Asianet Suvarna News Asianet Suvarna News

Davanagere: 92ರ ಇಳಿವಯಸ್ಸಿನಲ್ಲೂ ಶಾಮನೂರು ಶಿವಶಂಕರಪ್ಪ ಸ್ಪರ್ಧೆ ಖಚಿತ: ಕಣಕ್ಕಿಳಿದ ಅಪ್ಪ-ಮಗ

ಶಾಮನೂರು ಶಿವಶಂಕರಪ್ಪ 92ರ ಇಳಿವಯಸ್ಸಿನಲ್ಲೂ ಈಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿ ಅತಿ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸಲು ಸಿದ್ಧತೆ ನಡೆಸಿದ್ದಾರೆ. ಮತ್ತೊಂದೆಡೆ ಅವರ ಮಗ ಮಲ್ಲಿಕಾರ್ಜುನ್ ಮೊದಲ ಬಾರಿಗೆ ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ.

92 aged Shamanur Shivshankarappa contest election father and son politics sat
Author
First Published Jan 18, 2023, 7:12 PM IST

ವರದಿ- ವರದರಾಜ್ ಏಷ್ಯಾನೆಟ್‌ ಸುವರ್ಣ ನ್ಯೂಸ್‌ 

ದಾವಣಗೆರೆ (ಜ18): ಎಲೆಕ್ಷನ್  ಹತ್ತಿರ ಬರುತ್ತಿದ್ದಂತೆ ದಾವಣಗೆರೆಯಲ್ಲಿ ಕಾಂಗ್ರೆಸ್ ಮುಖಂಡರು ಪುಲ್ ಆಕ್ಟೀವ್ ಆಗಿದ್ದಾರೆ.  92ರ ಇಳಿವಯಸ್ಸಿನಲ್ಲೂ ಶಾಮನೂರು ಶಿವಶಂಕರಪ್ಪ ಈ ಬಾರಿ ಮತ್ತೇ ಸ್ಪರ್ಧಿಸಿ ಅತಿ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸಲು ಸಿದ್ಧರಾಗಿದ್ದಾರೆ. ಮತ್ತೊಂದೆಡೆ ಅವರ ಮಗ ಮಲ್ಲಿಕಾರ್ಜುನ್ ಮೊದಲ ಬಾರಿಗೆ ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ. ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಕಿಡಿಕಾರಿರುವ ಅಪ್ಪ-ಮಗ ಕಾಂಗ್ರೆಸ್ ನ ಹೆಚ್ಚಿನ ಸೀಟು ಗೆಲ್ಲಿಸಲು ತಮ್ಮದೇ ರಣತಂತ್ರ ರೂಪಿಸಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಎಂದ್ರೆ ಶಾಮನೂರು ಶಿವಶಂಕರಪ್ಪ ಮತ್ತು ಅವರ ಮಗ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ.  ಅಪ್ಪ ಮಕ್ಕಳನ್ನು ಹೊರತಾಗಿ ಕಾಂಗ್ರೆಸ್ ಅಸ್ತಿತ್ವವನ್ನು  ಊಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂಬ ಪರಿಸ್ಥಿತಿ ದಾವಣಗೆರೆ ಜಿಲ್ಲೆಯಲ್ಲಿದೆ.  ದಾವಣಗೆರೆ ಜಿಲ್ಲೆಗೆ ಇದೇ  ಜನವರಿ  19 ರಂದು ಪ್ರಜಾಧ್ವನಿ ಯಾತ್ರೆ ಆಗಮಿಸಲಿದ್ದು ಕೆಪಿಸಿಸಿ ನಾಯಕರ ಆಹ್ವಾನಕ್ಕೆ ಶಾಮನೂರು ಶಿವಶಂಕರಪ್ಪ ಅವರ ಮಗ ಎಸ್ ಎಸ್  ಮಲ್ಲಿಕಾರ್ಜುನ್  ಸಭೆ ನಡೆಸಿ ಕಾರ್ಯಕ್ರಮದ ರೂಪುರೇಷೆ ತಯಾರಿಸಿದ್ದಾರೆ.

Davanagere: ಶಾಮನೂರು ಶಿವಶಂಕರಪ್ಪನವರ ಪುತ್ರನ ಸಕ್ಕರೆ ಕಂಪನಿಯಿಂದ ಸುತ್ತ ಹಳ್ಳಿಗಳ ಜನರ ಆಕ್ರೋಶ

ಒಂದು ಲಕ್ಷ ಜನರ ಸೇರಿಸಿ ಪ್ರಜಾಧ್ವನಿಯಾತ್ರೆ: ಕನಿಷ್ಠ 1 ಲಕ್ಷ ಜನರನ್ನು ಸೇರಿಸಿ ಪ್ರಜಾಧ್ವನಿಯಾತ್ರೆ ಯಶಸ್ವಿ ಮಾಡಬೇಕೆಂದು ಜಿಲ್ಲೆಯ 7 ಕ್ಷೇತ್ರದ 45 ಆಕಾಂಕ್ಷಿತ ಅಭ್ಯರ್ಥಿಗಳನ್ನು ಒಟ್ಟುಗೂಡಿಸಿ ಜನರನ್ನು ಕರೆತರುವ ಬಗ್ಗೆ ಚರ್ಚಿಸಿದ್ದಾರೆ.  ಇದೇ ಸಂದರ್ಭದಲ್ಲಿ ಮಾತನಾಡಿದ ಶಾಮನೂರು ಶಿವಶಂಕರಪ್ಪ ದಾವಣಗೆರೆ ದಕ್ಷಿಣದಿಂದ ಸ್ಪರ್ಧಿಸಿ ಕರ್ನಾಟಕ  ರಾಜ್ಯದಲ್ಲಿಯೇ ಅತಿಹೆಚ್ಚಿನ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸವನ್ನು ಶಾಮನೂರು ಶಿವಶಂಕರಪ್ಪ ವ್ಯಕ್ತಪಡಿಸಿದ್ದಾರೆ. 

ಶಾಮನೂರು ಮಲ್ಲಿಕಾರ್ಜುನ್‌ ರಣತಂತ್ರ: ಇದೇ ಸಂದರ್ಭದಲ್ಲಿ ಮಾತನಾಡಿದ ಎಸ್.ಎಸ್. ಮಲ್ಲಿಕಾರ್ಜುನ್  ದಾವಣಗೆರೆ ಉತ್ತರದಿಂದ ಸ್ಪರ್ಧಿಸುವ ಬಗ್ಗೆ ಸುಳಿವು ನೀಡಿದ್ದಾರೆ. ಕಳೆದ ಬಾರಿ ವಿಧಾನ ಸಭೆ ಚುನಾವಣೆ  ಸೋಲಿನ ನಂತರ ಕಾಂಗ್ರೆಸ್  ಸಂಸದರ ಚುನಾವಣೆಯಲ್ಲು ಸ್ಪರ್ಧಿಸದೆ ಹಿಂದೆ  ಸರಿದಿದ್ದ ಮಲ್ಲಿಕಾರ್ಜುನ್ ತನ್ನ ಸ್ಪರ್ಧೆಯ ಬಗ್ಗೆ ಇದುವರೆಗು ತುಟಿಕ್ ಪಿಟಿಕ್ ಅಂದಿರಲಿಲ್ಲ. ಕಳೆದ ಎರಡು ವಾರಗಳ ಹಿಂದೆ ಅಕ್ರಮ ವನ್ಯ ಜೀವಿ ಸಾಕಿದ್ದರು ಎಂಬ ಆರೋಪದಲ್ಲಿ ಜಾಮೀನು ಪಡೆದಿರುವ ಎಸ್ ಎಸ್ ಮಲ್ಲಿಕಾರ್ಜುನ್ ಮತ್ತೆ ಪ್ರಮುಖ ವೇದಿಕೆಗಳಲ್ಲಿ ಕಾಣಿಸಿಕೊಂಡು ಈ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ತನ್ನದೇ ರಣತಂತ್ರ ರೂಪಿಸುತ್ತಿದ್ದಾರೆ. ಬಿಜೆಪಿ ಪಾಪದ ಕೊಡ ತುಂಬಿದೆ. ಇದನ್ನು ಜನತೆಗೆ ತಿಳಿಸುವ ಕೆಲ್ಸವನ್ನು ಕಾಂಗ್ರೆಸ್ ಮಾಡುತ್ತಿದೆ. ಕಮಿಷನ್ ವಿಚಾರ ಮಾತನಾಡಿದ್ರೆ ಇಲ್ಲ ಅಂದ್ರೆ  ಯಾವುದಾದ್ರು ನೆಪ ಹುಡುಕಿ ಜೈಲಿಗೆ ಕಳಿಸಲು ಬಿಜೆಪಿ ನಾಯಕರು ಹವಣಿಸುತ್ತಿದ್ದಾರೆ  ಎಂದು ಕಿಡಿಕಾರಿದ್ದಾರೆ.

ಅದೃಷ್ಟ ಇದ್ದರೆ ಪರಮೇಶ್ವರ್ ಮುಂದಿನ ಸಿಎಂ ಆಗಬಹುದು: ಶಾಮನೂರು ಶಿವಶಂಕರಪ್ಪ

ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದೆ ಎಂದು ಹೇಳುವ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಹುರುಪು ತುಂಬಿ ದಾವಣಗೆರೆ ಬಿಜೆಪಿ ಭದ್ರ ಕೋಟೆಯಲ್ಲಿ ಮತ್ತೊಮ್ಮೆ ಕೈ ಪಾರುಪತ್ಯೆ ಸ್ಥಾಪಿಸಲು ಅಪ್ಪ ಮಕ್ಕಳು ಹವಣಿಸುತ್ತಿದ್ದಾರೆ. ಇನ್ನು ಟಿಕೇಟ್ ಆಕಾಂಕ್ಷಿಗಳು ಹೈಕಮಾಂಡ್ ಗೆ ಮೊದಲು ಶಾಮನೂರು ಕುಟುಂಬದ ವಿಶ್ವಾಸ ಗಳಿಸಲು ನಾ ಮುಂದು ತಾ ಮುಂದೆ ಎಂದು ದುಂಬಾಲು ಬಿದ್ದಿದ್ದಾರೆ. ಪ್ರಜಾಧ್ವನಿಯಾತ್ರೆಗೆ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರನ್ನು ಕರೆತರಲು ಶಕ್ತಿ ಪ್ರದರ್ಶನಕ್ಕು ಮುಂದಾಗಿದ್ದಾರೆ.

Follow Us:
Download App:
  • android
  • ios