ಕಾಗೇರಿ ಸಂಧಾನ ವಿಫಲ, ಬಿಜೆಪಿಗೆ ಶೆಟ್ಟರ್ ಗುಡ್‌ಬೈ , ಕಾಂಗ್ರೆಸ್ ಸೇರ್ಪಡೆಗೆ ಡಿಕೆಶಿ ಆಪ್ತನಿಂದ ಹೆಲಿಕಾಫ್ಟರ್ ಬುಕ್!
ಹುಬ್ಬಳ್ಳಿ - ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ಗುಡ್‌ಬೈ ಹೇಳಿದ್ದಾರೆ. ಸ್ವೀಕರ್ ಕಾಗೇರಿ ಬಳಿ ತೆರಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ದಾವಣಗೆರೆ (ಏ.16): ಹುಬ್ಬಳ್ಳಿ - ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ಗುಡ್‌ಬೈ ಹೇಳಿದ್ದಾರೆ. ಶಿರಸಿಯಲ್ಲಿ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿಯಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಜಗದೀಶ್ ಶೆಟ್ಟರ್ ಬರಮಾಡಿಕೊಂಡ ಸ್ಪೀಕರ್ ಕಾಗೇರಿ ಮನವೊಲಿಕೆಗೆ ಪಯತ್ನ ಮಾಡಿದ್ದಾರೆ. ಕಚೇರಿ ಒಳಗಿರುವ ಕೊಠಡಿಯಲ್ಲಿ ರೂಂ ಬಾಗಿಲು ಬಂದ್ ಮಾಡಿ ಸ್ಪೀಕರ್ ಕಾಗೇರಿ- ಶೆಟ್ಟರ್ ಸುಮಾರು 1 ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದರು. ಆದ್ರೆ ತಮ್ಮ ನಿರ್ಧಾರವನ್ನು ಶೆಟ್ಟರ್ ಬದಲಿಸದೇ ರಾಜೀನಾಮೆ ಸಲ್ಲಿಸಿದ್ದು. ಹೀಗಾಗಿ ಕಾಗೇರಿ ರಾಜೀನಾಮೆ ಪತ್ರ ಸ್ವೀಕರಿಸಿದ್ದಾರೆ.
ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರೋದು ಪಕ್ಕಾ ಎಂದ ಶಾಮನೂರು ಶಿವಶಂಕರಪ್ಪ!
ಶೆಟ್ಟರ್ ಸ್ವಾಗತಕ್ಕೆ ಕಾಂಗ್ರೆಸ್ ವೇದಿಕೆ ಸಿದ್ಧ:
ಇತ್ತ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಗೆ ಕೈ ಮುಖಂಡರು ತಯಾರಿ ನಡೆಸುತ್ತಿದ್ದಾರೆ. ಬಿಜೆಪಿಗೆ ಗುಡ್ ಬೈ ಹೇಳಿರುವ ಜಗದೀಶ್ ಶೆಟ್ಟರ್ ಅವರ ಸ್ವಾಗತಕ್ಕೆ ಕಾಂಗ್ರೆಸ್ ವೇದಿಕೆ ಸಿದ್ಧಪಡಿಸಿದೆ. ಶೆಟ್ಟರ್ ರನ್ನು ಕರೆತರಲು ಹುಬ್ಬಳ್ಳಿಯಿಂದ ಎರಡು ಹೆಲಿಕಾಫ್ಟರ್ ವ್ಯವಸ್ಥೆ ಮಾಡಲಾಗಿದೆ. ಡಿಕೆಶಿ ಆಪ್ತ ಯು.ಬಿ.ಶೆಟ್ಟಿ ಹೆಸರಿನಲ್ಲಿ ಹೆಲಿಕಾಫ್ಟರ್ ಬುಕ್ ಮಾಡಲಾಗಿದೆ. ಶಿರಸಿಯಿಂದ ವಾಪಸ್ಸಾದ ನಂತರ ಮದ್ಯಾಹ್ನದ ಬಳಿಕ ಬೆಂಗಳೂರಿಗೆ ಶೆಟ್ಟರ್ ತೆರಳಲಿದ್ದಾರೆ. ಶೆಟ್ಟರ್ ಜೊತೆ ಕಾಂಗ್ರೆಸ್ ನ ಮಾಜಿ ಶಾಸಕರು, ಕೆಲ ನಿಗಮ ಮಂಡಳಿ ಅಧ್ಯಕ್ಷರೂ ಬೆಂಗಳೂರಿಗೆ ಆಗಮಿಸಲಿದ್ದು, ರಾಹುಲ್ ಸಮ್ಮುಖದಲ್ಲಿಯೇ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ ಇದೆ.
ಬಿಜೆಪಿಯಲ್ಲಿ ರಾಜೀನಾಮೆ ಪರ್ವ, ಶಾಸಕ ಸ್ಥಾನಕ್ಕೆ ನೆಹರು ಓಲೇಕಾರ್ ರಾಜೀನಾಮೆ..!
ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.