Asianet Suvarna News Asianet Suvarna News

ಯುವಕರು ನೌಕರಿ ಕೇಳಿದ್ರೆ ಮೋದಿಯವರು ಪಕೋಡಾ ಮಾರಿ ಅಂತಾರೆ: ಸಿದ್ದರಾಮಯ್ಯ

ಕೇಂದ್ರ ಸರಕಾರದಲ್ಲಿ 30 ಲಕ್ಷ ಹುದ್ದೆ ಖಾಲಿಯಿವೆ, ರಾಜ್ಯದಲ್ಲಿ 2.5 ಲಕ್ಷ ಖಾಲಿ ಇವೆ, ಆದರೆ ನಮ್ಮ ಯುವಕರು ನೌಕರಿ ಕೇಳಿದ್ರೆ ಮೋದಿಯವರು ಪಕೋಡಾ ಮಾರಿ ಅಂತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಕಿದರು. 

Former CM Siddaramaiah Slams On PM Narendra Modi gvd
Author
First Published Feb 6, 2023, 10:48 PM IST

ಸೇಡಂ (ಫೆ.06): ಕೇಂದ್ರ ಸರಕಾರದಲ್ಲಿ 30 ಲಕ್ಷ ಹುದ್ದೆ ಖಾಲಿಯಿವೆ, ರಾಜ್ಯದಲ್ಲಿ 2.5 ಲಕ್ಷ ಖಾಲಿ ಇವೆ, ಆದರೆ ನಮ್ಮ ಯುವಕರು ನೌಕರಿ ಕೇಳಿದ್ರೆ ಮೋದಿಯವರು ಪಕೋಡಾ ಮಾರಿ ಅಂತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಕಿದರು. ಅವರು ಇಂದು ಸೇಡಂನ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಡಾ.ಶರಣಪ್ರಕಾಶ ಪಾಟೀಲ ನನ್ನ ಮಂತ್ರಿ ಮಂಡಲದಲ್ಲಿ ಸಚಿವರಾಗಿದ್ದರು, ಐದು ವರ್ಷಗಳ ಕಾಲ ಪ್ರಾಮಾಣಿಕವಾಗಿ ಸೇಡಂ ಜನತೆಗೆ ಗೌರವ ತರುವ ರೀತಿಯಲ್ಲಿ, ಹೆಮ್ಮೆ ಪಡುವ ರೀತಿಯಲ್ಲಿ ನಡೆದು ಕೊಂಡಿದ್ದಾರೆ, ಯಾವತ್ತೂ ಹಣದ ಹಿಂದೆ ಬಿದ್ದಿಲ್ಲ. 

ಕಳೆದ ಬಾರಿ ಸೇಡಂನಲ್ಲಿ ಅವರ ಸೋಲು ಸೇಡಂ ಜನತೆಯ ಸೋಲು,  ಬಹುತೇಕ ಅವರಿಗೆ ಟಿಕೆಟ್ ಸಿಗುತ್ತೆ ಅವರನ್ನು ಕನಿಷ್ಟ ಐವತ್ತು ಸಾವಿರ ಮತಗಳ ಅಂತರದಲ್ಲಿ ಗೆಲ್ತಾರೆ. ಶರಣಪ್ರಕಾಶ ಪಾಟೀಲ ಅಂತವರು ವಿದಾನಸಭೆಯಲ್ಲಿ ಇರ್ಲೇಬೇಕು ಎಂದರು. ಇಡೀ ರಾಜ್ಯದಲ್ಲಿ ಬಿಜೆಪಿ ಶಾಸಕರು ದುಡ್ಡಿಲ್ದೇ ಹೋದ್ರೆ ಯಾವುದೇ ಕಾಮಗಾರಿಯ ಗುದ್ದಲಿ ಪೂಜೆಯೇ ಮಾಡಲ್ಲ. ಬೊಮ್ಮಾಯಿ ಸರಕಾರ ಅಲಿಬಾಬಾ ಔರ್ ಚಾಲಿಸ್ ಚೋರ್ ಇದ್ದಂಗೆ. ಬಿಜೆಪಿ ಸೋಲಬೇಕು ಆಗಲೇ ಈ ರಾಜ್ಯಕ್ಕೆ ಘನತೆ ಗೌರವ ಬರುತ್ತದೆ. ನಾನಾಗಲೀ ಶರಣಪ್ರಕಾಶ ಪಾಟೀಲ ಐದು ಪೈಸೆ ತೆಗೆದುಕೊಂಡಿಲ್ಲ.  ನಾನು ಮುಖ್ಯಮಂತ್ರಿಯಾಗಿದ್ದಾಗ 15 ಲಕ್ಷ ಮನೆ ಕಟ್ಟಿಸಿದ್ದೇವೆ‌ ಇವರು ಒಂದೇ ಒಂದು ಮನೆ ಕಟ್ಟಿಸಿಲ್ಲ. 

ಪ್ರಲ್ಹಾದ್ ಜೋಶಿ ಸಿಎಂ ಹೇಳಿಕೆ, ದಿಕ್ಕು ತಪ್ಪಿಸುವ ತಂತ್ರ: ಸಚಿವ ಶ್ರೀರಾಮುಲು

ಇವರಿಗೆ ಏನಾದರೂ ಮಾನ ಮರ್ಯಾದೆ ಇದೆಯಾ. ಮಳಖೇಡಕ್ಕೆ ಪ್ರಧಾನಮಂತ್ರಿ ಹಕ್ಕುಪತ್ರ ನೀಡಲು ಬಂದಿದ್ರು ಆದರೆ ಈ ಕಾನೂನು ಮಾಡಿದ್ದು ಕಾಗೋಡು ತಿಮ್ಮಪ್ಪ ನನ್ನ ಮಂತ್ರಿಮಂಡಲದ ಕಂದಾಯ ಸಚಿವ ಹೊರತು ಮೋದಿ, ಯಡಿಯೂರಪ್ಪ, ಬೊಮ್ಮಾಯಿ ಅಲ್ಲ ಎಂದರು. ಬಂಜಾರಾ ಅಭಿವೃದ್ಧಿ ಮಂಡಳಿಗೆ 400 ಕೋಟಿ ಕೊಟ್ಟಿದ್ದು ನಾನು. ಕೋಲಿ ಸಮಾಜವನ್ನುಎಸ್ಟಿಗೆ ಸೇರಿಸಲು ಕುಲಶಾಸ್ತ್ರೀಯ ಅಧ್ಯಯನ ಮಾಡಿ ಮೂರು ಬಾರಿ ಕೇಂದ್ರಕ್ಕೆ ಕಳಿಸಿದ್ದೇನೆ. ನಮಗೆ ಅಧಿಕಾರ ಇದ್ದರೆ ಕೇವಲ ಒಂದೇ ದಿನದಲ್ಲಿ ಎಸ್ಟಿ ಮಾಡ್ತಿದ್ದೆ. ಅಲ್ಪಸಂಖ್ಯಾತ ನಿಗಮಕ್ಕೆ ಅನುದಾನ ಮೊದಲು 400 ಕೋಟಿ ಇತ್ತು ನಾನು ಬಂದು 3150 ಕೋಟಿ ಮಾಡ್ದೆ. 

ಆದರೆ ಈಗ ಕೇವಲ 1500 ಕೋಟಿ ಆಗಿದೆ. ಗೊಂಡ, ರಾಜಗೊಂಡ ಕುರುಬರ ಸಮಾಜ ಎಸ್ಟಿ ಸೇರಿಸಿದ್ದೇವೆ. ಖರ್ಗೆಯವರ ಪ್ರಯತ್ನದಿಂದಾಗಿ ಈ ಭಾಗಕ್ಕೆ ಮನಮೋಹನಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ವಿಧಿ 371 ಜೆ ಯನ್ನು ಜಾರಿಗೆ ತರಲಾಯಿತು, ಇದರಿಂದಾಗಿ ಈ ಭಾಗಕ್ಕೆ ನೌಕರಿ ಮತ್ತು ಶೈಕ್ಷಣಿಕವಾಗಿ ಅವಕಾಶಗಳು ಹೆಚ್ಚಾದವು ಎಂದ ಅವರು ನಾವು ಅಧಿಕಾರಕ್ಕೆ ಬಂದರೆ ಕಲ್ಯಾಣ ಕರ್ನಾಟಕ ಭಾಗಕ್ಕೆ 5000 ಕೋಟಿ ಅನುದಾನ ಕೊಡುತ್ತೇವೆ ಎಂದರು. ರಾಜ್ಯದಲ್ಲಿ ಇದೀಗ ನಡೆಯುತ್ತಿರುವ ಪ್ರಜಾಧ್ವನಿ ಕಾರ್ಯಕ್ರಮ ನಮ್ಮ ಧ್ವನಿಯಲ್ಲ ನಿಮ್ಮ ಧ್ವನಿ ಏಳು ಕೋಟಿ ಕನ್ನಡಿಗರ ಧ್ವನಿ ಎಂದು ಸಿದ್ದರಾಮಯ್ಯ ಹೇಳಿದರು. 

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಇಲ್ಲಿನ ಶಾಸಕರ ಬ್ರಷ್ಟಾಚಾರ ಹಾಗು ದುರಾಡಳಿತದಿಂದಾಗಿ ನಮ್ಮ ಸೇಡಂನ ಮಾನ ಮರ್ಯಾದೆ ಬೆಂಗಳೂರಿನಲ್ಲಿ ಹರಾಜಾಗಿದೆ ಎಂದ ಅವರು ಸೇಡಂನಲ್ಲಿ ತಾವುದೇ ಕಚೇರಿಗೆ ಹೋದರೂ ಲಂಚವಿಲ್ಲದೆ ಕೆಲಸ ಆಗಲ್ಲ ಏಕೆಂದರೆ ಲಂಚ ಕೊಟ್ಟು ಬಂದವರು ಲಂಚ ಪಡಿತಾರೆ ಎಂದರು. ನಾವು ಜನರ ನಿರೀಕ್ಷೆ ಹುಸಿ ಹೋಗಬಾರದು ಎನ್ನುವ ಭಯದಿಂದ ಬದುಕಿದವರು. ನಾನು ಸೇಡಂನ ಕಾವಲುಗಾರನಾಗಿದ್ದೇನೆ ಎಂದು ಜನರಿಗೆ  ಅಭಯ ನೀಡಿದರು.

ಮುಸಲ್ಮಾನರು ಜೆಡಿಎಸ್ ನಂಬಿ ಮತ ನೀಡಬಾರದು: ಜಮೀರ್ ಅಹ್ಮದ್ ಖಾನ್- ಕುಮಾರಸ್ವಾಮಿ 2008ರಲ್ಲಿ ಮಾಡಿದ ತಪ್ಪಿನಿಂದಲೇ ಇಂದು ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಸಮ್ಮಿಶ್ರ ಸರಕಾರ ರಚನೆ ಸಂದರ್ಭ ಬಂದರೆ ಯಾರು ಚೆನ್ನಾಗಿ ಮೇಕಪ್ ಮಾಡಿಕೊಂಡು ಬರ್ತಾರೋ ಅವರ ಜೊತೆ ಹೋಗ್ತೀವಿ ಅನ್ನೋ ಹೇಳಿಕೆ ನೀಡುವ ಸಿ.ಎಂ.ಇಬ್ರಾಹಿಂ ಅವರ ಹೇಳಿಕೆಯ ತಾತ್ಪರ್ಯವೇ ಹಣದ ಕೈಲಿಯ ಮೇಕಪ್. ಜೆಡಿಎಸ್ ಪಕ್ಷಕ್ಕೆ ಮತ ನೀಡಿದರೆ ಬಿಜೆಪಿಗೆ ಮತ ನೀಡಿದಂತೆ ಹಾಗಾಗಿ ಮುಸಲ್ಮಾನರು ಜೆಡಿಎಸ್ ನಂಬಿ ಮತ ನೀಡಬಾರದು ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಕರೆ ನೀಡಿದರು.

ಈ ಬಾರಿ ಕಾಂಗ್ರೆಸ್‌ ಸರ್ಕಾರ ರಚನೆಯಾಗುವುದು ಖಚಿತ: ಯತೀಂದ್ರ ಸಿದ್ದರಾಮಯ್ಯ

ಸೇಡಂಗೆ ಮೋದಿಯವರು ಬಂದಿದ್ದು ಸಂತೋಷ: ಮೋದಿಯವರು ಸೇಡಂಗೆ ಬಂದಿದ್ದು ತುಂಬಾ ಸಂತೋಷ, ಆದರೆ ಹಕ್ಕು ಪತ್ರ ಮಾತ್ರ ಕೊಟ್ಟು ಹೋಗಿದ್ದಾರೆ. ಆದರೆ ನಮಗೆ ಬಹಳಷ್ಟು ನಿರೀಕ್ಷೆ ಇತ್ತು ದೊಡ್ಡ ದೊಡ್ಡ ಯೋಜನೆಗಳನ್ನು ಘೋಷಿಸಬಹುದು ಎಂದು ಆದರೆ ಬಂದಿದ್ದೇ ಬಂತು ಅಷ್ಟೇ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

Follow Us:
Download App:
  • android
  • ios