ರಷ್ಯಾ(ಅ.12): ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಶನಿವಾರ ಭಾರತದ ಬಾಕ್ಸರ್‌ಗಳಿಗೆ ಮಹತ್ವದ ದಿನವಾಗಿದೆ. ಆರು ಬಾರಿಯ ವಿಶ್ವ ಚಾಂಪಿಯನ್ ಎಂ.ಸಿ ಮೇರಿ ಕೋಮ್ (51 ಕೆ.ಜಿ) ಸಹಿತ ನಾಲ್ವರು ಬಾಕ್ಸರ್‌ಗಳು ಈಗಾಗಲೇ ಪದಕ ಖಚಿತಪಡಿಸಿದ್ದು, ಸೆಮಿಫೈನಲ್ ಸೆಣಸಲಿದ್ದಾರೆ. 

ಬಾಕ್ಸರ್ ಮೇರಿ ಕೋಮ್‌ ವಿಶ್ವ ದಾಖಲೆ

8ನೇ ವಿಶ್ವ ಬಾಕ್ಸಿಂಗ್ ಪದಕ ಖಚಿತಪಡಿಸಿದ ಮೇರಿ 7ನೇ ಚಿನ್ನದ ಪದಕ ಗೆದ್ದು ದಾಖಲೆಯ 7ನೇ ಬಾರಿಗೆ ವಿಶ್ವ ಚಾಂಪಿಯನ್ ಆಗುವ ಗುರಿ ಹೊಂದಿದ್ದಾರೆ. ಸೆಮಿಫೈನಲ್‌ನಲ್ಲಿ ಯುರೋಪಿಯನ್ ಚಾಂಪಿ ಯನ್ ಟರ್ಕಿಯ ಬ್ಯೂಸಿನಾಜ್ ಕಾಕಿರೋಗ್ಲು ವಿರುದ್ಧ ಮೇರಿ ಸೆಣಸಲಿದ್ದಾರೆ. 

ದುಬೈ​ನಲ್ಲಿ ಬಾಕ್ಸರ್ ವಿಜೇಂದ​ರ್‌ ಕಾದಾಟಕ್ಕೆ ಡೇಟ್ ಫಿಕ್ಸ್..!

ಲೊವ್ಲಿನಾ ಬೊರ್ಗೈನ್ (69 ಕೆ.ಜಿ), ಮಂಜು ರಾಣಿ (48 ಕೆ.ಜಿ) ಹಾಗೂ ಜಮುನಾ ಬೊರೊ (54 ಕೆ.ಜಿ) ಚೊಚ್ಚಲ ಸ್ವರ್ಣ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.