ಖಾತಾ, ಆರ್‌ಟಿಸಿ ಬದಲಾವಣೆ ಅರ್ಜಿ 2 ತಿಂಗಳಿನಲ್ಲಿ ಇತ್ಯರ್ಥ

  • ಖಾತಾ, ಆರ್‌ಟಿಸಿ ಬದಲಾವಣೆ ಅರ್ಜಿ 2 ತಿಂಗಳಿನಲ್ಲಿ ಇತ್ಯರ್ಥ
  • ವಿವಾದಿತವಾಗಿದ್ದರೆ 3 ತಿಂಗಳ ಕಾಲಮಿತಿ: ಅಶೋಕ್‌
  • ದರಖಾಸ್ತು ಪೋಡಿ ಅರ್ಜಿ ವಿಲೇಗೆ ಕ್ರಮ
Account RTC change application settled in 2 months says r ashok rav

ವಿಧಾನ ಪರಿಷತ್‌ (ಸೆ.15) : ಕಂದಾಯ ಇಲಾಖೆಗೆ ಸಂಬಂಧಿಸಿದ ವಿವಿಧ ಅರ್ಜಿಗಳನ್ನು ಇತ್ಯರ್ಥಪಡಿಸಲು ಕಾಲಮಿತಿ ಹಾಗೂ ತಿಂಗಳಿಗೆ ಇಂತಿಷ್ಟುಸಂಖ್ಯೆಯ ವಿವಾದದಲ್ಲಿರುವ ಪ್ರಕರಣಗಳ ವಿಚಾರಣೆ ಮಾಡಬೇಕೆಂದು ಎಲ್ಲ ಹಂತದ ಅರೆನ್ಯಾಯಿಕ ನ್ಯಾಯಾಲಯಗಳಿಗೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದ್ದಾರೆ.

ರಾಜಸ್ಥಾನ ಸಿಎಂ-ಸಚಿನ್‌ ಪೈಲಟ್‌ ವೈಷಮ್ಯ ಮತ್ತೆ ಬಯಲು, ಗೆಹ್ಲೋಟ್ ಆಪ್ತ ಸಚಿವನ ಮೇಲೆ ಶೂ ಎಸೆತ!

ಜೆಡಿಎಸ್‌ ಸದಸ್ಯ ಸಿ.ಎನ್‌. ಮಂಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮ್ಯುಟೇಷನ್‌, ಖಾತಾ ಮತ್ತು ಆರ್‌ಟಿಸಿ ಬದಲಾವಣೆ ಅರ್ಜಿಗಳನ್ನು ಭೂಮಿ ತಂತ್ರಾಂಶದ ಮೂಲಕ 60 ದಿನದೊಳಗೆ, ವಿವಾದಿತ ಪ್ರಕರಣವಾಗಿದ್ದಲ್ಲಿ ಮೂರು ತಿಂಗಳಲ್ಲಿ ಇತ್ಯರ್ಥಪಡಿಸಲು ತಹಶೀಲ್ದಾರ್‌ಗೆ ಸೂಚಿಸಲಾಗಿದೆ. ಅದೇ ರೀತಿ ಉಪ ವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿ ಹಂತದ ಪ್ರಕರಣಗಳನ್ನು 6 ತಿಂಗಳೊಳಗಾಗಿ ಇತ್ಯರ್ಥ ಪಡಿಸಲು ಆದೇಶಿಸಲಾಗಿದೆ. ಜಿಲ್ಲಾಧಿಕಾರಿಗೆ ತಿಂಗಳಿಗೆ 75 ಪ್ರಕರಣ, ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ಗೆ 100 ಪ್ರಕರಣದ ವಿಚಾರಣೆ ನಡೆಸಿ ತ್ವರಿತವಾಗಿ ಇತ್ಯರ್ಥ ಮಾಡುವಂತೆ ಸೂಚಿಸಲಾಗಿದೆ. ಅಲ್ಲದೇ ಅಪರ ಜಿಲ್ಲಾಧಿಕಾರಿಗಳಿಗೂ ಪ್ರಕರಣಗಳ ವಿಚಾರಣೆಯ ಅಧಿಕಾರ ನೀಡಲಾಗಿದೆ ಎಂದರು.

ತಹಶೀಲ್ದಾರ್‌ಗೆ ಅಧಿಕಾರ:

ದಾಖಲೆಗಳಲ್ಲಿ ಆಗಿರುವ ಸಣ್ಣಪುಟ್ಟತಪ್ಪುಗಳ ತಿದ್ದುಪಡಿಗೆ ತಿಂಗಳು, ವರ್ಷಗಟ್ಟಲೆ ಅಲೆದಾಡುವುದನ್ನು ತಪ್ಪಿಸಲು ಕೆಳಹಂತದ ಅಧಿಕಾರಿಗಳಿಗೆ ಅಧಿಕಾರ ನೀಡಿದರೆ ಕಷ್ಟವಾಗುತ್ತದೆ. ಹಾಗಾಗಿ ಇಂತಹ ತಪ್ಪುಗಳ ತಿದ್ದುಪಡಿ ಮಾಡುವ ಅಧಿಕಾರವನ್ನು ತಹಶೀಲ್ದಾರ್‌ಗೆ ನೀಡುವ ಉದ್ದೇಶ ಹೊಂದಲಾಗಿದೆ ಎಂದು ಸಚಿವರು ತಿಳಿಸಿದರು.

ದರಖಾಸ್ತು ಪೋಡಿ ಅರ್ಜಿ ವಿಲೇಗೆ ಕ್ರಮ

ದರಖಾಸ್ತು (ಸರ್ಕಾರದಿಂದ ಮಂಜೂರಾದ) ಭೂಮಿಯ ಪೋಡಿ ಮಾಡದೆ ಇರುವ ಪ್ರಕರಣಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಲು 3000 ಭೂ ಮಾಪಕರ ನೇಮಕಾತಿ, ನಿಯಮಿತವಾಗಿ ಕಂದಾಯ ಅದಾಲತ್‌, ಹೆಚ್ಚಿನ ಭೂ ಮಾಪಕರ ನಿಯೋಜನೆ ಸೇರಿದಂತೆ ಹಲವಾರು ಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದರು.

ಬಿಜೆಪಿಯ ಪಿ.ಎಂ. ಮುನಿರಾಜುಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪೋಡಿ ಪ್ರಕರಣ ವಿಲೇವಾರಿಗೆ ಕಂದಾಯ ಇಲಾಖೆಯಿಂದ ನಿಯಮಿತವಾಗಿ ಪಹಣಿ ತಿದ್ದುಪಡಿ ಕುರಿತು ಕಂದಾಯ ಅದಾಲತ್‌ ನಡೆಸಲಾಗುತ್ತಿದೆ. ನಮೂನೆ 1 ಅನ್ನು ಭರ್ತಿ ಮಾಡಲು ಅಗತ್ಯ ಸೂಚನೆ ಮತ್ತು ಮಾರ್ಗಸೂಚಿ ನೀಡಲಾಗಿದೆ. ಪ್ರಕರಣಗಳ ತ್ವರಿತ ವಿಲೇವಾರಿಗೆ ಹೆಚ್ಚಿನ ಭೂ ಮಾಪಕರನ್ನು ನಿಯೋಜಿಸಲಾಗುತ್ತಿದೆ. ಭೂ ಮಾಪಕರನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಿ 841 ಜನರಿಗೆ ಪರವಾನಗಿ ನೀಡಿ ವಿವಿಧ ತಾಲ್ಲೂಕುಗಳಿಗೆ ನಿಯೋಜಿಸಲಾಗಿದೆ ಎಂದರು.

ತಾಂಡಾ, ಗೊಲ್ಲರಹಟ್ಟಿಯ 50 ಸಾವಿರ ಜನರಿಗೆ ಹಕ್ಕು ಪತ್ರ:

ಸರ್ಕಾರದ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಕಂದಾಯ ಗ್ರಾಮಗಳಾಗಿ ಘೋಷಿಸಲಾಗಿರುವ ತಾಂಡಾ, ಗೊಲ್ಲರಹಟ್ಟಿ, ಸೋಲಿಗ ಸಮುದಾಯದ 50 ಸಾವಿರ ಜನರಿಗೆ ಹಕ್ಕುಪತ್ರ ಸೇರಿದಂತೆ ಎಲ್ಲ ದಾಖಲೆ ನೀಡಲು ಉದ್ದೇಶಿಸಲಾಗಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದರು.

ಆನ್‌ಲೈನ್‌ ಆಸ್ತಿ ನೋಂದಣಿಗಾಗಿ ನ.1ರಿಂದ ಕಾವೇರಿ-2 ತಂತ್ರಾಂಶ: ಸಚಿವ ಅಶೋಕ್‌

ಬಿಜೆಪಿಯ ಶಶೀಲ್‌ ಜಿ. ನಮೋಶಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ತಾಂಡಾ, ಗೊಲ್ಲರಹಟ್ಟಿಹೆಸರಿನಲ್ಲಿ ಇರುವ ಈ ಸಮುದಾಯ ಹಲವಾರು ವರ್ಷಗಳಿಂದ ವಾಸಿಸುತ್ತಿದ್ದರೂ ಸರ್ಕಾರದ ಸೌಲಭ್ಯದಿಂದ ವಂಚಿತವಾಗಿದೆ. ಸಮಾಜದ ಮುಖ್ಯವಾಹಿನಿಗೆ ಬರದೇ ತಮ್ಮದೇ ಆದ ಜೀವನ ಶೈಲಿಯಲ್ಲಿ ಆ ಜನರು ಜೀವನ ನಡೆಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಅವರಿಗೆ ಇಂತಹ ಕಡೆ ವಾಸಿಸುವ ಸ್ಥಳಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಿ, ಗೆಜೆಟ್‌ ಹೊರಡಿಸಿದರೆ ಅವರಿಗೆ ವಸತಿ, ಕೊಟ್ಟಿಗೆ, ಹಿತ್ತಲು ಇತ್ಯಾದಿಗಳಿಗೆ ಮಂಜೂರಾತಿ ಹಕ್ಕು ಪತ್ರ ಸಿಗಲಿದೆ. ಅಗತ್ಯವಿರುವ ಮೂಲಭೂತ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತದೆ. ಈ ಕಾರಣದಿಂದ ತಾವು ಕಂದಾಯ ಸಚಿವರಾದ ನಂತರ ದೊಡ್ಡ ಸಂಖ್ಯೆಯಲ್ಲಿ ಕಂದಾಯ ಗ್ರಾಮಗಳೆಂದು ಘೋಷಿಸಲಾಗಿದೆ ಎಂದರು

Latest Videos
Follow Us:
Download App:
  • android
  • ios