ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರುತ್ತಾರೆ ಎನ್ನುವ ವಿಚಾರವೇ ಕಾಂಗ್ರೆಸ್‌ಗೆ ಮುಜುಗರ ನೀಡಿತ್ತು. ಕೊನೇ ಕ್ಷಣದ ಬದಲಾವಣೆ ಎನ್ನುವಂತೆ ಕಮಲ್‌ನಾಥ್ ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ.
ನವದೆಹಲಿ (ಫೆ.18): ಕೊನೇ ಕ್ಷಣದ ಬದಲಾವಣೆ ಎನ್ನುವಂತೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಕಮಲ್‌ನಾಥ್ ಪಕ್ಷದಲ್ಲಿಯೇ ಉಳಿಯಲು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಅವರ ಪುತ್ರ ಬಿಜೆಪಿ ಸೇರುವ ಸಾಧ್ಯತೆ ಅಧಿಕವಾಗಿದೆ. ಸ್ವತಃ ಕಾಂಗ್ರೆಸ್ ಪಕ್ಷವೇ ಈ ವಿಚಾರವನ್ನು ತಿಳಿಸಿದ್ದು, ಕಮಲ್‌ನಾಥ್ ಬಿಜೆಪಿಗೆ ಹೋಗುತ್ತಿಲ್ಲ ಎಂದಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೀತೇಂದ್ರ ಸಿಂಗ್ ಇದನ್ನು ಖಚಿತಪಡಿಸಿದ್ದಾರೆ. ಶನಿವಾರ ದೆಹಲಿಗೆ ಪ್ರಯಾಣ ಮಾಡಿದ್ದ ಕಮಲ್‌ನಾಥ್ ಬಿಜೆಪಿ ಸೇರಲಿದ್ದಾರೆ ಎನ್ನುವುದು ದೊಡ್ಡ ಸುದ್ದಿಯಾಗಿತ್ತು. ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್‌ನ ದಯನೀಯ ಸೋಲಿನ ಬಳಿಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕಮಲ್‌ನಾಥ್ ಅವರನ್ನು ಉಚ್ಛಾಟನೆ ಮಾಡಲಾಗಿತ್ತು. ಇದರಿಂದ ಸಿಟ್ಟಾಗಿದ್ದ ಕಮಲ್‌ನಾಥ್‌ಗೆ ಬಳಿಕ ರಾಜ್ಯಸಭಾ ಟಿಕೆಟ್ ವಿಚಾರದಲ್ಲೂ ಹಿನ್ನಡೆಯಾದಾಗ ಸಿಟ್ಟಾಗಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಪುತ್ರ ನಕುಲ್‌ನಾಥ್ ಜೊತೆ ಬಿಜೆಪಿಗೆ ಸೇರಲಿದ್ದರೆ ಎನ್ನುವುದು ಸುದ್ದಿಯಾಗಿತ್ತು.
ರಾಷ್ಟ್ರ ರಾಜಕೀಯದಲ್ಲಿ ಕಾಂಗ್ರೆಸ್‌ಗೆ ಶಾಕ್ ಮೇಲೆ ಶಾಕ್: ಬಿಜೆಪಿಯತ್ತ ಮಧ್ಯಪ್ರದೇಶ ಮಾಜಿ ಸಿಎಂ ಕಮಲನಾಥ್ ?
ಕಮಲ್‌ನಾಥ್ ಬದಲಿಗೆ ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥರಾಗಿದ್ದ ಜಿತು ಪತ್ವಾರಿಯ ನಂತರದ ಸ್ಥಾನದಲ್ಲಿರುವ ಬರುವ ಜೀತೇಂದ್ರ ಸಿಂಗ್, ಕಮಲ್‌ನಾಥ್ ಬಿಜೆಪಿಗೆ ಸೇರುತ್ತಾರೆ ಎನ್ನುವುದು ಮಾಧ್ಯಮಗಳ ಊಹಾಪೋಹ ಎಂದಿದ್ದಾರೆ. "ಇದು ಕಮಲ್ ನಾಥ್ ವಿರುದ್ಧ ಮಾಡಿದ ಷಡ್ಯಂತ್ರ, ನಾನು ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಇದೆಲ್ಲವೂ ಕೇವಲ ವದಂತಿಗಳು ಎಂದು ಅವರು ಹೇಳಿದರು, ಮತ್ತು ಅವರು ಕಾಂಗ್ರೆಸ್ ಪಕ್ಷದವರು ಮತ್ತು ಕಾಂಗ್ರೆಸ್ ಪಕ್ಷದ ವ್ಯಕ್ತಿಯಾಗಿ ಮುಂದುವರಿಯುತ್ತಾರೆ ... ಅವರು ತಮ್ಮ ಕೊನೆಯ ಉಸಿರುವ ಇರುವವರೆಗೂ ಕಾಂಗ್ರೆಸ್ಸಿನ ಸಿದ್ಧಾಂತವನ್ನು ಮುಂದುವರಿಸುತ್ತಾರೆ. ಇದು ಅವರದೇ ಮಾತುಗಳು. ನನ್ನೊಂದಿಗೆ ಮಾತನಾಡುವಾಗ ಅವರು ಇದನ್ನೇ ಹೇಳಿದ್ದಾರೆ' ಎಂದರು.
ಮಧ್ಯ ಪ್ರದೇಶ ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಕಮಲ್ ನಾಥ್, ಪುತ್ರ ನಕುಲ್ ಬಿಜೆಪಿ ಸೇರ್ಪಡೆ ಸಾಧ್ಯತೆ!
