ಬಿಜೆಪಿ ಜೆಡಿಯು ಮೈತ್ರಿಯಲ್ಲಿ ಬಿರುಕು? ಮಹತ್ವದ ಸಭೆ ಕರೆದ ಬಿಹಾರ ಸಿಎಂ ನಿತೀಶ್ ಕುಮಾರ್!
ಬಿಹಾರದಲ್ಲಿ ಬಿಜೆಪಿ ಹಾಗೂ ಜೆಡಿಯು ಮೈತ್ರಿ ಸರ್ಕಾರದಲ್ಲಿ ಬಿರುಕು ಮೂಡಿದೆ ಅನ್ನೋ ಮಾತುಗಳು ಬಲವಾಗುತ್ತಿದೆ. ನೀತಿ ಆಯೋಗದ ಸಭೆಗೆ ಸಿಎಂ ನಿತೀಶ್ ಕುಮಾರ್ ಗೈರು, ಕೇಂದ್ರ ಸಚಿವ ಸಂಪುಟದಲ್ಲಿದ್ದ ಜೆಡಿಯು ಸಚಿವ ರಾಜೀನಾಮೆ ಸೇರಿದಂತೆ ಕೆಲ ಬೆಳವಣಿಗೆಗಳು ಮೈತ್ರಿ ಸರ್ಕಾರದ ವಿರುದ್ಧವಾಗಿದೆ. ಅಂತರ ಹೆಚ್ಚಾಗುತ್ತಿದ್ದಂತೆ ನಿತೀಶ್ ಕುಮಾರ್ ಮಹತ್ವದ ಸಭೆ ಕರೆದಿದ್ದಾರೆ.
ಪಾಟ್ನಾ(ಆ.08): ರಾಜಕೀಯ ಸಂಚಲನ, ತಲ್ಲಣ ಇದೀಗ ಬಿಹಾರಕ್ಕೆ ಶಿಫ್ಟ್ ಆಗುವ ಲಕ್ಷಗಣಗಳು ಗೋಚರಿಸುತ್ತಿದೆ. ಬಿಹಾರದಲ್ಲಿನ ಬಿಜೆಪಿ ಹಾಗೂ ಜೆಡಿಯು ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಬಿರುಕು ಮೂಡಿದೆ ಅನ್ನೋ ಮಾತುಗಳಿಗೆ ಪುಷ್ಠಿ ನೀಡುವಂತೆ ಕೆಲ ಘಟನೆಗಳು ನಡೆದಿದೆ. ಜೆಡಿಯು ನಾಯಕರ ನಡೆ, ಹೇಳಿಕೆಗಳು ಮತ್ತೊಂದು ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗುತ್ತಾ ಅನ್ನೋ ಅನುಮಾನ ಕಾಡತೊಡಗಿದೆ. ಇದರ ಬೆನ್ನಲ್ಲೇ ಬಿಹಾರ ಸಿಎಂ ನಿತೀಶ್ ಕುಮಾರ್ ಮಹತ್ವದ ಸಭೆ ಕರೆದಿದ್ದಾರೆ. ಮಂಗಳವಾರ(ಆ.09) ಜೆಡಿಯು ಸಭೆ ಕರೆಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ನಿತೀಶ್ ಕುಮಾರ್ ಗೈರಾದ ಬೆನ್ನಲ್ಲೇ ಈ ಸಭೆ ಕರೆದಿರುವುದು ಭಾರಿ ಕುತೂಹಲ ಮೂಡಿಸಿದೆ. ಈ ಕುರಿತು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್, ಹಾರಿಕೆ ಉತ್ತರ ನೀಡಿರುವುದು ಅನುಮಾನಗಳು ಹೆಚ್ಚಾಗಿದೆ. ನೀತಿ ಆಯೋಗ ಸಭೆಗೆ ನಿತೀಶ್ ಕುಮಾರ್ ಗೈರಾಗಿರುವ ಕುರಿತು, ಸ್ವತಃ ಸಿಎಂ ಬಳಿ ಕೇಳಬೇಕು ಎಂದು ರಾಜೀವ್ ರಂಜನ್ ಸಿಂಗ್ ಹೇಳಿದ್ದಾರೆ. ಇಷ್ಟೇ ಅಲ್ಲ ಇದುವರೆಗೂ ಜೆಡಿಯು ಅಥವಾ ನಿತೀಶ್ ಕುಮಾರ್ ನೀತಿ ಆಯೋಗ ಸಭೆಗೆ ಗೈರಾಗಿರುವುದಕ್ಕೆ ಅಧೀಕೃತ ಕಾರಣಗಳನ್ನು ಹೇಳಿಲ್ಲ.
ಕೇಂದ್ರ ಸಚಿವ ಸಂಪುಟದಲ್ಲಿ ಜೆಡಿಯು(BJP JD(U) Alliance) ಪ್ರತಿನಿಧಿಸುತ್ತಿದ್ದ ಆರ್‌ಪಿಸಿ ಸಿಂಗ್ (RP Singh) ರಾಜೀನಾಮೆ ನೀಡಿದ ಬೆನ್ನಲ್ಲೇ, ಮತ್ತೆ ಸಚಿವ ಸಂಪುಟಕ್ಕೆ ತಮ್ಮ ಪಕ್ಷದಿಂದ ಯಾರನ್ನೂ ಸೇರಿಸುವುದಿಲ್ಲ ಎಂದು ಜೆಡಿಯು ಘೋಷಿಸಿದೆ. ಇದರೊಂದಿಗೆ ಬಿಜೆಪಿ ಮತ್ತು ಜೆಡಿಯು ನಡುವಿನ ಬಿಕ್ಕಟ್ಟು ಮತ್ತಷ್ಟುತೀವ್ರಗೊಂಡಿದೆ. ಕೇಂದ್ರ ಸಂಪುಟದಲ್ಲಿ 2 ಸ್ಥಾನದಲ್ಲಿ ಜೆಡಿಯು ಬೇಡಿಕೆ ಇಟ್ಟಿತ್ತು. ಆದರೆ ಬಿಜೆಪಿ ಕೇವಲ 1 ಸ್ಥಾನ ನೀಡಿತ್ತು. ಜೊತೆಗೆ ಆ 1 ಸ್ಥಾನದಿಂದ ಸಚಿವರಾಗಿ ಆಯ್ಕೆಯಾಗಿದ್ದ ಆರ್‌ಸಿಪಿ ಸಿಂಗ್, ಇತ್ತಿ ಕೇಂದ್ರ ಸಚಿವ ಸಂಪುಟಕ್ಕೆ ಮತ್ತು ಜೆಡಿಯುರೂ ರಾಜೀನಾಮೆ ಸಲ್ಲಿಸಿದ್ದರು. ಅದರ ಬೆನ್ನಲ್ಲೇ ತಮ್ಮ ಪಕ್ಷದಿಂದ ಮತ್ತೆ ಯಾರೂ ಕೇಂದ್ರ ಸಂಪುಟ ಸೇರಲ್ಲ ಎಂದು ಜೆಡಿಯು ಘೋಷಿಸಿದೆ.
ನಾ ಬಿಇ ಓದ್ತಿದ್ದಾಗ ಒಬ್ರು ಹುಡ್ಗಿರು ಇರ್ಲಿಲ್ಲ : ಬಿಹಾರ ಸಿಎಂ
ಪ್ರಧಾನಿ ನರೇಂದ್ರ ಮೋದಿ ಅವರು ಕರೆದಿದ್ದ ಸಭೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್(Nitish kumar) ಅವರು 2 ಬಾರಿ ಗೈರುಹಾಜರಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಆದರೆ ಬೆಜೆಪಿಯೊಂದಿಗಿನ ಸಂಬಂಧ ಚೆನ್ನಾಗಿದೆ. 2019ರ ಲೋಕಸಭೆ ಚುನಾವಣೆಯ ನಂತರ ಕೇಂದ್ರದಲ್ಲಿ ಸರ್ಕಾರದ ಜೊತೆ ಸೇರುವುದಿಲ್ಲ ಎಂದು ನಿರ್ಧರಿಸಿದ್ದೆವು. ಈ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ಜೆಡಿಯುನ ರಾಷ್ಟಾ್ರಧ್ಯಕ್ಷ ರಾಜೀವ್ ರಂಜನ್ ಸಿಂಗ್ ಹೇಳಿದ್ದಾರೆ. ಆರ್‌ಸಿಪಿ ಸಿಂಗ್ ವಿರುದ್ಧ ಭ್ರಷ್ಟಾಚಾರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಉತ್ತರ ನೀಡುವಂತೆ ಸಿಂಗ್‌ಗೆ ಸೂಚನೆ ನೀಡಿದ್ದರು. ಅಲ್ಲದೇ ಇತ್ತೀಚಿಗೆ ನಡೆದ ರಾಜ್ಯಸಭೆ ಚುನಾವಣೆಗೆ(Election) ಜೆಡಿಯು ಟಿಕೆಟ್ ಸಹ ನೀಡಿರಲಿಲ್ಲ. ಆದ್ದರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಹೀಗಾಗಿ ಪಕ್ಷದೊಂದಿಗೆ ಅವರ ಸಂಬಂಧ ಹಳಸಿತ್ತು. ಈ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಹಾರದಲ್ಲಿ ಜೆಡಿಯು- ಬಿಜೆಪಿ ನಡುವೆ ಎಲ್ಲವೂ ಸರಿ ಇಲ್ಲ ಎಂಬ ವಿಶ್ಲೇಷಣೆಗಳು ಇರುವಾಗಲೇ ಮೋದಿ(PM Narendra Modi) ಕರೆದಿರುವ ಸಭೆಗೆ ಒಂದು ತಿಂಗಳ ಅವಧಿಯಲ್ಲಿ ನಿತೀಶ್ 2ನೇ ಬಾರಿ ಗೈರು ಹಾಜರಾಗಿದ್ದಾರೆ. 2020ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ- ಜೆಡಿಯು ಮೈತ್ರಿ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸಿದ್ದವಾದರೂ ಜೆಡಿಯುಗಿಂತ ಬಿಜೆಪಿ ಹೆಚ್ಚಿನ ಸ್ಥಾನ ಗೆದ್ದಿತ್ತು. ಆದರೂ ಸಿಎಂ ಸ್ಥಾನವನ್ನು ನಿತೀಶ್‌ಗೆ ಬಿಟ್ಟುಕೊಟ್ಟಿತ್ತು. ಅಂದಿನಿಂದ ಎರಡೂ ಪಕ್ಷಗಳ ನಡುವೆ ಸಂಘರ್ಷ ನಡೆಯುತ್ತಿದೆ ಎನ್ನಲಾಗಿದೆ. ಅಗ್ನಿಪಥ ಯೋಜನೆ, ಜಾತಿ ಗಣತಿ ವಿಚಾರದಲ್ಲಿ ಇದು ತಾರಕಕ್ಕೇರಿತ್ತು. ಬಿಹಾರ ಸ್ಪೀಕರ್ ಬಿಜೆಪಿಯ ವಿಜಯಕುಮಾರ್ ಸಿನ್ಹಾ ಅವರ ಜತೆ ನಿತೀಶ್ ಅವರು ನೇರ ಸಂಘರ್ಷಕ್ಕೆ ಇಳಿದಿದ್ದು ಕೂಡ ಗಮನ ಸೆಳೆದಿತ್ತು.
ಭದ್ರತಾ ಲೋಪ, ಸ್ವಗ್ರಾಮದಲ್ಲೇ ಬಿಹಾರ ಸಿಎಂ ನಿತೀಶ್ ಕುಮಾರ್ ಮೇಲೆ ದಾಳಿ