ಯೋಗಿ ವಜಾಕ್ಕೆ 65 ಶಾಸಕರ ಸಹಿ ಪತ್ರವಿದೆ : ರೇಣುಕಾಚಾರ್ಯ
- ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡಿರುವ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್
- ಸಚಿವ ಸಂಪುಟದಿಂದ ಕೈಬಿಡಬೇಕೆಂದು ಆಗ್ರಹಿಸಿ 65 ಶಾಸಕರು ಸಹಿ
- ಸಹಿ ಹಾಕಿ ಪತ್ರ ನೀಡಿದ್ದಾರೆ ಎಂದ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ
ದಾವಣಗೆರೆ (ಜೂ.02): ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡಿರುವ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಆಗ್ರಹಿಸಿ 65 ಶಾಸಕರು ಸಹಿ ಹಾಕಿ ಪತ್ರ ನೀಡಿದ್ದಾರೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೊರೋನಾ ಕಾರಣ ಸದ್ಯ ಸುಮ್ಮನಿದ್ದೇವೆ. ಕೊರೋನಾ ನಿಯಂತ್ರಣಕ್ಕೆ ಬಂದ ಬಳಿಕ ಯೋಗೇಶ್ವರ್ ವಿರುದ್ಧದ ಹೋರಾಟವನ್ನು ತೀವ್ರಗೊಳಿಸುತ್ತೇವೆ. ಸಂಪುಟದಿಂದ ಯೋಗೇಶ್ವರ್‌ರನ್ನು ವಜಾ ಮಾಡಬೇಕು. ಮೆಗಾ ಸಿಟಿ ಹಗರಣ ಸಂಬಂಧ ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ರೆಡಿಮೇಡ್ ಫುಡ್ ಅಲ್ಲ. ಪಕ್ಷ ಸಂಘಟನೆ, ಹೋರಾಟದಿಂದ ಬಂದಂತಹ ನಾಯಕ. ಅಂತಹ ನಾಯಕನ ಬೆನ್ನಿಗೆ ಚೂರಿ ಹಾಕಿದರೆ ಬಿಡುತ್ತೇವಾ? ಬಿಎಸ್‌ವೈ ಆಲದ ಮರ ಇದ್ದಂತೆ. ಅಂತಹ ಮರದ ನೆರಳಿನಲ್ಲಿ ಇರುವವರು ನಾವು. ಅಂತಹ ಬೆನ್ನಿಗೆ ಚೂರಿ ಹಾಕಿದರೆ ನಾವು ಬಿಡ್ತೀವಾ? ಇಂತಹದ್ದೆಲ್ಲಾ ನಡೆಯಲ್ಲ ಎಂದು ಎಚ್ಚರಿಸಿದರು.
ಸಚಿವರೊಬ್ಬರು ಸಿಎಂ ಬದಲಾವಣೆಗೆ ಒತ್ತಾಯಿಸಿದ್ದಾರೆ : ರೆಣುಕಾಚಾರ್ಯ ಬಾಂಬ್
ಯೋಗೇಶ್ವರ್‌ಗೆ ಜಲ ಸಂಪನ್ಮೂಲ ಹಾಗೂ ಇಂಧನ ಖಾತೆಗಳ ಜೊತೆಗೆ ರಾಮನಗರ ಜಿಲ್ಲಾ ಉಸ್ತುವಾರಿ ಬೇಕಾಗಿತ್ತು. ಆದರೆ, ಅದು ಸಿಕ್ಕಿಲ್ಲ. ಇದೇ ಕಾರಣಕ್ಕೆ ತಳಮಳ ಶುರುವಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ. ದೆಹಲಿ ನಾಯಕರ ಮನೆಯ ಗೇಟ್ ಮುಟ್ಟಿ, ಅಲ್ಲಿ ಫೋಟೋ ತೆಗೆಸಿಕೊಂಡು, ಮುಖ್ಯಮಂತ್ರಿ ಬದಲಾವಣೆ ಅಂತಾ ಸುಳ್ಳು ಹೇಳುತ್ತಿದ್ದಾನೆ ಆ ವ್ಯಕ್ತಿ ಎಂದು ಕಿಡಿಕಾರಿದರು.