ಗೃಹಲಕ್ಷ್ಮೀ ಯೋಜನೆಗಾಗಿ ಆಧಾರ್ ಲಿಂಕ್‌ಗೆ ಮುಗಿಬಿದ್ದ ಮಹಿಳೆಯರು
ಕಾಂಗ್ರೆಸ್‌ನ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಪ್ರಯೋಜನ ಪಡೆಯಲು ಮೇ 31ರೊಳಗೆ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಜೋಡಣೆ ಮಾಡಬೇಕು ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಂದ ಸುದ್ದಿ ನಂಬಿ ಮಹಿಳೆಯರು ನಗರದ ಸೈಬರ್ ಸೆಂಟರ್‌ಗಳ ಮುಂದೆ ಕ್ಯೂ ನಿಂತ ಘಟನೆ ನಡೆದಿದೆ.
ಕೆಜಿಎಫ್ (ಮೇ.27): ಕಾಂಗ್ರೆಸ್‌ನ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಪ್ರಯೋಜನ ಪಡೆಯಲು ಮೇ 31ರೊಳಗೆ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಜೋಡಣೆ ಮಾಡಬೇಕು ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಂದ ಸುದ್ದಿ ನಂಬಿ ಮಹಿಳೆಯರು ನಗರದ ಸೈಬರ್ ಸೆಂಟರ್‌ಗಳ ಮುಂದೆ ಕ್ಯೂ ನಿಂತ ಘಟನೆ ನಡೆದಿದೆ. ಈ ಅವಕಾಶವನ್ನೇ ದುರುಪಯೋಗಪಡಿಸಿಕೊಂಡ ಸೈಬರ್ ಸೆಂಟರ್‌ನ ಮಾಲೀಕರು, ಆಧಾರ್ ಮತ್ತು ಪಡಿತರ ಚೀಟಿ ಜೋಡಣೆಗೆ 250 ರಿಂದ 300 ರು.ಗಳನ್ನು ವಸೂಲಿ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ತಹಸೀಲ್ದಾರ್ ಎಚ್.ಶ್ರೀನಿವಾಸ್ ಅವರು ರಾಬರ್ಚ್‌ಸನ್‌ಪೇಟೆಯ ಇಂಟರ್ ನ್ಯಾಷನಲ್ ಆನ್‌ಲೈನ್ ಹಾಗೂ ಜೆ.ಪಿ.ನೆಟ್ ವರ್ಕ್ಸ್‌ನ ಮಾಲೀಕರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರ ವಿರುದ್ಧ ರಾಬರ್ಚ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ವೇಳೆ, ಇಂತಹ ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ. ಸರ್ಕಾರ ಈ ಬಗ್ಗೆ ಯಾವುದೇ ಆದೇಶ ಹೊರಡಿಸಿಲ್ಲ ಎಂದು ತಹಸೀಲ್ದಾರ್ ಅವರು ಸ್ಪಷ್ಟನೆ ನೀಡಿದ್ದಾರೆ.
ಕೂಪನ್‌ಗಳ ಹಂಚಿ 50 ಕಡೆ ಕಾಂಗ್ರೆಸ್ ಗೆಲುವು, ನಿಖಿಲ್ ಸೋಲಿಗೂ ಇದೇ ಕಾರಣ: ಎಚ್‌ಡಿಕೆ
ವದಂತಿಗೆ ಕಿವಿಗೊಡಬೇಡಿ: ಸಾಮಾಜಿಕ ಜಾಲತಾಣಗಳಲ್ಲಿ ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆಯ ಹೆಸರಿನಲ್ಲಿ ಕೆಜಿಎಫ್ ಸೈಬರ್ ಸೆಂಟರ್‌ಗಳ ಮಾಲೀಕರು ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಜೋಡಣೆಯ ಗಾಳಿ ಸುದ್ದಿ ಹಬ್ಬಿಸಿದ್ದವರ ವಿರುದ್ಧ ರಾಬರ್ಚ್‌ಸನ್‌ಪೇಟೆ ಪೊಲೀಸ್‌ರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಬರ್ಚ್‌ಸನ್‌ಪೇಟೆಯ ಇಂಟರ್ ನ್ಯಾಷನಲ್ ಅನ್‌ಲೈನ್, ಜೆ.ಪಿ. ನೆಟ್ ವರ್ಕ್ಸ್‌ನ ಮಾಲೀಕರ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.
ಸುದ್ದಿ ಹಬ್ಬಿದ್ದು ಹೇಗೆ: ಕಾಂಗ್ರೆಸ್‌ನ ಐದು ಗ್ಯಾರಂಟಿಗಳನ್ನು ಪಡೆಯಲು ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಜೋಡಣೆ ಮಾಡಲು ಮೇ 31ರಂದು ಕೊನೆಯ ದಿನಾಂಕವೆಂದು ಸೈಬರ್ ಸೆಂಟರ್ ಮಾಲೀಕರು ಸಮಾಜಿಕ ಜಾಲತಾಣಗಳಲ್ಲಿ ಗಾಳಿ ಸುದ್ದಿ ಹರಿಬಿಟ್ಟದ್ದರು. ಗಾಳಿ ಸುದ್ದಿ ನಂಬಿದ ಮಹಿಳೆಯರು ಕೆಜಿಎಫ್‌ನ ಸೈಬರ್ ಸೆಂಟರ್‌ಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಆಧಾರ್ ಮತ್ತು ಪಡಿತರ ಚೀಟಿ ಜೋಡಣೆಗೆ ಮಾಮೂಲಿ 50 ರು. ಇತ್ತು, ಎಲ್ಲ ಮಹಿಳೆಯರು ಸೈಬರ್ ಕೇಂದ್ರಗಳಿಗೆ ಒಮ್ಮೆ ಲಗ್ಗೆ ಇಟ್ಟಾಗ ಸೈಬರ್ ಸೆಂಟರ್‌ನ ಮಾಲೀಕರು ದುಪ್ಪಟ್ಟು 250 ರಿಂದ 300 ರುಗಳನ್ನು ನಿಗದಿಪಡಿಸಿದ್ದಾರೆ.
ಕರೆಂಟ್ ಬಿಲ್ ಕಟ್ಬೇಡಿ, ಮಹಿಳೆಯರು ಬಸ್ ಟಿಕೆಟ್ ತಗೋಬೇಡಿ: ಬಿಜೆಪಿ, ಜೆಡಿಎಸ್ ಕರೆ!
ಸೈಬರ್ ಸೆಂಟರ್‌ನ ಮೇಲೆ ದಾಳಿ: ತಹಸೀಲ್ದಾರ್ ಎಚ್.ಶ್ರೀನಿವಾಸ್ ಹಾಗೂ ಸಿಬ್ಬಂದಿ ನಗರದ ಸೈಬರ್ ಸೆಂಟರ್‌ಗಳ ಮೇಲೆ ದಾಳಿ ನಡೆಸಿ ಮಹಿಳೆಯರು ಗಾಳಿ ಸುದ್ದಿಗೆ ಕಿವಿಗೊಡಬೇಡಿ, ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲವೆಂದು ಮಹಿಳೆಯರಿಗೆ ಅರಿವು ಮೂಡಿಸಿದರು. ಆಧಾರ್ ಮತ್ತು ಪಡಿತರ ಚೀಟಿಯ ಜೋಡಣೆಯ ಅಗತ್ಯವಿಲ್ಲ, ಗಾಳಿ ಸುದ್ದಿ ಹಬ್ಬಿಸಿದ್ದ ಸೈಬರ್ ಸೆಂಟರ್‌ನ ಮಾಲೀಕರ ವಿರುದ್ಧ ಅಹಾರ ಮತ್ತು ನಾಗರಿಕ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ ಎಂದರು.