ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕಸವನಹಳ್ಳಿ ಗ್ರಾಮದಲ್ಲಿ ಪ್ರಚಾರಕ್ಕೆಂದು ತೆರಳಿದ ಸಂದರ್ಭದಲ್ಲಿ ಪೂರ್ಣಿಮಾ ಅವರಿಗೆ ಮೇಕೆ ಮರಿಯನ್ನ ಗಿಫ್ಟ್‌ ಆಗಿ ನೀಡಿದ ಬಿಜೆಪಿ ಕಾರ್ಯಕರ್ತ ರಾಮಚಂದ್ರ. 

ಚಿತ್ರದುರ್ಗ(ಏ.25):  ಚಿತ್ರದುರ್ಗ ಜಿಲ್ಲೆ ಹಿರಿಯೂರು ವಿಧಾನಸಭೆ ಕ್ಷೇತ್ರದ ಶಾಸಕಿ, ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಅವರಿಗೆ ಕಾರ್ಯಕರ್ತನೊಬ್ಬ ಮೇಕೆ ಮರಿ ನೀಡಿದ್ದಾರೆ. ಹೌದು, ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕಸವನಹಳ್ಳಿ ಗ್ರಾಮದಲ್ಲಿ ಪ್ರಚಾರಕ್ಕೆಂದು ತೆರಳಿದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತ ರಾಮಚಂದ್ರ ಎಂಬುವರು ಮೇಕೆ ಮರಿಯನ್ನ ಗಿಫ್ಟ್‌ ಆಗಿ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಿತ್ರದುರ್ಗ ಜಿಲ್ಲೆ ಹಿರಿಯೂರು ವಿಧಾನಸಭೆ ಕ್ಷೇತ್ರದ ಶಾಸಕಿ, ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಅವರಿಗೆ ಹಾಗೂ ಮೇಕೆ ಮರಿಗೂ ಬಿಜೆಪಿ ಶಾಲು ಹಾಕಿ ಸನ್ಮಾಸಿದ್ದಾರೆ ಬಿಜೆಪಿ ಕಾರ್ಯಕರ್ತರು.

KARNATAKA ELECTION 2023: ರಘುಮೂರ್ತಿ ಆಯ್ಕೆ ಮಾಡಿ ಅಭಿವೃದ್ಧಿಗೆ ಕೈಜೋಡಿಸಿ: ಕೆ ವೀರಭದ್ರಪ್ಪ

ಈ ವೇಳೆ ಮಾತನಾಡಿದ ಪೂರ್ಣಿಮಾ ಅವರು, ಪ್ರೀತಿಯಿಂದ ಕಾರ್ಯಕರ್ತರು ಅನೇಕ ಕಡೆ ಕುರಿ-ಮೇಕೆಗಳನ್ನ ನೀಡಿದ್ದಾರೆ. ಉಡುಗೊರೆ ಬಂದ ಮೇಕೆ ಮರಿಯನ್ನ ನಮ್ಮ ಫಾರಂನಲ್ಲಿ ಸಾಕುತ್ತೇನೆ ಅಂತ ತಿಳಿಸಿದ್ದಾರೆ. ಮೇಕೆ ಗಿಫ್ಟ್ ಪಡೆದ ವಿಚಾರವನ್ನ ಸಾಮಾಜಿಕ ಜಾಲತಾಣದಲ್ಲಿ ಪೂರ್ಣಿಮಾ ಅವರು ಶೇರ್ ಮಾಡಿಕೊಂಡಿದ್ದಾರೆ.