Karnataka election 2023: ರಘುಮೂರ್ತಿ ಆಯ್ಕೆ ಮಾಡಿ ಅಭಿವೃದ್ಧಿಗೆ ಕೈಜೋಡಿಸಿ: ಕೆ ವೀರಭದ್ರಪ್ಪ

ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕ ಟಿ.ರಘುಮೂರ್ತಿ ಅನುಷ್ಠಾನಗೊಳಿಸಿದ ವಿವಿಧ ಕಾಮಗಾರಿಗಳು ಜನರ ಮನದಲ್ಲಿ ಅಚ್ಚಳಿಯದೇ ಉಳಿದಿವೆ. ವಿಶೇಷವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚು ಬದಲಾವಣೆಯನ್ನು ತಂದ ಕೀರ್ತಿ ರಘುಮೂರ್ತಿಯವರದ್ದು. ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜು, ಜಿಟಿಟಿಸಿ ಸ್ಥಾಪನೆ ಅವರ ಹೆಗ್ಗಳಿಕೆ. ಆದ್ದರಿಂದ ಈ ಬಾರಿಯೂ ಈ ಕ್ಷೇತ್ರದ ಮತದಾರರು ಶಾಸಕರನ್ನೇ ಆಯ್ಕೆ ಮಾಡುವ ಮೂಲಕ ಅಭಿವೃದ್ಧಿ ಪರ ಚಿಂತನೆಗೆ ಕೈಜೋಡಿಸಬೇಕೆಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ, ನಗರಸಭಾ ಸದಸ್ಯ ಕೆ.ವೀರಭದ್ರಪ್ಪ ತಿಳಿಸಿದರು.

Choose Raghumurthy and join hands for development says veerabhadrappa at challakere rav

ಚಳ್ಳಕೆರೆ (ಏ.22) : ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕ ಟಿ.ರಘುಮೂರ್ತಿ ಅನುಷ್ಠಾನಗೊಳಿಸಿದ ವಿವಿಧ ಕಾಮಗಾರಿಗಳು ಜನರ ಮನದಲ್ಲಿ ಅಚ್ಚಳಿಯದೇ ಉಳಿದಿವೆ. ವಿಶೇಷವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚು ಬದಲಾವಣೆಯನ್ನು ತಂದ ಕೀರ್ತಿ ರಘುಮೂರ್ತಿಯವರದ್ದು. ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜು, ಜಿಟಿಟಿಸಿ ಸ್ಥಾಪನೆ ಅವರ ಹೆಗ್ಗಳಿಕೆ. ಆದ್ದರಿಂದ ಈ ಬಾರಿಯೂ ಈ ಕ್ಷೇತ್ರದ ಮತದಾರರು ಶಾಸಕರನ್ನೇ ಆಯ್ಕೆ ಮಾಡುವ ಮೂಲಕ ಅಭಿವೃದ್ಧಿ ಪರ ಚಿಂತನೆಗೆ ಕೈಜೋಡಿಸಬೇಕೆಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ, ನಗರಸಭಾ ಸದಸ್ಯ ಕೆ.ವೀರಭದ್ರಪ್ಪ(K Veerabhadrappa) ತಿಳಿಸಿದರು.

ಅವರು, ಶುಕ್ರವಾರ ಸಂಗೊಳ್ಳಿ ರಾಯಣ್ಣ ನಗರ ವ್ಯಾಪ್ತಿಯ 21, 22ನೇ ವಾರ್ಡ್‌ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ ಪಕ್ಷದ(Congress party) ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು. ಕಳೆದ ಸುಮಾರು 10 ದಿನಗಳಿಂದ ನಗರ ಮಟ್ಟದಲ್ಲಿ ಪಕ್ಷದ ಮತಯಾಚನೆ ಕಾರ್ಯ ಚುರುಕಿನಿಂದ ನಡೆಯುತ್ತಿದೆ. ಈಗಾಗಲೇ 31 ವಾರ್ಡ್‌ಗಳ ವ್ಯಾಪ್ತಿಯಲ್ಲೂ ಮನೆ, ಮನೆಗೂ ಭೇಟಿ ನೀಡಿ ಮತಯಾಚನೆ ಮಾಡಲಾಗಿದೆ ಎಂದರು.

'ಅದ್ಯಾವನಿಗೆ ಕಂಪ್ಲೆಂಟ್ ಕೊಡ್ತೀರ ಕೊಡ್ರಿ ನೋಡೋಣ'; ಶಾಸಕ ರಘುಮೂರ್ತಿಗೆ ಅವಾಜ್ ಹಾಕಿದ ತಹಸೀಲ್ದಾರ್!

ಶಾಸಕ ಟಿ.ರಘುಮೂರ್ತಿ(Raghumurthy MLA) ಮಾತನಾಡಿ, ಈ ಕ್ಷೇತ್ರದ ಶಾಸಕನಾಗಿ ನಾನು ಮಾಡಿದ ಕಾರ್ಯಕ್ಕೆ ನಿರೀಕ್ಷೆಗೂ ಮೀರಿದ ಅಭಿಮಾನ ವ್ಯಕ್ತವಾಗುತ್ತಿದೆ. ಇಲ್ಲೇ ಹೋದರೂ ಮತದಾರರು ನನ್ನ ಅಭಿವೃದ್ಧಿ ಕಾರ್ಯಗಳ ಬಗ್ಗೆಯೇ ಸಂತೋಷದಿಂದ ಮಾತನಾಡುತ್ತಾರೆ. ಕಳೆದ 10 ವರ್ಷಗಳ ಸೇವೆಯಲ್ಲಿ ಕ್ಷೇತ್ರದ ಜನರಿಗೆ ಉತ್ತಮ ಸೇವೆ ಮಾಡಿದ್ದೇನೆಂಬ ಆತ್ಮತೃಪ್ತಿ ನನಗಿದೆ ಎಂದರು.

ಪರಶುರಾಮಪುರದಲ್ಲಿ ಸೇರ್ಪಡೆ ಕಾರ್ಯಕ್ರಮ:

ಪರಶುರಾಮಪುರ ಹೋಬಳಿಯ ಬಲಿಜ ಸಮಾಜದ ಹಲವಾರು ಪ್ರಮುಖ ಮುಖಂಡರು ಶುಕ್ರವಾರ ಶಾಸಕ ಟಿ.ರಘುಮೂರ್ತಿಯವರ ಸಮ್ಮುಖದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು. ಈ ಹಿಂದೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಆಯ್ಕೆಯಾದ ಯಾವ ಶಾ ಸಕರು ಸಕರಾತ್ಮಕವಾಗಿ ಸ್ಪಂದಿಸಿಲ್ಲ. ಆದರೆ, ರಘುಮೂರ್ತಿಯವರ ನಿರಂತರ ಪರಿಶ್ರಮದಿಂದ ಇಂದು ಹಲವಾರು ಕಡೆ ಚೆಕ್‌ ಡ್ಯಾಂ ನಿರ್ಮಾಣಗೊಂಡು ಅಂತರ್ಜಲ ಹೆಚ್ಚಿದೆ ಎಂದು ಬಲಿಜ ಸಮಾಜದ ಮುಖಂಡ ಶ್ರೀನಿವಾಸ್‌ ತಿಳಿಸಿದರು.

 ಚಳ್ಳಕೆರೆಯಲ್ಲಿ ವಿದ್ಯಾರ್ಥಿಗಳ ಅಪಾಯಕಾರಿ ಪ್ರಯಾಣ; ಜಿಲ್ಲೆಗೆ ಸಚಿವರಿದ್ದೂ ಏನು ಪ್ರಯೋಜನ?

ಈ ಸಂದರ್ಭದಲ್ಲಿ ಬಲಿಜ ಸಮಾಜದ ಮುಖಂಡರಾದ ಸತೀಶ್‌, ಸಂದೀಪ್‌, ರಾಕೇಶ್‌, ಜಯಣ್ಣ, ರವಿ, ರಂಗನಾಥ, ತಿಪ್ಪೇಸ್ವಾಮಿ ಮುಂತಾದವರು ಸೇರ್ಪಡೆಯಾದರು ಪರಶುರಾಮಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಿ.ಟಿ.ಶಶಿಧರ, ಹಿರಿಯ ಮುಖಂಡ ಬಿ.ವಿ.ಸಿರಿಯಣ್ಣ, ಚನ್ನಕೇಶವ, ಬಲಿಜ ಸಂಘದ ಅಧ್ಯಕ್ಷ ಶ್ರೀನಿವಾಸ್‌, ನಗರಸಭಾ ಸದಸ್ಯರಾದ ಸಾವಿತ್ರಮ್ಮ, ರಾಘವೇಂದ್ರ, ರಮೇಶ್‌ಗೌಡ ಮುಂತಾದವರು ಉಪಸ್ಥಿತರಿದ್ದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios