ಜೈಪುರ(ಜು.14): ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಹಾಗೂ ಡಿಸಿಎಂ ಸಚಿನ್‌ ಪೈಲಟ್‌ ಮಧ್ಯೆ ಉದ್ಭವಿಸಿದ ರಾಜಕೀಯ ಬಿಕ್ಕಟ್ಟಿನ ನಡುವೆಯೇ, ರಾಜಸ್ಥಾನ ಹಲವು ಕಾಂಗ್ರೆಸ್‌ ನಾಯಕರಿಗೆ ಸೇರಿದ ಕಚೇರಿ, ಉದ್ಯಮ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದಾರೆ.

ಸತ್ಯಕ್ಕೆ ಎಂದೂ ಸೋಲಿಲ್ಲ: ಸಚಿನ್ ಪೈಲಟ್‌ ಟ್ವೀಟ್‌ ಮರ್ಮವೇನು?

ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯ 80ಕ್ಕೂ ಹೆಚ್ಚು ಅಧಿಕಾರಿಗಳು ದೆಹಲಿ, ಜೈಪುರ, ಕೋಟಾ ಹಾಗೂ ಮುಂಬೈನಲ್ಲಿರುವ ಈ ಕಂಪನಿಗಳ ಕಚೇರಿಗಳಿಗೆ ಲಗ್ಗೆ ಇಟ್ಟು ದಾಖಲೆಗಳನ್ನು ಕಲೆ ಹಾಕಿದ್ದಾರೆ. ರಾಜಸ್ಥಾನದ ಕಾಂಗ್ರೆಸ್‌ ಉಪಾಧ್ಯಕ್ಷ ರಾಜೀವ್‌ ಅರೋರಾ ಒಡೆತನದ ಆಮ್ರಪಾಲಿ ಜ್ಯುವೆಲರಿ ಮಳಿಗೆ ಹಾಗೂ ಧರ್ಮೇಂದ್ರ ರಾಥೋಡ್‌ಗೆ ಸೇರಿದ ಕಂಪನಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ರಾಜಸ್ಥಾನ ಕಾಂಗ್ರೆಸ್‌ ಮುಖಂಡರನ್ನು ಗುರಿಯಾಗಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರು ಈ ಐ.ಟಿ ದಾಳಿ ನಡೆಸಿದ್ದಾರೆ ಎಂದು ಕಾಂಗ್ರೆಸ್‌ ಕಿಡಿಕಾರಿದೆ.