ಚನ್ನಗಿರಿ  ಟಿಕೆಟ್ ಕೈತಪ್ಪಿದ ಬೆನಲ್ಲೇ ಶಾಸಕ ಮಾಡಾಳು ವಿರೂಪಾಕ್ಷಪ್ಪ  ಪುತ್ರ ಮಲ್ಲಿಕಾರ್ಜುನ ಮಾಡಾಳ್ ಅವರು  ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಘೊಷಣೆ ಮಾಡಿದ್ದಾರೆ.

ದಾವಣಗೆರೆ (ಏ.16): ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ದಾವಣಗೆರೆ ಜಿಲ್ಲೆಯ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಶನಿವಾರವಷ್ಟೇ ಷರತ್ತು ಬದ್ಧ ಜಾಮೀನಿನ ಮೂಲಕ ಹೊರಬಂದಿದ್ದಾರೆ. ಅವರ ಪುತ್ರ ಮತ್ತು ಕೆಎಎಸ್ ಅಧಿಕಾರಿ ಪ್ರಶಾಂತ್ ಮಾಡಾಳ್ ಕೂಡ ವಿಚಾರಣೆ ಎದುರಿಸುತ್ತಿದ್ದಾರೆ. ಈ ನಡುವೆ ಶಾಸಕರ ಎರಡನೇ ಪುತ್ರ ಮಲ್ಲಿಕಾರ್ಜುನ ಮಾಡಾಳ್ ತಮ್ಮ ತಂದೆಯ ಕ್ಷೇತ್ರದಲ್ಲಿ ತನಗೆ ಟಕೆಟ್ ಸಿಗುವ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಈ ಕ್ಷೇತ್ರದಲ್ಲಿ ಬಿಜೆಪಿ ಎಚ್‌ ಎಸ್ ಶಿವಕುಮಾರ್‌ ಗೆ ಟಿಕೆಟ್ ನೀಡಿದೆ. ಹೀಗಾಗಿ ಟಿಕೆಟ್ ಕೈತಪ್ಪಿದ್ದಕ್ಕೆ ಚನ್ನಗಿರಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಸ್ವಾಭಿಮಾನಿ ಸಮಾವೇಶದಲ್ಲಿ ಮಾಡಾಳ್ ಮಲ್ಲಿಕಾರ್ಜುನ ಘೋಷಣೆ ಮಾಡಿದ್ದಾರೆ.

ಸ್ವಾಭಿಮಾನಿ ಚನ್ನಗಿರಿ ಸಮಾವೇಶದಲ್ಲಿ ಭಾಷಣ ಮಾಡಿದ ಮಾಡಾಳ್ ಮಲ್ಲಿಕಾರ್ಜುನ, ಈ ಮಣ್ಣಿನಲ್ಲಿ ಹುಟ್ಟಿದ್ದೇವೆ ಈ ಮಣ್ಣಿನಲ್ಲಿ ಸಾಯುತ್ತೇವೆ. ಈ ಕುಟುಂಬ ಕಣ್ಣೀರಲ್ಲಿ ಕೈತೊಳೆದಿದ್ದೇವೆ. ನಾವು ಅನುಭವಿಸಿದ ನೋವು ಬೇರೆ ಯಾರು ಅನುಭವಿಸಿಲ್ಲ. ನಾವು ರಾಜಕೀಯವಾಗಿ ದಲಿತರು. ನಾವು ಕೆಲಸದ ಜೊತೆಗೆ ಜನರ ಪ್ರೀತಿ ವಿಶ್ವಾಸ ಗಳಿಸಿದ್ದೇವೆ. ಎಲ್ಲಾ ಪಕ್ಷದ ಹಿರಿಯರು ಮುಖಂಡರ ಸಲಹೆ ಪಡೆದುಕೊಂಡಿದ್ದೇನೆ. ನನ್ನ ಮುಂದೆ ಬಿಟ್ಟು ನೀವು ಕೈ ಬಿಟ್ಟರೆ ವಿಷ ಕುಡಿಯಬೇಕಾಗುತ್ತದೆ. ಆದ್ರೆ ಚನ್ನಗಿರಿ ತಾಲೂಕಿನ ಜನತೆ ಕೈಬಿಡಬಾರದು ಎಂದು ಒಂದು ನಿರ್ಧಾರಕ್ಕೆ ಬಂದಿದ್ದೇನೆ.

ಸ್ವಾಭಿಮಾನದ ಕಿಚ್ಚು ಪ್ರತಿಯೊಬ್ಬರಲ್ಲೂ ಬರಬೇಕು. ಇವತ್ತಿನ ಸಂದರ್ಭಕ್ಕೆ ತಾಲ್ಲೂಕಿನ‌ ಜನತೆ ಅನಾಥರಾಗುತ್ತಾರೆ. ನೀವೆಲ್ಲಾ ಅಚಲ ಬೆಂಬಲ ಕೊಟ್ಟರೆ 50 ಸಾವಿರ ಮತಗಳಿಂದ ಗೆಲ್ಲಬಹುದು. ನಮ್ಮ ತಾಲ್ಲೂಕು ಮಣ್ಣಿಗಾಗಿ ಅಣಕಿಸಿದ್ರು ನೀವು ಸಹಿಸಿಕೊಳ್ಳಿ. ನಿಮ್ಮ ಸ್ವಾಭಿಮಾನಿ ಉಳಿಸಿಕೊಳ್ಳಲು ನಾನು ಪಕ್ಷೇತರವಾಗಿ ಸ್ಪರ್ಧಿಸುತ್ತೇನೆ. ಈ ತಾಲ್ಲೂಕಿನ ಜನತೆ ಜೊತೆಗೆ ನಾವಿದ್ದೇವೆ. ನಮ್ಮಪ್ಪ ಬಹಳ ಅಮಾಯಕರು. ನನ್ನ ಮಗನಿಗೆ ಟಿಕೆಟ್ ಕೊಡಿ ಎಂದು ಅವರು ಎಂದೂ ಹೇಳಿಲ್ಲ. ನನಗೆ ಯಾರ ಮೇಲು ದ್ವೇಷ ಇಲ್ಲ. ಕೊಂದವರಿಗೆ ಕೊಲೆ ತಪ್ಪಿದ್ದಲ್ಲ 

ಕಾಗೇರಿ ಸಂಧಾನ ವಿಫಲ, ಬಿಜೆಪಿಗೆ ಶೆಟ್ಟರ್ ಗುಡ್‌ಬೈ , ಕಾಂಗ್ರೆಸ್ ಸೇರ್ಪಡೆಗೆ ಡಿಕೆಶಿ ಆಪ್ತನಿಂದ

ಊಟಕ್ಕೆ ವಿಷ ಹಾಕಿದವನಿಗೆ ಅವನಿಗೆ ಬೇರೆಯವರು ವಿಷ ಹಾಕುತ್ತಾರೆ. ಕರ್ಮದ ಫಲಕ್ಕೆ ನಾವು ಬದ್ಧರಾಗಿರಬೇಕು. ಚನ್ನಗಿರಿಯನ್ನು ಜಿಲ್ಲೆಯನ್ನಾಗಿ ಮಾಡಲು ಟೌನ್ ಪ್ಲಾನಿಂಗ್ ಮಾಡಿದ್ದೇವೆ. ಇಡೀ ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಕನಸು ಕಂಡಿದ್ದೇವೆ. ಚನ್ನಗಿರಿ ಜನತೆ ಜಾತಿ ಬೇಧವಿಲ್ಲದೇ ಶಾಂತಿಯುತವಾಗಿ ಬದುಕಬೇಕಿದೆ ಎಂದರು.

ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರೋದು ಪಕ್ಕಾ ಎಂದ ಶಾಮನೂರು ಶಿವಶಂಕರಪ್ಪ!

ಏಪ್ರಿಲ್‌ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಏಪ್ರಿಲ್‌ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.