Chikkamagaluru: ಮೊದಲ ದಿನವೇ 5 ನಾಮಪತ್ರ ಸ್ವೀಕಾರ: ಬಿಜೆಪಿಯಿಂದ ಇಬ್ಬರು, ಪ್ರಜಾಕೀಯದಿಂದ ಒಬ್ಬರು ನಾಮಪತ್ರ ಸಲ್ಲಿಕೆ

ಮುಂಬರುವ ಮೇ 10 ರಂದು ನಡೆಯುವ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೊದಲ ದಿನವಾದ  ಇಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 5 ನಾಮಪತ್ರಗಳು ಸಲ್ಲಿಕೆಯಾಗಿವೆ. 

A total of 5 nomination papers have been submitted in Chikkamagaluru district on april 13th gvd

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಏ.13): ಮುಂಬರುವ ಮೇ 10 ರಂದು ನಡೆಯುವ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೊದಲ ದಿನವಾದ  ಇಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 5 ನಾಮಪತ್ರಗಳು ಸಲ್ಲಿಕೆಯಾಗಿವೆ. ಶೃಂಗೇರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಉಮೇದುವಾರಿಕೆ ಸಲ್ಲಿಸಿದ್ದಾರೆ. ಕಡೂರು ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕ ಬೆಳ್ಳಿ ಪ್ರಕಾಶ್ ನಾಮಪತ್ರ ಸಲ್ಲಿಸಿದ್ದಾರೆ. 

ತರೀಕೆರೆ ವಿಧಾನ ಸಭಾ ಕ್ಷೇತ್ರದಿಂದ ಉತ್ತಮ ಪ್ರಜಾಕೀಯ ಪಕ್ಷದಿಂದ ಬಿ.ಪಿ.ವಿಕಾಸ್ ಎಂಬುವವರು ನಾಮಪತ್ರ ಸಲ್ಲಿಸಿದರು. ಮೂಡಿಗೆರೆ ಹಾಗೂ ಚಿಕ್ಕಮಗಳೂರು ಕ್ಷೇತ್ರಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.ನಾಮಪತ್ರ ಸಲ್ಲಿಸಲು ಏಪ್ರಿಲ್ 20 ಕೊನೆ ದಿನವಾಗಿದೆ. ಏಪ್ರಿಲ್ 21 ರಂದು ನಾಮಪತ್ರಗಳ ಪರಿಶೀಲನೆ ನಡೆಯಲ್ಲಿದ್ದು, ಏಪ್ರಿಲ್ 24 ರಂದು ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿರುತ್ತದೆ. ಮೇ 10 ರಂದು ಮತದಾನ ನಡೆಯಲ್ಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

ಸಿ.ಟಿ.ರವಿ ಜನಪ್ರಿಯತೆಯನ್ನು ಸಹಿಸಿಕೊಳ್ಳಲಾಗದೆ ಭ್ರಷ್ಟಾಚಾರ ಆರೋಪ: ತಮ್ಮಯ್ಯ ವಿರುದ್ದ ಚಿಕ್ಕದೇವನೂರು ರವಿ ವಾಗ್ದಾಳಿ

ವೈಎಸ್‌ವಿ ದತ್ತಾಗೆ ಸಾಲ ನೀಡಿರುವ ಜೀವರಾಜ್: ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಇಂದು ನಾಮಪತ್ರ ಸಲ್ಲಿಸಿರುವ ಮಾಜಿ ಸಚಿವ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ಕೈಯಲ್ಲಿ ಇರುವುದು ಬರೀ 2 ಲಕ್ಷ ರು. ನಗದು ಮಾತ್ರ. ಅವರು ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ನೀಡಿರುವ ಆಸ್ತಿ ವಿವರದ ಪ್ರಮಾಣ ಪತ್ರದಲ್ಲಿ ತಿಳಿಸಿರುವ ಪ್ರಕಾರ ಅವರ ಪತ್ನಿ ಎಂ.ಎಸ್. ನಿವೇದಿತಾ ಬಳಿ ಒಂದು ಲಕ್ಷ, ಮಗ ಸುಧನ್ವ ಬಳಿ 50 ಸಾವಿರ ರುಪಾಯಿ ನಗದು ಮಾತ್ರ ಇದೆ.ಜೀವರಾಜ್ ಬಳಿ ಇರುವ ಚರಾಸ್ತಿಯ ಮೌಲ್ಯ 1,43,91,405 ರೂ ಪತ್ನಿಯ ಬಳಿ ಇರುವ ಚರಾಸ್ತಿಯ ಮೌಲ್ಯ 38,79,875, ರೂ.

ಪುತ್ರನ ಬಳಿ 26,85,946 ರೂ. ಸ್ವಯಾರ್ಜಿತ ಸ್ಥಿರಾಸ್ತಿ: ಜೀವರಾಜ್ 5.36  ಕೋಟಿ, ಪತ್ನಿ ಬಳಿ 1.22 ಕೋಟಿ, ಪುತ್ರನ ಬಳಿ 32 ಲಕ್ಷ, ಇನ್ನು ಜೀವರಾಜ್ ಅವರ ಪಿತ್ರಾರ್ಜಿತ ಆಸ್ತಿ 1.42  ಕೋಟಿ ಇದೆ. ಜೀವರಾಜ್ ಹೆಸರಲ್ಲಿ ವಿವಿಧ ಬ್ಯಾಂಕು, ಸಂಸ್ಥೆಗಳಲ್ಲಿ 21, 31,885 ರು. ಸಾಲ ಇದ್ದರೆ, ಪತ್ನಿ ಹೆಸರಿನಲ್ಲಿ 10 ಲಕ್ಷ, ಪುತ್ರನ ಹೆಸರಿನಲ್ಲಿ 15,86,082 ರು. ಇದೆ. ಜೀವರಾಜ್ ಬಳಿ 7.30 ಲಕ್ಷ ರು. ಮೌಲ್ಯದ ಬಂಗಾರ ಇದ್ದರೆ, ಅವರ ಪತ್ನಿ ಬಳಿ 16,90 ಲಕ್ಷ ರು.ಗಳ ಬಂಗಾರ ಇದೆ. ಜೀವರಾಜ್ ಅವರು ಕಡೂರಿನ ಮಾಜಿ ಶಾಸಕ ವೈಎಸ್‌ವಿ ದತ್ತ ಅವರಿಗೆ ವೈಯಕ್ತಿಕವಾಗಿ 8 ಲಕ್ಷ ರುಪಾಯಿ ಸಾಲ ನೀಡಿದ್ದಾರೆ.

ಕಡೂರು ಕ್ಷೇತ್ರದ  ಬಿಜೆಪಿ ಅಭ್ಯರ್ಥಿ  ಬೆಳ್ಳಿ ಪ್ರಕಾಶ್‌ಗೆ 8.14 ಕೋಟಿ ಸಾಲ: ಕಡೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ಬಳಿ ಕೋಟ್ಯಂತರ ರುಪಾಯಿ ಆಸ್ತಿ ಇದ್ದರೂ ಕೂಡ ಅವರು ಸಾಲಗಾರರು.ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಅವರು ನೀಡಿರುವ ಪ್ರಮಾಣಪತ್ರದಲ್ಲಿ ತಿಳಿಸಿರುವ ಪ್ರಕಾರ 3, 44,945 ನಗದು ಇದ್ದರೆ, ಚರಾಸ್ತಿ 2.70 ಕೋಟಿ,ಸ್ಥಿರಾಸ್ತಿ 10.01 ಕೋಟಿ ರು. ಇದೆ.  ವಿವಿಧ  ಬ್ಯಾಂಕ್ ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿ 8.14 ಕೋಟಿ ಸಾಲ ಮಾಡಿದ್ದಾರೆ. ಇವರಿಗೆ ಸ್ವಯಾರ್ಜಿತಕ್ಕಿಂತ ಪಿತ್ರಾರ್ಜಿತ ಆಸ್ತಿಯೇ ಹೆಚ್ಚು.

ಕಾಫಿನಾಡಲ್ಲಿ ಚುನಾವಣಾ ಅಧಿಕಾರಿಗಳ ಭರ್ಜರಿ ಬೇಟೆ: 20 ಲಕ್ಷ ಮೌಲ್ಯದ ಹಣ, ವಸ್ತುಗಳು ಜಪ್ತಿ

ಕಡೂರು ಹಾಗೂ ತರೀಕೆರೆ ತಾಲೂಕಿನ ವಿವಿಧೆಡೆ ಜಮೀನು ಹೊಂದಿದ್ದಾರೆ. ಬೆಳ್ಳಿ ಪ್ರಕಾಶ್ ಪತ್ನಿ ಕೈಯಲ್ಲಿ  38,485 ರು. ನಗದು ಇದ್ದರೆ,ಚರಾಸ್ತಿ 30,81 ಲಕ್ಷ, ಸ್ಥಿರಾಸ್ತಿ 35,08 ಲಕ್ಷ ರು. ಇದೆ. 22.52 ಲಕ್ಷ ಸಾಲ ಮಾಡಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios