ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಡಬಲ್‌ ಇಂಜಿನ್‌ ಸರ್ಕಾರಗಳು ದೇಶದ ಕೃಷಿ ಕ್ಷೇತ್ರವನ್ನು ಪೂರ್ಣ ಪ್ರಮಾಣದಲ್ಲಿ ನಾಶ ಪಡಿಸಲು ಮುಂದಾಗಿವೆ ಎಂದು ಮಾಜಿ ಸಚಿವ ಹೆಚ್‌.ಆಂಜನೇಯ ಆರೋಪಿಸಿದರು.

ಹೊಳಲ್ಕೆರೆ (ಫೆ.1) : ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಡಬಲ್‌ ಇಂಜಿನ್‌ ಸರ್ಕಾರಗಳು ದೇಶದ ಕೃಷಿ ಕ್ಷೇತ್ರವನ್ನು ಪೂರ್ಣ ಪ್ರಮಾಣದಲ್ಲಿ ನಾಶ ಪಡಿಸಲು ಮುಂದಾಗಿವೆ ಎಂದು ಮಾಜಿ ಸಚಿವ ಹೆಚ್‌.ಆಂಜನೇಯ ಆರೋಪಿಸಿದರು.

ಹೊಳಲ್ಕೆರೆ ಪಟ್ಟಣದ ಗಣಪತಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್‌ ಪಕ್ಷದ ಜನಧ್ವನಿ ಯಾತ್ರೆ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಸಮಸ್ಯೆಗಳ ಮಧ್ಯೆಯೂ ದೇಶಕ್ಕೆ ಅನ್ನ ನೀಡುತ್ತಿರುವ ರೈತರ ಸಂಕಷ್ಟಕ್ಕೆ ದೂಡಲು ಕೃಷಿ ವಿರೋಧಿ ಕಾಯ್ದೆ ಜಾರಿಗೆ ತಂದ ಪ್ರಧಾನಿ ಮೋದಿ ನಂತರ ಕೃಷಿಕರ ಹೋರಾಟಕ್ಕೆ ಹೆದರಿ ಹಿಂದಕ್ಕೆ ಪಡೆದರು. ಆದರೆ ರಾಜ್ಯದಲ್ಲಿ ಮಾತ್ರ ಆ ಕಾಯ್ದೆ ವಾಪಸ್ಸು ಪಡೆಯಲಾಗಿಲ್ಲ. ರೈತಸಂಘ ಸೇರಿ ವಿವಿಧ ಸಂಘಟನೆಗಳು ನೂರಾರುಭಾರಿ ಹೋರಾಟ ನಡೆಸಿದರೂ ಮನ್ನಣೆ ನೀಡುತ್ತಿಲ್ಲ. ಜವಿರೋಧಿ ಕಾಯ್ದೆ ಹಿಂಪಡೆಯುತ್ತಿಲ್ಲ ಎಂದರು.

ಉ.ಕ. ಸಮಸ್ಯೆ ನಿವಾರಿಸುವಲ್ಲಿ ಡಬಲ್‌ ಎಂಜಿನ್‌ ಸರ್ಕಾರ ವಿಫಲ; ಕಾಂಗ್ರೆಸ್ ಪ್ರತಿಭಟನೆ

ರಾಜ್ಯ, ಕೇಂದ್ರದಲ್ಲಿ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿರುವ ಬಿಜೆಪಿ ಸರ್ಕಾರ ಸಲ್ಲದ ವಿಚಾರಗಳನ್ನು ಮುನ್ನಲೆಗೆ ತಂದು ಅಧಿಕಾರ ಹಿಡಿಯಬಹುದು ಎಂಬ ದುರಾಲೋಚನೆ ಹೊಂದಿದೆ. ರಾಜ್ಯದ ಜನತೆ ಮರಳು ಮಾಡವ ಮಾತುಗಳಿಗೆ ಮಣೆ ಹಾಕುವ ಅಗತ್ಯವಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೋಮುವಾದಿಗಳ ಮನೆಗೆ ಕಳಿಸುವ ವಾತಾವರಣ ಸೃಷ್ಟಿಯಾಗಬೇಕು. ರೈತ, ನಿರುದ್ಯೋಗ, ಮಹಿಳೆಯರ ವಿರೋಧಿ ನೀತಿ ಮೂಲಕ ಸಾಮಾನ್ಯಜನರ ಬದುಕನ್ನು ಸಂಕಷ್ಟಕ್ಕೆ ದೂಡಿರುವ ಸರ್ಕಾರ, ಈಗಲೂ ಕೂಡ ಜನರ ಮನಸ್ಸಿನಲ್ಲಿ ದ್ವೇಷದ ಬೀಜ ಬಿತ್ತಿ ಅಧಿಕಾರ ಹಿಡಿಯಬಹುದು ಎಂಬ ಭ್ರಮೆಯಲ್ಲಿದೆ ಎಂದರು.

ಸಿಲಿಂಡರ್‌, ಅಡುಗೆ ಎಣ್ಣೆ ಗಗನಕ್ಕೆ ಏರಿದೆ. ಜನ ಕಟ್ಟಿಗೆ ಒಲೆಗೆ ಮರಳುತ್ತಿದ್ದಾರೆ. ವಿದ್ಯುತ್‌ ಬೆಲೆ ಏರಿಕೆಯಿಂದ ಎಷ್ಟೋ ಮನೆಗಳು ಕತ್ತಲಲ್ಲಿವೆ. ಸಾಮಾನ್ಯಜನರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಈ ಸಮಸ್ಯೆಅರಿತು ಕಾಂಗ್ರೆಸ್‌ ಪಕ್ಷ, ಪ್ರತಿ ಮಹಿಳೆಗೆ ತಿಂಗಳಿಗೆ ಎರಡು ಸಾವಿರ ರುಪಾಯಿ ಮತ್ತು ಪ್ರತಿ ಮನೆಗೆ 209 ವಿದ್ಯುತ್‌ ಯೂನಿಟ್‌ ವಿದ್ಯುತ್‌ ಉಚಿತ ನೀಡುವ ಘೋಷಣೆ ಮಾಡಿದೆ. ಕಾಂಗ್ರೆಸ್‌ ಪಕ್ಷದ ಆಡಳಿತದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸಲು ಪಕ್ಷದ ನೇತೃತ್ವದಲ್ಲಿ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಂಡಿದ್ದು, ಎಲ್ಲೆಡೆ ಜನಬೆಂಬಲ ವ್ಯಕ್ತವಾಗುತ್ತಿದೆ. ಕಾಂಗ್ರೆಸ್‌ ಪಕ್ಷಕ್ಕೆ ್ಕಜನರ ಬಳಿ ಹೋಗುವ ನೈತಿಕತೆ ಇದ್ದು, ಭ್ರಷ್ಟ, ವಚನ ಭ್ರಷ್ಟಬಿಜೆಪಿಗೆ ಮತ ಕೇಳುವ ಯಾವ ಹಕ್ಕು ಇಲ್ಲ ಎಂದು ಹೇಳಿದರು.

ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಕಾಟಿಹಳ್ಳಿ ಶಿವಣ್ಣ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಯಿಂದ ಕೈಬಿಟ್ಟು ಹೋಗಿದ್ದ ಹೊಳಲ್ಕೆರೆ ತಾಲೂಕನ್ನು ಸೇರಿಸಿ, ಇಪ್ಪತ್ತೆರಡು ಕೆರೆಗಳಿಗೆ ಭದ್ರಾ ನೀರು ಹರಿಸುವ ಯೋಜನೆ ಜಾರಿಯ ರುವಾರಿ ಎಚ್‌.ಆಂಜನೇಯ ಅವರನ್ನು ದಾಖಲೆ ಮತಗಳ ಅಂತರದಲ್ಲಿ ಗೆಲ್ಲಿಸಲು ಎಲ್ಲ ವರ್ಗದ ಜನ ಚುನಾವಣೆಗೆ ಎದುರು ನೋಡುತ್ತಿದ್ದಾರೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯಅಶೋಕ್‌ ಮಾತನಾಡಿ, ಕಾಂಗ್ರೆಸ್‌ ಪಕ್ಷದಲ್ಲಿದ್ದು ಪಕ್ಷ ವಿರೋಧಿ ಚಟುವಟಿಕೆ ನಡೆಸುವುದು ಜನ್ಮ ಕೊಟ್ಟತಾಯಿಗೆ ದ್ರೋಹ ಬಗೆದಂತೆ.

ಕಳೆದ ಬಾರಿ ಎಚ್‌.ಆಂಜನೇಯ ಅವರನ್ನು ಸೋಲಿಸಿದ್ದರ ಕುರಿತು ಕ್ಷೇತ್ರದ ಜನರಲ್ಲಿ ಪಶ್ಚಾತ್ತಾಪ ಮೂಡಿದೆ. ಈ ಬಾರಿ ಆಂಜನೇಯ ಅವರ ಗೆಲುವು ಕ್ಷೇತ್ರದ ಜನರ ಉಳಿವಿನ ಪ್ರಶ್ನೆ ಎಂದರು.

ಜಿಪಂ ಮಾಜಿ ಸದಸ್ಯ ಡಿ.ಕೆ.ಶಿವಮೂರ್ತಿ ಮಾತನಾಡಿ, ಎಚ್‌.ಆಂಜನೇಯ ಸಣ್ಣ ಹಳ್ಳಿಗೂ ಒಂದು ಕೋಟಿಯಿಂದ ಹತ್ತುಕೋಟಿವರೆಗೂ ಅನುದಾನ ನೀಡಿ ಅಭಿವೃದ್ಧಿ ಮಾಡಿದ್ದಾರೆ. ಆದರೆ, ಮಾಡಿದ ಕೆಲಸ ಕುರಿತು ಪ್ರಚಾರ ತೆಗೆದುಕೊಳ್ಳದಿದ್ದರಿಂದ ಕಳೆದ ಬಾರಿ ಕ್ಷೇತ್ರ ಕೈತಪ್ಪಿತು. ಈ ಬಾರಿ ಜನರೇ ತೀರ್ಮಾನಿಸಿದ್ದಾರೆ. ಆಂಜನೇಯ ಅವರಷ್ಟುಕ್ಷೇತ್ರಕ್ಕೆ ಯಾರೂ ಕೆಲಸ ಮಾಡಿಲ್ಲವೆಂಬ ಸತ್ಯ ಮನದಟ್ಟು ಆಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳು, ಬೃಹತ್‌ ಕಟ್ಟಡಗಳು ಆಂಜನೇಯ ಅವರ ಕಾರ್ಯವನ್ನು ಸಾರಿ ಸಾರಿ ಹೇಳುತ್ತಿವೆ ಎಂದು ತಿಳಿಸಿದರು.

ಹೊಳಲ್ಕೆರೆ ಬ್ಲಾಕ್‌ಕಾಂಗ್ರೆಸ್‌ ಅಧ್ಯಕ್ಷ ಹೆಚ್‌.ಟಿ.ಹನುಮಂತಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಗಂಗಾಧರ್‌, ಮಾಜಿ ಸದಸ್ಯರಾದ ಎಸ್‌.ಜೆ.ರಂಗಸ್ವಾಮಿ, ಹೊಳಲ್ಕೆರೆ ಪಟ್ಟಣ ಬ್ಲಾಕ್‌ ಕಾಂಗ್ರೆಸ್‌ಅಧ್ಯಕ್ಷ ಮಜರ್‌ಉಲ್ಲಖಾನ್‌, ಕೆಪಿಸಿಸಿ ಸಂಯೋಕ ಜಯಣ್ಣ, ಮುಖಂಡರಾದ ಗೋಡೆಮನೆ ಹನುಮಂತಪ್ಪ,ಯುವ ಕಾಂಗ್ರೆಸ್‌ ಮಾಜಿ ಜಿಲ್ಲಾಧ್ಯಕ್ಷ ಮಧು ಪಾಲೆಗೌಡ, ಹೊಳಲ್ಕೆರೆ ಬ್ಲಾಕ್‌ ಯುವ ಕಾಂಗ್ರೆಸ್‌ ಅಧ್ಯಕ್ಷ ರಂಗಸ್ವಾಮಿ ಗಂಗಸಮುದ್ರ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ವಿನಯ್‌ ಗೋಡೆಮನೆ ಉಪಸ್ಥಿತರಿದ್ದರು.

ಬಿಜೆಪಿಯದ್ದು ಡಬಲ್ ಇಂಜಿನ್ ಸರ್ಕಾರ ಅಲ್ಲ, ಡಬ್ಬಾ ಗೌರ್ನಮೆಂಟ್‌: ಸಲೀಂ ಅಹ್ಮದ್