ಅದಾನಿ ಹಗರಣ ತನಿಖೆ ಏಕಿಲ್ಲ?: ಪ್ರಧಾನಿ ಮೋದಿ ವಿರುದ್ಧ ಮತ್ತೆ ಅದಾನಿ ದಾಳ ಉರುಳಿಸಿದ ರಾಹುಲ್
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೆ ಅದಾನಿ ವಾಗ್ಬಾಣ ಬಿಟ್ಟಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಅದಾನಿ ವಿಷಯದ ಬಗ್ಗೆ ಯಾಕೆ ಯಾವುದೇ ತನಿಖೆ ನಡೆಸುತ್ತಿಲ್ಲ? ಅಷ್ಟೊಂದು ಹೆದರಿಕೆ ಏಕೆ?’ ಎಂದು ಪ್ರಶ್ನಿಸಿದ್ದಾರೆ.
ನವದೆಹಲಿ (ಮಾ.28): ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತೆ ಅದಾನಿ ವಾಗ್ಬಾಣ ಬಿಟ್ಟಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಅದಾನಿ ವಿಷಯದ ಬಗ್ಗೆ ಯಾಕೆ ಯಾವುದೇ ತನಿಖೆ ನಡೆಸುತ್ತಿಲ್ಲ? ಅಷ್ಟೊಂದು ಹೆದರಿಕೆ ಏಕೆ?’ ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಸೋಮವಾರ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ(Rahul gandhi), ‘ಎಲ್‌ಐಸಿ ಬಂಡವಾಳ ಅದಾನಿಗೆ! ಎಸ್‌ಬಿಐ(SBI invest) ಬಂಡವಾಳವೂ ಅದಾನಿಗೆ! ಮತ್ತು ಇದೀಗ ಕಾರ್ಮಿಕರ ಭವಿಷ್ಯ ನಿಧಿ ಮಂಡಳಿಯ ಹಣವೂ ಅದಾನಿ()ಗೆ. ‘ಮೊದಾನಿ’ (ಮೋದಿ+ಅದಾನಿ) ಪ್ರಕರಣ ಬೆಳಕಿಗೆ ಬಂದ ನಂತರವೂ ಸಾರ್ವಜನಿಕರ ಭವಿಷ್ಯ ನಿಧಿ ಮಂಡಳಿಯ ಹಣವನ್ನು ಅದಾನಿ ಕಂಪನಿಯಲ್ಲಿ ಹೂಡಿಕೆ ಮಾಡುತ್ತಿರುವುದೇಕೆ? ಮಿ.ಪ್ರೈಮ್‌ಮಿನಿಸ್ಟರ್, ನೋ ಇನ್ವೆಸ್ಟಿಗೇಷನ್, ನೋ ಆನ್ಸರ್ (ಮಿ.ಪ್ರಧಾನಿಗಳೇ, ತನಿಖೆಯೂ ಇಲ್ಲ, ಯಾವುದೇ ಉತ್ತರವೂ ಇಲ್ಲ)’ ಎಂದು ಮೋದಿ(Narendra Modi) ಅವರನ್ನು ಪ್ರಶ್ನಿಸಿದ್ದಾರೆ.
ರಾಹುಲ್ ಅನರ್ಹತೆ ವಿಚಾರ: ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ಹಾದಿ ಹಿಡಿದ ಕಾಂಗ್ರೆಸ್!
ಸದನದಲ್ಲಿ ಕಪ್ಪು ಬಟ್ಟೆ ಧರಿಸಿ ಕಾಂಂಗ್ರೆಸ್ ಪ್ರತಿಭಟನೆ:
ಮಾ.13ರಂದು ಸಂಸತ್ತಿನ ಬಜೆಟ್ ಅಧಿವೇಶನದ 2ನೇ ಭಾಗ ಆರಂಭವಾದ ದಿನದಿಂದಲೂ ಅದಾನಿ ವಿಷಯ ಮುಂದಿಟ್ಟುಕೊಂಡು ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್ ಸದಸ್ಯರು, ಸೋಮವಾರ ರಾಹುಲ್ ಗಾಂಧಿ ಅವರ ಸದಸ್ಯತ್ವ ಅನರ್ಹಗೊಳಿಸಿದ ವಿಷಯ ಮುಂದಿಟ್ಟು ಭಾರಿ ಪ್ರತಿಭಟನೆ ನಡೆಸಿದರು.
ಸಂಸತ್ತಿನ ಉಭಯ ಸದನಗಳಿಗೂ ಕಪ್ಪುವಸ್ತ್ರ ವಸ್ತ್ರ ಧರಿಸಿ ಆಗಮಿಸಿದ್ದ ಕಾಂಗ್ರೆಸ್(Congress) ಸದಸ್ಯರು ಅದಾನಿ, ರಾಹುಲ್ ಅನರ್ಹತೆ ವಿಷಯ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಜೊತೆಗೆ ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರಾದ ಟಿ.ಎನ್.ಪ್ರತಾಪನ್ (TN Pratapan)ಮತ್ತು ಹೈಬಿ ಈಡೆನ್(Highby eden) ರಾಹುಲ್‌ರನ್ನು ಅನರ್ಹಗೊಳಿಸಿದ ಪತ್ರಗಳನ್ನು ಸ್ಪೀಕರ್ ಆಸನದತ್ತ ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಸದನದ ಬಾವಿಗೆ ನುಗ್ಗಿ ಜೋರಾಗಿ ಗದ್ದಲ ಎಬ್ಬಿಸಿದರು. ಹೀಗಾಗಿ ಉಭಯ ಸದನಗಳ ಕಲಾಪವನ್ನೂ ತಲಾ ಎರಡು ಬಾರಿ ಮುಂದೂಡಿ ಕೊನೆಗೆ ಮಂಗಳವಾರಕ್ಕೆ ಮುಂದೂಡಲಾಯಿತು.
ಈ ನಡುವೆ ರಾಜ್ಯಸಭೆಯಲ್ಲಿ ಹಣಕಾಸು ಮಸೂದೆ ಮತ್ತು ಜಮ್ಮು ಮತ್ತು ಕಾಶ್ಮೀರದ ಬಜೆಟ್‌ನ ಅನ್ನು ಧ್ವನಿ ಮತದಿಂದ ಅಂಗೀಕರಿಸಿ ಲೋಕಸಭೆಗೆ ಮರಳಿಸಲಾಯಿತು.
ಏ.5ರಂದು ಕೋಲಾರಕ್ಕೆ ರಾಹುಲ್ ಗಾಂಧಿ ಭೇಟಿ: ಅನರ್ಹತೆ ಬಗ್ಗೆ ಇಲ್ಲಿಂದಲೇ ಉತ್ತರ
ಗುಜರಾತ್: ರಾಹುಲ್ ಪರ ಪ್ರತಿಭಟಿಸಿದ 16 ಕೈ ಶಾಸಕರ ಅಮಾನತು
ಅಹಮದಾಬಾದ್: ರಾಹುಲ್ ಗಾಂಧಿ(Rahul gandhi) ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ ವಿರುದ್ಧ ಗುಜರಾತ್ ವಿಧಾನಸಭೆ(Gujarat assembly)ಯಲ್ಲಿ ಕಾಂಗ್ರೆಸ್ ಶಾಸಕರು ಕೋಲಾಹಲ ಸೃಷ್ಟಿಸಿದರು. ಹೀಗಾಗಿ 16 ಕಾಂಗ್ರೆಸ್ ಶಾಸಕರನ್ನು ಮಾ.29ರವರೆಗೆ ಸ್ಪೀಕರ್ ಅವರು ಸದನದಿಂದ ಅಮಾನತು ಮಾಡಿದ್ದಾರೆ. ಸೋಮವಾರ ಬಜೆಟ್ ಕಲಾಪದ ವೇಳೆ ಕಾಂಗ್ರೆಸ್ ಶಾಸಕರು ಸಭಾಧ್ಯಕ್ಷರÜ ಪೀಠದ ಮುಂದೆ ಮೋದಿ ವಿರೋಧಿ ಹಾಗೂ ‘ ಮೋದಿ ಅದಾನಿ ಭಾಯಿ ಭಾಯಿ’ ಎಂದು ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ಸಭಾಧ್ಯಕ್ಷರು ಇವರನ್ನು ಆಸೀನರಾಗಿ ಎಂದು ಹೇಳಿದರೂ ಪ್ರತಿಭಟನೆ ಮುಂದುವರಿಸಿದರು. ಈ ವೇಳೆಸಂಸದೀಯ ಸಚಿವ ರಿಷಿಕೇಶ್ ಪಟೇಲ್, ಶಾಸಕರ ಅಮಾನತಿಗೆ ಮನವಿ ಮಾಡಿದರು. ಇದಕ್ಕೆ ಸಭೆಯಲ್ಲಿ ಅನುಮೋದನೆ ದೊರೆತು 17ರಲ್ಲಿ 16 ಶಾಸಕರನ್ನು ಮಾ.29ರವೆಗೂ ಅಮಾನತು ಮಾಡಲಾಗಿದೆ.