ಮತ್ತೆ ಮೂವರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಸ್ವತಃ ಬಿಜೆಪಿ ನಾಯಕ ಭವಿಷ್ಯ ನುಡಿದಿದ್ದಾರೆ.
ಪುದುಚೆರಿ, (ಫೆ.19): ಕಾಂಗ್ರೆಸ್‌ನ ಮತ್ತೆ ಮೂವರು ಶಾಸಕರು ರಾಜೀನಾಮೆ ನೀಡಲಿದ್ದು, ವಿಧಾನಸಭೆಯಲ್ಲಿ ಆಡಳಿತದ ಸರ್ಕಾರ ಯಾವುದೇ ಕಾರಣಕ್ಕೂ ಬಹುಮತ ಸಾಬೀತು ಪಡಿಸುವುದಿಲ್ಲ ಎಂದು ಬಿಜೆಪಿ ನಾಯಕ ನಿರ್ಮಲ್ ಕುಮಾರ್ ಸುರನಾ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಲ್ವರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದು, ಇದರಲ್ಲಿ ಇಬ್ಬರು ಶಾಸಕರು ಈಗಾಗಲೇ ಬಿಜೆಪಿ ಸೇರ್ಪಡೆಯಾಗುತ್ತಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಮಾತನಾಡಿರುವ ನಿರ್ಮಲ್ ಕುಮಾರ್, ಕೃಷ್ಣರಾವ್, ಜಾನ್ ಕುಮಾರ್ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದರು.
ಫೆ.22ಕ್ಕೆ ವಿಶ್ವಾಸಮತ ಯಾಚನೆಗೆ ಪುದುಚೇರಿ ಸಿಎಂಗೆ ಸೂಚನೆ
ಹೊಸದಾಗಿ ಪುದುಚೆರಿ ಲೆಫ್ಟಿನೆಂಟ್ ಗವರ್ನರ್ ಆಗಿ ತಮಿಳಿಸಾಯಿ ಸುಂದರರಾಜನ್ ಅವರು ಆಯ್ಕೆಯಾದ ಬಳಿಕ, ಫೆ.22ರಂದು ವಿಶ್ವಾಸ ಮತಯಾಚನೆ ಮಾಡಲು ಸೂಚನೆ ನೀಡಿದ್ದಾರೆ. 33 ಸಂಖ್ಯಾಬಲದ ವಿಧಾನಸಭೆಯಲ್ಲಿ 30 ಜನವರು ನೇರವಾಗಿ ಆಯ್ಕೆ ಆಗುತ್ತಾರೆ. ಉಳಿದ ಮೂವರನ್ನು ನಾಮಿನೆಟ್ ಮಾಡುತ್ತಾರೆ.
ವಿಶ್ವಾಸಮತ ಸಾಬೀತು ಪಡಿಸಲು 16 ಶಾಸಕರ ಬೆಂಬಲ ಅಗತ್ಯವಿದ್ದು, ಈ ಹಿಂದೆ 15 ಕಾಂಗ್ರೆಸ್, ಡಿಎಂಕೆ ಮೂರು ಶಾಸಕರು ಹಾಗೂ ಓರ್ವ ಸ್ವತಂತ್ರ ಅಭ್ಯರ್ಥಿ ಬೆಂಬಲದಿಂದ ಬಹುಮತ ಪಡೆದುಕೊಂಡಿತ್ತು. ಆದರೆ ಈಗ ನಾಲ್ವರು ಶಾಸಕರು ರಾಜೀನಾಮೆ ನೀಡಿದ್ದು, ವಿಶ್ವಾಸ ಮತ ಸಾಬೀತು ಪಡಿಸಿರುವ ಅಗತ್ಯ ಎದುರಾಗಿದೆ.
ಸದ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ 10 ಸದಸ್ಯರು (ಸ್ಪೀಕರ್ ಸೇರಿ), ಡಿಎಂಕೆಯ ಮೂವರು, ಆಲ್ಇಂಡಿಯಾ ಕಾಂಗ್ರೆಸ್ ಪಕ್ಷ 7, ಎಐಎಎಂಡಿಕೆ 4 ಮತ್ತು ಬಿಜೆಪ 3 (ನಾಮನಿರ್ದೇನ) ಹಾಗೂ ಸ್ವತಂತ್ರ ಅಭ್ಯರ್ಥಿ ಒಬ್ಬರು ಇದ್ದು, ಇದೇ ಫೆ.22ರಂದು. ವಿಶ್ವಾಸ ಮತಯಾಚನೆಗೆ ಮುಹೂರ್ತ ಫಿಕ್ಸ್ ಆಗಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 19, 2021, 10:33 PM IST