Afzalpur Election Result 2023: ಅಣ್ತಮ್ಮರ ಜಗಳದಿಂದ ಕಾಂಗ್ರೆಸ್‌ಗೆ ಲಾಭ..!

ಟಿಕೆಟ್‌ ಬೇಡವೆಂದರೂ ಹೈಕಮಾಂಡ್‌ ಆದೇಶಕ್ಕೆ ತಲೆಬಾಗಿ ಎಂವೈ ಪಾಟೀಲರು ಕಣಕ್ಕಿಳಿದಾಗ ಮತದಾರ ಅವರನ್ನು ಗೆಲ್ಲಿಸಿದ್ದಾನೆ. ಅರ್ಜಿ ಸಲ್ಲಿಸಿದ್ದರೂ ತಮ್ಮನ್ನು ಪರಿಗಣಿಸಲಿಲ್ಲವೆಂದು ಮುನಿಸಿಕೊಂಡ ಕಾಂಗ್ರೆಸ್ಸಿಗರಾದ ಮಂಜೂರ್‌ ಪಟೇಲ್‌, ಅಫ್ತಾಬ್‌ ಪಟೇಲ್‌, ರಾಜೇಂದ್ರ ಪಾಟೀಲ ರೇವೂರ್‌ ಸೇರಿದಂತೆ ಹಲವರು ಪಕ್ಷ ನಿಷ್ಟೆ ಮರೆತು ಪಕ್ಷೇತರ ನಿತಿನ್‌ ಗುತ್ತೇದಾರ್‌ ಬೆನ್ನಿಗೆ ನಿಂತರೂ ಸಹ ಕಾಂಗ್ರೆಸ್‌ ಸಾಧನೆಗದು ಅಡ್ಡಿಯಾಗಲಿಲ್ಲ. 

Congress Get Benefit from the Quarrel Between the Brothers at Afzalpur in Kalaburagi grg

ಕಲಬುರಗಿ(ಮೇ.14):  ಪಕ್ಷಕ್ಕಿಂತ ವ್ಯಕ್ತಿ ಆಧಾರಿತ ಚುನಾವಣೆ ನಡೆಯುವುದು ಅಫಜಲ್ಪುರ ಕ್ಷೇತ್ರದಲ್ಲಿ ಎಂಬುದು ಅನೇಕ ಚುನಾವಣೆಗಳಿಂದ ಸಾಬೀತಾಗಿದ್ದರೂ ಸಹ ಈ ಚುನಾವಣೆಯಲ್ಲಿ ಇಲ್ಲಿನ ಮತದಾರರು ಪುನಃ ಹಿರಿಯ ರಾಜಕಾರಣಿ, 82 ವಸತಂಗಳನ್ನು ಕಂಡಿರುವ ಕಾಂಗ್ರೆಸ್ಸಿಗ ಎಂವೈ ಪಾಟೀಲರ ಕೈ ಬಲಪಡಿಸಿದ್ದಾರೆ. 

ಟಿಕೆಟ್‌ ಬೇಡವೆಂದರೂ ಹೈಕಮಾಂಡ್‌ ಆದೇಶಕ್ಕೆ ತಲೆಬಾಗಿ ಎಂವೈ ಪಾಟೀಲರು ಕಣಕ್ಕಿಳಿದಾಗ ಮತದಾರ ಅವರನ್ನು ಗೆಲ್ಲಿಸಿದ್ದಾನೆ. ಅರ್ಜಿ ಸಲ್ಲಿಸಿದ್ದರೂ ತಮ್ಮನ್ನು ಪರಿಗಣಿಸಲಿಲ್ಲವೆಂದು ಮುನಿಸಿಕೊಂಡ ಕಾಂಗ್ರೆಸ್ಸಿಗರಾದ ಮಂಜೂರ್‌ ಪಟೇಲ್‌, ಅಫ್ತಾಬ್‌ ಪಟೇಲ್‌, ರಾಜೇಂದ್ರ ಪಾಟೀಲ ರೇವೂರ್‌ ಸೇರಿದಂತೆ ಹಲವರು ಪಕ್ಷ ನಿಷ್ಟೆ ಮರೆತು ಪಕ್ಷೇತರ ನಿತಿನ್‌ ಗುತ್ತೇದಾರ್‌ ಬೆನ್ನಿಗೆ ನಿಂತರೂ ಸಹ ಕಾಂಗ್ರೆಸ್‌ ಸಾಧನೆಗದು ಅಡ್ಡಿಯಾಗಲಿಲ್ಲ. ತೂಕದ ಮಾತು, ನಿಲುವಿನಿಂದಾಗಿಯೇ ಮತದಾರ ಎಂವೈ ಪಾಟೀಲರನ್ನು ಬೆಂಬಲಿಸಿದ್ದು ಗುಟ್ಟೇನಲ್ಲ. 

KARNATAKA ELECTION RESULTS 2023 : ಕಾಂಗ್ರೆಸ್ ವಶವಾಯ್ತು ಕಲ್ಯಾಣ ಕರ್ನಾಟಕ!

ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಮಾಲೀಕಯ್ಯಾ ಗುತ್ತೇದಾರ್‌ ಬಿಜೆಪಿ ಅಧಿಕೃತ ಅಭ್ಯರ್ಥಿ, ಓಬಿಸಿ ಮತಗಳ ಮೇಲೆ ಕಣ್ಣಿಟ್ಟೇ ಪಕ್ಷ ಇವರನ್ನು ಕಣಕ್ಕಿಳಿಸಿದರೂ ಬಿಜೆಪಿ ಟಿಕೆಟ್‌ ಕೊಡದೆ ವಂಚಿಸಿತು ಎಂದು ಮಾಲೀಕಯ್ಯನವರ ಕಿರಿಯ ಸಹೋದರ ನಿತೀನ್‌ ಗುತ್ತೇದಾರ್‌ ಬಂಡಾಯವೆದ್ದು ಕಣದಲ್ಲಿದ್ದು ನೀಡಿದ್ದ ಪೈಪೋಟಿಯೇ ಇವರು ಈ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಕುಸಿಯುವಂತಾಯ್ತು. ತಮ್ಮ ಅಣ್ಣ ಮಾಲೀಕಯ್ಯರ ಮತ ಬುಟ್ಟಿಗೇ ನಿತಿನ್‌ ಕೈ ಹಾಕಿದ್ದು ರಟ್ಟಾದ ಗುಟ್ಟು. ಪಿಎಸ್‌ಐ ಹಗರಣದಲ್ಲಿ ಪ್ರಮುಖ ಆರೋಪಿಯಾಗಿ ಜೈಲು ಸೇರಿದ್ದ ಆರ್‌ ಡಿ ಪಾಟೀಲ್‌ (ಸಮಾಜವಾದಿ ಪಕ್ಷ), ಜೆಡಿಎಸ್‌ನ ಶಿವಕುಮಾರ್‌ ನಾಟೀಕಾರ್‌ ಮಧ್ಯೆ ಕೋಲಿ ಸಮಾಜದ ಮತಗಳ ವಿಭಜನೆಯಾಗಿದೆ. ಪ್ರಬಲ ಲಿಂಗಾಯಿತ, ಶೋಷಿತ, ಅಲ್ಪಸಂಖ್ಯಾತ ಮತಗಳ ಜೊತೆಗೇ ಬ್ರಾಹ್ಮಣ, ಓಬಿಸಿ ಮತಗಳನ್ನೂ ಕಾಂಗ್ರೆಸ್‌ ಹೆಚ್ಚು ಪಡೆದು ಜಯಭೇರಿ ಬಾರಿಸಿದೆ.

ಅಫಜಲ್ಪುರ ವಿಧಾನಸಭಾ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳು- ಪಡೆದ ಮತಗಳು

1) ಎಂ.ವೈ. ಪಾಟೀಲ- ಕಾಂಗ್ರೆಸ್‌- 56, 313
2) ನಿತಿನ್‌ ಗುತ್ತೇದಾರ್‌- ಪಕ್ಷೇತರ- 51, 719
3) ಮಾಲೀಕಯ್ಯ ಗುತ್ತೇದಾರ್‌- ಬಿಜೆಪಿ- 31, 394
4) ಶಿವಕುಮಾರ ನಾಟೀಕಾರ- ಜೆಡಿಎಸ್‌- 8, 153
5) ಆರ್‌.ಡಿ. ಪಾಟೀಲ- ಸಮಾಜವಾದಿ ಪಾರ್ಟಿ- 8, 686
6) ಶಿವರಾಜ ಪಾಟೀಲ ಕುಲಾಲಿ-ಆಮ್‌ ಆದ್ಮಿ ಪಕ ್ಷ- 626
7) ಹುಚ್ಚೇಶ್ವರ ವಠಾರ ಗೌರ- ಬಿಎಸ್ಪಿ- 441
8) ಕೆæ.ಜಿ. ಪೂಜಾರಿ- ಕರ್ನಾಟಕ ರಾಷ್ಟ್ರ ಸಮಿತಿ- 354

Latest Videos
Follow Us:
Download App:
  • android
  • ios