ ರಾಜಕಾರಣ ಇಲ್ಲಿ ಬಹಳ ದಿನ ನಡಿಯೋದಿಲ್ಲ, ಮೌಲ್ಯಧಾರಿತ ರಾಜಕಾರಣ ಮಾತ್ರ ಬಹಳ ದಿನ ಗಟ್ಟಿಯಾಗಿರುವಂತದ್ದು. ಕೇವಲ ರಾಜಕೀಯ ಲಾಭಕ್ಕಾಗಿ ಇಂತಹ ಹೇಳಿಕೆಗಳನ್ನು ಕುಮಾರಸ್ವಾಮಿಯವರು ನೀಡಿದರೆ ಅವರಿಗೆ ಲಾಭಕ್ಕಿಂತ ನಷ್ಟವೇ ಜಾಸ್ತಿ. ಕುಮಾರಸ್ವಾಮಿ ಅವರು ಜಾತಿ ರಾಜಕಾರಣವನ್ನು ಬಿಟ್ಟು ಪ್ರಬುದ್ಧ ರಾಜಕಾರಣ ಮಾಡುವಂತೆ ಸಲಹೆ ನೀಡಿದರು.

Latest Videos
Follow Us:
Download App:
  • android
  • ios