ಕಾರ್ಮಿಕ ಇಲಾಖೆಯಲ್ಲಿ ಸುಮಾರು ಎರಡೂವರೆ ಲಕ್ಷ ಬೋಗಸ್ ಕಾರ್ಡ್‌ಗಳನ್ನು ಕೂಡಲೇ ರದ್ದು ಪಡಿಸುವಂತೆ ಅಧಿಕಾರಿಗಳಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಸೂಚನೆ ನೀಡಿದ್ದಾರೆ. 

ಬೆಂಗಳೂರು (ಜ.22): ಕಾರ್ಮಿಕ ಇಲಾಖೆಯಲ್ಲಿ ಸುಮಾರು ಎರಡೂವರೆ ಲಕ್ಷ ಬೋಗಸ್ ಕಾರ್ಡ್‌ಗಳನ್ನು ಕೂಡಲೇ ರದ್ದು ಪಡಿಸುವಂತೆ ಅಧಿಕಾರಿಗಳಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಸೂಚನೆ ನೀಡಿದ್ದಾರೆ. ಕಾರ್ಮಿಕ ಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ಕಡ್ಡಾಯ ಉಪಧನ ವಿಮಾ ನಿಯಮ 2024 ಕಾರ್ಯಾಗಾರಕ್ಕೆ‌ ಚಾಲನೆ ನೀಡಿ ಮಾತನಾಡಿದ ಸಚಿವರು, ರಾಜ್ಯಾದ್ಯಂತ ಕಾರ್ಮಿಕರಿಗೆ 46 ಲಕ್ಷ ಕಾರ್ಡ್‌ ನೀಡಲಾಗಿದೆ. 

ಅದರಲ್ಲಿ 2.5 ಲಕ್ಷ ಬೋಗಸ್‌ ಎಂದು ತಿಳಿದುಬಂದಿದೆ. ಹಾಗಾಗಿ ಬೋಗಸ್‌ ಕಾರ್ಡ್‌ಗಳನ್ನು ರದ್ದು ಮಾಡಿ ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು. ರಾಜ್ಯದ ಎಲ್ಲಾ ತಾಲೂಕುಗಳಿಂದ 2 ರಿಂದ 3 ಲಕ್ಷ ಸದಸ್ಯರು ನೋಂದಣಿ ಆಗಿದ್ದಾರೆ. ಆದರೆ ಅಷ್ಟು ಜನರಲ್ಲಿ ಕೇವಲ 30 ಸಾವಿರ ಸದಸ್ಯರಿಗೆ ಮಾತ್ರ ಗ್ರಾಚ್ಯುಟಿ ಬಗ್ಗೆ ತಿಳುವಳಿಕೆ ಇದೆ. ಉಳಿದವರಿಗೆ ಯಾಕೆ ಮಾಹಿತಿ ಇಲ್ಲ ಎಂದು ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರಲ್ಲದೇ, 46 ಲಕ್ಷ ಕಾರ್ಮಿಕರ ಬಗ್ಗೆ ಯಾರು ಹೊಣೆಗಾರರಾಗುತ್ತೀರಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಮಾಲಿನ್ಯ ತಡೆಯದ ಕಾರ್ಖಾನೆ ಮೇಲೆ ಕ್ರಿಮಿನಲ್‌ ಕೇಸ್‌: ಸಚಿವ ಈಶ್ವರ್‌ ಖಂಡ್ರೆ

ಸಿ.ಟಿ.ರವಿಗೆ ತಿರುಗೇಟು: ಇಡೀ ದೇಶದ ಸಾಲದ ಬಗ್ಗೆ ಕೇಂದ್ರ ಸರ್ಕಾರ ಮೊದಲು ಶ್ವೇತಪತ್ರ ಹೊರಡಿಸಲಿ. 2014ರ ವರೆಗೆ ಎಷ್ಟು ಸಾಲವಿತ್ತು. ಇವರು ಅಧಿಕಾರಕ್ಕೆ ಬಂದ ಮೇಲಿಂದ ಎಷ್ಟು ಸಾಲ ಹೆಚ್ಚಾಗಿದೆ ಎಂಬುದನ್ನು ಮೊದಲು ತಿಳಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಆಗ್ರಹಿಸಿದ್ದಾರೆ. ಈ ಮೂಲಕ ಅನುದಾನ ತಾರತಮ್ಯ ಬಗ್ಗೆ ಬಿಜೆಪಿ ಮುಖಂಡ ಸಿ.ಟಿ. ರವಿ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನುದಾನ ವಿಚಾರದಲ್ಲಿ ಸಿ.ಟಿ. ರವಿ ನೀಡಿರುವ ಹೇಳಿಕೆ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಆದರೆ ಕೇಂದ್ರ ಬಿಡುಗಡೆ ಮಾಡಿರುವ ಅನುದಾನದ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಆದರೆ ಅದಕ್ಕೂ ಮೊದಲು ಕೇಂದ್ರ ಸರ್ಕಾರ ದೇಶದ ಸಾಲದ ಪ್ರಮಾಣದ ಕುರಿತಂತೆ ಶ್ವೇತಪತ್ರ ಹೊರಡಿಸಲಿ. 2014ರಲ್ಲಿ 55 ಲಕ್ಷ ಕೋಟಿ ಇದ್ದ ಸಾಲ ಇದೀಗ 205 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದರು.

ಸುಮಲತಾ ಕಾಂಗ್ರೆಸ್ ಸೇರ್ಪಡೆ ಚರ್ಚೆಯೇ ಆಗಿಲ್ಲ: ಸಚಿವ ಚಲುವರಾಯಸ್ವಾಮಿ

ಕೇಂದ್ರ ಸರ್ಕಾರಕ್ಕೆ ಹಣ ಎಲ್ಲಿಂದ ಹೋಗುತ್ತದೆ. ರಾಜ್ಯ ಸರ್ಕಾರಗಳ‌ ತೆರಿಗೆ ಹಣವೇ ಕೇಂದ್ರಕ್ಕೆ ಹೋಗುತ್ತೆ. ಪ್ರತಿಯೊಂದು ಕೇಳಬೇಕಿರುವುದು ನಮ್ಮ‌ ಹಕ್ಕು. ಅವರ್‍ಯಾಕೆ ದಾನಕೊಟ್ಟ ಹಾಗೆ ಮಾಡುತ್ತಾರೆ. ಈ ವರೆಗೂ ಬರ ಪರಿಹಾರವೇ ಬಂದಿಲ್ಲ. ಬಜೆಟ್ ಗಾತ್ರದ ಮೇಲೆ ನಮಗೆ ಅನುದಾನ‌ ನಿಗದಿಯಾಗುತ್ತದೆ. ನಾವು ಎಷ್ಟು ಕೊಡುತ್ತಿದ್ದೇವೆ ನಮಗೆ ಎಷ್ಟು ಬರಬೇಕು ಎಂಬುದು ನಮ್ಮ ಪ್ರಶ್ನೆ ಎಂದರು.