ಮಣಿಪುರದಲ್ಲಿ ಕಂಡಲ್ಲಿ ಗುಂಡು ಆದೇಶ: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರಚಾರ ದಿಢೀರ್‌ ರದ್ದು!

ಜೇವರ್ಗಿ ಮತ್ತು ಅಫಜಲಪುರ ವಿಧಾನಸಭೆ ಕ್ಷೇತ್ರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಸಮಾವೇಶದಲ್ಲಿ ಭಾಗಿಯಾಗಬೇಕಿತ್ತು. ಆದರೆ, ಮಣಿಪುರದಲ್ಲಿ ವ್ಯಾಪಕ ಹಿಂಸಾಚಾರ ಹಿನ್ನಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರವಾಸ ದಿಢೀರ್‌ ರದ್ದಾಗಿದೆ. 

amit shah jevargi and afzalpur campaigns cancelled due to manipur violence ash

ಬೆಂಗಳೂರು (ಮೇ 4, 2023): ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಕೆಂದ್ರ ಗೃಹ ಸಚಿವ ಅಮಿತ್‌ ಶಾ ಬಿಜೆಪಿ ಪರ ರಾಜ್ಯಾದ್ಯಂತ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಜೇವರ್ಗಿ ಮತ್ತು ಅಫಜಲಪುರ ವಿಧಾನಸಭೆ ಕ್ಷೇತ್ರದಲ್ಲಿ ಸಮಾವೇಶದಲ್ಲಿ ಭಾಗಿಯಾಗಬೇಕಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರವಾಸ ದಿಢೀರ್‌ ರದ್ದಾಗಿದೆ. ಇದಕ್ಕೆ ಕಾರಣ ಮಣಿಪುರ ರಾಜ್ಯದಲ್ಲಿ ನಡೆಯುತ್ತಿರುವ ವ್ಯಾಪಕ ಹಿಂಸಾಚಾರ. 

ಜೇವರ್ಗಿ ಮತ್ತು ಅಫಜಲಪುರ ವಿಧಾನಸಭೆ ಕ್ಷೇತ್ರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಸಮಾವೇಶದಲ್ಲಿ ಭಾಗಿಯಾಗಬೇಕಿತ್ತು. ಆದರೆ, ಮಣಿಪುರದಲ್ಲಿ ವ್ಯಾಪಕ ಹಿಂಸಾಚಾರ ಹಿನ್ನಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರವಾಸ ದಿಢೀರ್‌ ರದ್ದಾಗಿದೆ. 

ಇದನ್ನು ಓದಿ: ಹೊತ್ತಿ ಉರಿಯುತ್ತಿದೆ ಮಣಿಪುರ: ದಯವಿಟ್ಟು ಸಹಾಯ ಮಾಡಿ ಎಂದು ಮೋದಿ, ಅಮಿತ್ ಶಾ ನೆರವು ಕೇಳಿದ ಮೇರಿ ಕೋಮ್

ಕಲಬುರಗಿ ಜಿಲ್ಲೆ ಜೇವರ್ಗಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನ ಆವರಣದಲ್ಲಿ ನಡೆಯಬೇಕಿದ್ದ ಬೃಹತ್‌ ಸಮಾವೇಶದಲ್ಲಿ ಅಮಿತ್‌ ಶಾ ಭಾಗಿಯಾಗಬೇಕಿತ್ತು. ಈ ಹಿನ್ನೆಲೆ ಸಂಜೆ 4.30 ಕ್ಕೆ ಅಮಿತ್‌ ಶಾ ಕಲಬುರಗಿಗೆ ಬರಬೇಕಿತ್ತು. ಈ ಸಮಾವೇಶದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ಇತ್ತ ಸಮಾವೇಶ ಸ್ಥಳದಲ್ಲಿ ಮಳೆಯಿಂದ ರಕ್ಷಿಸಿಕೊಳ್ಳಲು ಕುರ್ಚಿಯ ಆಸರೆ ಹೋಗಿದ್ದರು. ಆದರೆ, ಅಮಿತ್‌ ಶಾ ಕಲಬುರಗಿ ಏರ್‌ಪೋರ್ಟ್‌ಗೆ ಸಂಜೆಯಾದರೂ ಆಗಮಿಸಿರಲಿಲ್ಲ. 

ಬಳಿಕ, ಅವರ ಪ್ರವಾಸ ದಿಢೀರ್‌ ರದ್ದಾಗಿದೆ ಎಂದು ತಿಳಿದುಬಂದಿದೆ. ಜೇವರ್ಗಿ ಬಿಜೆಪಿ ಅಭ್ಯರ್ಥಿ ಶಿವರಾಜ್ ಪಾಟೀಲ್ ರದ್ದೇವಾಡಗಿ ಪರ ಆ ವಿಧಾನಸಭಾ ಕ್ಷೇತ್ರದಲ್ಲಿ ಮತಯಾಚನೆ ಮಾಡಲು ಅಮಿತ್ ಶಾ ಆಗಮಿಸಬೇಕಿತ್ತು. ಇನ್ನೊಂದೆಡೆ, ಜೇವರ್ಗಿ ಮಾತ್ರವಲ್ಲದೆ ಅಫಜಲಪುರ ವಿಧಾನಸಭಾ ಕ್ಷೇತ್ರದಲ್ಲೂ ಅಮಿತ್‌ ಶಾ ಪ್ರಚಾರ ನಡೆಸಬೇಕಿತ್ತು. ಆಧರೆ, ಇದು ಸಹ ದಿಢೀರ್‌ ರದ್ದಾಗಿದೆ.

ಇದನ್ನೂ ಓದಿ: Amit Shah Interview: ಮೋದಿ ಬಂದ ಬಳಿಕ ಈಶಾನ್ಯ ಭಾರತ, ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರ ತೀವ್ರ ಕಡಿಮೆಯಾಗಿದೆ: ಅಮಿತ್ ಶಾ

ಮಣಿಪುರದಲ್ಲಿ ಹಿಂಸಾಚಾರವೇ ಪ್ರವಾಸ ರದ್ದಾಗಲು ಕಾರಣ ಎಂದು ತಿಳಿದುಬಂದಿದೆ. ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ನಡೆದ ದೊಡ್ಡ ಹಿಂಸಾಚಾರವನ್ನು ನಿಯಂತ್ರಿಸಲು ಸೇನೆಯನ್ನು ಕರೆಸಲಾಗಿದ್ದು, ಅಲ್ಲಿ ಅನೇಕ ವಾಹನಗಳು ಮತ್ತು ಹಲವಾರು ಪ್ರಾರ್ಥನೆಯ ಸ್ಥಳಗಳನ್ನು ಸುಟ್ಟು ಹಾಕಲಾಗಿದೆ ಎಂದು ವರದಿಯಾಗಿದೆ. ಚುರಚಂದ್‌ಪುರ ಮತ್ತು ಇಂಫಾಲ ಹೆಚ್ಚು ಹಾನಿಗೊಳಗಾದ ಪ್ರದೇಶಗಳು ಎಂದೂ ವರದಿಯಾಗಿದೆ. 

ಇನ್ನು, ಈ ಸಂಬಂಧ ಖ್ಯಾತ ಮಹಿಳಾ ಬಾಕ್ಸರ್‌ ಮೇರಿ ಕೋಮ್‌ ಸಹ ಟ್ವೀಟ್‌ ಮಾಡಿದ್ದು, ನನ್ನ ರಾಜ್ಯ ಮಣಿಪುರವು ಉರಿಯುತ್ತಿದೆ, ದಯವಿಟ್ಟು ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಪಿಎಂ ಕಚೇರಿ ಈ ಬಗ್ಗೆ ತಕ್ಷಣದ ಕ್ರಮ ಕೈಗೊಳ್ಳಬೇಕೆಂದೂ ಮೇರಿ ಕೋಮ್‌ ವಿನಂತಿಸಿದ್ದಾರೆ. ಈ ಮಧ್ಯೆ, ಮಣಿಪುರದಲ್ಲಿ ಹಿಂಸಾಚಾರ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ಹೆಚ್ಚುವರಿ ಸೇನೆಯನ್ನು ಕರೆಸಲಾಗುತ್ತಿದೆ. ಈ ಮಧ್ಯೆ, ಮಣಿಪುರದ ಸರ್ಕಾರ ಪ್ರತಿಭಟನಾ ಹಾಗೂ ಹಿಂಸೆಯಲ್ಲಿ ನಿರತರಾಗಿರುವವರಿಗೆ ಕಂಡಲ್ಲಿ ಗುಂಡು ಆದೇಶ ನೀಡಿದ್ದಾರೆ ಎಂದು ವರದಿಯಾಗಿದೆ. 

ಇದನ್ನೂ ಓದಿ: Amit Shah Interview: ಹಳೆ ಮೈಸೂರು ಭಾಗದಲ್ಲಿ ಸಂಘಟನೆ ಬಲವಾಗಿದೆ, ಮುಸ್ಲಿಂ ಮೀಸಲಾತಿ 1 ವರ್ಷ ಮೊದಲೇ ತೆಗೆಯಬೇಕಿತ್ತು: ಅಮಿತ್ ಶಾ

Latest Videos
Follow Us:
Download App:
  • android
  • ios