ಪ್ರಜ್ವಲ್ ರೇವಣ್ಣ ಅನರ್ಹತೆ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ: ದೇವೇಗೌಡ
ಅನರ್ಹತೆಯ ಆದೇಶದ ಪ್ರತಿ ಇನ್ನೂ ಸಿಕ್ಕಿಲ್ಲ. ಸದಸ್ಯತ್ವ ಅಸಿಂಧು ಎಂದು ತೀರ್ಪು ನೀಡಿದ್ದಾರೆ ಮತ್ತು ಮಾಜಿ ಪ್ರಧಾನಿಯಾಗಿ ಪೂರ್ಣ ಆದೇಶ ಓದದೆ ಪ್ರತಿಕ್ರಿಯಿಸುವುದು ಯೋಗ್ಯ ಹಾಗೂ ಸಮಂಜಸವಲ್ಲ. ಅನರ್ಹತೆ ತೀರ್ಪಿನ ವಿರುದ್ಧ ಸ್ಟೇ ತರಲು ಸುಪ್ರೀಂ ಕೋರ್ಟ್‌ಗೆ ಹೋಗುವುದು ಸ್ವಾಭಾವಿಕವಾಗಿಯೇ ನಡೆಯುತ್ತದೆ. ಅಲ್ಲಿ ಏನಾಗುತ್ತೆ ಎಂದು ನಾನು ಈಗಲೇ ಹೇಳಲು ಸಾಧ್ಯವಿಲ್ಲ. ನಾನು ಆ ಕುರಿತು ಮಾತನಾಡುವುದಿಲ್ಲ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ
ಹೊಳೆನರಸೀಪುರ(ಹಾಸನ)(ಸೆ.03): ಸಂಸದ ಪ್ರಜ್ವಲ್ ರೇವಣ್ಣ ಅನರ್ಹತೆ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಚ್‌ಗೆ ಮನವಿ ಸಲ್ಲಿಸುವುದು ಸಹಜ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ತಾಲೂಕಿನ ಹರದನಹಳ್ಳಿಯಲ್ಲಿರುವ ಕುಲದೇವರು ದೇವೇಶ್ವರ ದೇವಾಲಯ ಹಾಗೂ ಹಳೇಕೋಟೆ ಹೋಬಳಿಯ ಮಾವಿನಕೆರೆ ಬೆಟ್ಟದ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಪತ್ನಿ ಚೆನ್ನಮ್ಮ ಹಾಗೂ ಕುಟುಂಬ ಸದಸ್ಯರ ಜತೆಗೆ ಶ್ರಾವಣ ಶನಿವಾರದ ವಿಶೇಷ ಪೂಜೆಯಲ್ಲಿ ಭಾಗವಹಿಸಿದ ನಂತರ ಮಾತನಾಡಿದರು.
ಸಂಸದ ಪ್ರಜ್ವಲ್ ರೇವಣ್ಣ ಅನರ್ಹತೆ: ಪರಾಜಿತ ಅಭ್ಯರ್ಥಿ ಎ.ಮಂಜು ಕೂಡ ಅಕ್ರಮ ಎಸಗಿದ್ದು ಸಾಬೀತು..!
ಅನರ್ಹತೆಯ ಆದೇಶದ ಪ್ರತಿ ಇನ್ನೂ ಸಿಕ್ಕಿಲ್ಲ. ಸದಸ್ಯತ್ವ ಅಸಿಂಧು ಎಂದು ತೀರ್ಪು ನೀಡಿದ್ದಾರೆ ಮತ್ತು ಮಾಜಿ ಪ್ರಧಾನಿಯಾಗಿ ಪೂರ್ಣ ಆದೇಶ ಓದದೆ ಪ್ರತಿಕ್ರಿಯಿಸುವುದು ಯೋಗ್ಯ ಹಾಗೂ ಸಮಂಜಸವಲ್ಲ. ಅನರ್ಹತೆ ತೀರ್ಪಿನ ವಿರುದ್ಧ ಸ್ಟೇ ತರಲು ಸುಪ್ರೀಂ ಕೋರ್ಟ್‌ಗೆ ಹೋಗುವುದು ಸ್ವಾಭಾವಿಕವಾಗಿಯೇ ನಡೆಯುತ್ತದೆ. ಅಲ್ಲಿ ಏನಾಗುತ್ತೆ ಎಂದು ನಾನು ಈಗಲೇ ಹೇಳಲು ಸಾಧ್ಯವಿಲ್ಲ. ನಾನು ಆ ಕುರಿತು ಮಾತನಾಡುವುದಿಲ್ಲ ಎಂದರು.
ತಾವರೆ ಹೂವು ಅರ್ಪಿಸಿ ತಾಯಿ ಭವಾನಿ ಪೂಜೆ
ಹಾಸನ: ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಶ್ರಾವಣ ಶನಿವಾರದಂದು ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಬೆಟ್ಟದ ಶ್ರೀ ರಂಗನಾಥಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ, ರಂಗನಾಥನಿಗೆ ಪ್ರಿಯವಾದ ತಾವರೆ ಹೂವು ಅರ್ಪಿಸಿ, ಸಂಸದ ಸ್ಥಾನದಿಂದ ಅನರ್ಹಗೊಂಡ ತಮ್ಮ ಪುತ್ರ ಪ್ರಜ್ವಲ್ ರೇವಣ್ಣಗೆ ಸುಪ್ರೀಂಕೋರ್ಟ್‌ನಲ್ಲಿ ಜಯ ಸಿಗಲೆಂದು ಪ್ರಾರ್ಥಿಸಿದರು. ಬಳಿಕ, ದೇವಾಲಯದಲ್ಲಿ ಶ್ರೀ ಗರುಡಧ್ವಜಕ್ಕೆ ಪ್ರದಕ್ಷಿಣೆ ಹಾಕಿದರು.