ಕಲ್ಯಾಣ ಕರ್ನಾಟಕ ಭಾಗಕ್ಕೆ 5 ಸಾವಿರ ಕೋಟಿ: ಸಿದ್ದರಾಮಯ್ಯ

ಪ್ರತಿ ಪಂಚಾಯಿತಿಗೆ 1.5 ಕೋಟಿ ಕೋಡ್ತೀವಿ, ರಾಜ್ಯ ಬಿಜೆಪಿ ಸರ್ಕಾರ ಈಡೇರಿಸಿದ್ದು ಕೇವಲ 60 ಭರವಸೆ ಮಾತ್ರ, 2023ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರೋದು ಖಚಿತ: ಸಿದ್ದು 

5000 Crore Rs to Kalyana Karnataka Says Siddaramaiah grg

ಕಮಲಾಪುರ(ಫೆ.07):  ಪ್ರಜಾಧ್ವನಿ ನಮ್ಮ ಧ್ವನಿ ಅಲ್ಲಾ, ಅದು ನಿಮ್ಮ ಧ್ವನಿ. 2013ರಲ್ಲಿ ಈ ರಾಜ್ಯದ ಜನರು ನಮಗೆ ಆಶೀರ್ವಾದ ಮಾಡಿದಾಗಲೇ ನನಗೆ 5 ವರ್ಷ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿತ್ತು. ಬಸವಾದಿ ಶರಣರ ನಾಡಿನಲ್ಲಿ ನಿಂತು ಇದನ್ನ ಅತ್ಯಂತ ಹೆಮ್ಮೆಯಿಂದ ಹೇಳುತ್ತೇನೆಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬೀದರ್‌ನಿಂದ ಕೆಂಬಾಳೆ ನಾಡು ಕಮಲಾಪುರ ಮೂಲ ಪ್ರಜಾಧ್ವನಿ ಯಾತ್ರೆ ಕಲಬುರಗಿ ಪ್ರವೇಶಿಸಿದ್ದು, ಕಮಲಾಪುರದಲ್ಲಿ ಸೋಮವಾರ ಸಾರ್ವಜನಿಕ ರಾರ‍ಯಲಿ ಉದ್ದೇಶಿಸಿ ಅವರು ಮಾತನಾಡಿದರು.

ನಮ್‌ ಸರ್ಕಾರ ನುಡಿದಂತೆ ನಡೆಯುವಂತ ಸರ್ಕಾರ. ಇದನ್ನು ರಾಜಕೀಯ ಕಾರಣಕ್ಕೋಸ್ಕರ ಹೇಳುತ್ತಿಲ್ಲ. ನಾವು ನಮ್ಮ ಪ್ರಣಾಳಿಕೆಯಲ್ಲಿ 2013ರಲ್ಲಿ 165 ಭರವಸೆಗಳನ್ನು ಕೊಟ್ಟಿದ್ದೆವು. ಅವುಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಅದರ ಜೊತೆಗೆ ಹೆಚ್ಚುವರಿಯಾಗಿ 30 ಕಾರ್ಯಕ್ರಮಗಳನ್ನು ಜನರಿಗೆ ನೀಡಿದ್ದೇವೆಂದರು.

ಯುವಕರು ನೌಕರಿ ಕೇಳಿದ್ರೆ ಮೋದಿಯವರು ಪಕೋಡಾ ಮಾರಿ ಅಂತಾರೆ: ಸಿದ್ದರಾಮಯ್ಯ

ಬಿಜೆಪಿಯವರು 600 ಭರವಸೆಗಳಲ್ಲಿ ಈ 3 ವರ್ಷದಿಂದ ಈಡೇರಿಸಿದ್ದು 50 ರಿಂದ 60 ಭರವಸೆಗಳು ಮಾತ್ರ. 550 ಭರವಸೆಗಳನ್ನು ಈಡೇರಿಸುವುದಕ್ಕೆ ಬಿಜೆಪಿ ಸರಕಾರಕ್ಕೆ ಸಾಧ್ಯವಾಗಿಲ್ಲ. ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಹೈದರಾಬಾದ್‌ ಕರ್ನಾಟಕಕ್ಕೆ 3 ಸಾವಿರ ಕೋಟಿ ಕೊಡ್ತೇನೆಂದು ಭರವಸೆ ನೀಡಿದ್ದರು. ಆದರೆ, ಬರಿ 7 ಪರ್ಸೆಂಟ್‌ ಮಾತ್ರ ಖರ್ಚು ಮಾಡಿದ್ದಾರೆ. ಇನ್ನು ಒಂದೇ ತಿಂಗಳು ಉಳಿದಿರೋದು ಒಂದು ತಿಂಗಳಲ್ಲಿ 93 ಪರ್ಸೆಂಟ್‌ ಖರ್ಚು ಮಾಡ್ತಾರಾ ಎಂದು ಬಿಜೆಪಿ ಸರ್ಕಾರಕ್ಕೆ ಪ್ರಶ್ನೆ ಮಾಡಿದರು.

ಸೂರ್ಯ ಪೂರ್ವದಲ್ಲಿ ಹುಟ್ಟೋದು ಎಷ್ಟುಸತ್ಯನೋ 2023 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ಕಲಬುರಗಿ ಗ್ರಾಮೀಣ ಮತಕ್ಷೇತ್ರದಲ್ಲಿ ಕೂಡ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲೋದು ಸತ್ಯ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತಿವರ್ಷ 5 ಸಾವಿರ ಕೋಟಿಯನ್ನು ಖರ್ಚು ಮಾಡುತ್ತೇವೆ. ಪ್ರತಿ ವರ್ಷ ಪ್ರತಿ ಪಂಚಾಯಿತಿಗೆ 1.5 ಕೋಟಿ ಅನುದಾನವನ್ನು ಕೊಡುತ್ತೇವೆ ಎಂಬುದನ್ನು ಸಿದ್ದರಾಮಯ್ಯ ಪುನರುಚ್ಚರಿಸಿದರು.

Assembly election: ಕೋಲಾರದಿಂದ 200% ಗೆಲ್ತೀನಿ ಅನುಮಾನವೇ ಬೇಡ: ಸಿದ್ದರಾಮಯ್ಯ

ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ 30 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ. ಆದರೆ, ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ 36 ಸಾವಿರ ಹುದ್ದೆಗಳು ಖಾಲಿ ಇವೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ 36 ಸಾವಿರ ಹುದ್ದೆಗಳನ್ನು ಒಂದು ವರ್ಷದಲ್ಲಿ ಭರ್ತಿ ಮಾಡುವ ಕೆಲಸ ಮಾಡುತ್ತೇವೆ ಎಂದರು.

ನಾನು ಮುಖ್ಯಮಂತ್ರಿ ಆಗಿದ್ದಾಗ ಲಂಬಾಣಿ ಅಭಿವೃದ್ಧಿಗೆ 400 ಕೋಟಿ ಅನುದಾನ ನೀಡಿದ್ದೇನೆ. ಬಿಜೆಪಿ ಸರ್ಕಾರ ಬಂದ್ಮೇಲೆ 70 ಕೋಟಿ ಕಡಿಮೆ ಮಾಡಿದ್ದಾರೆಂದು ಟೀಕಿಸಿದರು.

ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್‌ ಖಂಡ್ರೆ, ಶಾಸಕ ಅಜಯ್‌ ಸಿಂಗ್‌, ಪ್ರಿಯಾಂಕ್‌ ಖರ್ಗೆ, ಖನಿಜ ಫಾತಿಮಾ, ಜಮೀರ್‌ ಅಹ್ಮದ್‌, ಮಾಜಿ ಎಂಎಲ್ಸಿ ತಿಪ್ಪಣ್ಣಪ್ಪ ಕಮಕೂರ್‌, ಮಾಜಿ ಸಚಿವ ರೇವುನಾಯಕ, ವೈಜನಾ ತಡಕಲ, ಆನಂದ್‌ ಪಾಟೀಲ, ಶರಣ ಗೌಡ ಪಾಟೀಲ, ನಿಂಗಪ್ಪ ಪ್ರಭುದ್ಕರ್‌, ಮಹಿಳಾ ಘಟಕದ ಅಧ್ಯಕ್ಷ ನಿರ್ಮಲ ಬರಗಾಲಿ, ರವಿ ಚೌಹಾನ್‌, ಪ್ರಕಾಶ್‌ ಹಗರಗಿ, ಬಾಬು ಹೊನ್ನ ನಾಯಕ್‌, ಶರಣಗೌಡ ಡಿ. ಪಾಟೀಲ ಇದ್ದರು.

Latest Videos
Follow Us:
Download App:
  • android
  • ios