ನನ್ನ ರಾಜ್ಯ ಮಣಿಪುರವು ಉರಿಯುತ್ತಿದೆ, ದಯವಿಟ್ಟು ಸಹಾಯ ಮಾಡಿ ಎಂದು ಬಾಕ್ಸರ್‌ ಮೇರಿ ಕೋಮ್‌ ಟ್ವೀಟ್‌ ಮಾಡಿದ್ದಾರೆ. 

ಇಂಫಾಲ್‌ (ಮೇ 4, 2023): ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ನಡೆದ ದೊಡ್ಡ ಹಿಂಸಾಚಾರವನ್ನು ನಿಯಂತ್ರಿಸಲು ಸೇನೆಯನ್ನು ಕರೆಸಲಾಗಿದ್ದು, ಅಲ್ಲಿ ಅನೇಕ ವಾಹನಗಳು ಮತ್ತು ಹಲವಾರು ಪ್ರಾರ್ಥನೆಯ ಸ್ಥಳಗಳನ್ನು ಸುಟ್ಟು ಹಾಕಲಾಗಿದೆ ಎಂದು ವರದಿಯಾಗಿದೆ. ಚುರಚಂದ್‌ಪುರ ಮತ್ತು ಇಂಫಾಲ ಹೆಚ್ಚು ಹಾನಿಗೊಳಗಾದ ಪ್ರದೇಶಗಳು ಎಂದೂ ವರದಿಯಾಗಿದೆ. 

ಇನ್ನು, ಈ ಸಂಬಂಧ ಖ್ಯಾತ ಮಹಿಳಾ ಬಾಕ್ಸರ್‌ ಮೇರಿ ಕೋಮ್‌ ಸಹ ಟ್ವೀಟ್‌ ಮಾಡಿದ್ದು, ನನ್ನ ರಾಜ್ಯ ಮಣಿಪುರವು ಉರಿಯುತ್ತಿದೆ, ದಯವಿಟ್ಟು ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಪಿಎಂ ಕಚೇರಿ ಈ ಬಗ್ಗೆ ತಕ್ಷಣದ ಕ್ರಮ ಕೈಗೊಳ್ಳಬೇಕೆಂದೂ ಮೇರಿ ಕೋಮ್‌ ವಿನಂತಿಸಿದ್ದಾರೆ. 

ಇದನ್ನು ಓದಿ: ಬಂಗಾಳದಲ್ಲಿ ಮತ್ತೆ ಹಿಂಸಾಚಾರ: 45 ಮಂದಿ ಬಂಧನ, ನಿಷೇಧಾಜ್ಞೆ ಜಾರಿ; ಘಟನೆಗೆ ಬಿಜೆಪಿ ಕಾರಣ ಎಂದ ದೀದಿ

Scroll to load tweet…

ಮೇ 3 ರಂದು ರಾತ್ರಿ ಮಣಿಪುರದಲ್ಲಿ ಸೇನೆಯನ್ನು ನಿಯೋಜಿಸಲಾಗಿದ್ದು, ಬುಧವಾರ ರಾತ್ರಿ ಸೇನೆ ಮತ್ತು ರಾಜ್ಯ ಪೊಲೀಸರ ಜಂಟಿ ಪಡೆ ಮಧ್ಯಪ್ರವೇಶಿಸಿ ಹಿಂಸಾಚಾರದ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು ಎಂದು ತಿಳಿದುಬಂದಿದೆ. ಹೆಚ್ಚುವರಿ ಪಡೆ ಬರುವುದರೊಂದಿಗೆ, ಬೆಳಗ್ಗೆ ಹಿಂಸಾಚಾರವನ್ನು ಮತ್ತಷ್ಟು ನಿಯಂತ್ರಣಕ್ಕೆ ತರಲಾಗಿದೆ ಎಂಉ ತಿಳಿದುಬಂದಿದೆ.

ಸುಮಾರು 4,000 ಗ್ರಾಮಸ್ಥರನ್ನು ಸೇನೆ ನಡೆಸುತ್ತಿರುವ ಮತ್ತು ರಾಜ್ಯ ಸರ್ಕಾರಿ ಸ್ವಾಮ್ಯದ ಜಾಗದಲ್ಲಿ ಆಶ್ರ ಕೇಂದ್ರಗಳಿಗೆ ಕರೆದೊಯ್ಯಲಾಗಿದ್ದು, ಧರಣಿಯನ್ನು ನಿಯಂತ್ರಣದಲ್ಲಿಡಲು ಫ್ಲ್ಯಾಗ್‌ ಮಾರ್ಚ್‌ ನಡೆಸಲಾಗಿದೆ ಎಂದೂ ತಿಳಿದುಬಂದಿದೆ. ಇನ್ನು, 7,500 ಕ್ಕೂ ಹೆಚ್ಚು ನಾಗರಿಕರನ್ನು ರಾತ್ರಿಯಿಡೀ ಸ್ಥಳಾಂತರಿಸಲು ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್‌ನ ಸಿಬ್ಬಂದಿ ಪ್ರಮುಖ ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಂಡರು ಎಂದೂ ಇತ್ತೀಚಿನ ಮಾಹಿತಿ ಹೇಳುತ್ತದೆ. 

ಇದನ್ನೂ ಓದಿ: ಓದಿರೋದು 12ನೇ ಕ್ಲಾಸ್‌: ದುಡಿಯೋದು ದಿನಕ್ಕೆ 3 - 5 ಕೋಟಿ ರೂ.; 5 ಸ್ಟಾರ್‌ ಹೋಟೆಲ್‌ನಲ್ಲಿ ವಾಸ!

ಮಣಿಪುರ ಸಿಎಂ ಹೇಳಿದ್ದೀಗೆ..
ಈ ಸಂಬಂಧ ಗುರುವಾರ ಹೇಳಿಕೆ ನೀಡಿದ ಮಣಿಪುರ ಸಿಎಂ ಬಿರೇನ್ ಸಿಂಗ್ "ಅಮೂಲ್ಯ ಜೀವಗಳು ಹೋಗಿವೆ" ಮತ್ತು ಈ ಘಟನೆಯು "ಸಮಾಜದ ಎರಡು ವರ್ಗಗಳ ನಡುವಿನ ತಪ್ಪು ತಿಳುವಳಿಕೆಯ ಪರಿಣಾಮವಾಗಿದೆ" ಎಂದು ಅವರು ಹೇಳಿದ್ದಾರೆ. ಹಾಗೂ, ಕಳೆದ 24 ಗಂಟೆಗಳಲ್ಲಿ, ಇಂಫಾಲ್, ಬಿಷ್ಣುಪುರ್ ಮತ್ತು ಮೋರೆ ಇತ್ಯಾದಿಗಳಲ್ಲಿ ಕೆಲವು ಘರ್ಷಣೆಗಳು, ವಿಧ್ವಂಸಕತೆ ಮತ್ತು ಬೆಂಕಿ ಹಚ್ಚುವ ಘಟನೆಗಳು ವರದಿಯಾಗಿವೆ. ಆಸ್ ಪಾಸ್ತಿ, ಮನೆಯ ಹಾನಿಯ ಜೊತೆಗೆ ಅಮೂಲ್ಯವಾದ ಜೀವಗಳು ಹೋಗಿವೆ, ಇದು ತುಂಬಾ ದುರದೃಷ್ಟಕರವಾಗಿದೆ." ಎಂದೂ ಮಣಿಪುರ ಸಿಎಂ ಬೇಸರ ವ್ಯಕ್ತಪಡಿಸಿದ್ದಾರೆ. 

Scroll to load tweet…

8 ಜಿಲ್ಲೆಗಳಲ್ಲಿ ಕರ್ಫ್ಯೂ
ಮಣಿಪುರದ 8 ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ ಮತ್ತು ಬುಡಕಟ್ಟು ಜನಾಂಗದ ಆಂದೋಲನದ ಸಂದರ್ಭದಲ್ಲಿ ಹಿಂಸಾಚಾರದ ಹಿನ್ನೆಲೆಯಲ್ಲಿ ಇಡೀ ಈಶಾನ್ಯ ರಾಜ್ಯದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನಸಮೂಹವನ್ನು ನಿಯಂತ್ರಿಸಲು ಪೊಲೀಸರು ಹಲವಾರು ಸುತ್ತು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರು ಎಂದು ಅಧಿಕಾರಿ ಹೇಳಿದರು.

ಇದನ್ನೂ ಓದಿ: ಸೈಬರ್‌ ಕ್ರಿಮಿನಲ್ಸ್‌ ವಿರುದ್ಧ 5000 ಪೊಲೀಸರ ದಾಳಿ: ನೋಯ್ಡಾ ಬಳಿಯ 300 ಪ್ರದೇಶದಲ್ಲಿ ಕಾರ್ಯಾಚರಣೆ; 125 ವಂಚಕರ ವಶಕ್ಕೆ

ಪರಿಸ್ಥಿತಿ ಉದ್ವಿಗ್ನವಾಗಿದೆ, ಆದರೂ ಅನೇಕ ಚಳವಳಿಗಾರರು ಬೆಟ್ಟಗಳ ವಿವಿಧ ಭಾಗಗಳಲ್ಲಿ ತಮ್ಮ ಮನೆಗಳಿಗೆ ಮರಳಲು ಪ್ರಾರಂಭಿಸಿದ್ದಾರೆ ಎಂದು ಅವರು ಹೇಳಿದರು.

ಐದು ದಿನಗಳ ಕಾಲ ಮೊಬೈಲ್ ಇಂಟರ್ನೆಟ್ ಸ್ಥಗಿತ
ತಕ್ಷಣವೇ ಜಾರಿಗೆ ಬರುವಂತೆ ಐದು ದಿನಗಳ ಕಾಲ ರಾಜ್ಯಾದ್ಯಂತ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೂ ಬ್ರಾಡ್‌ಬ್ಯಾಂಡ್ ಸೇವೆಗಳು ಕಾರ್ಯನಿರ್ವಹಿಸುತ್ತಿವೆ. ಹಾಗೂ, ಕರ್ಫ್ಯೂ ಘೋಷಿಸಿರುವ 8 ಜಿಲ್ಲೆಗಳ ಆಡಳಿತ ಪ್ರತ್ಯೇಕ ಆದೇಶಗಳನ್ನು ಹೊರಡಿಸಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಯುವತಿಯರಿಗೆ ಯಾಮಾರಿಸಿದ ಮನೆ ಮಾಲೀಕ: ಬೆಡ್‌ರೂಮ್‌, ಬಾತ್ರೂಮ್‌ನಲ್ಲಿ ಸ್ಪೈ ಕ್ಯಾಮೆರಾ ಇಟ್ಟ ವಂಚಕ