ಕಲಬುರಗಿಯಲ್ಲಿ ಕಣದಲ್ಲಿದ್ದ 69 ಅಭ್ಯರ್ಥಿಗಳಿಗೆ ನೋಟಾಕ್ಕಿಂತ ಕಮ್ಮಿ ಮತ..!

ಡಾ. ಅವಿನಾಶ ಜಾಧವ ಗೆಲುವಿನ ಅಂತರದ ಮತಗಳಿಗಿಂತ ನೋಟಾಕ್ಕೆ ಚಲಾವಣೆಯಾದ ಮತಗಳೇ ಅಧಿಕ, ಇವಿಎಂನಲ್ಲಿ ’ನೋಟಾ’ ಬಟನ್‌ ಅದುಮಿದ ಕಲಬುರಗಿ ಮತದಾರ, ಜಿಲ್ಲೆಯಲ್ಲಿರುವ 9 ಅಸೆಂಬ್ಲಿ ಕ್ಷೇತ್ರಗಳಲ್ಲಿ 9, 637 ನೋಟಾ ಮತ ಚಲಾವಣೆ, ಕಣದಲ್ಲಿದ್ದ 105 ಹುರಿಯಳುಗಳಲ್ಲಿ 69 ಮಂದಿಗೆ ನೋಟಾಕ್ಕಿಂತ ಕಮ್ಮಿ ಮತ. 

69 Candidates Got Less Votes than Nota at Kalaburagi in Karnataka Election 2023 grg

ಕಲಬುರಗಿ(ಮೇ.18):  ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಕಲಬುರಗಿ ಜಲ್ಲೆಯಲ್ಲಿ ಈ ಬಾರಿ 9,637ಮತದಾರರು ನೋಟಾ (ಮೇಲಿನವರು ಯಾರೂ ಅಲ್ಲ- ನನ್‌ ಆಫ್‌ ದಿ ಅಬೋವ್‌) ಆಯ್ಕೆ ಮಾಡಿ ಗಮನ ಸೆಳೆದಿದ್ದಾರೆ.
ಗಮನಾರ್ಹ ಸಂಗತಿ ಎಂದರೆ ಚಿಂಚೋಳಿಯಲ್ಲಿ ಬಿಜೆಪಿಯ ಹುರಿಯಾಳು ಡಾ. ಅವಿನಾಶ ಜಾಧವ್‌ ಗೆಲುವಿನ ಅಂತರದ ಮತಗಲಿಗಿಂತ ಅಲ್ಲಿ ನೋಟಾಕ್ಕೆ ಚಲಾವಣೆಯಾದ ಮತಗಲೇ ಹೆಚ್ಚಿವೆ! ಜಿಲ್ಲಾದ್ಯಂತ ಈ ಚುನಾವಣೆಯಲ್ಲಿನ ನೋಟಾ ಹಾಗೂ ಕಳೆದ ಚುನಾಣೆಯ ನೋಟಾ ಸಂಗತಿಗಳ ಮೇಲೊಂದು ನೋಟ ಇಲ್ಲಿದೆ ನೋಡಿ.

ಈ ಬಾರಿ ನೋಟಾದಲ್ಲಿ ಕುಸಿತ:

2018 ರ ಚುನಾವಣೆಯೊಂದಿಗೆ ಹೋಲಿಕೆ ಮಾಡಿದಲ್ಲಿ ನೋಟಾ ಆಯ್ಕೆಯಲ್ಲಿ ಭಾರಿ ಹೆಚ್ಚಳವೇನೂ ಕಂಡಿಲ್ಲವಾದರೂ ಕಣದಲ್ಲಿದ್ದ 105 ಹುರಿಯಾಳುಗಳ ಪೈಕಿ ಶೇ. 60 ರಷ್ಟುಅಂದರೆ ಬರೋಬ್ಬರಿ 69 ಅಭ್ಯರ್ಥಿಗಳು ನೋಟಾಕ್ಕಿಂತಲೂ ಕಮ್ಮಿ ಮತ ಪಡೆದಿರೋದು. ಈ ಅಭ್ಯರ್ಥಿಗಳು ಕಣದಲ್ಲಿದ್ದ ಕ್ಷೇತ್ರದಲ್ಲಿ ಒಟ್ಟು ಚಲಾವಣೆಯಾದ ನೋಟಾ ಮತಗಳು ಇವರು ಪಡೆದ ಒಟ್ಟಾರೆ ಮತಗಳಿಗಿಂತಲೂ ಕಮ್ಮಿ ಇರೋದು ಗಮನಾರ್ಹ ಸಂಗತಿಯಾಗಿ ದಾಖಲಾಗಿದೆ.

Karnataka Election Result 2023: ತಾವರೆ ಮುದುಡಲು ಧರ್ಮ ರಾಜ'ಕಾರಣ'ವಾಯ್ತೆ?

2023 ರ ಚುನಾವಣೆಯಲ್ಲಿ 9, 647 ನೋಟಾ ಮತಗಳು ಚಲಾವಣೆಯಾಗಿವೆ, 2018 ರಲ್ಲಿ 11, 234 ನೋಟಾ ಮತಗಳು ಚಲಾವಣೆಯಾಗಿದ್ದವು. ಕಳೆದ ಬಾರಿಗಿಂತ ನೋಟಾ ಮತಗಳ ಆಯ್ಕೆಯಲ್ಲಿ ಈ ಬಾರಿ ತೀವ್ರ ಕುಸಿತ ಕಂಡು ಬಂದರೂ ಸಹ ಕಣದಲ್ಲಿದ್ದ ಅಭ್ಯಥಿಗಳಲ್ಲಿ ಶೇ. 60 ರಷ್ಟುಜನ ನೋಟಾಕ್ಕಿಂತಲೂ ಕಮ್ಮಿ ಮತ ಗಳಿಸಿರೋದು ಗಮನಾರ್ಹವಾಗಿದೆ.

ಚಿಂಚೋಳಿಯಲ್ಲಿ ವಿಲಕ್ಷಣ ಬೆಳವಣಿಗೆ:

ಜಿಲ್ಲೆಯ ಚಿಂಚೋಳಿ ಮೀಸಲು ಮತಕ್ಷೇತ್ರದಲ್ಲಿ ಬಿಜೆಪಿಯ ಹುರಿಯಾಳಾಗಿದ್ದ ಡಾ. ಅವಿನಾಶ ಜಾಧವ್‌ ಅವರು ಒಟ್ಟು 69, 963 ಮತಗಳನನು ಪಡೆದು, ತಮ್ಮ ಎದುರಾಳಿ ಹಾಗೂ 69, 105 ಮತಗಳನ್ನು ಪಡೆದ ಕಾಂಗ್ರೆಸ್‌ನ ಸುಭಾಸ ರಾಠೋಡರನ್ನು ಕೇವಲ 858 ಮತಗಳ ಅಂತರದಿಂ¨ ಪರಾಭವಗೊಳಿಸಿದರು. 858 ಮತಗಳಿಂದ ಬಿಜೆಪಿ ಗೆದ್ದಿರುವ ಚಿಂಚೋಳಿಯಲ್ಲಿ 1, 003 ಮತದಾರರು ನೋಟಾಗೆ ಮತ ಚಲಾಸಿಯಿ ಗಮನ ಸೆಳೆದಿದ್ದಾರೆ.

ಜೇವರ್ಗಿಯಲ್ಲಿ 11 ಹುರಿಯಾಳುಗಳಿಗೆ ನೋಟಾಕ್ಕಿಂತ ಕಮ್ಮಿ ಮತ:

ಜೇವರ್ಗಿ ಮತಕ್ಷೇತ್ರದಲ್ಲಿ 1,146 ನೋಟಾ ಚಲಾವಣೆಯಾಗಿವೆ. ಇಲ್ಲಿ ಸ್ಪರ್ಧಿಸದ್ದ ಬಿಎಸ್ಪಿಯ ಭೀಮರಾಯ, ಕೆಆರ್‌ಪಿಪಿಯ ಅಶೋಕ ಸಾಹು, ಇಂಡಿಯನ್‌ ಮೂವಮೆಂಟ್‌ನ ಚಂದ್ರಕಾಂತ ಸಾಹುಕಾರ್‌, ಬಸವರಾಜ ಕುಬಾರ್‌ ಬಳಿಚಕ್ರ, ಸಿಪಿಐನ ಮಹೇಶ ಕುಮಾರ್‌ ಸೇರಿದಂತೆ 11 ಹುರಿಯಾಳುಗಳು ನೋಟಾಗಿಂತ ಕಮ್ಮಿ ಮತ ಗಳಿಸಿದ್ದಾರೆ.

Afzalpur Election Result 2023: ಅಣ್ತಮ್ಮರ ಜಗಳದಿಂದ ಕಾಂಗ್ರೆಸ್‌ಗೆ ಲಾಭ..!

ನೋಟಾ ನೋಟ...

ಚಿತ್ತಾಪುರದಲ್ಲಿ ಕಣದಲ್ಲಿದ್ದವರ ಪೈಕಿ ಇಬ್ಬರು ನೋಟಾಕ್ಕಿಂತ ಕಮ್ಮಿ ಮತ ಪಡೆದರೆ, ಅಫಜಲ್ಪುರದಲ್ಲಿ 5, ಸೇಡಂನಲ್ಲಿ 7 ಕಲಬುರಗಿ ಗ್ರಾಮೀಣಲ್ಲಿ 8, ಕಲಬುರಗಿ ಉತ್ತರದಲ್ಲಿ 9, ಆಳಂದದಲ್ಲಿ 10 ಅಭ್ಯರ್ಥಿಗಲು ನೋಟಾಕ್ಕಿಂತ ಕಮ್ಮಿ ಮತ ಪಡೆದಿರೋದು ಕಂಡಿದೆ.

ಕಲಬುರಗಿ ದಕ್ಷಿಣದಲ್ಲೂ ನೋಟಾಗೆ ಜೈ

ಇನ್ನು ಕಲಬುರಗಿ ದಕ್ಷಿಣದಲ್ಲಿಯೂ ಈ ವಿಚಿತ್ರ ಬೆಳವಣಿಗೆ ದಾಖಲಾಗಿದೆ. ಬಿಎಸ್ಪಿಯ ಭೋಸ್ಲೆ, ಎಎಪಿಯ ಸಿದ್ದು ಪಾಟೀಲ್‌ ತೇಗನೂರ್‌, ಇಂಡಿಯನ್‌ ಮೂವಮೆಂಟ್‌ ಪಕ್ಷದ ಮೊಹ್ಮದ್‌ ಅಸ್ಲಾಂ ಮನಿಯಾರ್‌, ಎಸ್ಯೂಸಿಐನ ಮಹೇಶ ಎಸ್ಬಿ , ಕೆಆರ್‌ಎಸ್‌ನ ವಿಜಯ ಜಾಧವ್‌, ಪಕ್ಷೇತರರಾದ ನಾಗಯ್ಯ ಸೇರಿದಂತೆ 10 ಅಭ್ಯರ್ಥಿಗಳು ನೋಟಾಕ್ಕಿಂತ ಕಮ್ಮಿ ಮತ ಗಳಿಸಿದ್ದಾರೆ.

Latest Videos
Follow Us:
Download App:
  • android
  • ios