'ಚುನಾವಣೆ ವೇಳೆ ನುಡಿದಂತೆ ನಡೆದಿದ್ದೇವೆ, ಎಷ್ಟೇ ಆರ್ಥಿಕ ಹೊರೆ ಬಂದರೂ 5 ಗ್ಯಾರಂಟಿ ಜಾರಿ'
ಕೂಡಲೇ ಮೊದಲ ಸಚಿವ ಸಂಪುಟ ಸಭೆ ನಡೆಸಿ ಈ 5 ಗ್ಯಾರಂಟಿಗಳಿಗೆ ಒಪ್ಪಿಗೆ ನೀಡಿದ್ದಾರೆ. ಎಷ್ಟೇ ಆರ್ಥಿಕ ಹೊರೆ ಬಂದರೂ ಕೂಡಾ ನಿವಾರಣೆ ಮಾಡಿಕೊಂಡು, ರಾಜ್ಯದ ಜನರ ಅಭ್ಯುದಯಕ್ಕಾಗಿ ಈ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದ್ದೇವೆ: ಗೂಳಿಗೌಡ
ಬೆಂಗಳೂರು(ಮೇ.21): ಚುನಾವಣೆ ಸಂದರ್ಭದಲ್ಲಿ ನೀಡಿದ ಗ್ಯಾರಂಟಿ ಭರವಸೆಯನ್ನು ಈಡೇರಿಸುವ ಮೂಲಕ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆವ ಪಕ್ಷ ಎಂಬುದನ್ನು ಸಾಬೀತುಪಡಿಸಿದೆ ಎಂದು ಶಾಸಕ ದಿನೇಶ್ ಗೂಳಿಗೌಡ ಹೇಳಿದ್ದಾರೆ.
ನಮ್ಮದು ಮಾತಿಗೆ ಬದ್ಧವಾಗಿರುವ ಪಕ್ಷವಾಗಿದ್ದರಿಂದಲೇ ಚುನಾವಣಾ ಸಂದರ್ಭದಲ್ಲಿ ರಾಜ್ಯದ ಜನತೆಗೆ ಐದು ಗ್ಯಾರಂಟಿಗಳನ್ನು ನೀಡಿದ್ದೆವು. ಆ ಭರವಸೆಗಳನ್ನು ಕೊಟ್ಟಿದ್ದಲ್ಲದೆ, ಮೊದಲನೇ ಸಚಿವ ಸಂಪುಟ ಸಭೆಯಲ್ಲಿ ಇವುಗಳನ್ನು ಈಡೇರಿಸುವುದಾಗಿ ನಮ್ಮ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದರು. ಈಗ ಅದರಂತೆಯೇ ನಡೆದುಕೊಳ್ಳಲಾಗಿದೆ ಎಂದರು.
ಎಸ್‌ಐ, ಬಿಟ್‌ಕಾಯಿನ್ ಅಕ್ರಮಕ್ಕೆ ತಾರ್ಕಿಕ ಅಂತ್ಯ, ಇದು ನಮ್ಮ 6ನೇ ಗ್ಯಾರಂಟಿ: ಪ್ರಿಯಾಂಕ್ ಖರ್ಗೆ
ಇಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಹಾಗೂ ಡಿ.ಕೆ.ಶಿವಕುಮಾರ್ ಅವರು ಉಪ ಮುಖ್ಯಮಂತ್ರಿಯಾಗಿ ಸೇರಿದಂತೆ 8 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕೂಡಲೇ ಮೊದಲ ಸಚಿವ ಸಂಪುಟ ಸಭೆ ನಡೆಸಿ ಈ 5 ಗ್ಯಾರಂಟಿಗಳಿಗೆ ಒಪ್ಪಿಗೆ ನೀಡಿದ್ದಾರೆ. ಎಷ್ಟೇ ಆರ್ಥಿಕ ಹೊರೆ ಬಂದರೂ ಕೂಡಾ ನಿವಾರಣೆ ಮಾಡಿಕೊಂಡು, ರಾಜ್ಯದ ಜನರ ಅಭ್ಯುದಯಕ್ಕಾಗಿ ಈ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನುಡಿದಂತೆ ನಡೆದಿದ್ದಾರೆ ಎಂದು ಗೂಳಿಗೌಡ ಅವರು ಅಭಿನಂದಿಸಿದ್ದಾರೆ.