Asianet Suvarna News Asianet Suvarna News

ಭದ್ರತಾ ಲೋಪ, ಸ್ವಗ್ರಾಮದಲ್ಲೇ ಬಿಹಾರ ಸಿಎಂ ನಿತೀಶ್ ಕುಮಾರ್ ಮೇಲೆ ದಾಳಿ!

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ ವ್ಯಕ್ತಿಯೊಬ್ಬನ ದಾಳಿ

ಸ್ವಗ್ರಾಮ ಭಕ್ತಿಯಾರ್ ಪುರದಲ್ಲಿ ನಡೆದ ಘಟನೆ

ಮುಖ್ಯಮಂತ್ರಿಯ ಬೆನ್ನಿಗೆ ಗುದ್ದಲು ಪ್ರಯತ್ನ ನಡೆಸಿದ ವ್ಯಕ್ತಿ

In a major breach in security Bihar Chief Minister Nitish Kumar was attacked by a man in his hometown Bakhtiyarpur san
Author
Bengaluru, First Published Mar 27, 2022, 8:22 PM IST

ಪಟನಾ (ಮಾ. 27): ಪ್ರಮುಖ ಭದ್ರತಾ ಲೋಪದಲ್ಲಿ (major breach in security) ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Bihar Chief Minister Nitish Kumar) ಅವರ ಮೇಲೆ ಸ್ವಗ್ರಾಮ ಭಕ್ತಿಯಾರ್‌ಪುರದಲ್ಲಿ (Bakhtiyarpur) ವ್ಯಕ್ತಿಯೊಬ್ಬ ಭಾನುವಾರ ದಾಳಿ ನಡೆಸಿದ್ದಾನೆ. ಸ್ಥಳೀಯ ಆಸ್ಪತ್ರೆಯ ಸಂಕೀರ್ಣದಲ್ಲಿರುವ ಬಿಹಾರ ಮೂಲದ ಸ್ವಾತಂತ್ರ್ಯ ಹೋರಾಟಗಾರ ಶಿಲಭದ್ರ ಯಾಜಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಮುಂದಾದಾಗ ವ್ಯಕ್ತಿ ಮುಖ್ಯಮಂತ್ರಿಯ ಮೇಲೆ ಹಲ್ಲೆ ನಡೆಸಿರುವುದು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳಲ್ಲಿ ದಾಖಲಾಗಿದೆ

ಹಿಂದಿನಿಂದ ಬಂದ ವ್ಯಕ್ತಿ,  ನಿತೀಶ್ ಕುಮಾರ್ ಅವರ ಬೆನ್ನಿಗೆ ಹೊಡೆಯುವ ಮೊದಲು ವೇದಿಕೆಯ ಮೇಲೆ ನಡೆದುಕೊಂಡೇ ಹೋಗಿರುವುದು ದೃಶ್ಯಾವಳಿಯಲ್ಲಿ ದಾಖಲಾಗಿದೆ. ಕೂಡಲೇ ಅಲ್ಲಿದ್ದ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದಿದ್ದಾರೆ. ವರದಿಗಳ ಪ್ರಕಾರ ವ್ಯಕ್ತಿಯನ್ನು ಬಂಧಿಸಲಾಗಿದೆ ಮತ್ತು ಪ್ರಸ್ತುತ ಪೊಲೀಸ್ ವಶದಲ್ಲಿದ್ದಾರೆ.

ಹಿಂದಿನಿಂದ ಬಂದ ವ್ಯಕ್ತಿ, ವೇಗವಾಗಿ ಹೆಜ್ಜೆಗಳನ್ನು ಹಾಕಿ ವೇದಿಕೆಯ ಮೇಲೆ ನಡೆಯುತ್ತಿರುವುದು ಕಂಡುಬಂದಿತು ಮತ್ತು ಪ್ರತಿಮೆಗೆ ಪುಷ್ಪನಮನ ಸಲ್ಲಿಸಲು ಬಾಗಿದ ನಿತೀಶ್ ಕುಮಾರ್ ಅವರಿಗೆ ಬೆನ್ನಿನ ಭಾಗಕ್ಕೆ ಹೊಡೆಯಲು ಆರಂಭಿಸಿದರು. ತಕ್ಷಣ ಅವರನ್ನು ಮುಖ್ಯಮಂತ್ರಿ ಭದ್ರತಾ ಸಿಬ್ಬಂದಿ ಎಳೆದೊಯ್ದು ಪರಿಸ್ಥಿತಿ ಸುಧಾರಿಸುವ ಕೆಲಸ ಮಾಡಿದರು. "ಅವನನ್ನು ಹೊಡೆಯಬೇಡಿ. ಅವನು ಏನು ಹೇಳುತ್ತಿದ್ದಾನೆ ಎಂಬುದನ್ನು ಮೊದಲು ಕಂಡುಹಿಡಿಯಿರಿ" ಎಂದು ಮುಖ್ಯಮಂತ್ರಿಗಳು ತಮ್ಮ ಭದ್ರತಾ ಸಿಬ್ಬಂದಿಗೆ ಹೇಳಿದರು ಎಂದು ಮೂಲಗಳು ತಿಳಿಸಿವೆ. ಪ್ರಕರಣದ ಕುರಿತಾಗಿ ಇತರ ವಿಡಿಯೋಗಳ ಪ್ರಕಾರ, ವ್ಯಕ್ತಿಯನ್ನು ಶಂಕರ್ ಶಾ ಎಂದು ಹೇಳಲಾಗಿದೆ.


ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿಗಳು ತಮ್ಮ ಹಳೆಯ ಲೋಕಸಭಾ ಕ್ಷೇತ್ರವಾದ ಬರ್ಹ್‌ನ ವಿವಿಧ ಭಾಗಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ. ನಿತೀಶ್ ಕುಮಾರ್ ಅವರು 1989 ರಿಂದ 1999 ರವರೆಗೆ ಬಾರ್ಹ್‌ನಿಂದ ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ನಿತೀಶ್ ಕುಮಾರ್ ಅವರು ನವೆಂಬರ್ 2020 ರಲ್ಲಿ ಬಿಹಾರದ ಮಧುಬನಿಯಲ್ಲಿ ರಾಜ್ಯ ಚುನಾವಣೆಗಳಿಗಾಗಿ ಪ್ರಚಾರ ಮಾಡುವಾಗ ಕೊನೆಯದಾಗಿ ದಾಳಿಯನ್ನು ಎದುರಿಸಿದ್ದರು.

Bihar Budget 2022: ಸರ್ಕಾರಕ್ಕೆ ಶಾಕ್, ಏಕಾಏಕಿ ಕುಸಿದು ಬಿದ್ದ ಬಿಹಾರ ಡಿಸಿಎಂ!

ನಿತೀಶ್ ಕುಮಾರ್ ಅವರು ಹರ್ಲಖಿಯಲ್ಲಿ ನಡೆದ ಸಮಾವೇಶದಲ್ಲಿ ಉದ್ಯೋಗಗಳ ಕುರಿತು ಮಾತನಾಡುತ್ತಿದ್ದ ವೇಳೆ ಜನಸಮೂಹದಿಂದ ಈರುಳ್ಳಿಯನ್ನು ಎಸೆಯಲಾಗಿತ್ತು. ಈ ವೇಳೆ ಭದ್ರತಾ ಸಿಬ್ಬಂದಿ ಅವರ ಸುತ್ತಲೂ ರಕ್ಷಣಾ ಕವಚವನ್ನು ರೂಪಿಸಲು ಧಾವಿಸಿದ್ದರು. "ಖುಬ್ ಫೆಕೋ, ಖುಬ್ ಫೆಕೋ, ಖುಬೇ ಫೆಕೋ (ಎಸೆಯುತ್ತಲೇ ಇರು)" ಎಂದು ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು. ನಿತೀಶ್ ಕುಮಾರ್ ಮೇಲೆ ದಾಳಿ ಮಾಡಿದ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಹಿಡಿದು ವ್ಯಾನ್ ಗೆ ಹತ್ತಿಸುವ ವೇಳೆ, "ಅತನನ್ನು ಬಿಡಿ, ಈ ಬಗ್ಗೆ ಹೆಚ್ಚಿನ ಗಮನ ನೀಡಬೇಡಿ' ಎಂದು ಸ್ವತಃ ಮುಖ್ಯಮಂತ್ರಿ ಹೇಳಿದ್ದರು. ಪ್ರತಿಪಕ್ಷದ ನಾಯಕ ತೇಜಸ್ವಿ ಯಾದವ್ ದಾಳಿಯನ್ನು ಖಂಡಿಸಿದ್ದು, ಪ್ರಜಾಪ್ರಭುತ್ವದ ಮೂಲಕ ಪ್ರತಿಭಟಿಸುವಂತೆ ಜನರಿಗೆ ಸೂಚಿಸಿದ್ದಾರೆ.

ಮತ್ತೆ ಪ್ರಶಾಂತ್‌ ಕಿಶೋರ್‌ ಜತೆ ನಿತೀಶ್‌ ಭೇಟಿ: ಬಿಜೆಪಿಗೆ ಸಂದೇಶ?

ಹೆಂಡತಿ ಬಿಟ್ಟುಹೋದ ಸಿಟ್ಟಿಗೆ ದಾಳಿ:
ಸದ್ಯ ಪೊಲೀಸರು ಭಕ್ತಿಯಾರ್‌ಪುರ ಪೊಲೀಸ್ ಠಾಣೆಯಲ್ಲಿ ಯುವಕನನ್ನು ವಿಚಾರಣೆ ನಡೆಸುತ್ತಿದ್ದಾರೆ. ದಾಳಿ ಮಾಡಿದ ಯುವಕ ಚಿನ್ನ ಬೆಳ್ಳಿ ಅಂಗಡಿ ಹೊಂದಿದ್ದಾನೆ ಎಂದು ಹೇಳಲಾಗಿದೆ. ಅವನ ಹೆಂಡತಿ ಅವನನ್ನು ಬಿಟ್ಟು ಹೋಗಿದ್ದಾಳೆ. ಈ ಕಾರಣದಿಂದಾಗಿ ಬೇಸರಗೊಂಡಿದ್ದ ಆತ, ಇಂಥ ಕೃತ್ಯ ಎಸಗಿದ್ದಾನೆ ಎಂದು ವರದಿಯಾಗಿದೆ. ಮುಖ್ಯಮಂತ್ರಿ ಭದ್ರತೆಯಲ್ಲಿ ಭಾರೀ ಲೋಪ ಎಸಗಿದ ಪ್ರಕರಣ ಬೆಳಕಿಗೆ ಬಂದ ನಂತರ ಅಧಿಕಾರಿಗಳಲ್ಲಿ ಭಯ ಆರಂಭವಾಗಿದೆ. ಮಾಧ್ಯಮದವರ ಪ್ರಶ್ನೆಗಳನ್ನು ತಪ್ಪಿಸಲು ಅವರು ತಮ್ಮ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿದ್ದಾರೆ.

Follow Us:
Download App:
  • android
  • ios