Chikkamagaluru: ಕಾಫಿನಾಡಲ್ಲಿ ಚುನಾವಣಾ ಅಧಿಕಾರಿಗಳ ಭರ್ಜರಿ ಬೇಟೆ: 20 ಲಕ್ಷ ಮೌಲ್ಯದ ಹಣ, ವಸ್ತುಗಳು ಜಪ್ತಿ
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಚುನಾವಣಾ ಅಧಿಕಾರಿಗಳು ಭರ್ಜರಿ ಬೇಟೆ ನಡೆಸಿದ್ದಾರೆ. ಇಂದು ಒಂದೇ ದಿನ 20 ಲಕ್ಷ ಮೌಲ್ಯದ ನಗದು ಹಾಗೂ ವಿವಿಧ ವಸ್ತುಗಳನ್ನು ಸೀಜ್ ಮಾಡಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಏ.12): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಚುನಾವಣಾ ಅಧಿಕಾರಿಗಳು ಭರ್ಜರಿ ಬೇಟೆ ನಡೆಸಿದ್ದಾರೆ. ಇಂದು ಒಂದೇ ದಿನ 20 ಲಕ್ಷ ಮೌಲ್ಯದ ನಗದು ಹಾಗೂ ವಿವಿಧ ವಸ್ತುಗಳನ್ನು ಸೀಜ್ ಮಾಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅಕ್ರಮಗಳ ಮೇಲೆ ಕಣ್ಣಿಟ್ಟು ಕಾರ್ಯಾಚರಣೆ ಮುಂದುವರಿಸಿರುವ ವಿವಿಧ ಸ್ಕ್ವಾಡ್‌ನ ಸಿಬ್ಬಂದಿಗಳು ಜಿಲ್ಲೆಯ ವಿವಿಧೆಡೆ ಸುಮಾರು 11 ಲಕ್ಷ ರೂ.ಗಳಿಗೂ ಹೆಚ್ಚಿನ ನಗದು ಹಾಗೂ ಲಕ್ಷಾಂತರ ರೂ. ಬೆಲೆಯ ಕುಕ್ಕರ್ ಮತ್ತು ಜೀನ್ಸ್ ಪ್ಯಾಂಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದು, ಸೋಮನಹಳ್ಳಿ ಮತ್ತು ಎರೆಹಳ್ಳಿ ಮಧ್ಯೆ ಅನಿರೀಕ್ಷಿತ ಚೆಕ್‌ಪೋಸ್ಟ್ ನಿರ್ಮಿಸಿ ವಾಹನಗಳ ತಪಾಸಣೆ ಕೈಗೊಳ್ಳಲಾಗಿದ್ದು, ಈ ವೇಳೆ ವ್ಯಕ್ತಿಯೊಬ್ಬರ ಬಳಿ 6,82,500 ರೂ. ನಗರದು ಪತ್ತೆಯಾಗಿದ್ದು, ಅದಕ್ಕೆ ಸೂಕ್ತ ದಾಖಲೆಗಳನ್ನು ಸಲ್ಲಿಸದ ಕಾರಣಕ್ಕೆ ಹಣವನ್ನು ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ತರೀಕೆರೆ ತಾಲ್ಲುಕು ಎಂಸಿ ಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ದಾಖಲೆಗಳಿಲ್ಲದೆ ಸಾಗಿಸಲಾಗುತ್ತಿದ್ದ 3,40,000 ರೂ. ನಗರದನ್ನು ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ. ಲಕ್ಕವಳ್ಳಿ ಎಂ.ಎನ್.ಕ್ಯಾಂಪ್ ಚೆಕ್ ಪೋಸ್ಟ್‌ನಲ್ಲಿ 1 ಲಕ್ಷ ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ. ಅಷ್ಟೂ ಹಣವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದ್ದು, ತನಿಖೆ ಮುಂದುವರಿದಿದೆ.
ಕುಕ್ಕರ್, ಸೀರೆ ವಶಕ್ಕೆ: ಖಚಿತ ಮಾಹಿತಿ ಮೇರೆಗೆ ಬೀರೂರಿನ ಗೌರಿ ಟ್ರಾನ್ಸ್‌ಪೋರ್ಟ್ ಗೋಡಾನ್ ಮೇಲೆ ದಾಳಿ ನಡೆಸಿದ ಸಿಬ್ಬಂದಿಗಳು ಬಿಲ್ ಇಲ್ಲದೇ ಇರುವ 68,500 ರೂ. ಮೌಲ್ಯದ 47 ಕುಕ್ಕರ್ ಹಾಗೂ 77 ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ. ಇದನ್ನು ಯಾರು ತರಿಸಿದ್ದಾರೆ. ಎಲ್ಲಿಂದ ಬಂದಿದೆ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಜೀನ್ಸ್‌ಪ್ಯಾಂಟ್ ವಶಕ್ಕೆ ಇದೇ ವೇಳೆ ಚಿಕ್ಕಮಗಳೂರು ನಗರದ ಡೆಲಿವರಿ ಕೊರಿಯರ್‌ವೊಂದರಲ್ಲಿ ಸೂಕ್ತ ದಾಖಲೆಗಳಿಲ್ಲದ 7.50 ಲಕ್ಷ ರೂ.ಮೌಲ್ಯದ ಸುಮಾರು 760 ಜೀನ್ಸ್ ಪ್ಯಾಂಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಪ್ರವಾಸಿ ರೀತಿಯ ಹೊರಗಿನ ಅಭ್ಯರ್ಥಿಗಳಿಗೆ ಕೊಡಗಿನ ಜನ ಬೆಂಬಲಿಸಲ್ಲ: ಮಂತರ್ ವಿರುದ್ಧ ಶಾಸಕ ಅಪ್ಪಚ್ಚು ರಂಜನ್ ವ್ಯಂಗ್ಯ
ಈ ಕಾರ್ಯಾಚರಣೆಗಳಲ್ಲಿ ಚುನಾವಣಾ ಸಂಬಂಧಿ ಫ್ಲೈಯಿಂಗ್ ಸ್ಕ್ವಾಡ್ ಮತ್ತು ಸ್ಟಾಟಿಟಿಕ್ ಸರ್ವೇಲೆನ್ಸ್ ತಂಡದ ಸಿಬ್ಬಂಧಿ ಭಾಗವಹಿಸಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.