ಚುನಾವಣೆಯಲ್ಲಿ ಎ.ಮಂಜು ಸಹ ಅಕ್ರಮ ಎಸಗಿದ್ದಾರೆ ಎಂದು ತೀರ್ಮಾನಿಸಿದೆ. ಆ ಮೂಲಕ ಎ.ಮಂಜು ಅವರನ್ನು ಜಯಶಾಲಿ ಅಭ್ಯರ್ಥಿಯಾಗಿ ಘೋಷಿಸಲು ನಿರಾಕರಿಸಿದ ಹೈಕೋರ್ಟ್‌

ಬೆಂಗಳೂರು(ಸೆ.02): ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಸಂಸತ್‌ ಸದಸ್ಯತ್ವದಿಂದ ವಜಾಗೊಳಿಸಿ ತಮ್ಮನ್ನು ಜಯಶಾಲಿಯನ್ನಾಗಿ ಘೋಷಿಸಬೇಕೆಂದು ಕೋರಿದ್ದ ಅಂದಿನ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಜೆಡಿಎಸ್‌ ಶಾಸಕ ಎ.ಮಂಜು ಅವರ ಮನವಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ.

Add Asianetnews Kannada as a Preferred SourcegooglePreferred

ತಮ್ಮ ಸದಸ್ಯತ್ವ ರದ್ದತಿ ಕೋರಿ ಎ.ಮಂಜು ಸಲ್ಲಿಸಿದ್ದ ಅರ್ಜಿಗೆ ಪ್ರತಿಯಾಗಿ ಪ್ರಜ್ವಲ್‌ ಅವರು ಸಹ ರಿ-ಕ್ರಿಮಿನೇಷನ್‌ ಪಿಟಿಷನ್‌ ಅರ್ಜಿ ಸಲ್ಲಿಸಿ, ಎ.ಮಂಜು ಅವರನ್ನು ಜಯಶಾಲಿ ಅಭ್ಯರ್ಥಿಯಾಗಿ ಘೋಷಿಸಬಾರದು ಎಂದು ಕೋರಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಹಾಸನದಲ್ಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎ.ಮಂಜು ಅವರು ಸಹ ಚುನಾವಣೆಯಲ್ಲಿ ಹಲವು ಅಕ್ರಮ ಎಸಗಿದ್ದಾರೆ. ಅವರು ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಹಲವು ದೋಷಗಳಿವೆ. ತಮ್ಮ ಹಾಗೂ ಪತ್ನಿಯ ಆಸ್ತಿ ವಿವರ, ಅವರ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣಗಳ ವಿವರಗಳನ್ನು ಪ್ರಮಾಣ ಪತ್ರದಲ್ಲಿ ಬಹಿರಂಗಪಡಿಸಿಲ್ಲ. ಇದು ಜನ ಪ್ರತಿನಿಧಿಗಳ ಕಾಯ್ದೆಗೆ ವಿರುದ್ಧವಾಗಿದ್ದು, ಅವರನ್ನು ಜಯಶಾಲಿ ಅಭ್ಯರ್ಥಿಯಾಗಿ ಘೋಷಣೆ ಮಾಡಬಾರದು ಎಂದು ಅರ್ಜಿಯಲ್ಲಿ ಪ್ರಜ್ವಲ್‌ ಕೋರಿದ್ದರು.

ಒಂದೇ ಪಕ್ಷದಲ್ಲಿದ್ದೀರಿ... ಜೆಡಿಎಸ್‌ ಸಂಸದ ಪ್ರಜ್ವಲ್ ರೇವಣ್ಣ ಅನರ್ಹತೆ ಬಗ್ಗೆ ಎ.ಮಂಜು ಮಾತು!

ಆ ಅರ್ಜಿಯನ್ನು ಪುರಸ್ಕರಿಸಿರುವ ಹೈಕೋರ್ಟ್‌, ಚುನಾವಣೆಯಲ್ಲಿ ಎ.ಮಂಜು ಸಹ ಅಕ್ರಮ ಎಸಗಿದ್ದಾರೆ ಎಂದು ತೀರ್ಮಾನಿಸಿದೆ. ಆ ಮೂಲಕ ಎ.ಮಂಜು ಅವರನ್ನು ಜಯಶಾಲಿ ಅಭ್ಯರ್ಥಿಯಾಗಿ ಘೋಷಿಸಲು ನಿರಾಕರಿಸಿದೆ. ಇದು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ದಾರಿಯಾದಂತಾಗಿದೆ.