Asianet Suvarna News Asianet Suvarna News

5ನೇ ಬಾರಿ ಶಾಸಕತ್ವ ಬಡವರ ಪರ ಹೋರಾಟ ಫಲ: ಆರಗ ಜ್ಞಾನೇಂದ್ರ

ಸತತ ಮೂರು ಸೋಲಿನ ನಡುವೆಯೂ ಧೃತಿಗೆಡದೇ ಬಡವರ ಪರವಾಗಿ ನಿಂತು ಹೋರಾಟ ನಡೆಸಿದ ಕಾರಣ ದಾಖಲೆಯ ಐದನೇ ಬಾರಿಗೆ ಚುನಾಯಿತನಾಗಿ ಈ ಕ್ಷೇತ್ರದ ಜನತೆಯ ಸೇವೆ ಸಲ್ಲಿಸಲು ಅವಕಾಶ ದೊರೆತಿರುವುದಕ್ಕೆ ಸಂತಸ ತಂದಿದೆ. ರಾಜಕಾರಣಿಗಳು ಸೋಲಿಗೆ ಅಂಜದೇ ಆತ್ಮವಿಮರ್ಶೆ ಮಾಡಿಕೊಳ್ಳುವ ಮನೋಭಾವವನ್ನು ಹೊಂದಿರಬೇಕು ಎಂದು ಕ್ಷೇತ್ರದ ನೂತನ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

5th time MLA is the result of struggle for the poor Says Araga Jnanendra gvd
Author
First Published May 20, 2023, 11:30 PM IST

ತೀರ್ಥಹಳ್ಳಿ (ಮೇ.20): ಸತತ ಮೂರು ಸೋಲಿನ ನಡುವೆಯೂ ಧೃತಿಗೆಡದೇ ಬಡವರ ಪರವಾಗಿ ನಿಂತು ಹೋರಾಟ ನಡೆಸಿದ ಕಾರಣ ದಾಖಲೆಯ ಐದನೇ ಬಾರಿಗೆ ಚುನಾಯಿತನಾಗಿ ಈ ಕ್ಷೇತ್ರದ ಜನತೆಯ ಸೇವೆ ಸಲ್ಲಿಸಲು ಅವಕಾಶ ದೊರೆತಿರುವುದಕ್ಕೆ ಸಂತಸ ತಂದಿದೆ. ರಾಜಕಾರಣಿಗಳು ಸೋಲಿಗೆ ಅಂಜದೇ ಆತ್ಮವಿಮರ್ಶೆ ಮಾಡಿಕೊಳ್ಳುವ ಮನೋಭಾವವನ್ನು ಹೊಂದಿರಬೇಕು ಎಂದು ಕ್ಷೇತ್ರದ ನೂತನ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಆರಗದಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಧನ್ಯವಾದ, ಕೃತ​ಜ್ಞ​ತೆಗಳನ್ನು ಸಲ್ಲಿಸಿ, ರಾಜಕಾರಣಿಗಳು ಸೋಲನ್ನು ಶಾಪವೆಂದು ಪರಿಗಣಿಸದೇ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಸೋಲಿನ ಭಯದಲ್ಲಿ ಬಹಳ ಮಂದಿ ಪುನಃ ಚುನಾವಣೆಗೆ ಸ್ಪರ್ಧಿಸುವ ಪ್ರಯತ್ನವನ್ನೇ ಮಾಡುವುದಿಲ್ಲಾ. ಸೋಲನ್ನು ಸವಾಲಾಗಿ ಸ್ವೀಕರಿಸುವ ಮನೋಭಾವ ರಾಜಕಾರಣಿಗೆ ಇರಬೇಕು ಎಂದರು.

ದೇಶ ಗೆಲ್ಲಿಸುವ ಲೋಕಸಭಾ ಚುನಾವಣೆಗೆ ಸಜ್ಜಾಗಿ: ಶಾಸಕ ಸಿ.ಸಿ.ಪಾಟೀಲ್‌

ಚುನಾವಣೆಯಲ್ಲಿ ಗೆದ್ದು ಶಾಸಕ ಸಚಿವನಾಗುವುದಷ್ಟೇ ಅಲ್ಲದೇ ಹೊಸ ತಲೆಮಾರಿಗೆ ಮಾದರಿಯಾಗುವಂತೆ ವೈಜ್ಞಾನಿಕ ದೃಷ್ಟಿಕೋನವನ್ನೂ ಹೊಂದಿರಬೇಕು. ಕಳೆದ ಅವಧಿಯಲ್ಲಿ ಕ್ಷೇತ್ರದಲ್ಲಿ ಆಗಿರುವ ದಾಖಲೆ ಸಾಧನೆಯನ್ನು ಮೀರುವುದು ಸುಲಭ ಸಾಧ್ಯವಿಲ್ಲಾ. ನನಗಾಗಿ ಹಗಲಿರುಳು ದುಡಿದ ಕಾರ್ಯಕರ್ತರಿಗೆ ಋುಣಿಯಗಿದ್ದೇನೆ ಎಂದೂ ಹೇಳಿದರು. ಪಕ್ಷದ ತಾಲೂಕು ಅಧ್ಯಕ್ಷ ಬಾಳೇಬೈಲು ರಾಘವೇಂದ್ರ ನಾಯಕ್‌, ಆರ್‌.ಮದನ್‌, ಕೆ.ನಾಗರಾಜ ಶೆಟ್ಟಿ, ಸೋಮಶೇಖರ್‌, ಅಪೂರ್ವ ಶರಧಿ ಪೂರ್ಣೇಶ್‌ ಇದ್ದರು.

ಲೋಕಸಭಾ ಚುನಾವಣೆಯಲ್ಲಿ ಸ್ವೀಪ್‌ ಮಾಡಿ ತೋರಿಸುತ್ತೇವೆ: ರಾಜ್ಯದಲ್ಲಿ ಕಾಂಗ್ರೆಸ್ಸಿನ ಗ್ಯಾರೆಂಟಿ ಕಾರ್ಡ್‌ ತಂತ್ರಗಾರಿಕೆ ವಿಶೇಷವಾಗಿ ಮಹಿಳೆಯರನ್ನು ವಂಚಿಸುವಲ್ಲಿ ಯಶಸ್ವಿಯಾಗಿದೆ. ಆದಕಾರಣ ರಾಜ್ಯ​ದಲ್ಲಿ ಅನಿರೀಕ್ಷಿತವಾದ ಫಲಿತಾಂಶ ಬಂದಿದೆ. ಬಿಜೆಪಿಗೆ ಈ ಚುನಾವಣೆಯಲ್ಲಿ ಸೋಲಾಗಿದ್ದರೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ವೀಪ್‌ ಮಾಡಿ ತೋರಿಸುತ್ತೇವೆ ಎಂದು ಕ್ಷೇತ್ರದ ನೂತನ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಗುಡ್ಡೆಕೊಪ್ಪದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷದ ವಂಚನೆ ಕಾರ್ಡ್‌ ಅನ್ನು ಸಂಬಳದಾಳುಗಳ ಮೂಲಕ ಮನೆಮನೆಗೆ ಹಂಚಿದ್ದಾರೆ. ಆ ಮೂಲಕ ಜನರನ್ನು ಮರುಳುಗೊಳಿಸುವಲ್ಲಿ ಯಶಸ್ವಿಯಾಗಿದೆ. ಹಣದ ಆಸೆಯಿಂದ ಮತದಾರರು ಮರುಳಾಗಿ ಆ ಪಕ್ಷಕ್ಕೆ ಮತ ನೀಡಿದ ಪರಿಣಾಮವಾಗಿ ನಾವು ಅಧಿಕಾರವನ್ನು ಕಳೆದುಕೊಳ್ಳುವಂತಾಗಿದೆ. ಆದರೆ, ಲೋಕಸಭಾ ಚುನಾವಣೆಯಲ್ಲಿ ಸ್ವೀಪ್‌ ಮಾಡಿಯೇ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬೀದರ್‌ ಜಿಲ್ಲೆಗೆ 2 ಸಚಿವ ಸ್ಥಾನ​ಗಳ ಸಾಧ್ಯ​ತೆ: ಈಶ್ವರ ಖಂಡ್ರೆ, ರಹೀ​ಮ್‌​ಖಾ​ನ್‌ಗೆ ಮಂತ್ರಿ​ಗಿರಿ?

ಬಹಳ ಮುಖ್ಯವಾಗಿ ಗೆಲ್ಲಲೇಬೇಕಿದ್ದ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದ ಕೆಲವು ಪ್ರಮುಖ ನಾಯಕರೂ ಈ ಚುನಾವಣೆಯಲ್ಲಿ ಪರಾಭವಗೊಳ್ಳುವಂತಾಗಿರುವುದು ವಿಷಾದನೀಯ. ಹಿಂದಿನ ಅವಧಿಯಲ್ಲಿ ಆಗಿರುವ ದಾಖಲೆಯ ಅಭಿವೃದ್ಧಿ ಹಾಗೂ ಕಾರ್ಯಕರ್ತರ ಶ್ರಮದ ಕಾರಣದಿಂದ ಯಾವುದೇ ಶಕ್ತಿಯಿಂದಲೂ ನನ್ನ ವಿಜಯವನ್ನು ಕಸಿಯಲು ಸಾಧ್ಯವಾಗಿಲ್ಲ. ಕೊರಳು ಕಿತ್ಕೊಂಡು ಹೊರಟ ಜೋಡೆತ್ತುಗಳು ಕ್ಷೇತ್ರದ ಜನರಲ್ಲಿ ಭ್ರಮೆ ಹುಟ್ಟಿಸುವ ಪ್ರಯತ್ನ ಕೂಡ ಫಲಿಸಲಿಲ್ಲ. ಅವರಿಬ್ಬರ ಜಾತಕ ಮತದಾರರಿಗೆ ತಿಳಿದಿದೆ ಎಂದು ಕಿಮ್ಮನೆ ರತ್ನಾಕರ್‌ ಹಾಗೂ ಆರ್‌.ಎಂ. ಮಂಜುನಾಥಗೌಡರಿಗೆ ಪರೋ​ಕ್ಷ​ವಾಗಿ ಟಾಂಗ್‌ ನೀಡಿದರು.

Follow Us:
Download App:
  • android
  • ios