ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ: ಶಾಸಕ ಬಾಲಕೃಷ್ಣ ಜೊತೆ ಸಂಸದ ಸುರೇಶ್ ಚರ್ಚೆ
ಮಾಗಡಿ ತಾಲೂಕು ಅನೇಕ ವೈಶಿಷ್ಟ್ಯಗಳಿಂದ ಕೂಡಿದ ತಾಲೂಕಾಗಿರುವುದರಿಂದ ಇದು ಸಮಗ್ರ ರೀತಿಯಲ್ಲಿ ಅಭಿವೃದ್ಧಿ ಆಗಲೇಬೇಕು. ಅದರಲ್ಲೂ ಪ್ರವಾಸಿ ತಾಣವಾಗಿ ವ್ಯವಸ್ಥಿತ ಸೌಲಭ್ಯಗಳನ್ನು ಒದಗಿಸಿ ಕೊಡಬೇಕಾಗಿದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.
ಕುದೂರು (ಜೂ.04): ಮಾಗಡಿ ತಾಲೂಕು ಅನೇಕ ವೈಶಿಷ್ಟ್ಯಗಳಿಂದ ಕೂಡಿದ ತಾಲೂಕಾಗಿರುವುದರಿಂದ ಇದು ಸಮಗ್ರ ರೀತಿಯಲ್ಲಿ ಅಭಿವೃದ್ಧಿ ಆಗಲೇಬೇಕು. ಅದರಲ್ಲೂ ಪ್ರವಾಸಿ ತಾಣವಾಗಿ ವ್ಯವಸ್ಥಿತ ಸೌಲಭ್ಯಗಳನ್ನು ಒದಗಿಸಿ ಕೊಡಬೇಕಾಗಿದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು. ಮಾಗಡಿ ತಾಲೂಕಿನ ಪ್ರವಾಸಿ ಸ್ಥಳಗಳ ಅಭಿವೃದ್ಧಿ ಕುರಿತು ಪ್ರವಾಸೋದ್ಯಮ ಇಲಾಖೆ ಸಚಿವರಾದ ಎಚ್.ಕೆ.ಪಾಟೀಲ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ ವಿಷಯಗಳನ್ನು ಬಾಲಕೃಷ್ಣ ಅವರು ವಿವರಿಸಿದರು.
ಕೆಂಪೇಗೌಡರ ಜನ್ಮಸ್ಥಳ ಕೆಂಪಾಪುರ ಮತ್ತು ಅವರು ಆಳ್ವಿಕೆ ಮಾಡಿದ ಸಾವನದುರ್ಗ, ಭೈರವನದುರ್ಗ ಬೆಟ್ಟಗಳನ್ನು ಉಳಿಸುವುದು. ಅಲ್ಲಿರುವ ಕುರುಹುಗಳನ್ನು ರಕ್ಷಿಸಿ ಮುಂದಿನ ತಲೆಮಾರಿಗೆ ಹೆಮ್ಮೆ ಬರುವಂತೆ ಮಾಡುವುದು, ಸಿದ್ದಗಂಗಾ ಶ್ರೀಗಳ ಜನ್ಮಸ್ಥಳ ವೀರಾಪುರ, ಆದಿಚುಂಚನಗಿರಿ ಶ್ರೀಗಳ ಜನ್ಮಸ್ಥಳ ಬಾನಂದೂರು ಗ್ರಾಮಗಳನ್ನು ಜಗತ್ತೇ ವಿಸ್ಮಯದಿಂದ ನೋಡುವಂತೆ ರೂಪಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ತಾಲೂಕಿನಲ್ಲಿ ಹುಟ್ಟಿಇದರ ಕೀರ್ತಿಯನ್ನು ಜಗತ್ತಿನಾದ್ಯಂತ ಹರಿಸಿದ ಮಹಾನ್ ಚೇತನಗಳ ಜನ್ಮಸ್ಥಳಗಳ ಜೀರ್ಣೋದ್ಧಾರಕ್ಕೂ ಶ್ರಮಿಸುತ್ತಿದ್ದೇವೆ. ಅದಕ್ಕಾಗಿ ನೀಲನಕ್ಷೆಯೊಂದನ್ನು ಸಿದ್ದಪಡಿಸಿ ಸಚಿವರನ್ನು ಭೇಟಿ ಮಾಡಿದ್ದೇವೆ ಎಂದು ಬಾಲಕೃಷ್ಣ ಹೇಳಿದರು.
ಆರೋಗ್ಯ, ಶಿಕ್ಷಣದ ವಲಸೆ ತಪ್ಪಿಸುವುದು ನನ್ನ ಗುರಿ: ಡಿ.ಕೆ.ಶಿವಕುಮಾರ್
ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಉತ್ಸಾಹಿ ಶಾಸಕರಿದ್ದರೆ ಸಚಿವರಾಗಿ ನನಗೂ ಕೆಲಸ ಮಾಡಲು ಖುಷಿ ಎನಿಸುತ್ತದೆ. ಗೆದ್ದ ಮೇಲೆ ತಾಲೂಕಿನ ಜನರಿಗೆ ಏನಾದರೂ ಕೊಡುಗೆ ನೀಡಿ ತಾಲೂಕನ್ನು ಮಾದರಿ ಮಾಡಬೇಕೆಂದು ಹಂಬಲಿಸುತ್ತಿರುವ ಶಾಸಕ ಬಾಲಕೃಷ್ಣರವರಿಗೆ ನನ್ನ ಸಂಪೂರ್ಣ ಸಹಕಾರವಿರುತ್ತದೆ. ಎಲ್ಲಾ ರೀತಿಯಲ್ಲೂ ಸರ್ಕಾರದಿಂದ ಸಹಾಯ ಮಾಡಿ ಮಾಗಡಿಯನ್ನು ರಾಜ್ಯದ ಆಕರ್ಷಣೀಯ ಪ್ರವಾಸಿ ತಾಣವನ್ನಾಗಿಸುವತ್ತ ತೆಗೆದುಕೊಂಡು ಹೋಗುತ್ತೇವೆ ಎಂದು ತಿಳಿಸಿದರು. ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಜನಾಶೀರ್ವಾದ ನಮ್ಮಗಳ ಮೇಲೆ ಸಂಪೂರ್ಣವಾಗಿದೆ. ಅದಕ್ಕಾಗಿ ಹೇಮಾವತಿ ನದಿ ನೀರು ತಾಲೂಕಿಗೆ ತರುವ ಕೆಲಸಕ್ಕೂ ಚಾಲನೆ ನೀಡುತ್ತಿದ್ದೇವೆ ಎಂದು ಹೇಳಿದರು.
ಗ್ಯಾರಂಟಿ ಹೇಳಿಕೆ ಎಚ್ಡಿಡಿಗೆ ಶೋಭೆ ತರಲ್ಲ: ಕಾಂಗ್ರೆಸ್ ಪಕ್ಷ ಘೋಷಿಸಿರುವ ಗ್ಯಾರಂಟಿಗಳ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಗಳು ಅವರ ಘನತೆಗೆ ಶೋಭೆ ತರುವುದಿಲ್ಲ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಕಿಡಿಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಅನುಷ್ಠಾನ ಕುರಿತು ಸಾಧಕ ಬಾಧಕಗಳ ಚರ್ಚೆ ನಡೆದು ನಿಯಮಗಳನ್ನು ರೂಪಿಸಿ ಅರ್ಹ ಫಲಾನುಭವಿಗಳಿಗೆ ತಲುಪಿಸುತ್ತೇವೆ. ಇದಕ್ಕೆ ಕಾಲಾವಕಾಶ ಬೇಕಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುವುದು ಬೇಡ ಎಂದು ಟಾಂಗ್ ನೀಡಿದರು.
ಕಳೆದ ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿ ಆದ 24 ಗಂಟೆಯೊಳಗೆ ಕಮರ್ಷಿಯಲ್ ಬ್ಯಾಂಕ್, ಕೋ ಆಪರೇಟಿವ್ ಬ್ಯಾಂಕ್‌ನಲ್ಲಿನ ರೈತರ ಸಂಪೂರ್ಣ ಸಾಲ ಮನ್ನಾ, ವಿಧವೆಯರು, ವೃದ್ಧರಿಗೆ ತಲಾ 6 ಸಾವಿರ ಮಾಸಾಶನ ನೀಡುವುದಾಗಿ ಘೋಷಣೆ ಮಾಡಿದ್ದರು. ಅವರು ಯಾವ ರೀತಿ ಮುಖ್ಯಮಂತ್ರಿ ಪದವಿ ಅಲಂಕರಿಸಿದರೆಂದು ಕೇಳುವುದಿಲ್ಲ. ಮುಖ್ಯಮಂತ್ರಿ ಆದ 24 ಗಂಟೆಯೊಳಗೆ ಕೊಟ್ಟಭರವಸೆ ಈಡೇರಿಸಲಿಲ್ಲ. ಸಿಎಂ ಆಗಿ ಕೆಲಸ ಮಾಡಿದ ಅನುಭವ ಹೊಂದಿರುವ ಕುಮಾರಸ್ವಾಮಿ ಜನರನ್ನು ವಿದ್ಯುತ್ ಬಿಲ್ ಕಟ್ಟಬೇಡಿ ಎಂದು ಉತ್ತೇಜಿಸುವುದರಲ್ಲಿ ಅರ್ಥವಿಲ್ಲ ಎಂದು ಕಿಡಿಕಾರಿದರು. ನಾವು ಕೊಟ್ಟಿರುವ ಎಲ್ಲಾ ಭರವಸೆ ಈಡೇರಿಸುತ್ತೇವೆ.
ಮಕ್ಕಳ ದಾಖಲಾತಿಗೆ ವಾಮಮಾರ್ಗ ಹಿಡಿದ ಪೋಷಕರು: ಎಲ್‌ಕೆಜಿಗೆ 4 ವರ್ಷ, ಯುಕೆಜಿಗೆ 5 ವರ್ಷ
ಅದಕ್ಕೆ ಸ್ವಲ್ಪ ಕಾಲಾವಕಾಶ ಬೇಕು ಅಂದಿದ್ದೇವೆ. ನಮ್ಮಲ್ಲಿ ಸಮರ್ಥ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಇತರರಿದ್ದರು. ಮಂತ್ರಿಮಂಡಲದಲ್ಲಿ ಅನುಭವಿ ಸಚಿವರಿದ್ದಾರೆ. ಗ್ಯಾರಂಟಿಗಳ ಸಾಧಕ - ಬಾಧಕ ಚರ್ಚೆ ಮಾಡಿ ಅದು ದುರುಪಯೋಗವಾಗದೆ ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಆದ್ದರಿಂದ ನಿಯಮಗಳನ್ನು ರೂಪಿಸಲಾಗುತ್ತಿದೆ. ಆನಂತರ ಅದನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಹೇಳಿದರು. ಜನರ ಆಶೀರ್ವಾದ ಸಿಕ್ಕಿದ್ದರಿಂದಲೇ ಶಾಸಕನಾಗಿದ್ದೇನೆ. ಅದನ್ನು ಸದುಪಯೋಗ ಪಡಿಸಿಕೊಳ್ಳುತ್ತೇನೆ. ಸಚಿವರನ್ನಾಗಿ ಮಾಡಲಿಲ್ಲ ಅಂತ ಜನರು ಮಾಡಿರುವ ಆಶೀರ್ವಾದವನ್ನು ವ್ಯರ್ಥ ಮಾಡಲು ಆಗುವುದಿಲ್ಲ. ಅದನ್ನು ಸದುಪಯೋಗ ಪಡಿಸಿಕೊಂಡು ಮೊದಲು ಜನರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ನನಗೇನು ಸಿಗಲಿಲ್ಲ ಅಂತ ಜನರಿಗೆ ಮೋಸ ಮಾಡಲು ಆಗುವುದಿಲ್ಲ. ಅವರಿಗೆ ನ್ಯಾಯ ಒದಗಿಸುತ್ತೇನೆ. ಸಮಯ ಸಂದರ್ಭ ಬಂದಾಗ ಹೈಕಮಾಂಡ್ ಆಶೀರ್ವಾದ ಮಾಡುತ್ತಾರೆಂಬ ಆಶಾಭಾವನೆ ಇದೆ ಎಂದು ಹೇಳಿದರು.