ಬಿಜೆಪಿಯದ್ದು ಡಬಲ್ ಇಂಜಿನ್ ಸರ್ಕಾರ ಅಲ್ಲ, ಡಬ್ಬಾ ಗೌರ್ನಮೆಂಟ್: ಸಲೀಂ ಅಹ್ಮದ್
ಜನವರಿ 11 ರಿಂದ ಬೆಳಗಾವಿಯಿಂದ ಬಸ್ ಯಾತ್ರೆ ಹಮ್ಮಿಕೊಂಡಿದ್ದೇವೆ. 20 ಜಿಲ್ಲೆಗಳಲ್ಲಿ ಬಸ್ ಯಾತ್ರೆ ಸಂಚರಿಸುತ್ತದೆ. ಪೆಬ್ರವರಿಯಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಎರಡು ತಂಡಗಳಾಗಿ 224 ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತೇವೆ: ಸಲೀಂ ಅಹ್ಮದ್
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ದಾವಣಗೆರೆ
ದಾವಣಗೆರೆ(ಜ.04): ಭಾರತೀಯ ಜನತಾ ಪಾರ್ಟಿ ಅಲ್ಲ, ಅದು ಭಾರತೀಯ ಭ್ರಷ್ಟಾಚಾರ ಜನತಾ ಪಾರ್ಟಿ, ಜನ ಸಂಕಲ್ಪ ಯಾತ್ರೆ ಮಾಡಿದ್ದಾರೆ. ಬಿಜೆಪಿಯನ್ನು ಮನೆಗೆ ಕಳುಹಿಸಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಈ ಯಾತ್ರೆ ಮಾಡಿದ್ದಾರೆ. ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಅಲ್ಲ ಇದು ಡಬ್ಬಾ ಸರ್ಕಾರ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮಂಗಳವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನವರಿ 11 ರಿಂದ ಬೆಳಗಾವಿಯಿಂದ ಬಸ್ ಯಾತ್ರೆ ಹಮ್ಮಿಕೊಂಡಿದ್ದೇವೆ. 20 ಜಿಲ್ಲೆಗಳಲ್ಲಿ ಬಸ್ ಯಾತ್ರೆ ಸಂಚರಿಸುತ್ತದೆ. ಪೆಬ್ರವರಿಯಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಎರಡು ತಂಡಗಳಾಗಿ 224 ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತೇವೆ. ಸರ್ಕಾರದ ಜನ ವಿರೋಧಿ ನೀತಿ, 40% ಭ್ರಷ್ಟಾಚಾರದಿಂದ ಜನ ರೋಸಿ ಹೋಗಿದ್ದಾರೆ. ಇಂತಹ ವಿಚಾರದ ಬಗ್ಗೆ ಜನರ ಮುಂದೆ ಹೇಳಿ ಸರ್ಕಾರವನ್ನು ಬೆತ್ತಲೆ ಮಾಡುತ್ತೇವೆ. ಬಿಜೆಪಿ ಯವರು ಜನ ಸಂಕಲ್ಪ ಯಾತ್ರೆ ಹಮ್ಮಿಕೊಂಡಿದ್ದು, ಇವರಿಗೆ ಜನ ಏಕೆ ಆರ್ಶಿವಾದ ಮಾಡಬೇಕು ಎಂದು ಸುಳ್ಳು ಹೇಳಿದ ಪಕ್ಷಕ್ಕೆ ಆರ್ಶೀವಾದ ಮಾಡಬೇಕಾ? ಎಂದು ಸರ್ಕಾರಕ್ಕೆ ಪ್ರಶ್ನಿಸಿದರು.
ಜ.5ರಿಂದ ಬೀದರ್ ಜಿಲ್ಲೆಯಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆ
ರಾಮ ರಾಜ್ಯದ ಬದಲು ರಾವಣ ರಾಜ್ಯ ಮಾಡಿದ್ದಕ್ಕೆ ನಿಮಗೆ ಬೆಂಬಲ ಕೊಡಬೇಕಾ? ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರದ ಆಯುಷ್ಯ ಮುಕ್ತಾಯ ಅಗಿದೆ. ಮಹದಾಯಿ, ಮೇಕೆದಾಟು ಯೋಜನೆಗಳ ಬಗ್ಗೆ ನಿರ್ಲಕ್ಷ್ಯ ಮಾಡಲಾಗಿದ್ದು, ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಮಹದಾಯಿ ಯೋಜನೆ ತರುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ರು, 25 ಜನ ಸಂಸದರು ಇದ್ದರೂ ಯಾರು ಕೂಡ ಪರಿಹರಿಸುವ ತಾಕತ್ತು ಮಾಡುತ್ತಿಲ್ಲ. ಹಾಲಿ ಶಾಸಕರಿಗೆ ಬಹುಪಾಲು ಟಿಕೆಟ್ ದೊರೆಯುತ್ತದೆ. ಸಾಮಾಜಿಕ ನ್ಯಾಯದ ಅಡಿಯಲ್ಲಿ ಟಿಕೆಟ್ ಆಯ್ಕೆ ಮಾಡುತ್ತೇವೆ, ಯುವಕರಿಗೆ, ಮಹಿಳೆಯರಿಗೆ ಆದ್ಯತೆ ನೀಡುತ್ತೇವೆ. ಗೆಲ್ಲುವ ಮಾನದಂಡ ಪ್ರಮುಖವಾಗಿದೆ. ವಯಸ್ಸಿನ ಮಿತಿ ಇಲ್ಲ. ವಯಸ್ಸಿನ ಮಿತಿ ಅದು ಬಿಜೆಪಿಯಲ್ಲಿ ಮಾತ್ರ. ನಾವು ಅಡ್ವಾಣಿಯವರ ರೀತಿಯಲ್ಲಿ ಮನೆಯಲ್ಲಿ ಕೂರಿಸುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಟಿಕೆಟ್ ಅಕಾಂಕ್ಷಿಗಳ ಜೊತೆ ಕೆಪಿಸಿಸಿ ಕಾರ್ಯದರ್ಶಿಗಳಿಂದ ಸಭೆ:
ದಾವಣಗೆರೆಯ 7 ಕ್ಷೇತ್ರದ ಪೈಕಿ ಒಟ್ಟು 45 ಅರ್ಜಿ ಹಾಕಿದ ಅಕಾಂಕ್ಷಿಗಳ ಜೊತೆ ದಾವಣಗೆರೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಲಾಯಿತು. ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಶಾಮನೂರು ಶಿವಶಂಕರಪ್ಪ, ಜಿಲ್ಲಾಧ್ಯಕ್ಷ ಹೆಚ್ ಬಿ ಮಂಜಪ್ಪ ಸಮ್ಮುಖದಲ್ಲಿ ಸಭೆ ನಡೆಸಲಾಯಿತು.
ಸಭೆಯಲ್ಲಿ 45 ಜನ ಅಕಾಂಕ್ಷಿಗಳು ಭಾಗಿ
ದಾವಣಗೆರೆಯ ೦7 ಕ್ಷೇತ್ರಗಳಿಗೆ 45 ಜನ ಟಿಕೆಟ್ ಆಕಾಂಕ್ಷಿಗಳನ್ನು ಸಭೆ ಕರೆಯಲಾಗಿತ್ತು. 7 ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಯಾದರೆ ಒಳ್ಳೆಯದು ಎಂದು ನಿರ್ಧಾರ ಮಾಡಲಾಗುವುದು ಎಂದು ಸಲೀ ಅಹ್ಮದ್ ಮಾಹಿತಿ ನೀಡಿದರು. ಅವರ ಕ್ಷೇತ್ರವಾರು ಮುಖಂಡರನ್ನು ಭೇಟಿ ಮಾಡಿ ಅಭ್ಯರ್ಥಿಗಳ ಆಯ್ಕೆಗೆ ಬಂದಿದ್ದೇವೆ, ಗೆಲುವು ಸಾಧಿಸಲು ಮಾನದಂಡ, ಪ್ಲಾನ್ ಬಗ್ಗೆ ಚರ್ಚೆ ನಡೆಸಲಾಗುವುದು, ಯಾರಿಗೆ ಟಿಕೆಟ್ ನೀಡಿದರೂ ಪಕ್ಷಕ್ಕೆ ಕೆಲಸ ಮಾಡಬೇಕು ಎಂದು ಪ್ರಮಾಣ ಮಾಡಿಸುತ್ತೇವೆ. ರಾಜ್ಯದಲ್ಲಿ ಒಟ್ಟು 1350 ಜನ ಅಕಾಂಕ್ಷಿಗಳು ಅರ್ಜಿ ಹಾಕಿದ್ದಾರೆ. ಬ್ಲಾಕ್ ಅಧ್ಯಕ್ಷರು, ಜಿಲ್ಲಾ ಅಧ್ಯಕ್ಷರ ಮುಖಂಡರ ಶಿಪಾರಸ್ಸು, ಅಭಿಪ್ರಾಯ ಪಡೆದು ಆಯ್ಕೆ ಮಾಡುತ್ತೇವೆ, 03 ಬಾರಿ ಸರ್ವೇ ನಡೆಸಿದ್ದು, ಅ. ಸಮೀಕ್ಷೆಯಲ್ಲಿ130 ಕ್ಷೇತ್ರದಲ್ಲಿ ನಾವು ಮುಂದೆ ಇದ್ದೇವೆ. 150 ಸೀಟ್ ಗಳನ್ನು ಗೆಲ್ಲಲು ರಾಹುಲ್ ಗಾಂಧಿಯವರು ಹೇಳಿದ್ದಾರೆ. ಅ150 ಸೀಟ್ ಗೆಲ್ಲಲು ಎಲ್ಲಾ ರೀತಿಯ ತಯಾರಿ ನಡೆಸುತ್ತಿದ್ದೇವೆ ಎಂದು ಸಲೀಂ ಅಹ್ಮದ್ ಮಾಹಿತಿ ನೀಡಿದರು.