ಕರ್ನಾಟಕದ ನೂತನ ಸಿಎಂ ಆಯ್ಕೆ: ಖರ್ಗೆ ಸಭೆಯತ್ತ ಎಲ್ಲರ ಚಿತ್ತ..!

ಮಲ್ಲಿಕಾರ್ಜುನ ಖರ್ಗೆ ಅವರು ನಿನ್ನೆ ವೈಯಕ್ತಿಕ ಅಭಿಪ್ರಾಯ ಪಡೆದುಕೊಂಡಿದ್ದಾರೆ.  ಇಂದು ಡಿಕೆಶಿ ಮತ್ತು ಸಿದ್ದರಾಮಯ್ಯ ಅವರನ್ನು ಒಟ್ಟಿಗೆ ಸೇರಿಸಿ ಮಲ್ಲಿಕಾರ್ಜುನ ಖರ್ಗೆ ಅವರು ಸಭೆ ನಡೆಸಲಿದ್ದಾರೆ. ನಿನ್ನೆ ಭೇಟಿಯ ವೇಳೆ ಖರ್ಗೆ ಮುಂದೆ ಸಿದ್ದರಾಮಯ್ಯ ಮತ್ತು ಡಿಕೆಶಿ ಹಕ್ಕು ಪ್ರತಿಪಾದನೆ ಮಾಡಿದ್ದಾರೆ.  

AICC President Mallikarjun Kharge Will Be Conduct Meeting New CM of Karnataka grg

ನವದೆಹಲಿ(ಮೇ.17):  ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆಯುವ ಸಭೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಕರ್ನಾಟಕದ ನೂತನ ಸಿಎಂ ಆಯ್ಕೆಗೆ ಕಸರತ್ತಿಗೆ ಇಂದೇ(ಬುಧವಾರ) ಫುಲ್‌ ಸ್ಟಾಪ್‌ ಸಿಗುವ ಲಕ್ಷಣಗಳು ಗೋಚರವಾಗುತ್ತಿವೆ. 

ಮಲ್ಲಿಕಾರ್ಜುನ ಖರ್ಗೆ ಅವರು ನಿನ್ನೆ ವೈಯಕ್ತಿಕ ಅಭಿಪ್ರಾಯ ಪಡೆದುಕೊಂಡಿದ್ದಾರೆ.  ಇಂದು ಡಿಕೆಶಿ ಮತ್ತು ಸಿದ್ದರಾಮಯ್ಯ ಅವರನ್ನು ಒಟ್ಟಿಗೆ ಸೇರಿಸಿ ಮಲ್ಲಿಕಾರ್ಜುನ ಖರ್ಗೆ ಅವರು ಸಭೆ ನಡೆಸಲಿದ್ದಾರೆ. ನಿನ್ನೆ ಭೇಟಿಯ ವೇಳೆ ಖರ್ಗೆ ಮುಂದೆ ಸಿದ್ದರಾಮಯ್ಯ ಮತ್ತು ಡಿಕೆಶಿ ಹಕ್ಕು ಪ್ರತಿಪಾದನೆ ಮಾಡಿದ್ದಾರೆ ಅಂತ ತಿಳಿದು ಬಂದಿದೆ. 

ಲಿಂಗಾಯತರಿಗೆ ಸಿಎಂ ಪಟ್ಟ: ಖರ್ಗೆಗೆ ಶಾಮನೂರು ಪತ್ರ

ಇಬ್ಬರೂ ನಾಯಕರು ತಮಗೇ ಸಿಎಂ ಸ್ಥಾನ ನೀಡುವಂತೆ ಬಿಗಿಪಟ್ಟು ಹಿಡಿದಿದ್ದಾರೆ. ಇಬ್ಬರ ಅಭಿಪ್ರಾಯ ಹಿನ್ನೆಲೆಯಲ್ಲಿ ಇಂದು ಪಂಚ ನಾಯಕರ ಸಭೆ ನಡೆಯಲಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆ ಸಿ ವೇಣುಗೋಪಾಲ, ಸಿದ್ದರಾಮಯ್ಯ, ಡಿಕೆಶಿ ಮತ್ತು ಖರ್ಗೆ ಸಭೆ ನಡೆಯಲಿದೆ. 

ಬಿಕ್ಕಟ್ಟು ಪರಿಹಾರ ಮಾಡಲು ಮಲ್ಲಿಕಾರ್ಜುನ ಖರ್ಗೆ ಸಂಧಾನ ಸೂತ್ರ ಸಿದ್ಧಪಡಿಸಿದ್ದಾರೆ. ಇಂದಿನ ಸಭೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ವೈಯಕ್ತಿಕವಾಗಿ ಸುರ್ಜೇವಾಲಾ ಮತ್ತು ವೇಣುಗೋಪಾಲ ಅವರನ್ನ ಭೇಟಿ ಮಾಡಿದ್ದಾರೆ.  ಇನ್ನು ಡಿ.ಕೆ. ಶಿವಕುಮಾರ್ ಮಾಜಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರೆ ಅಂತ ಹೇಳಲಾಗಿದೆ. 

ಕುತೂಹಲ ಮೂಡಿಸಿರುವ ಸಭೆಗೂ ಮುನ್ನ ಸಿದ್ದರಾಮಯ್ಯ ಸರ್ಕಸ್

ಆಪ್ತರ ಜೊತೆಗೆ ಹೊಟೇಲ್‌ನಲ್ಲಿ ಸಿದ್ದರಾಮಯ್ಯ ಚರ್ಚೆ ಮುಂದುವರಿಸಿದ್ದಾರೆ. ತಮ್ಮ ಪರವಾಗಿ ಲಾಭಿ ಮುಂದುವರಿಸಲು ನಾಯಕರ ಮೂಲಕ ಯತ್ನ ನಡೆಸಿದ್ದಾರೆ. ಶಾಸಕರು ಹಾಕಿರುವ ಮತಗಳ ಪೆಟ್ಟಿಗೆ ಕೊಂಡೊಯ್ದ ಬಗ್ಗೆ ಸಂಶಯ ವ್ಯಕ್ತವಾಗಿದೆ. ವೀಕ್ಷಕರ ಬದಲು ಕೆ.ಸಿ. ವೇಣುಗೋಪಾಲ ತಂಡ ಮತ ಪೆಟ್ಟಿಗೆ ಕೊಂಡೊಯ್ದ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಕೆಪಿಸಿಸಿ ಉಪಾಧ್ಯಕ್ಷ ಸುಧೀಂದ್ರ ಬಳಿ ಮತ ಪೆಟ್ಟಿಗೆ ಇದೆ. 

ನನಗೂ 50 ಶಾಸಕರ ಬೆಂಬಲವಿದೆ: ಪರಮೇಶ್ವರ್‌

ಮತಗಳು ಬದಲಾವಣೆ ಆಗಿದ್ಯಾ...?

ಮತಗಳು ಬದಲಾವಣೆ ಆಗಿದೆ ಅಂತ ಡಿಕೆಶಿ ಬಣ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. 

ಇನ್ನು ಹೊಟೇಲ್‌ನಲ್ಲಿರುವ ಸಿದ್ದರಾಮಯ್ಯ ಭೇಟಿಗೆ ಶಾಸಕರು ಆಗಮಿಸುತ್ತಿದ್ದಾರೆ. ಆದರೆ, ಸಿಎಂ ಆಯ್ಕೆ ಬಗ್ಗೆ ಸಿದ್ದರಾಮಯ್ಯ ಮೌನವಹಿಸಿದ್ದಾರೆ. ಕೆಲ ಹೊತ್ತಿನ ಬಳಿಕ ಸುರ್ಜೇವಾಲಾ ಭೇಟಿಗೆ ಸಿದ್ದರಾಮಯ್ಯ ತೆರಳಲಿದ್ದಾರೆ. ಇಂದು ಬೆಳಗ್ಗೆ 11-30 ಕ್ಕೆ ರಾಹುಲ್ ಗಾಂಧಿ ಜೊತೆಗೆ ಸಿದ್ದರಾಮಯ್ಯ ಮಾತುಕತೆ ನಡೆಸಲಿದ್ದಾರೆ. ಸೋನಿಯಾ ಗಾಂಧಿ ನಿವಾಸದಲ್ಲಿಯೂ ಸಭೆ ನಡೆಯಲಿದೆ. ನಂತರ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಪಂಚ ನಾಯಕರ ಸಭೆ ನಡೆಯಲಿದೆ. 12: 00 ಗಂಟೆಗೆ ಡಿಕೆಶಿ ಅವರು ರಾಹುಲ್ ಗಾಂಧಿ ಅವರನ್ನ ಭೇಟಿಯಾಗಲಿದ್ದಾರೆ ಅಂತ ತಿಳಿದು ಬಂದಿದೆ. 

Latest Videos
Follow Us:
Download App:
  • android
  • ios