ಎಸ್‌ಐ, ಬಿಟ್‌ಕಾಯಿನ್‌ ಅಕ್ರಮಕ್ಕೆ ತಾರ್ಕಿಕ ಅಂತ್ಯ, ಇದು ನಮ್ಮ 6ನೇ ಗ್ಯಾರಂಟಿ: ಪ್ರಿಯಾಂಕ್‌ ಖರ್ಗೆ

ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ (ಪಿಎಸ್‌ಐ) ಹುದ್ದೆ ನೇಮಕಾತಿ ಮತ್ತು ಬಿಟ್‌ಕಾಯಿನ್‌ ಹಗರಣಗಳಿಗೆ ತಾರ್ಕಿಕ ಅಂತ್ಯವನ್ನು ಕಾಂಗ್ರೆಸ್‌ ನೀಡಲಿದ್ದು, ಇದು ಆರನೇ ಗ್ಯಾರಂಟಿ ಎಂದು ನೂತನ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು. 

Logical End to PSI Bitcoin Illegality This Is Our 6th Guarantee Says Priyank Kharge gvd

ಬೆಂಗಳೂರು (ಮೇ.21): ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ (ಪಿಎಸ್‌ಐ) ಹುದ್ದೆ ನೇಮಕಾತಿ ಮತ್ತು ಬಿಟ್‌ಕಾಯಿನ್‌ ಹಗರಣಗಳಿಗೆ ತಾರ್ಕಿಕ ಅಂತ್ಯವನ್ನು ಕಾಂಗ್ರೆಸ್‌ ನೀಡಲಿದ್ದು, ಇದು ಆರನೇ ಗ್ಯಾರಂಟಿ ಎಂದು ನೂತನ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಹಗರಣಗಳ ಆರೋಪಿಗಳಿಗೆ ಶಿಕ್ಷೆ ನೀಡಲಾಗುವುದು. ಪಿಎಸ್‌ಐ ಹಾಗೂ ಬಿಟ್‌ಕಾಯಿನ್‌ ಹಗರಣಗಳನ್ನು ತಾರ್ಕಿಕ ಅಂತ್ಯದೆಡೆಗೆ ತೆಗೆದುಕೊಂಡು ಹೋಗಲಾಗುವುದು ಎಂದರು.

ಈಗಾಗಲೇ ಕಾಂಗ್ರೆಸ್‌ ನೀಡಿರುವ ಐದು ಗ್ಯಾರಂಟಿಗಳಿಗೆ ನಿಬಂಧನೆಗಳು ಅನ್ವಯಿಸಲಿವೆ. ಯಾವುದೇ ಸರ್ಕಾರದ ಯೋಜನೆ ಷರತ್ತುಗಳಿಲ್ಲದೆ ಜಾರಿಯಾಗಲು ಸಾಧ್ಯವೇ? ಅದು ಕೇಂದ್ರದ ಯೋಜನೆ ಇರಲಿ ಅಥವಾ ರಾಜ್ಯದ ಯೋಜನೆಗಳು ಆಗಿರಲಿ ಷರತ್ತುಗಳು ಅನ್ವಯಿಸಲಿವೆ. ಬಡವರಿಗೆ ಅನುಕೂಲ ಮಾಡಿಕೊಡಲು ಈ ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಧಿಕೃತ ಆದೇಶ ಆಗಬಹುದು ಎಂದು ಹೇಳಿದರು.

5ನೇ ಬಾರಿಯೂ ಡಾ.ಜಿ.ಪರಮೇಶ್ವರ್‌ ಸಚಿವ: ಒಟ್ಟು 6 ಬಾರಿ ಶಾಸಕರಾಗಿ ಆಯ್ಕೆಯಾದ ಪರಂ

ಚಿತ್ತಾಪುರದಿಂದ ಮೂರು ಬಾರಿ ಗೆದ್ದಿದ್ದೇನೆ. ನನ್ನನ್ನು ಸೋಲಿಸಲು ಅನೇಕ ರೀತಿಯಲ್ಲಿ ಬಿಜೆಪಿ ಪ್ರಯತ್ನ ಮಾಡಿತ್ತು. ಆದರೆ, ಜನ ನನ್ನ ಕೈ ಬಿಡಲಿಲ್ಲ. ನನ್ನ ವಿರುದ್ಧ ಪ್ರಚಾರಕ್ಕೆಂದು ಬಿಜೆಪಿಯ ಘಟಾನುಘಟಿ ನಾಯಕರು ಬಂದಿದ್ದರು. ಆದರೂ ನನಗೇ ಗೆಲುವಾಗಿದ್ದು ಈಗ ಸಚಿವ ಸ್ಥಾನ ನೀಡಿದ್ದಾರೆ. ಅದಕ್ಕಾಗಿ ಪಕ್ಷದ ಎಲ್ಲ ನಾಯಕರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.

ಪ್ರಿಯಾಂಕ್‌ ಸಚಿವರಾಗಿ ಪ್ರಮಾಣ ವಚ​ನ: ಚಿತ್ತಾಪುರ ಮೀಸಲು ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಪ್ರಿಯಾಂಕ್‌ ಖರ್ಗೆರವರು ಅಭೂತಪೂರ್ವ ಗೆಲುವು ಸಾಧಿಸಿದ್ದಲ್ಲದೇ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ಹಾಗೂ ಮಾಜಿ ಅಧ್ಯಕ್ಷ ಶಿವಕಾಂತ ಬೆಣ್ಣೂರಕರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಲಾಡ್ಜಿಂಗ್‌ ಕ್ರಾಸ್‌ ಬಳಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೊತ್ಸವವನ್ನು ಆಚರಿಸಿದರು. 

ನಂತರ ಮಾತನಾಡಿದ ಅವರು ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಅವರ ಗೆಲುವಿಗೆ ಪ್ರಮುಖ ಕಾರಣವಾಗಿದ್ದು ಅಲ್ಲದೇ ಕಳೆದ ಅವಧಿಯ ಬಿಜೆಪಿ ಸರ್ಕಾರದ ಹಗರಣಗಳನ್ನು ಎಳೆ ಎಳೆಯಾಗಿ ಜನರ ಮುಂದೆ ಇಟ್ಟು ಸರ್ಕಾರದ ಅವ್ಯವಹಾರವನ್ನು ಹೊರಗೆಳಿದ್ದರು. ಹೀಗಾಗಿ ರಾಜ್ಯದಲ್ಲಿ ಮತ್ತೆ ಕಾಂಗೆಸ್‌ ಸರ್ಕಾರವು ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು ಹೇಳಿದರು. ಪ್ರಿಯಾಂಕ್‌ ಖರ್ಗೆರವರು ಈಗಾಗಲೇ ಐಟಿ-ಬಿಟಿ, ಪ್ರವಾಸೊದ್ಯಮ ಮತ್ತು ಸಮಾಜ ಕಲ್ಯಾಣದಂತಹ ಮಹತ್ವದ ಖಾತೆಗಳನ್ನು ನಿರ್ವಹಿಸಿ ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ಕೂಡಾ ಸರ್ಕಾರದ ಸೌಲಭ್ಯವನ್ನು ಒದಗಿಸುವಲ್ಲಿ ಇವರು ಶ್ರಮಿಸಿದ್ದರು. 

5ನೇ ಬಾರಿ ಶಾಸಕತ್ವ ಬಡವರ ಪರ ಹೋರಾಟ ಫಲ: ಆರಗ ಜ್ಞಾನೇಂದ್ರ

ಹಾಗಾಗಿ ಮುಂದಿನ ದಿನಗಳಲ್ಲಿ ಅವರು ಮತ್ತೇ ಪ್ರಮುಖ ಖಾತೆಯನ್ನು ಪಡೆದು ಸಾರ್ವಜನಿಕರಿಗೆ ಅನುಕೂಲವಾಗುವ ಯೊಜನೆಗಳನ್ನು ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದದರು. ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕಾಶಿ, ಯುವ ಕಾಂಗ್ರೆಸ್‌ ಅಧ್ಯಕ್ಷ ಸಂಜಯ ಬೂಳಕರ್‌, ಬಸವರಾಜ ಚಿಣಮಳ್ಳಿ, ಮಹ್ಮದ ರಸೂಲ್‌ ಮುಸ್ತಫಾ, ರಾಮಲಿಂಗ ಬಾನರ್‌, ಹಣಮಂತ ಚೌದರಿ, ಭೀಮು ಹೊಳಿಕಟ್ಟಾ, ಹಣಮಂತ ಸಂಕನೂರ, ಮಹೇಶ ಎನ್‌. ಕಾಶಿ, ಚಂದ್ರಕಾಂತ ನಾಟೀಕಾರ ಸ್ಭೆರಿದಂತೆ ಇತರರು ವಿಜಯೊತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Latest Videos
Follow Us:
Download App:
  • android
  • ios